ಕೊಡಗಿನಲ್ಲಿ ಭೀಕರ ಕೃತ್ಯ.. 6 ವರ್ಷದ ಮಗು ಸೇರಿ ನಾಲ್ವರ ಜೀವ ತೆಗೆದ ಕಿರಾತಕ

author-image
Bheemappa
Updated On
5 ವರ್ಷದ ಬಾಲಕಿಯನ್ನು ಸೈಕಲ್​​ ಮೇಲೆ ಕರೆದೊಯ್ದ 14ರ ಬಾಲಕ.. ಮುಂದೆ ನಡೆಸಿದ್ದು ಘೋರ ಅಪರಾಧ
Advertisment
  • ಮಗು ಜೀವವನ್ನು ಬರ್ಬರವಾಗಿ ತೆಗೆದಿರುವ ದುಷ್ಕರ್ಮಿ
  • ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು
  • ಆರೋಪಿಯಿಂದ ಭೀಕರ ಕೃತ್ಯ, ಕಾರಣ ಏನಿರಬಹುದು..?

ಕೊಡಗು: 6 ವರ್ಷದ ಮಗು ಸೇರಿ ನಾಲ್ವರ ಜೀವವನ್ನು ಬರ್ಬರವಾಗಿ ತೆಗೆದು ಹಾಕಿರುವಂತಹ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ. ಸದ್ಯ ಈ ಘಟನೆಗೆ ನಿಖರ ಕಾರಣ ಏನೆಂದು ಇನ್ನು ತಿಳಿದು ಬಂದಿಲ್ಲ.

ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಕರಿಯ (75), ಗೌರಿ (70), ನಾಗಿ (35) ಹಾಗೂ 6 ವರ್ಷ ಕಾವೇರಿ ಜೀವ ಕಳೆದುಕೊಂಡಿದ್ದಾರೆ. ಗಿರೀಶ್ (35) ಎನ್ನುವ ಆರೋಪಿ ನಾಲ್ವರಿಗೆ ಕತ್ತಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಯಾವ ಕಾರಣದಿಂದ ಈ ರೀತಿಯಾದ ಕೆಲಸ ಮಾಡಿದ್ದಾನೆ ಎಂದು ತಿಳಿದಿಲ್ಲ. ಆದರೆ ಗಿರೀಶ್ ಮಾಡಿರುವ ಹಿಂಸೆಯಿಂದ ಸ್ಥಳದಲ್ಲೇ ನಾಲ್ವರು ಜೀವ ಬಿಟ್ಟಿದ್ದಾರೆ.

ಇದನ್ನೂ ಓದಿ: CSK vs RCB ಪಂದ್ಯಗಳಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ್ದು ಯಾರು? ಆಟಗಾರರ ಲಿಸ್ಟ್..!

ನಾಲ್ವರ ಜೀವ ತೆಗೆದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊನ್ನಂಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ನಾಗಿಯೊಂದಿಗೆ ಗಿರೀಶ್ 3ನೇ ಮದುವೆಯಾಗಿ ತೋಟದ ಮನೆಯಲ್ಲಿ ಜೀವನ ನಡೆಸುತ್ತಿದ್ದನು. ಇನ್ನೂ ಕಾಫಿ ಬೀಜ ಮಾರಾಟ ಮಾಡಿ ಬಂದ ಹಣದ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಅಲ್ಲದೇ ಅನೈತಿಕ ಸಂಬಂಧದ ಹಿನ್ನೆಲೆ ಗಲಾಟೆ ನಡೆದಿತ್ತು. ಆದರೆ ಈ ಕೃತ್ಯ ಯಾಕೆ ಮಾಡಿದ್ದಾನೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment