Advertisment

ನಾಗದೇವರ ದರ್ಶನ.. ನೋಡ ನೋಡ್ತಿದ್ದಂಗೆ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಏನಿದರ ವಿಶೇಷ?

author-image
admin
Updated On
ನಾಗದೇವರ ದರ್ಶನ.. ನೋಡ ನೋಡ್ತಿದ್ದಂಗೆ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಏನಿದರ ವಿಶೇಷ?
Advertisment
  • ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ
  • ಕಲಾವಿದರ ಸಂಘದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ನಾಗದರ್ಶನ
  • ಹಿರಿಯ ನಟಿ ಜ್ಯೋತಿ ಅವರ ಮೈ ಮೇಲೆ ದೇವರು ಬಂದಿದ್ದು ಯಾಕೆ?

ಬೆಂಗಳೂರು: ಕಲಾವಿದರ ಸಂಘದಲ್ಲಿ ಇಂದು ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ-ಹವನ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.

Advertisment

ಇದನ್ನೂ ಓದಿ: ‘ನನ್ನ ಕೋಪಕ್ಕೆ ಬಲಿ ಆಗ್ಬೇಡಿ, ಹೇಳಿದಂತೆ ಮಾಡಿ’- ಜಗ್ಗೇಶ್, ದೊಡ್ಡಣ್ಣ ಮುಂದೆ ಚಿತ್ರರಂಗಕ್ಕೆ ನಾಗದೇವರು ವಾರ್ನಿಂಗ್!

ಕಲಾವಿದರ ಸಂಘದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ನಾಗದರ್ಶನವಾಗಿದ್ದು, ಹಿರಿಯ ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ನಾಗದರ್ಶಕ ಮಹತ್ವದ ಪ್ರಶ್ನೆಯನ್ನು ಕೇಳಿದೆ. ನಿಮ್ಮಲ್ಲಿ ಒಗ್ಗಟ್ಟು ಉಂಟಾ.. ಇಷ್ಟು ಮಾಡಿದ್ರೂ ಎಲ್ಲರೂ ಒಟ್ಟಾಗಿ ಸೇರಿಲ್ಲ. ನನ್ನನ್ನು ಭಯ ಪಟ್ಟು ಪೂಜಿಸ್ಬೇಡಿ.. ಪ್ರೀತಿಯಿಂದ ಗೆಲ್ಲಿ ಎಂದು ಪ್ರಶ್ನಿಸಿದೆ.

publive-image

ಈ ನಾಗದರ್ಶನದ ವೇಳೆ ಹಿರಿಯ ನಟಿ ಜ್ಯೋತಿ ಅವರ ಮೈ ಮೇಲೆ ದೇವರು ಬಂದ ಘಟನೆಯೂ ನಡೆದಿದೆ. ಕೂಡಲೇ ಇತರೆ ಕಲಾವಿದರು ನಟಿ ಜ್ಯೋತಿ ಅವರನ್ನು ಹಿಡಿದುಕೊಂಡಿದ್ದಾರೆ. ಈ ಕುತೂಹಲದ ಬಗ್ಗೆ ಖುದ್ದು ನಟಿ ಜ್ಯೋತಿ ಅವರು ನ್ಯೂಸ್‌ ಫಸ್ಟ್ ಚಾನೆಲ್‌ಗೆ ಪ್ರತಿಕ್ರಿಯಿಸಿದ್ದಾರೆ.

Advertisment

publive-image

ಮೈಮೇಲೆ ದೇವರು ಬಂದಾಗ ಏನಾಯ್ತು?
ನನಗೆ ಈ ಹಿಂದೆಯೂ ನಾಗದೇವರು ಮೈಮೇಲೆ ಬಂದ ಅನುಭವ ಆಗಿತ್ತು. ದೊಡ್ಡ, ದೊಡ್ಡ ಪೂಜೆ, ಪುನಸ್ಕಾರ ಮಾಡೋ ಸಂದರ್ಭದಲ್ಲಿ ದೇವಿ ಆರಾಧನೆ ಮಾಡೋವಾಗ ನನ್ನ ಮೈಯಲ್ಲಿ ವೈಬ್ರೇಷನ್ ಆಗುತ್ತೆ. ನನ್ನ ಮೇಲೆ ದೇವಿಯ ಅನುಗ್ರಹ ಇದೆ ಅನ್ನೋದನ್ನ ತೋರಿಸಿಕೊಳ್ಳಲು ಈ ರೀತಿಯಾದ ಘಟನೆ ನಡೆಯುತ್ತೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಕಲಾವಿದರ ಸಂಘದ ಪೂಜೆ ಬಳಿಕ ದರ್ಶನ್ ಭೇಟಿಗೆ ಹೊರಟ ಅಭಿಷೇಕ್, ಧನ್ವೀರ್‌, ಚಿಕ್ಕಣ್ಣ!

ನಾಗಾರಾಧನೆಯ ಸಮಯದಲ್ಲೂ ನನಗೆ ದೇವರು ಸ್ವಲ್ಪ ಮೈಮೇಲೆ ಬರುತ್ತೆ. ಇವತ್ತೂ ಸಹ ಕಲಾವಿದರ ಸಂಘದಲ್ಲಿ ನಾನಿದ್ದೀನಿ ಅಂತ ತೋರಿಸಿಕೊಳ್ಳಲು ದೇವರು ನನ್ನ ಮೈಮೇಲೆ ಬಂತು. ದೇವರು ಇಲ್ಲಿದ್ದಾರೆ. ಈ ಪೂಜೆಯನ್ನು ಸ್ವೀಕರಿಸಿದ್ದಾರೆ. ನಮ್ಮ ಇಂಡಸ್ಟ್ರಿಗೆ ಒಳ್ಳೆಯದುಗುತ್ತೆ. ಮುಂದೆ ಯಶಸ್ಸು ಸಿಗಲಿದೆ ಎಂದು ಜ್ಯೋತಿ ಹೇಳಿದ್ದಾರೆ.

Advertisment

ಇದನ್ನೂ ಓದಿ:ದೇವರ ಮೊರೆ ಹೋದ ಕನ್ನಡ ಚಿತ್ರರಂಗ.. ಕಲಾವಿದರ ಸಂಘದಲ್ಲಿ ವಿಶೇಷ ಹೋಮ, ಹವನ..!

ದೇವರು ಮೈಮೇಲೆ ಬಂದಾಗ ಸ್ವಲ್ಪ ನಿಮಿಷಗಳ ಕಾಲ ನನಗೇನು ಗೊತ್ತಾಗಲ್ಲ. ಸಡನ್ ಆಗಿ ನನ್ನ ಮೈಮೇಲೆ ಶಕ್ತಿ ಹೆಚ್ಚಾಗುತ್ತೆ. ನಾಲ್ಕೈದು ಜನ ಹಿಡಿದುಕೊಳ್ಳೋದು ಕಷ್ಟವಾಗುತ್ತೆ. ಆಗ ನನಗೆ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ. ದೇವರ ಅನುಗ್ರಹ ಇರೋದ್ರಿಂದ ಮೈಮೇಲೆ ಬರುತ್ತೆ ಅಂತ ಹೇಳಿದ್ದಾರೆ. ಹೀಗಾಗಿ ನಾನು ಅದನ್ನ ನಂಬಿದ್ದೇನೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment