/newsfirstlive-kannada/media/post_attachments/wp-content/uploads/2024/04/JP-Nadda.jpg)
ಕರ್ನಾಟಕ ಬಿಜೆಪಿ ನಾಯಕರ ನಡುವೆ ಇರುವ ಅಸಮಾಧಾನ, ಬೇಸರ, ಬಂಡಾಯಕ್ಕೆ ಮೊಳೆ ಹೊಡೆಯಲು ಹೈಕಮಾಂಡ್ ಮುಂದಾಗಿದೆ. ಡೆಲ್ಲಿ ರಿಸಲ್ಟ್ ಬರ್ತಿದ್ದಂತೆ ಉಳಿದ ರಾಜ್ಯಗಳಲ್ಲಿನ ಸಂಘಟನೆಯತ್ತ ಚಿತ್ತ ನೆಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನ ಹೈಕಮಾಂಡ್ ಡೆಲ್ಲಿಗೆ ಕರೆಸಿಕೊಂಡಿದೆ.
ಡೆಲ್ಲಿಗೆ ಹಾರಿದ ಸಾರಥಿ!
ನಿನ್ನೆ ಹರಿಹರ ವಾಲ್ಮೀಕಿ ಗುರುಪೀಠದ ಕಾರ್ಯಕ್ರಮಕ್ಕೆ ಹೊರಟಿದ್ದ ವಿಜಯೇಂದ್ರರಿಗೆ ದೆಹಲಿಯಿಂದ ಕರೆ ಬಂದಿದೆ.. ತಕ್ಷಣವೇ ಬೆಂಗಳೂರಿಗೆ ವಾಪಸ್ ಆದ ಸಾರಥಿ, ಸಂಜೆ 4.30ಕ್ಕೆ ಡೆಲ್ಲಿ ಫ್ಲೈಟ್ ಹತ್ತಿದ್ದಾರೆ. ಪಕ್ಷದಲ್ಲಿನ ಮುಸುಕಿನ ಗುದ್ದಾಟದ ಬಗ್ಗೆ ವಿಜಯೇಂದ್ರ ಬಳಿ ಮಾಹಿತಿ ಪಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನದ ಸಂಬಂಧ ಚರ್ಚೆ ನಡೆಸಲು ವಿಜಯೇಂದ್ರರನ್ನ ಕರೆಸಿಕೊಳ್ಳಲಾಗಿದೆ ಅಂತ ಗೊತ್ತಾಗಿದೆ. ಎಲೆಕ್ಷನ್ ಬದಲು ಒಮ್ಮತದ ಆಯ್ಕೆಗೆ ಹೈಕಮಾಂಡ್ ಒಲವು ತೋರುವ ಸಾಧ್ಯತೆ ಇದೆ. ವಿವಿಧ ನಾಯಕರ ಅಭಿಪ್ರಾಯ ಸಹ ಕೇಳುವ ಮೂಲಕ ಒಮ್ಮತ ಮೂಡಿಸುವ ಕಸರತ್ತಿಗೆ ಕೈಹಾಕ್ತಿದ್ದಾರೆ.
ಇದನ್ನೂ ಓದಿ: ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಡಿ.ಕೆ ಶಿವಕುಮಾರ್ ಪುಣ್ಯಸ್ನಾನ; ಟಾಪ್ 10 ಪೋಟೋಗಳು!
ರೆಬೆಲ್ಸ್ ಟೀಂ ಸಹ ಡೆಲ್ಲಿ ಯಾತ್ರೆ!
ರೆಬೆಲ್ಸ್ ತಂಡ ಸಹ ಫುಲ್ ಆ್ಯಕ್ಟಿವ್ ಮೋಡ್ನಲ್ಲಿದೆ. ಡೆಲ್ಲಿಯಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರ ಗೃಹಪ್ರವೇಶ ಪೂಜೆ ನೆಪದಲ್ಲಿ ಸಭೆ ಸೇರಲಿದೆ. ವಿಜಯೇಂದ್ರ ಕೂಡ ಪೂಜೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ರೆಡ್ಡಿ ಜೊತೆ ಸಮರಕ್ಕೆ ನಿಂತ ಬಿ.ಶ್ರೀರಾಮುಲು ಸಹ ಡೆಲ್ಲಿ ಯಾತ್ರೆ ಕೈಗೊಳ್ತಿದ್ದು, ವರಿಷ್ಠರನ್ನು ಭೇಟಿ ಮಾಡ್ತಾರೆ ಅಂತ ಗೊತ್ತಾಗಿದೆ. ಬಿಜೆಪಿ ಗೊಂದಲಕ್ಕೆ ಶೀಘ್ರದಲ್ಲೇ ಹೈಕಮಾಂಡ್ ತೆರೆ ಎಳೆಯಲಿದೆ ಅಂತ ದಾವಣಗೆರೆಯಲ್ಲಿ ಸಂಸದ ಬೊಮ್ಮಾಯಿ ಹೇಳಿದ್ದಾರೆ. ನಾನು ಅಧ್ಯಕ್ಷನಾಗುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದಿದ್ದಾರೆ.
ಹಲವರ ವಿರೋಧ, ಆಕ್ಷೇಪದ ಮಧ್ಯೆ ವಿಜಯೇಂದ್ರರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸುವ ಸಾಧ್ಯತೆ ಇದೆ. ಕೆಲ ಸಲಹೆ ಸೂಚನೆಗಳನ್ನ ವಿಜಯೇಂದ್ರಗೆ ಹೈಕಮಾಂಡ್ ನೀಡಲಿದೆ. ಮುಂದಿನ ದಿನಗಳಲ್ಲಿ ಹೊಸ ತಲೆಮಾರಿನ ನಾಯಕತ್ವಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಹೆಜ್ಜೆ ಇಡುವ ಪ್ಲಾನ್ ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Aero Show; 100 ದೇಶಗಳು ಭಾಗಿ.. ಬೆಂಗಳೂರಿನ ಬಾನಂಗಳದತ್ತ ಇಡೀ ಜಗತ್ತಿನ ಚಿತ್ತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ