/newsfirstlive-kannada/media/post_attachments/wp-content/uploads/2025/02/Mahurat-Deliveries.jpg)
ಭಾರತದಲ್ಲಿ ಇತ್ತೀಚೆಗೆ ಒಂದು ಕ್ರೇಜ್ ಬೆಳೆಯುತ್ತಿದೆ. ಮಗುವಿನ ಹೆರಿಗೆ ಇಂತಹುದೇ ಮುಹೂರ್ತದಲ್ಲಿ ಆಗಬೇಕು ಅಂತ ವೈದ್ಯರಿಗಿಂತ ಪೋಷಕರೇ ದಿನವನ್ನು ನಿಗದಿ ಮಾಡುತ್ತಿದ್ದಾರೆ. ಅದರಲ್ಲೂ ಜನವರಿ 2024ರಲ್ಲಿ ಈ ಒಂದು ಹುಚ್ಚು ವಿಪರೀತಕ್ಕೆ ಹೋಗಿತ್ತು. ಜನವರಿ 22 ರಂದು ರಾಮಜನ್ಮಭೂಮಿಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಅಂದು ನಡೆಯುತ್ತಿತ್ತು. ಅದೇ ವಿಶೇಷ ದಿನವೇ ನಮ್ಮ ಮಗುವಿನ ಹೆರಿಗೆಯಾಗಬೇಕು ಎಂದು ಹೆರಿಗೆಯಾಗುವ ದಿನಾಂಕಕ್ಕೂ ಮೊದಲೇ ಪೋಷಕರು ವೈದ್ಯರಿಗೆ ಒತ್ತಾಯ ಮಾಡಿ ಹೆರಿಗೆ ಮಾಡಿಸಿರುವ ಘಟನೆ ದೇಶದ ತುಂಬಾ ಹೆಚ್ಚಾಗಿ ನಡೆದಿವೆ ಎಂಬ ಆತಂಕಕಾರಿ ಮಾಹಿತಿ ಆಚೆ ಬಂದಿದೆ.
ಕೇವಲ ಇದು ಇಲ್ಲಿಗೆ ಮುಗಿದಿಲ್ಲ. ಅದೊಂದೇ ಸುಮಧುರು ಮುಹೂರ್ತಕ್ಕೆ ಸರಿಯಾಗಿ ಹೆರಿಗೆ ಮಾಡಿಸುವ ಪದ್ಧತಿ 2024ಕ್ಕೆನೇ ನಿಂತಿಲ್ಲ. ಈಗಲೂ ಅದು ಮುಂದುವರಿದಿದೆ. ಪೋಷಕರೇ ಇಂತಹ ದಿನ ಹೆರಿಗೆಯಾದರೆ ಅಥವಾ ಮಂಗಳಕರವಾದ ಸಮಯದಲ್ಲಿ ಹೆರಿಗೆಯಾದರೆ ಉತ್ತಮ ಎಂದು ಅವರೇ ದಿನಾಂಕ ಹಾಗೂ ಸಮಯವನ್ನು ನಿಗದಿ ಮಾಡಿಕೊಂಡು ಬಂದು ವೈದ್ಯರಿಗೆ ಆಗ್ರಹಿಸುತ್ತಿದ್ದಾರೆ. ಇತ್ತೀಚೆಗೆ ಈ ಮಾದರಿಯ ವಿನಂತಿಗಳು ವಿಪರೀತಕ್ಕೆ ಹೋಗಿವೆ ಎಂದು ವೈದ್ಯರೇ ಹೇಳುತ್ತಿದ್ದಾರೆ. ಹಲವು ಬಾರಿ ಹೆರಿಗೆಯಾಗುವ ದಿನಾಂಕವನ್ನು ಮುಂದಕ್ಕೆ ಹಾಕುವ ಸವಾಲುಗಳನ್ನು ಕೂಡ ವೈದ್ಯರು ಅನುಭವಿಸುತ್ತಿದ್ದಾರೆ. ಈ ಮುಹೂರ್ತ ಡೆಲಿವರಿ ಬೇಬಿ ಎನ್ನುವ ಹುಚ್ಚು ಈಗ ಭಾರತದಲ್ಲಿ ವಿಪರೀತಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ ಹಾಗಾದರೆ ಅದಕ್ಕೆ ಕಾರಣವೇನು?
ಇದನ್ನೂ ಓದಿ:ಅಮ್ಮನ ಸಾಯಿಸಿದ್ದು ಹೀಗೆ.. 4 ವರ್ಷದ ಮಗಳ ಡ್ರಾಯಿಂಗ್ ಸ್ಕೆಚ್‌ನಿಂದ ಪೊಲೀಸರಿಗೆ ಸ್ಫೋಟಕ ಸುಳಿವು
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಹೆರಿಗೆ ಗೈನಾಕಾಲಾಜಿಸ್ಟ್ ಡಾ ನಿರ್ಮಲಾ ಚಂದ್ರಶೇಖರ್ ಅವರು ಹೇಳುವ ಪ್ರಕಾರ, ಇತ್ತಿಗೆ ಮುಹೂರ್ತ ಸಮಯಕ್ಕೆ ಹೆರಿಗೆ ಎನ್ನುವುದು ಹೆಚ್ಚಾಗಿದೆ. ಪೋಷಕರೆ ಒಂದು ವಿಶೇಷವಾದ ದಿನ ಹಾಗೂ ಸಮಯವನ್ನು ನಮಗೆ ತಿಳಿಸಿ ಇದೇ ಸಮಯದಲ್ಲಿ ಹೆರಿಗೆಯಾಗುವಂತೆ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಜೋತಿಷಿಯಗಳು, ಆಧ್ಯಾತ್ಮ ಪಂಡಿತರನ್ನು ಸಂಪರ್ಕಿಸಿಕೊಂಡು ಬಂದು ಒಳ್ಳೆಯ ದಿನ ಹಾಗೂ ಸಮಯವನ್ನು ಕೇಳಿಕೊಂಡು ಬಂದು ನಮ್ಮ ಮುಂದೆ ಬಂದು ಆ ಸಮಯಕ್ಕೆ ಹೆರಿಗೆ ಮಾಡಿಸುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ನಿಮಗೆ ನಾಚಿಕೆ ಆಗಬೇಕು.. ಹುಷಾರ್! ರಣವೀರ್ ಅಲಹಾಬಾದಿಯಾಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ
ಇಂತಹದೊಂದು ಪದ್ಧತಿ ನಿಜಕ್ಕೂ ಹೊಸದಾಗಿ ಶುರುವಾಗಿದೆ ಮತ್ತು ಅದು ದಿನೇ ದಿನೇ ಹೆಚ್ಚುತ್ತಲೇ ಇದೆ. ಇದು ಸರಿಯಾದ ಕ್ರಮವಲ್ಲ. ಮಗುವಿನ ಜನ್ಮವನ್ನು ಸಂಪೂರ್ಣವಾಗಿ ನಾವು ನಿಯಂತ್ರಣ ಮಾಡಲು ಆಗುವುದಿಲ್ಲ ಹಾಗೂ ಅದು ಸಂಪ್ರಾದಾಯದ ಪ್ರಕಾರ ನಡೆಯುವಂತದ್ದಲ್ಲ. ಅತಿಹೆಚ್ಚು ಹೆರಿಗೆಗಳು ಸ್ವಾಭಿವಿಕವಾಗಿ ಆಗುವ ಸಮಯದಲ್ಲಿಯೇ ಆಗಬೇಕು. ಅವರು ಹೇಳಿದ ಸಮಯಕ್ಕೆ, ದಿನಾಂಕದಂದು ಹೆರಿಗೆ ಮಾಡಲು ಸಾಧ್ಯವಾಗುವುದು ಕೆಲವು ಸಮಯಗಳಲ್ಲಿ ಮಾತ್ರ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿರುವುದರಿಂದ ಪೋಷಕರು ನಾವು ಅಂದುಕೊಂಡ ಮುಹೂರ್ತಕ್ಕೆ ಡೆಲಿವರಿ ಮಾಡಿಸಬಹುದು ಎಂದು ನಂಬಿಕೊಂಡಿದ್ದಾರೆ. ಹೀಗಾಗಿಯೇ ಮುಂಚೆಯ ಅರ್ಚಕರನ್ನು, ಜ್ಯೋತಿಷಿಗಳನ್ನು, ಆಧ್ಯಾತ್ಮಿಕ ಸಾಧುಗಳನ್ನು ಸಂಪರ್ಕಿಸಿ ಮುಹೂರ್ತ ಮತ್ತು ಸಮಯವನ್ನು ನಿಗದಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದು ಮಾತ್ರವಲ್ಲ ಈ ಒಂದು ಪದ್ಧತಿಯಿಂದ ತಾಯಿ ಅಥವಾ ಮಗು ಇಬ್ಬರ ಪ್ರಾಣಕ್ಕೂ ಅಪಾಯ ಬರುವ ಸಾಧ್ಯತೆ ಇರುತ್ತದೆ. ಗರ್ಭದಲ್ಲಿ ಮಗು ಸಂಪೂರ್ಣ ದಿನಗಳನ್ನು ಕಳೆಯದೆ ಅಂದ್ರೆ 37 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಮಗುವನ್ನು ಹೆರಿಗೆ ಮಾಡಿಸಿದರೆ ಅದು ಅನೇಕ ನವಜಾತ ಶಿಶುವಿಗೆ ಅನೇಕ ತೊಂದರೆಗಳು ಉಂಟಾಗುತ್ತವೆ. ಕೆಲವೊಮ್ಮೆ ಅವರನ್ನು ಎನ್ಐಸಿಯುನಲ್ಲಿಡುವ ಪ್ರಸಂಗವು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಗರ್ಭಿಣಿಯರಲ್ಲಿ ಸ್ವಾಭಾವಿಕವಾಗಿ ಹೆರಿಗೆ ನೋವು ಅಥವಾ ಸಂಕೋಚನಗಳು ಕಾಣಲು ಆರಂಭಿಸುತ್ತವೆ. ಆದ್ರೆ ಪೋಷಕರು ಇಂತಹ ಪ್ರಮುಖ ದಿನದಂದೇ ಹೆರಿಗೆ ಮಾಡಿಸಿ ಎಂದು ಬರುತ್ತಾರೆ. ಇದು ತಾಯಿ ಮತ್ತು ಮಗು ಇಬ್ಬರಿಗೂ ಸಮಸ್ಯೆಗಳನ್ನು ತರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಪೋಷಕರು ಸಿಜರೀಯನ್ ಮೊರೆ ಹೋಗುತ್ತಾರೆ. ಅನಗತ್ಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳು ಸೋಂಕು ತಗಲುವ ಅಪಾಯವನ್ನು ತಂದಿಡುತ್ತವೆ ಮತ್ತು ತಾಯಿಯ ಮೇಲೆ ಅನೇಕ ವೈದ್ಯಕೀಯ ಪರಿಣಾಮಗಳು ಆಗುತ್ತವೆ ಎಂದು ವೈದ್ಯರು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ