newsfirstkannada.com

×

ರಾಜ್ಯದಲ್ಲಿ ಮಾಂಸಕ್ಕಾಗಿ ಕಪ್ಪೆಗಳ ಮಾರಾಟ ಜಾಲ ಪತ್ತೆ; ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

Share :

Published June 19, 2024 at 6:10am

    ಗಡಿಯಲ್ಲಿ ಹದ್ದಿನ ಕಣ್ಣಿಟ್ಟರೇ ಕಪ್ಪೆಗಳ ವಿನಾಶ ತಡೆಯಲು ಸಾಧ್ಯ

    ಚಾಲಕ ಹಾಗೂ ನಿರ್ವಾಹಕನನ್ನ ವಶಕ್ಕೆ ಪಡೆದು ವಿಚಾರಣೆ..!

    ಕಪ್ಪೆಗಳನ್ನು ಮಾಂಸಕ್ಕಾಗಿ ಬಳಕೆ ಮಾಡುವುದನ್ನು ತಡೆಯಬೇಕು

ಕಾರವಾರ: ಮಳೆಗಾಲ ಶುರುವಾಯಿತು ಅಂದ್ರೆ ಕಪ್ಪೆಗೆ ಕರಾವಳಿಯಲ್ಲಿ ಭಾರೀ ಡಿಮ್ಯಾಂಡ್‌ ಬರುತ್ತದೆ. ಗೋವಾ ರಾಜ್ಯಕ್ಕೆ ಬರುವ ವಿದೇಶಿ ಪ್ರವಾಸಿಗರಿಗಂತೂ ಕಪ್ಪೆ ಮಾಂಸ ಅಂದ್ರೆ ಫೇವರೆಟ್. ಈ ಹಿನ್ನೆಲೆಯಲ್ಲಿ ಕಪ್ಪೆಗಳಿಗೆ ಸಾಕಷ್ಟು ಡಿಮ್ಯಾಂಡ್ ಬಂದಿದೆ. ಕರ್ನಾಟಕದ ಗಡಿ ಭಾಗದಲ್ಲಿರುವ ಕಾರವಾರದಿಂದ ಭಟ್ಕಳದವರೆಗೆ ಕಪ್ಪೆಗಳನ್ನು ಹಿಡಿದು ಸಾಗಿಸುವ ವ್ಯವಸ್ಥಿತ ಜಾಲಗಳು ಜೋರಾಗಿದ್ದು, ಮಳೆಗಾಲದಲ್ಲಿ ಅವು ಕಾರ್ಯನಿರ್ವಹಿಸುತ್ತಿವೆ.

ಮಳೆಗಾಲ ಆರಂಭ ಆಯಿತು ಅಂದ್ರೆ ಪರಿಸರ ಮಿತ್ರ ಕಪ್ಪೆಗೆ ಕರಾವಳಿ ಭಾಗದಲ್ಲಿ ಸಾಕಷ್ಟು ಬೇಡಿಕೆ ಇರುತ್ತದೆ. ಗೋವಾದಲ್ಲಿ ಕಪ್ಪೆ ಖಾದ್ಯಕ್ಕೆ ಸಖತ್ ಡಿಮ್ಯಾಂಡ್. ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡ ಗೋವಾದಲ್ಲಿನ ರೆಸಾರ್ಟ್‌ಗಳಿಗೆ ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಮಳೆಗಾಲದಲ್ಲಿ ಸಿಗುವ ತಾಜಾ ಕಪ್ಪೆಗಳನ್ನ ಹಿಡಿದು ಖಾದ್ಯ ಮಾಡಿಕೊಟ್ಟರೆ ಪ್ರವಾಸಿಗರನ್ನ ಸಹ ಆಕರ್ಷಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕರಾವಳಿಯ ಕಾರವಾರದಲ್ಲಿ ಕಪ್ಪೆಗಳನ್ನ ಹಿಡಿದು ಗೋವಾಕ್ಕೆ ಸಾಗಿಸುವ ಜಾಲ ಆ್ಯಕ್ಟಿವ್ ಆಗಿದೆ. ಕಳೆದ ಹಲವು ವರ್ಷಗಳಿಂದ ಈ ಜಾಲ ಕಪ್ಪೆ ಸಾಗಾಟ ಮಾಡುತ್ತಲೇ ಬರುತ್ತಿದೆ. ಈ ಬಾರಿ ಸಹ ಸಾಗಾಟ ಮಾಡುವಾಗ ಅರಣ್ಯ ಇಲಾಖೆಯ ಕೈಗೆ ಸಿಕ್ಕಿಬಿದ್ದಿದೆ. ಕಾರವಾರದ ಕಾಳಿ ನದಿ ಸೇತುವೆ ಬಳಿ ಗೋವಾಕ್ಕೆ ಸಾಗುತ್ತಿದ್ದ ಬಸ್ಸಿನಲ್ಲಿ ಕಪ್ಪೆ ಸಾಗಾಟ ಮಾಡುವಾಗ ಅರಣ್ಯ ಇಲಾಖೆಯವರು ಹಿಡಿದು ರಕ್ಷಣೆ ಮಾಡಿದ್ದು ಚಾಲಕ ಹಾಗೂ ನಿರ್ವಾಹಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಾಂಸಕ್ಕಾಗಿ ಕಪ್ಪೆಗಳನ್ನು ಸಾಯಿಸುತ್ತಿರುವುದರಿಂದ ಅವುಗಳ ಸಂತತಿ ಕ್ಷೀಣಿಸುವ ಭಯ ಆರಂಭವಾಗಿದೆ. ಕಪ್ಪೆಗಳ ನಿರಂತರ ಮಾರಣಹೋಮದಿಂದಾಗಿ ಅವುಗಳ ಸಂಖ್ಯೆ ಕಡಿಮೆಯಾದರೆ ಪರಿಸರದ ಜೀವ ವೈವಿಧ್ಯತೆಗೆ ಧಕ್ಕೆಯುಂಟಾಗುವ ಆತಂಕ ಎದುರಾಗಿದೆ. ಇವುಗಳನ್ನು ಆಹಾರವನ್ನಾಗಿ ಬಳಸುವ ಇತರೆ ಜೀವಿಗಳು ಆಹಾರಕ್ಕಾಗಿ ಪರದಾಡುವ ಆತಂಕ ಎದುರಾಗಿದೆ. ಕಾನೂನಿಗೆ ವಿರುದ್ಧವಾಗಿ ಕಪ್ಪೆಗಳನ್ನು ಮಾಂಸಕ್ಕಾಗಿ ಬಳಕೆ ಮಾಡುವುದನ್ನು ತಡೆಯಬೇಕು ಎನ್ನುವುದು ಪರಿಸರ ಪ್ರೇಮಿಗಳು ಒತ್ತಾಯ.

ಪರಿಸರದಲ್ಲಿ ಕಪ್ಪೆಗಳು ಕ್ರಿಮಿ ಕೀಟಗಳನ್ನು ತಿನ್ನುವುದರಿಂದ ಸೊಳ್ಳೆ ಸೇರಿದಂತೆ ಮನುಷ್ಯನಿಗೆ ತೊಂದರೆ ಕೊಡುವ ಇತರೆ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತವೆ. ಅಲ್ಲದೆ ಜಮೀನಿನಲ್ಲಿ ಬೆಳೆಗಳಿಗೆ ತಗುಲುವ ಕೀಟಗಳ ಹತೋಟಿಗೆ ತರಲು ಇವುಗಳ ಪಾತ್ರ ದೊಡ್ಡದು. ಹೀಗಿರುವಾಗ ಇವುಗಳ ನಾಶದಿಂದ ಪರಿಸರದ ಜೀವ ವೈವಿಧ್ಯತೆ ಏರುಪೇರಾಗುವ ಆತಂಕ ಎದುರಾಗಿದೆ. ಸದ್ಯ ಅರಣ್ಯ ಇಲಾಖೆಯವರು ಗೋವಾ ಗಡಿಯಲ್ಲಿ ಹದ್ದಿನ ಕಣ್ಣಿಟ್ಟರೇ ಕಪ್ಪೆಗಳ ವಿನಾಶವನ್ನ ತಡೆಯಲು ಸಾಧ್ಯವಾಗಲಿದೆ.

ವಿಶೇಷ ವರದಿ: ಸಂದೀಪ್ ಸಾಗರ್, ಕಾರವಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಮಾಂಸಕ್ಕಾಗಿ ಕಪ್ಪೆಗಳ ಮಾರಾಟ ಜಾಲ ಪತ್ತೆ; ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/06/FROG.jpg

Load More