newsfirstkannada.com

ಟ್ರ್ಯಾಕ್ಟರ್​ನಲ್ಲಿ ಹುಲ್ಲು ಸಾಗಿಸುವಾಗ ಕರೆಂಟ್ ವೈರ್ ಟಚ್.. ಡ್ರೈವರ್ ಚಾಣಾಕ್ಷತೆಯಿಂದ ತಪ್ಪಿದ ಭಾರೀ ಅನಾಹುತ

Share :

Published January 14, 2024 at 8:44am

    ಸಾಮರ್ಥ್ಯಕ್ಕಿಂತ ಹೆಚ್ಚು ಹುಲ್ಲನ್ನು ಸಾಗಿಸುತ್ತಿದ್ದಾಗ ನಡೆದ ದುರಂತ

    ಬೆಂಕಿ ಹತ್ತಿಕೊಂಡಿದ್ದು ನೋಡಿ ಟ್ರ್ಯಾಕ್ಟರ್​ ಚಾಲಕ ಮಾಡಿದ್ದೇನು..?

    ಟ್ರ್ಯಾಕ್ಟರ್​ ಡ್ರೈವರ್ ಚಾಣಾಕ್ಷತೆಯಿಂದ ತಪ್ಪಿದ ಭಾರೀ ಅನಾಹುತ

ಕೊಡಗು: ಟ್ರ್ಯಾಕ್ಟರ್​​ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಹುಲ್ಲು ಸಾಗಿಸುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದ ಮಾರಿಗುಡಿ ಬಳಿ ನಡೆದಿದೆ.

ಸಾಮರ್ಥ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಟ್ರ್ಯಾಕ್ಟರ್​ನಲ್ಲಿ ಹುಲ್ಲು ಏರಿಕೊಂಡು ಹೋಗುತ್ತಿದ್ದರು. ಈ ವೇಳೆ ಗ್ರಾಮದ ಮಾರಿಗುಡಿ ಬಳಿ ಬರುವಾಗ ಮೇಲಿನಿಂದ ಹಾದು ಹೋಗಿದ್ದ ಕರೆಂಟ್ ವೈರ್ ತಗುಲಿದೆ. ತಕ್ಷಣ ಟ್ರ್ಯಾಕ್ಟರ್​ ಚಾಲಕ ಚಾಣಾಕ್ಷತೆಯಿಂದ ಟ್ರಾಲಿಯಲ್ಲಿದ್ದ ಹುಲ್ಲನ್ನು ಲಿಫ್ಟ್​ ಮಾಡುವ ಮೂಲಕ ಕೆಳಗೆ ಸುರಿದಿದ್ದಾನೆ. ಹೀಗಾಗಿ ಚಾಲಕ ಪಾರಾಗಿದ್ದಲ್ಲದೇ ಟ್ರ್ಯಾಕ್ಟರ್​ ಅನ್ನು ಕೂಡ ಸೇಫ್ ಮಾಡಿ ಆಗುವ ಅನಾಹುತ ತಪ್ಪಿಸಿದ್ದಾನೆ.

ಇನ್ನು ಈ ಹುಲ್ಲು ಕುಂದಳ್ಳಿ ಗ್ರಾಮದ ಪ್ರವೀಣ್ ಎನ್ನುವರಿಗೆ ಸೇರಿದ್ದು ಬೆಟ್ಟದಳ್ಳಿಯಿಂದ ಮಸಗೋಡಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರ್ಯಾಕ್ಟರ್​ನಲ್ಲಿ ಹುಲ್ಲು ಸಾಗಿಸುವಾಗ ಕರೆಂಟ್ ವೈರ್ ಟಚ್.. ಡ್ರೈವರ್ ಚಾಣಾಕ್ಷತೆಯಿಂದ ತಪ್ಪಿದ ಭಾರೀ ಅನಾಹುತ

https://newsfirstlive.com/wp-content/uploads/2024/01/MDK_TRACTORE_FIRE.jpg

Load More