/newsfirstlive-kannada/media/post_attachments/wp-content/uploads/2025/01/Flight-Landing-2024.jpg)
2024 ಮುಗಿದು 2025ರ ಹೊಸ ವರ್ಷ ಆರಂಭವಾಗಿದೆ. 2025ನೇ ವರ್ಷವನ್ನು ವಿಶ್ವದ್ಯಾಂತ ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಆದರೆ ಇಲ್ಲೊಂದು ವಿಮಾನ 2025ರಲ್ಲಿ ಟೇಕಾಫ್ ಆಗಿ 2024ರಲ್ಲಿ ಇಸವಿಯಲ್ಲಿ ಲ್ಯಾಂಡ್​ ಆಗಿದೆ.
ಅರೆ ಇದೇನು 2025ರಲ್ಲಿ ಟೇಕಾಫ್ ಆಗಿ 2024ರಲ್ಲಿ ಲ್ಯಾಂಡ್ ಆಗಿದೆ ಅಂದ್ರೆ ಸಮಯ ಹಿಂದಕ್ಕೆ ಹೋಗುತ್ತಿದೆಯಾ? ಅಂತ ನಿಮಗೆ ಆಶ್ಚರ್ಯ ಆಗಬಹುದು. ಹೌದು, ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ.
ಕ್ಯಾಥೆ ಪೆಸಿಫಿಕ್ ಫ್ಲೈಟ್ 880, 2025ರ ಜನವರಿ 1ರಂದು ಹಾಂಗ್​​ಕಾಂಗ್​ನಿಂದ ಹೊರಟು 2024ರ ಡಿ.31ರಂದು ಲಾಸ್​ ಏಂಜಲೀಸ್​ನಲ್ಲಿ ಲ್ಯಾಂಡ್ ಆಗಿದೆ. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ದಿನಾಂಕ ರೇಖೆ.
/newsfirstlive-kannada/media/post_attachments/wp-content/uploads/2025/01/2024-Flight-Land.jpg)
ಏನದು ಅಂತಾರಾಷ್ಟ್ರೀಯ ದಿನಾಂಕ ರೇಖೆ?
ಅಂತಾರಾಷ್ಟ್ರೀಯ ದಿನಾಂಕ ರೇಖೆಯು ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿರುವ ಒಂದು ಕಾಲ್ಪನಿಕ ರೇಖೆ. ಈ ರೇಖೆ ಭೂಮಿ ಮೇಲೆ ಎರಡು ವಿಭಿನ್ನ ದಿನಾಂಕಗಳಾಗಿ ವಿಭಜಿಸುತ್ತದೆ. ಅಂದರೆ ವಿಮಾನವು ಈ ರೇಖೆ ದಾಟಿ ಪಶ್ಚಿಮದ ಕಡೆ ಹೋದರೆ ದಿನಾಂಕ ಒಂದು ದಿನ ಮುಂದಕ್ಕೆ ಹೋಗುತ್ತದೆ. ಈ ರೇಖೆ ದಾಟಿ ಪೂರ್ವದ ಕಡೆ ಚಲಿಸಿದರೆ ಒಂದು ದಿನ ಹಿಂದಕ್ಕೆ ಹೋಗುತ್ತದೆ.
ಇದನ್ನೂ ಓದಿ: NewYear2025: ಹೊಸ ವರ್ಷ ಆಗಮನ.. ವಿಶ್ವದಲ್ಲೇ ಮೊದಲು ಸ್ವಾಗತಿಸಿದವರು ಯಾರು ಗೊತ್ತಾ?
ಇದನ್ನು ಇನ್ನೂ ಸರಳವಾಗಿ ಅಂದರೆ ಜ.1ರ ಬೆಳಗ್ಗೆ ಹಾಂಗ್​​ಕಾಂಗ್​ನಿಂದ ವಿಮಾನದಲ್ಲಿ ಹೊರಟರೆ, ವಿಮಾನವು ಅಂತಾರಾಷ್ಟ್ರೀಯ ದಿನಾಂಕ ರೇಖೆ ದಾಟಿ ಲಾಸ್ ಏಂಜಲೀಸ್​ ತಲುಪಿದ್ರೆ ಅಲ್ಲಿ ದಿನಾಂಕ ಡಿ.31 ಆಗಿರುತ್ತದೆ. ಹಾಂಗ್​ಕಾಂಗ್ ಮತ್ತು ಲಾಸ್ ಏಂಜಲೀಸ್ ನಡುವಿನ ಸಮಯದ ವ್ಯತ್ಯಾಸ 16 ಗಂಟೆ.
/newsfirstlive-kannada/media/post_attachments/wp-content/uploads/2025/01/2024-Flight-Land-1.jpg)
ಇದು ಪ್ರಯಾಣಿಕರಿಗೂ ಒಂದು ವಿಶೇಷ ಅನುಭವ ನೀಡುತ್ತದೆ. ಮೊದಲು ಹಾಂಗ್​ಕಾಂಗ್​ನಲ್ಲಿ ಹೊಸ ವರ್ಷ ಆಚರಿಸಿ ಮತ್ತೆ ಲಾಸ್ ಏಂಜಲೀಸ್​ನಲ್ಲಿಯೂ ಹೊಸ ವರ್ಷ ಆಚರಿಸುತ್ತಾರೆ.
ಈ ರೇಖೆ ನೇರವಾಗಿಲ್ಲ ಅಥವಾ ಯಾವುದೇ ಕಾನೂನು ಸ್ಥಾನಮಾನ ಹೊಂದಿಲ್ಲ. ಇದು ವಿವಿಧ ದೇಶಗಳು, ಅವುಗಳ ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us