USElection2024: ಹ್ಯಾರಿಸ್​-ಟ್ರಂಪ್ ನೇರಾನೇರ ಹಣಾಹಣಿ.. ಒಂದು ವೇಳೆ ಅಮೆರಿಕಾ ಫಲಿತಾಂಶ ಟೈ ಆದ್ರೆ ಮುಂದೇನು?

author-image
Gopal Kulkarni
Updated On
USElection2024: ಹ್ಯಾರಿಸ್​-ಟ್ರಂಪ್ ನೇರಾನೇರ ಹಣಾಹಣಿ.. ಒಂದು ವೇಳೆ ಅಮೆರಿಕಾ ಫಲಿತಾಂಶ ಟೈ ಆದ್ರೆ ಮುಂದೇನು?
Advertisment
  • ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಈಗ ಜೋರಾಗಿದೆ ಮತದಾನದ ಹಬ್ಬ
  • ಚುನಾವಣೆಯಲ್ಲಿ ಟ್ರಂಪ್-ಹ್ಯಾರಿಸ್ ನಡುವೆ ಸಮಬಲದ ಹೋರಾಟ
  • ಒಂದು ವೇಳೆ ಫಲಿತಾಂಶ ಟೈ ಆದಲ್ಲಿ ಮುಂದೆ ನಡೆಯುವುದು ಏನು?

ಅಮೆರಿಕಾದಲ್ಲಿ ಈಗ ಮತದಾನದ ಸಮಯ. ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಅಧ್ಯಕ್ಷೀಯ ಚುನಾಚಣೆಯ ನೇರ ಹಣಾಹಣಿ ಏರ್ಪಟ್ಟಿದೆ. ನೆಕ್​ ಟು ನೆಕ್ ಫೈಟ್ ಶುರುವಾಗಿದೆ ಎಂದು ಆರಂಭಿಕ ವರದಿಗಳು ಬರುತ್ತಿವೆ. ಒಂದು ವೇಳೆ ಈ ಚುನಾವಣೆಯಲ್ಲಿ ಸಮಬಲ ಹೋರಾಟವುಂಟಾಗಿ ಫಲಿತಾಂಶ ಟೈ ಆದಲ್ಲಿ ಮುಂದೇನು ಎಂಬ ಚಿಂತೆಯ ಗೆರೆಗಳು ಈಗ ಎಲ್ಲರ ಹಣೆಯಲ್ಲೂ ಮೂಡುತ್ತಿವೆ.

ಸದ್ಯ ಹೆಮ್ಲೆಟ್​ನಲ್ಲಿ ಆಗಿರುವ ಮತದಾನವು ಟ್ರಂಪ್ ಹಾಗೂ ಹ್ಯಾರಿಸ್ ಮಧ್ಯೆ ಸಮಬಲದ ಹೋರಾಟವು ನಡೆಯುತ್ತಿರುವ ಸೂಚನೆಯನ್ನು ನೀಡಿದೆ. ಈ ಒಂದು ಕ್ಲೋಸ್ ಫೈಟ್​ ಫಲಿತಾಂಶ ಇಬ್ಬರ ನಡುವೆ ಟೈ ಆಗುವ ಸಾಧ್ಯತೆಯನ್ನು ಕೂಡ ಸೂಚಿಸುತ್ತಿದೆ. ಒಂದು ವೇಳೆ ಇದು ಆಗಿದ್ದೇ ಆದಲ್ಲಿ ಮುಂದೆ ಏನು ಎಂಬುದರ ಬಗ್ಗೆ ಹಲವರಲ್ಲಿ ಗೊಂದಲಗಳಿವೆ.

ಇದನ್ನೂ ಓದಿ:US Presidential Election; ಮಂಗಳವಾರ ದಿನವೇ ಅಮೆರಿಕ ಪ್ರಜೆಗಳು ವೋಟ್ ಮಾಡುವುದು ಯಾಕೆ?

publive-image

ಅಮೆರಿಕಾದಲ್ಲಿ ಚುನಾವಣಾ ಪ್ರಕ್ರಿಯೆ ಹೇಗಿರುತ್ತೆ?

ಈ ಒಂದು ವಿಚಾರಕ್ಕೆ ಹೋಗುವ ಮೊದಲು ನಾವು ಅಮೆರಿಕಾ ಚುನಾವಣೆಯ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಚುನಾವಣೆಯ ಯುದ್ಧ ಗೆದ್ದು ವೈಟ್​ಹೌಸ್​​ನ ಗದ್ದುಗೆಯನ್ನು ಹಿಡಿಯಲು ಟ್ರಂಪ್ ಹಾಗೂ ಹ್ಯಾರಿಸ್​ಗೆ 270 ಎಲೆಕ್ಟ್ರಾಲ್​ ಕಾಲೇಜ್​ ವೋಟ್​ಗಳ ಅವಶ್ಯಕತೆ ಇದೆ. ಒಂದು ವೇಳೆ ಚುನಾವಣೆ ಟೈ ಆಗಬೇಕಾದಲ್ಲಿ 538 ಎಲೆಕ್ಟ್ರಾಲ್​ ಕಾಲೇಜ್​ಗಳಲ್ಲಿ ಉಭಯ ನಾಯಕರು ತಲಾ 269 ವೋಟುಗಳನ್ನು ಪಡೆಯಬೇಕಾಗುತ್ತದೆ.ಇಲ್ಲಿ ಒಂದಂತೂ ಗಮನಿಸಬೇಕಾದ ಅಂಶ ಅಂದ್ರೆ ಯುಎಸ್​ನ ಮತದಾರರು ತಮ್ಮ ಅಧ್ಯಕ್ಷರನ್ನು ಚುನಾಯಿಸಲು ಬ್ಯಾಲೆಟ್​ ಮತ ಹಾಕುವುದಿಲ್ಲ. ಅವರು ಎಲೆಕ್ಟಾರ್ಸ್​​​ಗಳಿಗೆ ಮತ ಹಾಕುತ್ತಾರೆ. ಅವರು ಎಲೆಕ್ಟ್ರಾಲ್ ಕಾಲೇಜ್​ನ ಮೆಂಬರ್​ಗಳು ಆಗಿರುತ್ತಾರೆ. ಹೀಗಾಗಿ ಒಂದು ವೇಳೆ ಟ್ರಂಪ್ ಹಾಗೂ ಹ್ಯಾರಿಸ್​ 269 ಎಲೆಕ್ಟ್ರಾಲ್​ ಕಾಲೇಜ್ ವೋಟುಗಳನ್ನು ಪಡೆದಿದ್ದೇ ಆದಲ್ಲಿ ಮುಂದೇನು ಎಂಬುದನ್ನು ತಿಳಿಯಲು ನಾವು 1800ನೇ ಇಸ್ವಿಗೆ ಹೋಗಬೇಕಾಗುತ್ತದೆ.

1800ರಲ್ಲೂ ಆಗಿತ್ತು ಫಲಿತಾಂಶ ಟೈ!

1800ರಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಾಗಿದ್ದ ಥಾಮಸ್​ ಜೆಫರ್​ಸನ್​ ಮತ್ತು ಆರೋನ್ ಬುರಽ ನಡುವೆ ನಡೆದ ಚುನಾವಣಾ ಹಣಾಹಣಿಯಲ್ಲಿ ಎಲೆಟ್ಟ್ರಾಲ್ ಮತಗಳ ಟ್ಯಾಲಿಯಲ್ಲಿ ಟೈ ಆಗಿತ್ತು. ಹೀಗಾಗಿ 1801ರಲ್ಲಿ ಅನಿಶ್ಚಿತ ಚುನಾವಣೆ ನಡೆಸಲಾಯ್ತು. ಈ ಚುನಾವಣೆಯಲ್ಲಿ ಜೆಫರ್​ಸನ್​ ಗೆದ್ದು ಅಧ್ಯಕ್ಷ ಗಾದಿಯನ್ನು ಏರಿದ್ದರು.

ಇದನ್ನೂ ಓದಿ:US Elections; ಇಂದು ಅಮೆರಿಕದಲ್ಲಿ ಮತದಾನ..​​ ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಫೈಟ್, ಗೆಲ್ಲುವುದು ಯಾರು?

ಒಂದು ವೇಳೆ ಈ ಬಾರಿಯೂ ಕೂಡ ಅದೇ ರೀತಿಯ ಫಲಿತಾಂಶ ಬಂದಿದ್ದೇ ಆದಲ್ಲಿ ಅಮೆರಿಕಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಪಾಪ್ಯುಲರ್ ವೋಟ್​ಗಳ ಮೊರೆ ಹೋಗಬೇಕಾಗುತ್ತದೆ. ಇದರ ನಿರ್ಧಾರ ಕಾಂಗ್ರೆಸ್​ನ ಕೈಗೆ ಹೋಗಿ ಸೇರಲಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿಯೂ ಎಲೆಕ್ಟ್ರಾಲ್ ಕಾಲೇಜ್​ ಮತಗಳಲ್ಲಿ ಬಹುಮತ ಪಡೆಯುವಲ್ಲಿ ವಿಫಲರಾದಲ್ಲಿ ಯುಎಸ್​ನ ಸಂವಿಧಾನದಲ್ಲಾದ 12ನೇ ತಿದ್ದುಪಡಿ ಅನ್ವಯ ಅನಿಶ್ಚತತೆ ಚುನಾವಣೆಯನ್ನು ನಡೆಸಬೇಕಾಗುತ್ತದೆ. ಜನವರಿ 3ರಂದು ಪ್ರಮಾಣ ತೆಗೆದುಕೊಂಡಿರುವ ಹೊಸ ಕಾಂಗ್ರೆಸ್​ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಹಾಗೂ ಸೆನೆಟ್ ನೂತನ ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತದೆ.ಇನ್ನೂ ಸರಳವಾಗಿ ಹೇಳಬೇಕು ಅಂದ್ರೆ ಯುಎಸ್​ ಕಾಂಗ್ರೆಸ್​ನ ಕೆಳಮನೆಯ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಉಪಾಧ್ಯಕ್ಷರ ಆಯ್ಕೆಯನ್ನು ಸೆನೆಟ್​ ಅಧಿಕಾರಕ್ಕೆ ಬಿಟ್ಟುಕೊಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment