/newsfirstlive-kannada/media/post_attachments/wp-content/uploads/2025/06/rain-8.jpg)
ದಕ್ಷಿಣ ರಾಜ್ಯಗಳಲ್ಲಿ ಕೊಂಚ ರಿಲಾಕ್ಸ್ ಮೂಡ್ಗೆ ಜಾರಿದ ವರುಣ, ಉತ್ತರದ ರಾಜ್ಯಗಳಲ್ಲಿ ವರ್ಕ್ಶಾಪ್ ಆರಂಭಿಸಿದ್ದಾನೆ. ಉತ್ತರದ ರಾಜ್ಯಗಳಲ್ಲಿ ಎರಡು ದಿನಗಳಲ್ಲಿ ಮುಂಗಾರು ಪ್ರವೇಶ ಆಗ್ತಿದೆ. ಅದಾಗಲೇ ಅಬ್ಬರವೂ ಶುರುವಾಗಿದೆ.. ಇತ್ತ ಕರ್ನಾಟಕದಲ್ಲಿ ಮಳೆ ಖುಷಿ ಕೊಟ್ಟಿದೆ..
ಪ್ರವಾಸಿಗರ ಹುಚ್ಚಾಟ.. ರಸ್ತೆ ಮಧ್ಯೆ ಕಾರು ನಿಲ್ಲಿಸಿ ಡ್ಯಾನ್ಸ್
ನೀವು ಹೇಳೋದ್ ಹೇಳ್ತಾನೇ ಇರಿ.. ನಾವು ಮಾಡೋದು ಮಾಡ್ತಾನೆ ಇರ್ತೀವಿ ಅನ್ನೋ ಛಾಳಿಯನ್ನ ಪ್ರವಾಸಿಗರು ಮುಂದುವರೆಸಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಆವರಿಸಿಕೊಂಡಿರೋ ದಟ್ಟ ಮಂಜಿನಲ್ಲಿ.. ಒಂದಷ್ಟು ಯುವಕರು ಮದ್ಯ ಸೇವಿಸಿ.. ರಸ್ತೆ ಮಧ್ಯೆ ಕಾರ್ ನಿಲ್ಲಿಸಿಕೊಂಡು.. ಪಾರ್ಕಿಂಗ್ ಲೈಟ್ ಹಾಕ್ಕೊಂಡು ಡ್ಯಾನ್ಸ್ ಮಾಡಿದ್ದಾರೆ. ದಟ್ಟ ಮಂಜಿನ ಮಧ್ಯೆ ವಾಹನ ಚಾಲನೆ ಮಾಡ್ತಾ ಹುಚ್ಚಾಟ ಮೆರೆದಿದ್ದಾರೆ. ಇವರಿಂದ ಏನಾದ್ರು ಅನಾಹುತವಾದ್ರೆ ಹೊಣೆ ಯಾರು ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಕೋಗಿಲೆ ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ಗೆ ಅರ್ಜಿ
ಚಿಕ್ಕಮಗಳೂರಿನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಆಗ್ತಿದೆ.. ಮಳೆಯಿಂದ ಬಿಲೇಕಲ್ಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲವಾಗಿದೆ.. ವಿದ್ಯಾರ್ಥಿಗಳ ಗೋಳು ನೋಡೋಕಾಗ್ತಿಲ್ಲ..
ಮಳೆಯ ಅಬ್ಬರಕ್ಕೆ ಧರೆ ಕುಸಿತ.. ಅಡಕೆ ತೋಟಕ್ಕೆ ಹಾನಿ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ತೂದೂರು ಗ್ರಾಮದ ಮೂಡ್ಲು ಎಂಬಲ್ಲಿ ಮಳೆಯ ಅಬ್ಬರಕ್ಕೆ ಧರೆ ಕುಸಿದಿದೆ. ತೋಟದ ಹಿಂಭಾಗ ಹಳ್ಳದ ನೀರು ಹರಿದ ರಭಸಕ್ಕೆ 30ಕ್ಕೂ ಹೆಚ್ಚು ಅಡಕೆ ಮರಗಳು ನೆಲಕ್ಕೆ ಉರುಳಿದೆ. ಹಳ್ಳದ ಬದಿಗೆ ತಡೆಗೋಡೆ ನಿರ್ಮಾಣ ಮಾಡಲು ಶಾಸಕ ಆರಗ ಜ್ಞಾನೇಂದ್ರಗೆ ಸ್ಥಳೀಯರು ಮನವಿ ಮಾಡಿದ್ದಾರೆ.
ಅಪಾರ ಮಳೆಯಿಂದ ಬಿತ್ತನೆ ಹಾಳು, ಬೀದಿಗೆ ಬಂದ ರೈತರು
ಅಪಾರ ಮಳೆಯಿಂದ ಬಿತ್ತನೆ ಹಾಳಾಗಿ ರೈತಾಪಿ ವರ್ಗ ಬೀದಿಗೆ ಬಂದಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತರು ರಸ್ತೆಗಿಳಿದು ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಅನ್ನದಾತರಿಗೆ ಅನ್ಯಾಯವಾಗುತ್ತಿದೆ.. ವಿಮೆ ಹೆಸರಲ್ಲಿ ಕಂಪನಿಗಳು ಲಾಭದಲ್ಲಿವೆ.. ಆದ್ರೆ ರೈತರು ನಷ್ಟದಲ್ಲಿದ್ದಾರೆ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!
ಕೆಆರ್‌ಎಸ್ ಟ್ಯಾಂ ಭರ್ತಿಯಾಗಲು 9 ಅಡಿಯಷ್ಟೇ ಬಾಕಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಕೆಆರ್‌ಎಸ್ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರ್ತಿದ್ದು, ಕೆಆರ್‌ಎಸ್ ತುಂಬಲು ಕೇವಲ 9 ಅಡಿಗಳಷ್ಟೇ ಬಾಕಿ ಇದೆ..
ಇಂದಿನಿಂದ ರಾಜ್ಯದಲ್ಲಿ ಕಡಿಮೆಯಾಗಲಿದೆ ಮಳೆಯ ಪ್ರಮಾಣ
ಇಂದಿನಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 22ರ ವರೆಗೆ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಯಲ್ಲಿ ಬೆಂಗಳೂರಲ್ಲಿ ಸಾಧಾರಣ ಮಳೆ ಆಗಲಿದೆ ಅಂತ ರಾಜ್ಯ ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: ಕೊಂಬೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಅಕ್ಷಯ್ ನಿಧನ.. ಬೆನ್ನಲ್ಲೇ BBMP ಹೊಸ ಆದೇಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ