/newsfirstlive-kannada/media/post_attachments/wp-content/uploads/2025/03/KOHINOOR-DIAMOND-2.jpg)
ಕೊಹಿನೂರು ವಜ್ರ, ಭಾರತದ ಇತಿಹಾಸದ ಒಂದು ಅವಿಭಾಜ್ಯ ಅಂಗ. ಅನೇಕ ರಾಜ ಮಹಾರಾಜರ ಕಿರೀಟವನ್ನೇರಿ. ಅವರ ಸಾಮರ್ಥ್ಯದ ಗುರುತಾಗಿ ಇತಿಹಾಸದ ಕತೆ ಹೇಳುವ ಒಂದು ಅಮೂಲ್ಯ ಆಭರಣ. ಕೊಹಿನೂರು ವಜ್ರವನ್ನು ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ವಜ್ರ ಎಂದು ಹೇಳಲಾಗುತ್ತದೆ. ಇದನ್ನು ಪಡೆಯಲು ದೊಡ್ಡ ದೊಡ್ಡ ಯುದ್ಧಗಳೇ ನಡೆದಿವೆ. ಇಂತಹ ಅಮೂಲ್ಯವಾದ. ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಎಂಬ ವಜ್ರ ಎಂಬ ಹೆಗ್ಗಳಿಕೆ ಗಳಿಸಿದ ಕೊಹಿನೂರು 1849ರಲ್ಲಿ ಬ್ರಿಟಿಷರ್ ಕೈಗೆ ಸೇರಿತು. ಈ ಒಂದು ವಜ್ರ ಭಾರತವನ್ನು ಬಿಟ್ಟು ಹೇಗೆ ಪಾಶ್ಚಿಮಾತ್ಯ ದೇಶಕ್ಕೆ ಹೋಯಿತು ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳುತ್ತೇವೆ.
ಗೊಲ್ಕೊಂಡಾದ ಗಣಿಯಲ್ಲಿ ಈ ಕೊಹಿನೂರು ವಜ್ರ ಸಿಕ್ಕಿತ್ತು ಎಂದು ಹೇಳಲಾಗುತ್ತದೆ. ಜಗತ್ತಿನಲ್ಲಿ ಅತಿದೊಡ್ಡ ವಜ್ರಗಳಲ್ಲಿ ಒಂದು. ಇದು ಸಿಕ್ಕ ಸಮಯದಲ್ಲಿ ಇದರ ಭಾರ 186 ಕ್ಯಾರೆಟ್​ ಎಂದು ಹೇಳಲಾಗುತ್ತದೆ. ಸಮಯಕ್ಕೆ ತಕ್ಕಂತೆ ಕೊಹಿನೂರು ವಜ್ರವನ್ನು ಒಂದು ಆಕಾರಕ್ಕೆ ತರಲು ಹಲವು ಬಾರಿ ಕೆತ್ತನೆಗಳನ್ನು ಮಾಡಲಾಗಿದೆ. ಹೀಗಾಗಿ ಸದ್ಯ ಇದು 105.6 ಕ್ಯಾರೆಟ್​ನ ವಜ್ರವಾಗಿದ್ದು ಇದರ ಭಾರ 21.2 ಕ್ಯಾರೆಟ್ ಎಂದು ಹೇಳಲಾಗುತ್ತದೆ.
/newsfirstlive-kannada/media/post_attachments/wp-content/uploads/2025/03/KOHINOOR-DIAMOND-1.jpg)
ಇತಿಹಾಸ ಹೇಳುವ ಪ್ರಕಾರ ಈ ಕೋಹಿನೂರು ವಜ್ರ 800 ವರ್ಷಗಳ ಹಿಂದೆ ಗಣಿಗಾರಿಕೆ ಮಾಡುವ ವೇಳೆ ಸಿಕ್ಕಿತ್ತು. ಇದರ ಮೊದಲ ಮಾಲೀಕ ಕಾಕತೀಯ ರಾಜವಂಶದ ಗಣಪತಿ ದೇವ ಎಂದು ಹೇಳಲಾಗುತ್ತದೆ. ಗಣಪತಿ ದೇವನು ಈ ಅಮೂಲ್ಯವಾದ ಆಭರಣವನ್ನು ತನ್ನ ಕುಲದೇವತೆ ಭದ್ರಕಾಳಿ ದೇವಿಯ ಬಲಗಣ್ಣಿಗೆ ತೊಡಿಸಿದ್ದರು ಎಂದು ಇತಿಹಾಸಗಳಲ್ಲಿ ದಾಖಲೆಗಳು ಸಿಗುತ್ತವೆ.
14ನೇ ಶತಮಾನದಲ್ಲಿ ಅಲ್ಲಾವುದ್ಧಿನ್ ಖಿಲ್ಜಿ ಕಾಕತೀಯ ಮೇಲೆ ದಾಳಿ ಮಾಡಿ, ಈ ವಜ್ರವನ್ನು ಲೂಟಿ ಮಾಡಿಕೊಂಡು ಬಂದ. ಮುಂದೆ ಪಾಣಿಪತ್ ಯುದ್ಧದಲ್ಲಿ ಇದು ಮೊಘಲರ ಕೈವಶವಾಯಿತು. ಬಾಬರ ಆಗ್ರಾ ಮತ್ತು ದೆಹಲಿಯನ್ನು ಗೆದ್ದುಕೊಂಡು ಈ ಕೊಹಿನೂರು ವಜ್ರವನ್ನು ಕೂಡ ತನ್ನದಾಗಿಸಿಕೊಂಡ.
1738ರಲ್ಲಿ ಇರಾನಿನ ರಾಜ ನಾದೀರ್​ ಶಾಹ ಮೊಘಲರ ಮೇಲೆ ಆಕ್ರಮಣ ಮಾಡಿದ, ಮೊಘಲರನ್ನು ಸೋಲಿಸಿ 13ನೇ ಮೊಘಲರ ದೊರೆ ಅಹಮದ್ ಶಾನನ್ನು ಸೋಲಿಸಿ ಕೊಹಿನೂರನ್ನು ತನ್ನ ವಶಕ್ಕೆ ಪಡೆದುಕೊಂಡ. ಇದೇ ಮೊದಲ ಬಾರಿಗೆ ಕೊಹಿನೂರು ಭಾರತವನ್ನು ಬಿಟ್ಟು ಹೊರದೇಶಕ್ಕೆ ಹೋಯಿತು.
/newsfirstlive-kannada/media/post_attachments/wp-content/uploads/2025/03/KOHINOOR-DIAMOND-3.jpg)
ಈ ಒಂದು ವಜ್ರಕ್ಕೆ ಕೊಹಿನೂರು ವಜ್ರವೆಂದು ನಾಮಕರಣ ಮಾಡಿದ್ದೇ ನಾದಿರ್ ಶಾ ಎಂದು ಹೇಳಲಾಗುತ್ತದೆ. ಇದರ ಅರ್ಥ ಬೆಳಕಿನ ಪರ್ವತ ಎಂದು. ನದಿರ್ ಶಾನ ಬಳಿಕ ಅವನ ಮೊಮ್ಮಗ ಶಾರುಖ್​ ಮಿರ್ಜಾಗೆ ಈ ಕೊಹಿನೂರು ವಜ್ರ ಸಿಕ್ಕಿತು. ಆದ್ರೆ ಈತ ಅದನ್ನು ಅಫ್ಘನ್​ನ ರಾಜ ಅಹಮದ್ ಶಾಹ್ ದುರ್ನಾನಿ​ ಒಂದು ಅಪಾಯದಿಂದ ಕಾಪಾಡಿದ್ದಕ್ಕಾಗಿ ಸ್ನೇಹದ ಗುರುತಾಗಿ ಹಾಗೂ ಬಹುಮಾನವಾಗಿ ಅವನಿಗೆ ನೀಡಿದ. ಆದ್ರೆ ದುರ್ನಾನಿಯ ಮೊಮ್ಮಗ ಸುಜ ಶಹಾ ದುರ್ನಾನಿ ಈ ವಜ್ರವನ್ನು ಒಂದು ಬ್ರೇಸ್​​ಲೇಟ್​ನಲ್ಲಿ ಸೇರಿಸಿಕೊಂಡು ಆ ಬ್ರೇಸ್​ಲೆಟ್​ ಕೈಯಲ್ಲಿ ಹಾಕಿಕೊಂಡು ಅಲೆದಾಡುತ್ತಿದ್ದ. ಒಂದು ಬಾರಿ ಈತ ಪೇಶಾವರದ ಮೇಲೆ ದಾಳಿ ಮಡಿದಾಗ ಅಲ್ಲಿನ ರಾಜ ಮಹಾರಾಜ ರಣಜೀತ್ ಸಿಂಹ 1813ರಲ್ಲಿ ಸುಜು ಶಾಹನನ್ನು ಸೆರೆಹಿಡಿದು ಕೊಹಿನೂರು ವಜ್ರವನ್ನು ತನ್ನದಾಗಿಸಿಕೊಂಡ. ಈ ಯುದ್ಧದ ಜೊತೆಗೆ ಕೊಹಿನೂರು ವಜ್ರ ಮತ್ತೆ ಭಾರತಕ್ಕೆ ಬಂತು. ಕೊಹಿನೂರು ವಜ್ರದ ಬದಲಿಗೆ ರಾಜಾ ರಣಜಿಜ್ ಸಿಂಹ ಸುಜ ಶಾಹ್​ಗೆ 1.25 ಲಕ್ಷ ರೂಪಾಯಿ ನೀಡಿದ ಎಂದು ಇತಿಹಾಸಗಳು ಹೇಳುತ್ತವೆ.
/newsfirstlive-kannada/media/post_attachments/wp-content/uploads/2025/03/KOHINOOR-DIAMOND-4.jpg)
29 ಮೇ, 1849ರಲ್ಲಿ ಆಂಗ್ಲರ ಹಾಗೂ ಸಿಖ್ಖರ್ ನಡುವೆ ನಡೆದ ಭಯಂಕರ ಯುದ್ಧದಲ್ಲಿ ಸಿಖ್ಖರ ರಾಜನ ಹತ್ಯೆಯಾಗುವುದರೊಂದಿಗೆ ಯುದ್ಧ ಮುಗಿಯಿತು. ಮಹಾರಾಜ ಗುಲಾಬ್​​ ಸಿಂಗ್​ನ ಎಲ್ಲ ಸಂಪತ್ತುಗಳ ಜೊತೆ ಕೊಹಿನೂರು ವಜ್ರವನ್ನೂ ಕೂಡ ಬ್ರಿಟಿಷರು ಲೂಟಿ ಮಾಡಿ ರಾಣಿ ವಿಕ್ಟೋರಿಯಾಗೆ ನೀಡಿದರು. ಮುಂದೆ 1950ರಲ್ಲಿ ಬಕ್ಕಿಂಗ್​ಹ್ಯಾಮ್ ಪ್ಯಾಲೆಸ್​ನಿಂದ ಅದನ್ನು ತಂದು ರಾಣಿಯ ಕಿರೀಟದಲ್ಲಿ ಅದನ್ನು ಜೋಡಿಸಲಾಯ್ತು.
ಇದನ್ನೂ ಓದಿ: ನಟಿ ರನ್ಯಾ ರಾವ್ ಅರ್ಜಿ ಜಾಮೀನು ಅರ್ಜಿ ವಜಾ! ತರುಣ್​ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
ಈ ಕೊಹಿನೂರು ವಜ್ರದ ಬೆಲೆ ಎಷ್ಟು ಎಂಬ ಕುತೂಹಲ ಎಲ್ಲರಿಗೂ ಇದೆ, ಆದ್ರೆ ಅದನ್ನು ಅಂದಾಜು ಮಾಡುವುದು ಅಷ್ಟು ಸರಳವಲ್ಲ ಎಂದು ಎಲ್ಲ ಪಂಡಿತರು ಹೇಳುತ್ತಾರೆ. ಯಾಕಂದ್ರೆ ಈ ವಜ್ರವನ್ನು ಯಾರೂ ಖರೀದಿಯೂ ಮಾಡಲಿಲ್ಲ, ಮಾರಲೂ ಇಲ್ಲ. ಕೇವಲ ಯುದ್ಧದಲ್ಲಿ ಗೆದ್ದುಕೊಂಡ ಬಂದ ಅತ್ಯಂತ ದುಬಾರಿ ವಜ್ರವಿದು. ಒಂದು ಮೂಲಗಳು ಹೇಳುವ ಪ್ರಕಾರ ಈ ಒಂದು ವಜ್ರದ ಬೆಲೆ ಸುಮಾರು 8 ಸಾವಿರ ಕೋಟಿ ರೂಪಾಯಿ ಎನ್ನಲಾಗುತ್ತದೆ. ಕೇವಲ ಈ ಒಂದು ವಜ್ರ ಇಷ್ಟು ಬೆಲೆ ಬಾಳಬೇಕಾದರೆ ಬ್ರಿಟಿಷರ ನಮ್ಮ ದೇಶದಿಂದ ಎಷ್ಟು ಲಕ್ಷ ಕೋಟಿ ಸಂಪತ್ತನ್ನು ಲೂಟಿ ಮಾಡಿರಬಹುದು ನೀವೆ ಊಹಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us