newsfirstkannada.com

ಶ್ವಾನ ಪ್ರಿಯರಿಗೆ ಗುಡ್‌ನ್ಯೂಸ್‌.. 23 ತಳಿಗಳನ್ನು ನಿಷೇಧಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Share :

Published April 10, 2024 at 6:08pm

Update April 10, 2024 at 6:09pm

    23 ಭೀಷಣ ಶ್ವಾನ ತಳಿಗಳ ಸಾಕುವಿಕೆಗೆ ನಿಷೇಧಿಸಿದ್ದ ಕೇಂದ್ರ ಸರ್ಕಾರ

    ತಜ್ಞರು ನಿಷೇಧಿಸುವ ಸಂಬಂಧ ಯಾರನ್ನೂ ಸಂಪರ್ಕಿಸಿಲ್ಲ ಎಂದು ಆಕ್ಷೇಪ

    ಶ್ವಾನ ಹ್ಯಾಂಡ್ಲರ್‌ & ರಾಟ್‌ವೈಲರ್‌ ಮಾಲೀಕರು ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ಮನುಷ್ಯನ ಜೀವಕ್ಕೆ ಕುತ್ತು ತರುವ ಸಾಧ್ಯತೆಯ ಹಿನ್ನೆಲೆ ಕೇಂದ್ರ ಸರ್ಕಾರ ಕೆಲವು ಶ್ವಾನಗಳ ಸಾಕುವಿಕೆಯನ್ನು ನಿಷೇಧಿಸಿದೆ. ಶ್ವಾನ ತಳಿಗಳ ನಿಷೇಧ ವಿಚಾರದಲ್ಲಿ ಇಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 23 ಭೀಷಣ ಶ್ವಾನ ತಳಿಗಳ ಸಾಕುವಿಕೆಗೆ ನಿಷೇಧಿಸಿದ್ದ ಕೇಂದ್ರ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಕೇಂದ್ರ ಸರ್ಕಾರ ತಜ್ಞರ ಸಮಿತಿಯ ಶಿಫಾರಸು ಆಧರಿಸಿ 23 ಶ್ವಾನ ತಳಿಗಳ ಸಾಕುವಿಕೆಯನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು. ಇದನ್ನು ಆಕ್ಷೇಪಿಸಿ ಶ್ವಾನ ಹ್ಯಾಂಡ್ಲರ್‌ & ರಾಟ್‌ವೈಲರ್‌ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಜ್ಞರು ನಿಷೇಧಿಸುವ ಸಂಬಂಧ ಯಾರನ್ನೂ ಸಂಪರ್ಕಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು.

ಇದನ್ನೂ ಓದಿ: ನಂಬಿದ್ರೆ ನಂಬಿ.. ದಿನಕ್ಕೆ 30Km.. ಮೆಟ್ರೋ, ಬಸ್​ನಲ್ಲಿ ಓಡಾಡುತ್ತಿದೆ ಈ ಬೀದಿ ಶ್ವಾನ!

ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಇಂದು ಈ ಅರ್ಜಿಯನ್ನು ಪುರಸ್ಕರಿಸಿ ಕೇಂದ್ರದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಈ ತಡೆಯಾಜ್ಞೆ ಕರ್ನಾಟಕಕ್ಕೆ ಮಾತ್ರ ಅನ್ವಯಿಸುತ್ತೆ. ಯಾವ ಆಧಾರದ ಮೇಲೆ ಈ ರೀತಿ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಬೇಕು. ASG ಸ್ಪಷ್ಟನೆಯ ವರದಿ ನೀಡುವತನಕ ಈ ತಡೆ ಇರಲಿದೆ ಎಂದು ಹೈಕೋರ್ಟ್ ಹೇಳಿದೆ.

ಇದೇ ವೇಳೆ, ಇಂತಹ ಶ್ವಾನ ಸಾಕಿದವರು ಅವುಗಳ ಸಂತಾನಶಕ್ತಿ ತಡೆಯಬೇಕು. ಸಂತಾನಶಕ್ತಿ ಹರಣ ಮಾಡುವ ಮೂಲಕ ಆ ತಳಿಗಳ ಅಭಿವೃದ್ಧಿಗೆ ತಡೆಯಬೇಕು ಎಂದು ಕೇಂದ್ರ ಸರ್ಕಾರದ ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಶ್ವಾನಗಳು ಅಪಾಯಕಾರಿ ಎಂದು ಸಮಿತಿಯೂ ಮನಗಂಡಿರುವಂತಿದೆ. ಈ ಆದೇಶ ಈ ಶ್ವಾನಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದು ಈ ಅರ್ಜಿಯ ವಿಚಾರಣೆಯನ್ನು ಏಪ್ರಿಲ್‌ 5ಕ್ಕೆ ಮುಂದೂಡಲಾಗಿದೆ.

ಕೇಂದ್ರ ನಿಷೇಧ ಮಾಡಿರುವ ಶ್ವಾನದ ತಳಿಗಳು
1. ಪಿಟ್‌ಬುಲ್‌ ಟೆರಿಯರ್‌
2. ಟೋಸ ಇನು
3. ಅಮೆರಿಕನ್‌ ಸ್ಟಾಫೋರ್ಡ್‌ಶೈರ್‌ ಟೆರಿಯರ್‌
4. ಫಿಲಾ ಬ್ರಸಿಲೈರೊ
5. ಡೊಗೊ ಅರ್ಜೆಂಟಿನೊ6. ಅಮೆರಿಕನ್‌ ಬುಲ್‌ಡಾಗ್‌
7. ಬೋರ್‌ಬೋಯಲ್‌
8. ಕಂಗಲ್‌
9. ಸೆಂಟ್ರಲ್‌ ಏಷ್ಯನ್‌ ಶೆಫರ್ಡ್‌ ಡಾಗ್‌
10. ಕಾಕಸಿಯನ್‌ ಸ್ಟೆಫರ್ಡ್‌ ಡಾಗ್‌
11. ಸೌತ್‌ ರಷ್ಯನ್‌ ಶೆಫರ್ಡ್‌ ಡಾಗ್‌
12. ಟೋರ್ನಜಕ್‌
13. ಸರ್ಪ್ಲಾನಿನಕ್‌
14. ಜಪಾನೀಸ್‌ ಟೋಸಾ
15. ಜಪಾನೀಸ್‌ ಅಕಿತಾ
16. ಮಸ್ಟಿಫ್ಸ್‌
17. ರಾಟ್‌ವೈಲರ್‌
18. ಟೆರಿರಯರ್ಸ್‌
19. ರೋಡೆಸಿಯನ್‌ ರಿಡ್ಜ್‌ಬ್ಯಾಕ್‌
20. ವೂಲ್ಫ್‌ ಡಾಗ್ಸ್‌
21. ಕೆನರಿಯೋ ಅಕ್ಬಾಷ್‌ ಡಾಗ್‌
22. ಮಾಸ್ಕೋ ಗಾರ್ಡ್‌ ಡಾಗ್‌
23. ಕೇನ್‌ ಕೊರ್ಸೊ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ವಾನ ಪ್ರಿಯರಿಗೆ ಗುಡ್‌ನ್ಯೂಸ್‌.. 23 ತಳಿಗಳನ್ನು ನಿಷೇಧಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

https://newsfirstlive.com/wp-content/uploads/2024/04/UP_DOG.jpg

Load More