newsfirstkannada.com

ಗೋವಾ ಬೀಚ್‌ನಲ್ಲಿ ಗಂಡನಿಂದಲೇ ಹೆಂಡತಿ ಕೊಲೆ ಕೇಸ್‌ಗೆ ರೋಚಕ ಟ್ವಿಸ್ಟ್; ಅಸಲಿಗೆ ನಡೆದಿದ್ದೇನು?

Share :

Published January 24, 2024 at 8:21pm

Update January 24, 2024 at 8:45pm

  ಗಂಡ-ಹೆಂಡತಿ ಗೋವಾ ಬೀಚಲ್ಲಿದ್ರು.. ಪತ್ನಿ ನೀರಲ್ಲಿ ಮುಳುಗಿದ್ಲು!

  ಆಕೆ ಸತ್ತ ಮೇಲೆ ಕೂಗಾಡಿ, ಚೀರಾಡಿದ್ದ ಗಂಡ ನಾಟಕ ಮಾಡಿದ್ನಾ?

  ಲಕ್ಷುರಿ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಮ್ಯಾನೇಜರ್‌ ಆಗಿದ್ದ ಪತಿರಾಯ

ನನ್ನ ಹೆಂಡ್ತಿ ಪ್ರಾಣ ಬಿಟ್ಟಿದ್ದಾಳೆ. ನನ್ನ ಪತ್ನಿಯ ಜೀವ ಹೋಯ್ತು ಅಂತ ಈಕೆಯ ಪತಿ ಕಣ್ಣೀರು ಸುರಿಸುತ್ತಾ ಹುಚ್ಚನಂತೆ ಅಲೆಯಲಾರಂಭಿಸಿದ್ದ. ಪತ್ನಿಯ ಶವವನ್ನು ಮೇಲೆತ್ತಿಕೊಂಡು ಗೋಳಾಡಿದ್ದ. ಆದ್ರೆ ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಬಯಲಾದ ಸತ್ಯ ಇದೆಯಲ್ಲಾ. ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಗೋವಾದ ಬೀಚ್‌ನಲ್ಲಿ ಹೆಣವಾದ ಚೆಲುವೆಯ ಸಾವಿನ ಹಿಂದಿನ ರಹಸ್ಯವೇನು ಎಂಬ ಶಾಕಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಇದು ಗೋವಾದ ದಕ್ಷಿಣ ಭಾಗದಲ್ಲಿರೋ ಕಾಬೋ ದಿ ರಮ ಹೆಸರಿನ ನಯನಮನೋಹರವಾದ ಬೀಚ್. ಈ ಬೀಚ್‌ಗೆ ಇಳಿಸಂಜೆ ಹೊತ್ತಲ್ಲಿ ಬರೋ ಪ್ರವಾಸಿಗರ ಸಂಖ್ಯೆ ಅಸಂಖ್ಯ. ಕಲ್ಲುಬಂಡೆಗಳ ಮೇಲೆ ಹತ್ತಿಳಿದು, ಮರಳ ಲೋಕದಲ್ಲಿ ನಡೆದಾಡಿ ಪ್ರೀತಿ, ಪ್ರೇಮ, ಸಲ್ಲಾಪದಲ್ಲಿ ತೊಡಗೋ ದಂಪತಿಗಳು, ಲವ್ ಬರ್ಡ್ಸ್​​ಗಳು ಲೆಕ್ಕಕ್ಕೆ ಸಿಗೋದಿಲ್ಲ. ಇಂತಹ ಸುಂದರವಾದ ಸಮುದ್ರತೀರಕ್ಕೆ ಈ ಚೆಲುವೆ ಕೂಡ ತನ್ನ ಪತಿಯೊಂದಿಗೆ ಹೆಜ್ಜೆ ಹಾಕಿದ್ಲು. ತನ್ನ ಗಂಡನ ಜೊತೆ ಬೀಚ್‌ನಲ್ಲಿ ನಡೆದಾಡಿ ಕೆಲಕಾಲ ಟೈಂ ಪಾಸ್ ಮಾಡೋ ಆಸೆಯೊಂದಿಗೆ ಹೋಗಿದ್ದಾಕೆ ಕೊನೆಗೆ ಸಿಕ್ಕಿದ್ದು ಹೆಣವಾಗಿ.

ಬೀಚ್‌ಗಳ ಸ್ವರ್ಗ ಗೋವಾದಲ್ಲಿರೋ ಈ ಕಾಬೋ ದಿ ರಾಮ ಕಡಲ ತೀರದ ಕಲ್ಲುಬಂಡೆಗಳ ನಡುವೆ ಈ ಚೆಲುವೆಯ ಹೆಣ ಬಿದ್ದಿತ್ತು. ಕೆಲಸ ಮುಗಿಸಿಕೊಂಡು ಹೆಂಡತಿಯನ್ನು ಬೀಚ್‌ಗೆ ಕರ್ಕೊಂಡು ಬಂದಿದ್ದ ಗಂಡ ಇದ್ದಕ್ಕಿದ್ದಂತೆ ಕೂಗುತ್ತಾ, ಕಂಡ ಕಂಡವರನ್ನು ಕರೆಯುತ್ತಾ, ಗೋಳಾಡಲು ಶುರುಮಾಡಿದ್ದ. ಸುತ್ತಲಿದ್ದ ಪ್ರವಾಸಿಗರ ಬಳಿ ಹೋಗಿ ‘ನನ್ ಹೆಂಡ್ತಿ ಪ್ರಾಣಬಿಟ್ಟಿದ್ದಾಳೆ. ನನ್ನ ಪತ್ನಿಯ ಜೀವ ಹೋಯ್ತು’ ಅಂತೆಲ್ಲಾ ಕಣ್ಣೀರು ಸುರಿಸುತ್ತಾ ಹುಚ್ಚನಂತೆ ಅಲೆಯಲಾರಂಭಿಸಿದ್ದ.

ಇಳಿಸಂಜೆ ಹೊತ್ತಲ್ಲಿ ಬೀಚ್‌ನಲ್ಲಿ ಹಾಯಾಗಿ ಅಲೆದಾಡುತ್ತಿದ್ದೋರು ಇದ್ದಕ್ಕಿದ್ದಂತೆ ಶಾಕ್‌ಗೆ ಒಳಗಾಗಿದ್ರು. ಏನಾಯ್ತು ಏನಾಯ್ತು ಅಂತ ಪರಸ್ಪರ ಕೇಳೋಕೆ ಶುರುಮಾಡಿದ್ರು. ಅದೇ ವೇಳೆ ದೂರದಲ್ಲೇ ಇದ್ದ ಮತ್ತೊಬ್ಬ ಪ್ರವಾಸಿಗರೊಬ್ರು ಅಲ್ಲಿ ನಡೆಯುತ್ತಿರೋದೆಲ್ಲವನ್ನೂ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ತಿದ್ರು. ಇತ್ತ ನನ್ನ ಮಡದಿಯ ಪ್ರಾಣ ಹೋಗ್ಬಿಟ್ಟಿದೆ.. ಆಕೆ ಮಾತಾಡ್ತಿಲ್ಲ.. ಉಸಿರಾಡ್ತಿಲ್ಲ ಅಂತ ಕೂಗುತ್ತಾ ಓಡುತ್ತಿರೋದನ್ನ ನೋಡಿ ಗಾಬರಿಗೊಂಡ ಪ್ರವಾಸಿಗರೊಬ್ಬರು ಪತ್ನಿಯ ಶವ ಬಿದ್ದಿದ್ದ ಜಾಗಕ್ಕೆ ಈತನೊಟ್ಟಿಗೆ ಓಡೋಡಿ ಬಂದ್ರು.

ಪೊಲೀಸ್ ಎಂಟ್ರಿ ಬಳಿಕ ಬಯಲಾದ ಸತ್ಯ!
ಅದು ಬೀಚ್‌ನ ಕಲ್ಲುಬಂಡೆಯ ನಡುವಿನ ಜಾಗ.. ಅಲ್ಲಿಗೆ ಹೋಗುತ್ತಿದ್ದಂತೆ ಪತ್ನಿಯ ದೆೇಹದ ಮೇಲೆ ಸಮುದ್ರದ ಅಲೆಗಳು ಬಂದು ಬಡಿಯುತ್ತಿದ್ವು. ಉಸಿರು ಚೆಲ್ಲಿ ಮಲಗಿದ್ದ ಪತ್ನಿ ದೇಹವನ್ನ ಎಳೆದುಕೊಂಡು ಕಲ್ಲುಬಂಡೆಯತ್ತ ಬಂದ ಗಂಡ ತಲೆಮೇಲೆ ಕೈ ಹೊತ್ತು ಅರಚುತ್ತ ಅಳಲಾರಂಭಿಸಿದ್ದ. ಏನಾಯ್ತು? ಏನಾಯ್ತು ಅಂತ ಪ್ರವಾಸಿಗರು ಕೇಳಿದ್ದಕ್ಕೆ ನೀರಲ್ಲಿ ಮುಳುಗಿ ಸತ್ತು ಹೋಗಿದ್ದಾಳೆ. ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾಳೆ ಅಂತಾ ಹೇಳಿದ್ದ. ತಕ್ಷಣವೇ ಪೊಲೀಸರು ಬಂದ್ರು. ಪೊಲೀಸ್ ಎಂಟ್ರಿ ಬಳಿಕ ಬಯಲಾದ ಸತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು.

ಕಳೆದ ಜನವರಿ 19 ರ ಇಳಿಸಂಜೆ ಹೊತ್ತಲ್ಲಿ ಗೋವಾದ ಆ ಬೀಚ್‌ನಲ್ಲಿ ಈ ಘಟನೆ ನಡೆದಿದೆ.  ಕಡಲತೀರದ ವಿಹಾರಕ್ಕೆ ಗಂಡನೊಟ್ಟಿಗೆ ಹೆಜ್ಜೆಯಿಟ್ಟಿದ್ದ ಈ ಚೆಲುವೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ಹೇಗೆ? ಈಕೆ ಸಾಯೋ ಸಂದರ್ಭದಲ್ಲಿ ಗಂಡ ಎಲ್ಲಿದ್ದ? ಪತ್ನಿ ಸಮುದ್ರದ ನೀರಲ್ಲಿ ಮುಳುಗಿ ಉಸಿರುಗಟ್ಟುತ್ತಿರೋದನ್ನ ನೋಡಿಯೂ ಗಂಡ ಸುಮ್ಮನೆ ನಿಂತಿದ್ನಾ? ಅಥವಾ ಅಲ್ಲಿ ನಡೆದಿದ್ದೇ ಬೇರೇನಾ? ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.

ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಮ್ಯಾನೇಜರ್‌ ಆಗಿದ್ದ ಗಂಡ!
ಪತಿ-ಪತ್ನಿ ಇಬ್ಬರದ್ದೂ ಉತ್ತರಪ್ರದೇಶ.. ಗೋವಾದಲ್ಲಿ ವಾಸ! 
ಗೋವಾದ ಕಾಬೋ ದಿ ರಮಾ ಹೆಸರಿನ ಈ ಬೀಚ್‌ನ ಕಲ್ಲುಬಂಡೆಗಳ ನಡುವೆ ಹೆಣವಾಗಿ ಸಿಕ್ಕ ಈ ಚೆಲುವೆ ಹೆಸರು ದೀಕ್ಷಾ ಗಂಗ್ವಾರ್ ಅಂತ. ಜಸ್ಟ್ 27 ವರ್ಷ ವಯಸ್ಸಿನ ಈ ದೀಕ್ಷಾ 2022 ರಲ್ಲಿ ತನ್ನದೇ ಊರಿನ ಈ ಗೌರವ್ ಕಟಿಯಾರ್‌ ಜೊತೆ ಸಪ್ತಪದಿ ತುಳಿದಿದ್ಲು. ದೀಕ್ಷಾಳ ಗಂಡ ಗೌರವ್ ಹೋಟೆಲ್ ಮ್ಯಾನೇಜಿಂಗ್ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದವ. ಚೆನ್ನೈನಲ್ಲಿ ಒಂದಷ್ಟು ವರ್ಷ ಹಲವಾರು ಫೈವ್ ಸ್ಟಾರ್ ಹೋಟೆಲ್‌ಗಳ ಮ್ಯಾನೇಜ್ ಆಗಿ ಕೆಲಸ ಮಾಡಿದ್ದ ಗೌರವ್‌ಗೆ 2 ವರ್ಷಗಳ ಹಿಂದೆ ಗೋವಾದಲ್ಲಿ ಕೆಲಸ ಸಿಕ್ಕಿತ್ತು. ಗೋವಾದ ಈ ಕಾಬೋ ದಿ ರಮಾ ಹೆಸರಿನ ಬೀಚ್‌ಗೆ ಸಮೀಪದಲ್ಲೇ ಇರೋ ಲಕ್ಷುರಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದ. ಅದಾದ ಕೆಲವೇ ತಿಂಗಳಲ್ಲಿ ಈ ದೀಕ್ಷಾಳನ್ನು ಮದುವೆಯಾಗಿದ್ದ.

ಇಬ್ಬರದ್ದೂ ಉತ್ತರಪ್ರದೇಶದ ಲಖನೌ ಮೂಲ. ಒಳ್ಳೆಯ ಕೆಲಸದಲ್ಲಿದ್ದ ಗೌರವ್‌ಗೆ ಮಗಳು ದೀಕ್ಷಾಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದ ದೀಕ್ಷಾಳ ತಂದೆ ಎಂಥಾ ಅಳಿಯ ಸಿಕ್ಕನಲ್ಲಾ ಅಂತ ನಿಟ್ಟುಸಿರು ಬಿಟ್ಟಿದ್ರು. ಮದುವೆ ಬಳಿಕ ಪತ್ನಿಯನ್ನು ಕರೆದುಕೊಂಡು ಗೋವಾಕ್ಕೆ ಬಂದ ಗೌರವ್ ಲಕ್ಷುರಿ ಬಾಡಿಗೆ ಮನೆಯೊಂದರಲ್ಲಿ ವಾಸ ಆರಂಭಿಸಿದ್ದ. ಬೆಳಗ್ಗೆ ಫೈವ್‌ ಸ್ಟಾರ್‌ ಹೋಟೆಲ್‌ಗೆ ಕೆಲಸಕ್ಕೆ ಹೋಗಿ ಸಂಜೆ ವೇಳೆಗೆ ವಾಪಸ್ಸಾಗ್ತಿದ್ದ ಗೌರವ್ ಪತ್ನಿಯನ್ನು ಕರೆದುಕೊಂಡು ಬೀಚ್‌ಗೆ ವಾಕಿಂಗ್‌ಗೆ ಹೋಗ್ತಿದ್ದ. ಅಂದು 19 ನೇ ತಾರೀಖು ಕೂಡ ಗಂಡ ಹೆಂಡತಿ ಬಿಚ್‌ನತ್ತ ಹೆಜ್ಜೆ ಹಾಕಿದ್ದರು.

ಗಂಡನೊಟ್ಟಿಗೆ ವಾಕಿಂಗ್‌ಗ ಬಂದ ಪತ್ನಿ ದೀಕ್ಷಾಳಿಗೆ ಅದು ತನ್ನ ಕೊನೆಯ ವಾಕಿಂಗ್ ಆಗಲಿದೆ ಅನ್ನೋ ಕಲ್ಪನೆಯೂ ಬಂದಿರಲಿಕ್ಕಿಲ್ಲ ಅನ್ಸತ್ತೆ. ಸಂಜೆ 4 ಗಂಟೆಯ ಆಸುಪಾಸು.. ಸೂರ್ಯ ನಿಧಾನವಾಗಿ ಮರೆಯಾಗುತ್ತಿದ್ದ.. ಎಳೆಬಿಸಿಲು.. ಕಡಲ ತೀರ.. ಗಂಡನ ಭುಜ ಹಿಡಿದು ಒಂದೊಂದೇ ಹೆಜ್ಜೆಗಳನ್ನು ಎಣಿಸುತ್ತಾ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಸಾಗಿದ್ದ ಪತ್ನಿ ಕೆಲಸಮಯದ ಬಳಿಕ ಬೀಚ್‌ನ ಕಲ್ಲು ಬಂಡೆಗಳ ನಡುವೆ ಹೆಣವಾಗಿ ಬಿದ್ದಿದ್ದಳು. ‘ಪತ್ನಿ ನೀರಿನಲ್ಲಿ ಮುಳುಗಿದ್ದಾಳೆ.. ಉಸಿರಾಡ್ತಿಲ್ಲ.. ಕೈಲಾಕು ಆಡಿಸ್ತಿಲ್ಲ’ ಅಂತ ಗಂಡ ಹುಚ್ಚನಂತೆ ಓಡುತ್ತಾ ಸುತ್ತಲಿದ್ದ ಪ್ರವಾಸಿಗರನ್ನು ಕೂಗಿ ಕರೆಯಲಾರಂಭಿಸಿದ್ದ. ಬಂದು ನೋಡಿದ್ರೆ ಪತ್ನಿ ಕಡಲ ತೀರದಲ್ಲಿ ಹೆಣವಾಗಿದ್ಲು. ಕಲ್ಲು ಬಂಡೆಗಳ ನಡುವೆ ದೀಕ್ಷಾಳ ಶವ ಬಿದ್ದಿತ್ತು. ಇದೆಲ್ಲವೂ ದೂರದಲ್ಲಿದ್ದ ಪ್ರವಾಸಿಗರೊಬ್ಬರ ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿತ್ತು.

ಗಂಡನೊಟ್ಟಿಗೆ ಬೀಚ್‌ಗೆ ಕಾಲಿಟ್ಟ ದೀಕ್ಷಾ ಹೆಣವಾಗಿದ್ದು ಹೇಗೆ?
2 ವಿಡಿಯೋ..ಸಾವಿನ 2 ಮುಖ.. ಅವರ ಮೊಬೈಲ್​​ನಲ್ಲಿತ್ತು ಸತ್ಯ!

ಗೋವಾ ಪೊಲೀಸರು ಸ್ಥಳಕ್ಕೆ ಬಂದು ದೀಕ್ಷಾಳ ಶವನನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಗಂಡನನ್ನು ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿದ್ದರು. ನಾನು ಕೆಲಸ ಮುಗಿಸ್ಕೊಂಡು ಮನೆಗೆ ಬಂದು ಪತ್ನಿಯನ್ನು ಕರೆದುಕೊಂಡು ಬೀಚ್‌ಗೆ ಬಂದಿದ್ದೆ. ಪತ್ನಿ ಬೀಚ್‌ನಲ್ಲಿ ಕಲ್ಲುಬಂಡೆ ಮೇಲೆ ಕುಳಿದು ನೀರಿನೊಟ್ಟಿಗೆ ಆಟವಾಡುತ್ತಿರುವಾಗ ಕೆಳಗೆ ಬಿದ್ದಿದ್ದಾಳೆ. ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾಳೆ ಅಂತ ಗಂಡ ಹೇಳಿಕೆ ನೀಡಿದ್ದ. ಆದ್ರೆ, ಗಂಡನ ಹೇಳಿಕೆ ಪೊಲೀಸರಿಗೆ ಸಮಾಧಾನ ತಂದಿರಲಿಲ್ಲ. ಆತನ ಹೇಳಿಕೆ ಕೇಳಿ ಪೊಲೀಸರಿಗೆ ಶಂಕೆ ಹುಟ್ಟಿತ್ತು.

ಆ ಸಮಯಕ್ಕೆ ಸರಿಯಾಗಿ ಪೊಲೀಸರ ಕೈಗೆ ಎರಡು ವಿಡಿಯೋಗಳು ಸಿಕ್ಕಿದ್ದವು. ಆ ವಿಡಿಯೋಗಳಲ್ಲಿ ದೀಕ್ಷಾಳ ಸಾವಿನ ಹಿಂದಿನ ಸುಳಿವು ಸಿಕ್ಕಿತ್ತು. ಆ ವಿಡಿಯೋಗಳನ್ನು ತೋರಿಸಿದಾಕ್ಷಣ ಪತಿ ಗೌರವ್ ಗಾಬರಿಗೊಳಗಾದ. ತಲೆ ಮೇಲೆ ಹೊಡೆದಂತೆ ಮಾತನಾಡ್ತಿದ್ದವ ಇದ್ದಕ್ಕಿದ್ದಂತೆ ತಡಬಡಾಯಿಸಲು ಶುರು ಮಾಡಿದ್ದ. ಅದೇ ವೇಳೆಗೆ ದೀಕ್ಷಾಳ ಮರಣೋತ್ತರ ಪರೀಕ್ಷೆ ಕೂಡ ಹೊರಬಿದ್ದಿತ್ತು. ದೀಕ್ಷಾ ಆಕಸ್ಮಿಕವಾಗಿ ಮುಳುಗಿಲ್ಲ ಯಾರೋ ಬಲವಂತಾಗಿ ಆಕೆಯನ್ನು ನೀರಿನಲ್ಲಿ ಮುಳುಗಿಸಿದ್ದಾರೆ ಅಂತ ಪೋಸ್ಟ್‌ಮಾರ್ಟಂ ರಿಪೋರ್ಟ್‌ನಲ್ಲಿ ಉಲ್ಲೇಖವಾಗಿತ್ತು. ದೀಕ್ಷಾಳದ್ದು ಆಕಸ್ಮಿಕ ಸಾವಾಗಿರಲಿಲ್ಲ. ಅದೊಂದು ಕೊಲೆಯಾಗಿತ್ತು. ಆ ಕೊಲೆ ಮಾಡಿದ್ದವನು ಬೇರ್ಯಾರೂ ಅಲ್ಲ ದೀಕ್ಷಾಳಿಗೆ ತಾಳಿ ಕಟ್ಟಿ ಜೀವನವೆಲ್ಲಾ ಚೆನ್ನಾಗಿ ನೋಡ್ಕೊತೀನಿ ಅಂತಾ ಮಾತು ಕೊಟ್ಟಿದ್ದ ಅದೇ ಗೌರವ್​.

ಪತ್ನಿಯನ್ನು ಕೊಂದು ಕಥೆ ಕಟ್ಟಿದ್ದ ಪಾಪಿ ಪತಿ ಗೌರವ್
‘ಆ’ 2 ವಿಡಿಯೋ ತೋರಿಸಿದ ಬಳಿಕ ಸತ್ಯ ಬಾಯ್ಬಿಟ್ಟ ಗಂಡ 
ದೀಕ್ಷಾಳದ್ದು ಆಕಸ್ಮಿಕ ಸಾವಲ್ಲ ಕೊಲೆ ಅಂತ ಪೋಸ್ಟ್‌ಮಾರ್ಟ್ಂ ರಿಪೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಹಾಗಾಗಿ ಪೊಲೀಸರು ದೀಕ್ಷಾಳ ಗಂಡನನ್ನು ತೀವ್ರವಾಗಿ ವಿಚಾರಣೆ ಮಾಡಲಾರಂಭಿಸಿದ್ದರು. ಮೊದ ಮೊದಲು ಹೇಳಿದ ಕಥೆಯನ್ನೇ ಮತ್ತೆ ಮತ್ತೆ ಹೇಳುತ್ತಾ ಪೊಲೀಸರನ್ನೇ ದಿಕ್ಕು ತಪ್ಪಿಸಲು ನೋಡ್ತಿದ್ದ ಗಂಡ ಗೌರವ್ ಸತ್ಯ ಹೇಳುವಂತೆ ಮಾಡಿದ್ದು ಒಂದು ವಿಡಿಯೋ.

ಒಂದು ಕಡೆ ಬೀಚ್‌ನ ಬಂಡೆಯೊಂದರ ಪಕ್ಕದಲ್ಲಿ ದೀಕ್ಷಾಳ ಶವ ಬಿದ್ದಿದ್ರೆ.. ಗಂಡ ಗೌರವ್ ಪ್ರವಾಸಿಗರೊಬ್ಬರನ್ನು ಕರೆದುಕೊಂಡು ಓಡುತ್ತಾ ಅಲ್ಲಿ ಬರ್ತಾನೆ. ಪತ್ನಿ ಹೆಣವಾಗಿ ಬಿದ್ದಿರೋದನ್ನು ಪ್ರವಾಸಿಗರಿಗೆ ತೋರಿಸ್ತಾನೆ. ನಂತರ,ಪತ್ನಿ ಶವವನ್ನು ನೀರಿನಿಂದ ಮೇಲೆತ್ತಿಕೊಂಡು ದಂಡೆಗೆ ಎಳೆದು ತರ್ತಾನೆ. ಈ ದೃಶ್ಯವನ್ನ ದೂರದಲ್ಲಿದ್ದ ಯಾರೋ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ರು. ಗಂಡ ಗೌರವ್‌ನ ಮೇಲೆ ಶಂಕೆ ಹುಟ್ಟೋದಕ್ಕೆ ಇದೊಂದು ವಿಡಿಯೋ ಸಾಕಿತ್ತು. ಇನ್ನು ಸುಳ್ಳು ಹೇಳೋಕಾಗಲ್ಲ ಎಂದು ಗೊತ್ತಾಗ್ತಿದ್ದಂತೆ ಪಾಪಿ ಪತಿ ಗೌರವ್ ಸತ್ಯ ಹೊರಗೆಡವಿದ್ದ. ನಾನೇ ನನ್ನ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಂದೆ ಅಂತ ಹೇಳಿ ಶಾಕ್ ಕೊಟ್ಟಿದ್ದ.

ಪತ್ನಿಯನ್ನು ಕೊಂದ ಗಂಡ ಹೇಳಿದ್ದೇನು? 
ಕೊಲೆ ಮಾಡುವ ಉದ್ದೇಶದಿಂದಲೇ ನಾನು ನನ್ನ ಪತ್ನಿ ದೀಕ್ಷಾಳನ್ನು ಬೀಚ್‌ಗೆ ಕರೆದುಕೊಂಡು ಬಂದಿದ್ದೆ. ಆಕೆಯನ್ನು ಮುಗಿಸಿಬಿಡಬೇಕೆಂದು ಮೊದಲೇ ನಿರ್ಧರಿಸಿದ್ದೆ. ಹಾಗಾಗಿ ಪತ್ನಿಯೊಂದಿಗೆ ಬೀಚ್‌ಗೆ ಬಂದು ಕಲ್ಲುಬಂಡೆಗಳಿರೋ ಜಾಗವನ್ನು ಗುರುತಿಸಿಕೊಂಡೆ. ಅಲ್ಲಿಗೆ ಪತ್ನಿಯನ್ನು ಕರೆದುಕೊಂಡು ಬಂದು ನೀರಿನಲ್ಲಿ ಆಕೆಯನ್ನು ಮುಳುಗಿಸಿ ಉಸಿರುಗಟ್ಟಿಸಿದೆ. ಆಕೆ ಉಸಿರು ನಿಲ್ಲಿಸೋವರೆಗೂ ನೀರನಲ್ಲಿ ಮುಳುಗಿಸಿದೆ. ಸಾವನ್ನಪ್ಪಿರೋದು ಖಚಿತವಾಗ್ತಿದ್ದಂತೆ ಅಲ್ಲಿಯೇ ಆಕೆಯ ದೇಹವನ್ನು ಬಿಟ್ಟುಬಂದೆ. ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆಕೆಯೇ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಳು ಅಂತ ಪ್ರವಾಸಿಗರನ್ನು ನಂಬಿಸಲು ಮುಂದಾದೆ ಎಂದು ಗೌರವ್ ಕಟಿಯಾರ್ ಹೇಳಿದ್ದಾನೆ.

ಬೀಚ್‌ನಲ್ಲಿ ಹೆಣವಾಗಿದ್ದ ದೀಕ್ಷಾಳನ್ನು ಕೊಂದವ ಬೇಱರೂ ಅಲ್ಲ.. ಆಕೆ ಗಂಡ ಗೌರವ್. ಬೀಚ್‌ಗೆ ಪತ್ನಿಯನ್ನು ಕರೆತಂದಿದ್ದ ಗೌರವ್ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿದ್ದ. ಬಚಾವಾಗೋದಕ್ಕೆ ಪತ್ನಿಯೇ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿರೋದಾಗಿ ಕಥೆ ಕಟ್ಟಿದ್ದ. ಕೊನೆಗೆ ಕಿಲ್ಲರ್ ಗಂಡನ ಮುಖವಾಡ ಕಳಚಿಬಿದ್ದಿದೆ. ಪೊಲೀಸರೆದುರು ಪಾಪಿ ಪತಿರಾಯ ತಪ್ಪೊಪ್ಪಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋವಾ ಬೀಚ್‌ನಲ್ಲಿ ಗಂಡನಿಂದಲೇ ಹೆಂಡತಿ ಕೊಲೆ ಕೇಸ್‌ಗೆ ರೋಚಕ ಟ್ವಿಸ್ಟ್; ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/01/death-2024-01-24T201547.790.jpg

Load More