newsfirstkannada.com

ಪುರುಷರು ಈ ದೇವಸ್ಥಾನಕ್ಕೆ ಹೋಗಲು ಹೆಣ್ಣಾಗಿರಬೇಕು; ಏನಿದು ವಿಶಿಷ್ಟ ಆಚರಣೆ..?

Share :

Published March 26, 2024 at 5:58am

    ಯುವಕರೇ ಇವರ ಅಂದ ಚೆಂದ ನೋಡಿ ಬೆರಗಾಗಬೇಡಿ ಮರುಳಾಗಬೇಡಿ!

    ಪುರುಷರು ಮಹಿಳೆಯರಂತೆ ಅಲಂಕಾರ ಮಾಡಿಕೊಂಡರೆ ಮಾತ್ರ ಪ್ರವೇಶ!

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಅದೆಷ್ಟು ದೇವಾಲಯಗಳಿವೆ. ಅದರಲ್ಲೂ ಈ ದೇವಿ ದೇವಸ್ಥಾನ ತುಂಬಾ ವಿಶೇಷ. ಇಲ್ಲಿ ಪುರುಷರು ಮಹಿಳೆಯರಂತೆ ಅಲಂಕಾರ ಮಾಡಿಕೊಂಡರೆ ಪ್ರವೇಶ. ಇಲ್ಲವಾದರೆ, ದೇವಾಲಯದೊಳಗೆ ನೋ ಎಂಟ್ರಿ. ಪಕ್ಕಾ ಹುಡುಗಿಯರಂತೆ ಸ್ಯಾರಿ ಹಾಕೊಂಡು ಮಿಂಚ್ತಿರೋ ಹುಡುಗಿಯರೆಲ್ಲ. ಬದಲಾಗಿ ಮಹಿಳೆಯರ ವೇಷದಲ್ಲಿರುವ ಯುವಕರು.

ಮಹಿಳೆಯರ ವೇಷ ಧರಿಸಿ ಪುರುಷರಿಂದ ಪೂಜೆ! ಈ ಆಚರಣೆ ಏಕೆ?

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕೊಟ್ಟಂಕುಳಂಗರ ದೇವಿ ದೇವಸ್ಥಾನವಿದ್ದು ಇಲ್ಲಿ ಪ್ರತಿ ವರ್ಷ ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ಪ್ರತಿ ವರ್ಷ ಸಾವಿರಾರು ಪುರುಷ ಭಕ್ತರು ಆಗಮಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಪುರುಷರು ಪುರುಷರಂತೆ ದೇವಾಲಯವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ದೇವಾಲಯದಲ್ಲಿ ಅವರಿಗಾಗಿ ಪ್ರತ್ಯೇಕ ಮೇಕಪ್ ರೂಂ ರೆಡಿ ಮಾಡಿರಲಾಗುತ್ತೆ. ಅಲ್ಲಿ ಪುರುಷರು ಮಹಿಳೆಯರಂತೆ ಸೀರೆ ಮತ್ತು ಆಭರಣಗಳನ್ನು ಧರಿಸುತ್ತಾರೆ. ಮೇಕಪ್ ಮಾಡುವುದರ ಜೊತೆಗೆ ಕೇಶಾಲಂಕಾರವನ್ನು ಕೂಡ ಮಾಡ್ಕೊಂಡು ದೇವರ ಪೂಜೆ ಸಲ್ಲಿಸ್ತಾರೆ.

ಬಹುಶಃ ಪ್ರಪಂಚದಲ್ಲಿ ಎಲ್ಲಿಯೂ ಇಂತಹ ಒಂದು ಸಂಪ್ರದಾಯ ಇರಲಿಕ್ಕಿಲ್ಲ. ಇಲ್ಲಿ ಪ್ರತಿ ವರ್ಷ ಮಾರ್ಚ್‌ ತಿಂಗಳ 21 ಹಾಗೂ 22 ತಾರೀಖಿನಂದು ಚಮಯವಿಳಕ್ಕು ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಕೇರಳ ರಾಜ್ಯದ ವಿವಿಧ ಜಿಲ್ಲೆಯ ಪುರುಷರು ಮಹಿಳೆಯರ ವೇಷ ತೊಟ್ಟು ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೆಂಗಸರ ವೇಷ ಧರಿಸಿದ ಗಂಡಸರು ಮೆರವಣಿಗೆ ಹಾಗೂ ಪೂಜೆ ಸಮಯದಲ್ಲಿ ಕೈಯಲ್ಲಿ ದೀಪ ಹಿಡಿದು ಭಾಗಿಯಾಗ್ತಾರೆ.

ಇದನ್ನೂ ಓದಿ: ಪ್ರಬಲ ಭೂಕಂಪ.. ಪಪುವಾ ನ್ಯೂ ಗಿನಿಯಾದಲ್ಲಿ 1,000 ಮನೆ ನೆಲಸಮ; 9 ಲಕ್ಷ ಜನ ನಿರಾಶ್ರಿತ!

ನಾನು ಮೂಲತಃ ಮೇಕಪ್ ಆರ್ಟಿಸ್ಟ್. ನನ್ನ ಹತ್ರ ಕೇಳ್ಕೊಂಡು ಬರ್ತಾ ಇರ್ತಾರೆ. ಆಗ ನನಗ ಅನಿಸ್ತು ಈಗ ನಾನೇ ಯಾಕೆ ವೇಷ ಹಾಕಬಾರದು ಅಂತ. ನನ್ನ ನೋಡಿದವರೆಲ್ಲ ನಿನ್ನ ಕಣ್ಣು ಚೆನ್ನಾಗಿದೆ. ಮೂಗು ಚೆನ್ನಾಗಿದೆ ಅಂತ ಹೇಳ್ತಿದ್ರು. ಅದಕ್ಕೆ ನಾನೇ ಈ ಬಾರಿ ದೀಪ ಹಿಡಿದಿದ್ದೇನೆ. ಕನ್ನಡಿಯಲ್ಲಿ ನೋಡ್ಕೊಂಡಾಗ ನನ್ನನ್ನ ನಾನೇ ಮದುವೆ ಯಾಕೆ ಆಗಬಾದರು ಅಂತ ಅನಿಸ್ತು.

– ಗಿವಿನ್​, ಭಕ್ತ

ಈ ದೇವಾಲಯದಲ್ಲಿ ಸ್ಥಾಪಿಸಲಾದ ದೇವಿಯ ವಿಗ್ರಹವು ಸ್ವಯಂಭು ವಿಗ್ರಹ ಎನ್ನುವ ನಂಬಿಕೆಯಿದೆ. ಈ ದೇವಾಲಯದಲ್ಲಿ ಪುರುಷರು ಮತ್ತು ಮಹಿಳೆಯರಲ್ಲದೆ, ಮಂಗಳಮುಖಿಯರು ಕೂಡ ಪೂಜೆಗೆ ಬರುತ್ತಾರೆ.

ನಾನು ನಾಲ್ಕು ವರ್ಷದ ಹಿಂದೆ ಬಂದಿದ್ದೆ. ಆಮೇಲೆ ಬರೋದಿಕ್ಕೆ ಸಾಧ್ಯ ಆಗಿರಲಿಲ್ಲ. ಬೆಂಗಳೂರಿನಲ್ಲಿದ್ದೆ ಅದ್ಕೆ ಬರೋದಿಕ್ಕೆ ಆಗಿರಲಿಲ್ಲ. ನಾಲ್ಕು ವರ್ಷದ ಹಿಂದೆ ಬಂದು ಪ್ರಾರ್ಥನೆ ಸಲ್ಲಿಸಿದಾಗ ಅಂದುಕೊಂಡಿದ್ದ ಕೆಲಸಗಳು ನಡೆದಿವೆ. ಪ್ರಾರ್ಥಿಸಿದಕ್ಕಾಗಿ ಒಳ್ಳೆ ಫಲಗಳೇ ಸಿಕ್ಕಿವೆ.

– ಅಂಜಿತಾ, ಮಂಗಳಮುಖಿ

ಹೀಗೆ ಪೂಜೆ ಮಾಡುವುದರಿಂದ ಉದ್ಯೋಗ, ಸಂಪತ್ತು ಪ್ರಾಪ್ತಿಯಾಗುವ ಜೊತೆಗೆ ಮದುವೆಯಾಗದ ಪುರುಷರಿಗೆ ಹೆಣ್ಣು ಸಿಗುತ್ತಾಳೆ ಎಂಬುದು ನಂಬಿಕೆಯಾಗಿದೆ. ಇದೇ ಕಾರಣಕ್ಕೆ ಹುಡುಗರೆಲ್ಲ ಹುಡುಗಿಯರಾಗಿ ಪೂಜೆ ಸಲ್ಲಿಸ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಉತ್ಸವದ ಫೋಟೊಗಳು, ವಿಡಿಯೊಗಳು ವೈರಲ್​ ಆಗಿದ್ದು, ಸದ್ಯ ಹೆಣ್ಮಕ್ಕಳ ವೇಷದಲ್ಲಿರುವ ಹುಡುಗರ ಅಂದ ನೋಡಿ ಹುಡುಗಿಯರು ಹೊಟ್ಟೆ ಕಿಚ್ಚು ಪಡ್ತಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುರುಷರು ಈ ದೇವಸ್ಥಾನಕ್ಕೆ ಹೋಗಲು ಹೆಣ್ಣಾಗಿರಬೇಕು; ಏನಿದು ವಿಶಿಷ್ಟ ಆಚರಣೆ..?

https://newsfirstlive.com/wp-content/uploads/2024/03/kerala-1.jpg

Load More