‘ಗರ್ಲ್​​ ಫ್ರೆಂಡ್’​ ಪರಿಚಯಿಸಿದ ವಿಜಯ್ ದೇವರಕೊಂಡ.. ರಶ್ಮಿಕಾ ಮಂದಣ್ಣ ಫುಲ್ ಟೆನ್ಷನ್​!

author-image
Bheemappa
Updated On
‘ಗರ್ಲ್​​ ಫ್ರೆಂಡ್’​ ಪರಿಚಯಿಸಿದ ವಿಜಯ್ ದೇವರಕೊಂಡ.. ರಶ್ಮಿಕಾ ಮಂದಣ್ಣ ಫುಲ್ ಟೆನ್ಷನ್​!
Advertisment
  • ವಿಜಯ ದೇವರಕೊಂಡ ಮಾತಿನಿಂದ ಆರಂಭವಾದ ಲವ್​ಸ್ಟೋರಿ
  • ಪುಷ್ಪ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಮತ್ತೊಂದು ಮೂವಿನಾ..?
  • ಫುಲ್ ಕ್ಲೋಸ್ ಅಪ್​ನಲ್ಲೇ ರಶ್ಮಿಕಾ ಮುಖ ತೋರಿಸಿದ ನಿರ್ದೇಶಕ

ರಶ್ಮಿಕಾ ಮಂದಣ್ಣ ಕೈಗೆತ್ತಿಕೊಳ್ಳುವ ಎಲ್ಲ ಪ್ರಾಜೆಕ್ಟ್​ಗಳು ಬಂಗಾರವಾಗುತ್ತಿವೆ. ಯಾವುದೂ ಫೇಲ್ ಆಗುತ್ತಿಲ್ಲ. ತೆಲುಗು ಇಂಡಸ್ಟ್ರಿಗೆ ಯಾವಾಗ ರಶ್ಮಿಕಾ ಕಾಲಿಟ್ಟರೋ ಅಲ್ಲಿಂದ ಅವರು ಸೋಲು ಅನ್ನೋದೆ ನೋಡಿಲ್ಲ. ಪ್ರತಿ ಹೆಜ್ಜೆ ಕೂಡ ಪುಷ್ಪಗಳ ಮೆಟ್ಟಿಲುಗಳು ಆಗುತ್ತಿವೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಪುಷ್ಪ ಮೂವಿಯಲ್ಲಿ ಮಿಂಚಿದ್ದ ಬ್ಯೂಟಿ ರಶ್ಮಿಕಾ, ಇದೀಗ ಎಮೊಷನಲ್ ಲವ್​ ಸ್ಟೋರಿ ಮೂಲಕ ಮತ್ತೆ ಪ್ರೇಮಿಗಳ ಹೃದಯ ಬಡಿಯಲು ಮುಂದಾಗಿದ್ದಾರೆ.

publive-image

ದೀ ಗರ್ಲ್​​ ಫ್ರೆಂಡ್ ಎನ್ನುವ ತೆಲುಗು ಸಿನಿಮಾದಲ್ಲಿ ರಶ್ಮಿಕಾ, ಮೇನ್ ರೋಲ್​​ನಲ್ಲಿ ಅಭಿನಯ ಮಾಡುತ್ತಿದ್ದು ಸದ್ಯ ಇದೀಗ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್​ ಬರುತ್ತಿದ್ದು ಕೇವಲ 2 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ವಿವ್ಸ್​ ಕಂಡಿದೆ. ಇನ್ನೊಂದು ವಿಶೇಷ ಎಂದರೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರನ್ನ ವಿಜಯ್ ದೇವರಕೊಂಡ ಪರಿಚಯಿಸಿಕೊಟ್ಟಿದ್ದಾರೆ.

ಈ ಸಿನಿಮಾ ಪಕ್ಕಾ ಲವ್​ಸ್ಟೋರಿ ಆಗಿದ್ದು ಕಾಲೇಜು ಸ್ಟುಡೆಂಟ್​ ಆಗಿ ಟೀಸರ್​ನಲ್ಲಿ ರಶ್ಮಿಕಾ ಎಂಟ್ರಿ ಕೊಟ್ಟಿದ್ದಾರೆ. ಫುಲ್ ಕ್ಲೋಸ್ ಅಪ್​ನಲ್ಲೇ ರಶ್ಮಿಕಾ ಮುಖವನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಇನ್ನು ರಶ್ಮಿಕಾಗೆ ಬಾಯ್​ಫ್ರೆಂಡ್​ ಆಗಿ ಸ್ಯಾಂಡಲ್​ವುಡ್​ನ ನಟ ದೀಕ್ಷಿತ್ ಶೆಟ್ಟಿ ಅಭಿನಯ ಮಾಡಿದ್ದಾರೆ. ಆದರೆ ಟೀಸರ್​ನಲ್ಲಿ ಮೊದಲ ವಾಯ್ಸ್​ ಮಾತ್ರ ವಿಜಯ್​ ದೇವರಕೊಂಡ ಅವರದ್ದು ಕೇಳಿಸುತ್ತದೆ. ಇನ್ನು ರಾವ್ ರಮೇಶ್, ರೋಹಿಣಿ ಸೇರಿದಂತೆ ಇತರೆ ಕಲಾವಿದರು ಸಿನಿಮಾದಲ್ಲಿ ಇದ್ದಾರೆ.

ಇದನ್ನೂ ಓದಿ:ಕಲಾಪ ಆರಂಭ; ರತನ್ ಟಾಟಾ ಸೇರಿ ಅಗಲಿದ ಗಣ್ಯರಿಗೆ ಸಂತಾಪ.. ನೂತನ ಶಾಸಕರ ಪ್ರಮಾಣ ವಚನ

publive-image

ಇನ್ನು ದೀ ಗರ್ಲ್​​ ಫ್ರೆಂಡ್ ನಿನಿಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅದರಂತೆ ಅಲ್ಲು ಅರ್ಜುನ್ ಅವರ ತಂದೆ ಹಾಗೂ ಭಾರತದ ನಿರ್ಮಾಪಕರಲ್ಲಿ ಒಬ್ಬರಾದ ಅಲ್ಲು ಅರವಿಂದ್ ಅವರು ಮೂವಿಗೆ ಹಣ ಹೂಡಿಕೆ ಮಾಡಿದ್ದಾರೆ. ಗೀತಾ ಆರ್ಟ್ಸ್​ ಅಡಿ ಸಿನಿಮಾ ನಿರ್ಮಾಣವಾಗುತ್ತಿದೆ. ಹೇಶಾಮ್ ಅಬ್ದುಲ್ ವಹಾಬ್ ಅವರು ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment