newsfirstkannada.com

VIDEO: ಎಣ್ಣೆ ಬಾಟಲಿ ತುಂಬಿದ್ದ ಟ್ರಕ್ ಅಪಘಾತ; ಗಾಯಗೊಂಡವರಿಗೆ ಸಹಾಯ ಮಾಡದ ಜನ ಏನ್‌ ಮಾಡಿದ್ರು ಗೊತ್ತಾ?

Share :

Published May 27, 2024 at 12:54pm

  ರಸ್ತೆಯಲ್ಲಿ ಬಿದ್ದಿದ್ದ ಎಣ್ಣೆ ಬಾಟಲಿ ನೋಡಿ ಮುಗಿಬಿದ್ದ ಸ್ಥಳೀಯರು

  ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಹಾಯಕ್ಕಾಗಿ ತೀವ್ರ ಪರದಾಟ

  ಟ್ರಕ್‌ನಲ್ಲಿ ದೇಸಿಯ ಹಾಗೂ ವಿದೇಶಿ ಬ್ರಾಂಡ್‌ನ ಲಿಕ್ಕರ್‌ ಬಾಟಲಿಗಳು

ಲಕ್ನೋ: ಮದ್ಯದ ಬಾಟಲಿಗಳನ್ನು ತುಂಬಿದ್ದ ಟ್ರಕ್ ಚಲಿಸುವಾಗ ಮರಕ್ಕೆ ಗುದ್ದಿದ ಘಟನೆ ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ಅಪಘಾತದಲ್ಲಿ ಟ್ರಕ್‌ನಲ್ಲಿದ್ದ ಎಣ್ಣೆ ಬಾಟಲಿ ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿದೆ.
ರಸ್ತೆಯಲ್ಲಿ ಬಿದ್ದಿದ್ದ ಎಣ್ಣೆ ಬಾಟಲಿ ನೋಡಿದ ಸ್ಥಳೀಯರು ಟ್ರಕ್‌ನಲ್ಲಿ ಗಾಯಗೊಂಡಿದ್ದವರಿಗೆ ಸಹಾಯ ಮಾಡುವುದನ್ನು ಮರೆತಿದ್ದಾರೆ. ಕೈಗೆ ಸಿಕ್ಕ, ಸಿಕ್ಕ ಎಣ್ಣೆ ಬಾಟಲಿಗಳನ್ನು ಲೂಟಿ ಮಾಡಿಕೊಂಡು ಓಡಿದ್ದಾರೆ.

ಮರಕ್ಕೆ ಡಿಕ್ಕಿಯಾದಾಗ ಟ್ರಕ್‌ ಚಾಲಕ ಹಾಗೂ ಸಹಾಯಕನಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಸಹಾಯ ಮಾಡುವುದನ್ನೇ ಮರೆತಿರುವ ಜನ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದರಲ್ಲಿ ಬ್ಯುಸಿಯಾಗಿದ್ದಾರೆ. ಗಾಯಗೊಂಡ ಒಬ್ಬ ವ್ಯಕ್ತಿ ರಕ್ತ ಹರಿಯುತ್ತಿದ್ದರೂ ಸಹಾಯವಾಣಿಗೆ ಕರೆ ಮಾಡಿ ಪರದಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಇದನ್ನೂ ಓದಿ: ಕುಚಿಕು ಸ್ನೇಹಿತೆಗಾಗಿ ಹೈಡ್ರಾಮಾ.. 10 ಲಕ್ಷದ ಬಂಗಾರ ಕದ್ದಿದ್ದಾರೆಂದು ಕಥೆ ಕಟ್ಟಿದ ಪುಣ್ಯಾತಗಿತ್ತಿಯರು ಕೊನೆಗೂ ಸಿಕ್ಕಿಬಿದ್ರು! 

ಅಪಘಾತಕ್ಕೀಡಾದ ಟ್ರಕ್‌ನಲ್ಲಿ ದೇಸಿಯ ಹಾಗೂ ವಿದೇಶಿ ಬ್ರಾಂಡ್‌ನ ಲಿಕ್ಕರ್‌ ಬಾಟಲಿಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಒಂದು ಅಪರಿಚಿತ ವಾಹನ ಅಡ್ಡ ಬಂದಿದ್ದು, ವಾಹನ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಮದ್ಯದ ಬಾಟಲಿಗಳು ರಸ್ತೆಯ ಮಧ್ಯೆ ಚೆಲ್ಲಾಪಿಲ್ಲಿಯಾಗಿತ್ತು. ಎಣ್ಣೆ ಬಾಟಲಿಗಾಗಿ ಜನರೆಲ್ಲಾ ಮುಗಿಬಿದ್ದು ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಾವುದೇ ಅಪಘಾತ ಸಂಭವಿಸಿದಾಗ ಗಾಯಗೊಂಡವರಿಗೆ ಸಹಾಯ ಮಾಡುವುದು ಮಾನವೀಯತೆ. ಆದರೆ ಮಾನವೀಯತೆಯನ್ನು ಮರೆತು ಎಣ್ಣೆ ಬಾಟಲಿಗಾಗಿ ಜನ ಮುಗಿಬಿದ್ದಿರೋದು ಶೇಮ್.. ಶೇಮ್‌ ಎನ್ನುವಂತಾಗಿದೆ.

ಉತ್ತರಪ್ರದೇಶ ಬಿಜ್ನೋರ್‌ನಲ್ಲಿರುವ ನಜೀಬಾಬಾದ್ ಹೆದ್ದಾರಿಯ ಜತ್ಪುರ ಬೊಂಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಸಿಕ್ಕಿದ್ದೇ ಸೀರುಂಡೆ ಅಂತ ಸಿಕ್ಕ, ಸಿಕ್ಕ ಎಣ್ಣೆ ಬಾಟಲಿಗಳನ್ನು ದೋಚಿಕೊಂಡು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಎಣ್ಣೆ ಬಾಟಲಿ ತುಂಬಿದ್ದ ಟ್ರಕ್ ಅಪಘಾತ; ಗಾಯಗೊಂಡವರಿಗೆ ಸಹಾಯ ಮಾಡದ ಜನ ಏನ್‌ ಮಾಡಿದ್ರು ಗೊತ್ತಾ?

https://newsfirstlive.com/wp-content/uploads/2024/05/UP-Accident.jpg

Load More