newsfirstkannada.com

ಜಗತ್ತಿನ ಅತಿದೊಡ್ಡ ಗರ್ಭಗುಡಿ ಇದು; ಪ್ರಾಣಪ್ರತಿಷ್ಠಾಪನೆಗೆ ಈ ಐವರಿಗೆ ಮಾತ್ರ ಪ್ರವೇಶ

Share :

Published January 20, 2024 at 6:09am

    ಬ್ರಹ್ಮಾಂಡದ ರಚನೆಯನ್ನು ಸಂಕೇತಿಸುವಂತಿದೆ ರಾಮಲಲ್ಲಾ ಶಕ್ತಿಕೇಂದ್ರ

    ವಿಶ್ವದ ಅತಿದೊಡ್ಡ ಹಿಂದೂ ದೇಗುಲ ಗರ್ಭಗುಡಿಯ ಅಚ್ಚರಿಗಳೇನು?

    ಆ ಮೂರ್ತಿ ಆಯ್ಕೆಗೆ ಟ್ರಸ್ಟ್​ ಅಧ್ಯಕ್ಷರು, ಸದಸ್ಯರುಗಳಿಂದ ವೋಟಿಂಗ್​!

ದಶಕಗಳ ಅಯೋಧ್ಯೆ ರಾಮಜನ್ಮಭೂಮಿ ವಿವಾದ 2019ರಲ್ಲಿ ಇತ್ಯರ್ಥಗೊಂಡಿತ್ತು. 2019 ರಲ್ಲಿ ಸುಪ್ರೀಂಕೋರ್ಟ್‌ನಿಂದ ಈ ಮಹತ್ವದ ತೀರ್ಪು ಹೊರಬೀಳ್ತಿದ್ದಂತೆ ರಾಮಜನ್ಮಭೂಮಿಯಲ್ಲಿ ರಾಮಮಂದಿರ ಕಾರ್ಯ ಆರಂಭವಾಗಿತ್ತು. ರಾಮಲಲ್ಲಾನಿಗೊಂದು ಅದ್ಭುತ, ವೈಭವದ ಮಂದಿರ ಕಟ್ಟೋಕೆ ಭಕ್ತರೇ ಹಣ ನೀಡುವಂತೆ ಮೋದಿ ಕರೆಕೊಟ್ಟಿದ್ರು. ಲಕ್ಷಾಂತರ, ಕೋಟ್ಯಾಂತರ ಭಕ್ತರ ದೇಣಿಗೆಯಿಂದಲೇ ಈಗ ರಾಮಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ.

ಈ ರಾಮಮಂದಿರ ಬೃಹತ್ ಗರ್ಭಗುಡಿಯಲ್ಲಿ ಮೈಸೂರಿನ ಶಿಲ್ಪಿ ಅರುಣ್​ ಯೋಗಿರಾಜ್​ ಕೆತ್ತಿರುವ 51 ಇಂಚಿನ ಮೂರ್ತಿ ವಿರಾಜಮಾನವಾಗಲಿದೆ. ರಾಮಲಲ್ಲಾ ಮೂರ್ತಿಯ ವಿಶೇಷತೆ ಎಷ್ಟು ವಿಸ್ಮಯಕಾರಿಯಾಗಿವೆಯೋ.. ಅಷ್ಟೇ ಅಚ್ಚರಿ ಹುಟ್ಟಿಸುವಂತಿದೆ. ರಾಮಮಂದಿರದ ಭವ್ಯ ಗರ್ಭಗುಡಿಯನ್ನ ಕಟ್ಟಿರೋ ರೀತಿ. ಏಕಕಾಲಕ್ಕೆ ಮೂವರು ಶಿಲ್ಪಿಗಳಿಂದ ಮೂರ್ತಿಯ ಕೆತ್ತನೆ ಮಾಡಿಸಿದ್ದೇಕೆ? ಅರುಣ್​ ಯೋಗಿರಾಜ್​​​ರ ಮೂರ್ತಿಯೇ ಆಯ್ಕೆಯಾಗಿದ್ದು ಹೇಗೆ?

ಮೂರ್ತಿ ಆಯ್ಕೆಗೆ ಟ್ರಸ್ಟ್​ ಅಧ್ಯಕ್ಷರು, ಸದಸ್ಯರುಗಳಿಂದ ವೋಟಿಂಗ್​!
ಬಹುಮತ ತತ್ವದ ಮೇಲೆ ಅರುಣ್​​ ಮೂರ್ತಿ ಆಯ್ಕೆ ಮಾಡಿದ ಟ್ರಸ್ಟ್!​

ಈಗಾಗಲೇ ನಿಮಗೆ ಹೇಳಿದಂತೆ ಆರೇಳು ತಿಂಗಳ ಹಿಂದೆಯೇ ರಾಮಲಲ್ಲಾ ಮೂರ್ತಿಯ ಕೆತ್ತನೆಯನ್ನ ಮೂವರು ಶಿಲ್ಪಿಗಳಿಂದ ಶುರು ಮಾಡಿಸಲಾಗಿತ್ತು. ಅಷ್ಟಕ್ಕೂ ದೇಶದ ಮೂವರು ಖ್ಯಾತನಾಮ ಶಿಲ್ಪಿಗಳಿಗೆ ಬಾಲರಾಮನನ್ನ ಕೆತ್ತಲು ಜವಾಬ್ದಾರಿ ಕೊಟ್ಟಿದ್ದೇಕೆ ಅನ್ನೋದಕ್ಕೆ ಕಾರಣವೂ ಇದೆ. ಮೂರ್ತಿಯನ್ನ ಕೆತ್ತುವಾಗ ಶಿಲ್ಪಿ ಅನಾರೋಗ್ಯಕ್ಕೀಡಾದರೆ, ಶಿಲ್ಪದ ಕೆತ್ತನೆ ಪೂರ್ಣವಾಗೋದಿಲ್ಲ. ಇನ್ನು, ಬಾಲರಾಮನ ಕೆತ್ತನೆಕಾರ್ಯ ಪೂರ್ತಿಗೊಂಡ ಮೇಲೆ, ಬಹುಮತದ ತತ್ವದ ಮೇಲೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ ಯಾವ ಮೂರ್ತಿಯನ್ನ ಗರ್ಭಗುಡಿಯಲ್ಲಿಡಬೇಕು ಎಂಬುದನ್ನ ನಿರ್ಧರಿಸಿದೆ. ಅಂದ್ರೆ, ಟ್ರಸ್ಟ್​ ಅಧ್ಯಕ್ಷರು, ಸದಸ್ಯರು ಮೂರೂ ಮೂರ್ತಿಗಳಿಗೆ ಆದ್ಯತೆಯ ಮೇಲೆ ವೋಟ್​​ ಮಾಡಿ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಅರುಣ್​ ಯೋಗಿರಾಜ್​​​ರ ಕೆಲಸಕ್ಕೆ ಹೆಚ್ಚಿನ ಸದಸ್ಯರು ಫಿದಾ ಆಗಿದ್ದಾರೆ. ಹೌದು, ಜನವರಿ 22ರ ಮಧ್ಯಾಹ್ನ 12 ಗಂಟೆ 20 ನಿಮಿಷಕ್ಕೆ ರಾಮಮಂದಿರದ ಈ ಬೃಹತ್ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಆ ಬಳಿಕ ಭಕ್ತರಿಗೆ ಗರ್ಭಗುಡಿ ಮತ್ತು ರಾಮಲಲ್ಲಾನ ದರ್ಶನ ಭಾಗ್ಯ ಸಿಗಲಿದೆ.

ನೂತನ ರಾಮಮಂದಿರದ ಗರ್ಭಗುಡಿ ಜಗತ್ತಿನಲ್ಲೇ ಅತೀ ದೊಡ್ಡ ಹಿಂದೂ ದೇಗುಲದ ಗರ್ಭಗುಡಿ ಎನಿಸಿಕೊಳ್ಳಲಿದೆ. 2022ರಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಗರ್ಭಗುಡಿಯ ಶಂಕುಸ್ಥಾಪನೆ ನೆರವೇರಿಸಿದ್ರು. 20 ಅಡಿ ಅಗಲ. 161 ಅಡಿ ಎತ್ತರ ಹೊಂದಿರೋ ರಾಮಮಂದಿರದ ಗರ್ಭಗುಡಿ ನಿಜಕ್ಕೂ ವೈಭವದ ಸಂಕೇತವಾಗಿದೆ. ರಾಮಮಂದಿರ ಗರ್ಭಗುಡಿ ನಿರ್ಮಾಣಕ್ಕೂ ಮೊದಲು.. ಗುಜರಾತ್‌ನ ಸೋಮನಾಥ್ ಜ್ಯೋತಿರ್ಲಿಂಗ ದೇಗುಲದ ಗರ್ಭಗುಡಿ ಜಗತ್ತಿನ ಅತಿದೊಡ್ಡ ಗರ್ಭಗುಡಿಯಾಗಿತ್ತು. ಇನ್ನು ಮುಂದೆ ರಾಮಲಲ್ಲಾ ವಿರಾಜಮಾನನಾಗಲಿರೋ ರಾಮಮಂದಿರ ದೇಗುಲದ ಗರ್ಭಗುಡಿ ಜಗತ್ತಿಗೇ ಅತಿದೊಡ್ಡ ಗರ್ಭಗುಡಿಯಾಗಲಿದೆ.

ಚೌಕಾಕಾರದಲ್ಲಿ ನಿರ್ಮಾಣಗೊಂಡಿದೆ ರಾಮಮಂದಿರದ ಗರ್ಭಗುಡಿ!
ಬ್ರಹ್ಮಾಂಡದ ರಚನೆಯನ್ನು ಸಂಕೇತಿಸುವಂತಿದೆ ರಾಮಲಲ್ಲಾ ಶಕ್ತಿಕೇಂದ್ರ!

ಹಿಂದೂ ದೇವಾಲಯಗಳು ಹಲವು ಭಾಗಗಳನ್ನ ಹೊಂದಿರುತ್ತವೆ. ಅದರಲ್ಲಿ ಪ್ರಮುಖವಾದದ್ದೇ ಗರ್ಭಗುಡಿ. ದೇವರ ವಿಗ್ರಹವನ್ನ ಸ್ಥಾಪಿಸುವ ಭಾಗವೇ ಗರ್ಭಗುಡಿ. ಗರ್ಭಗುಡಿಯ ಗಾತ್ರ, ಪ್ರಕಾರ ಮತ್ತು ವಿಗ್ರಹವನ್ನ ಇರಿಸುವ ಸ್ಥಳವನ್ನ ನಿರ್ಧರಿಸುವುದು ಮಾತ್ರವಲ್ಲದೇ ಗರ್ಭಗುಡಿಯನ್ನು, ಧರ್ಮಗ್ರಂಥ ಉಲ್ಲೇಖಿತ ಪ್ರಕಾರದಲ್ಲೇ ಮಾಡಲಾಗುತ್ತೆ. ದೇವಾನುದೇವತೆಗಳ ವಿಗ್ರಹಗಳನ್ನು ಇಡುವ ಕೋಣೆಯನ್ನೇ ಗರ್ಭಗುಡಿ ಅಂತಲೂ ಕರೆಯಲಾಗುತ್ತೆ. ಹೌದು, ಹಿಂದೂ ದೇಗುಲಗಳಲ್ಲಿ ಮಾಮೂಲಿಯಾಗಿ ಚೌಕಾಕಾರದಲ್ಲಿ ಗರ್ಭಗುಡಿ ನಿರ್ಮಿಸಲಾಗುತ್ತೆ. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯನ್ನೂ ಕೂಡ ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ.

ಇನ್ನು, ಗರ್ಭಗುಡಿಯನ್ನು ನಮ್ಮ ಬ್ರಹ್ಮಾಂಡವನ್ನು ಸಂಕೇತಿಸುವಂತೆ ನಿರ್ಮಿಸಲಾಗಿದ್ದು, ಇಡೀ ಭೂಮಂಡಲ, ಸೌರವ್ಯೂಹ ಎಲ್ಲವುಗಳ ರೂಪದಂತೆ ಬಾಲ ರಾಮನ ಗರ್ಭಗುಡಿ ಸೆಳೆಯಲಿದೆ. ಗರ್ಭಗುಡಿಯಲ್ಲಿ ಕೇಂದ್ರಭಾಗದಲ್ಲಿ ಶಿವಲಿಂಗ ಇರಲಿದೆ. ಇದನ್ನ ಬ್ರಹ್ಮಸ್ಥಾನ ಅಂತಲೇ ಕರೆಯಲಾಗುತ್ತೆ. ಹಿಂಭಾಗದ ಗೋಡೆಗೆ ಎದುರಲ್ಲಿ ವಿಷ್ಣುವಿನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತೆ. ಇನ್ನೂ ಅಚ್ಚರಿ ವಿಚಾರ ಏನಂದ್ರೆ, ಒಡಿಶಾದ ಸೂರ್ಯ ದೇಗುಲದಲ್ಲಿ ಸೂರ್ಯ ರಶ್ಮಿ ಗರ್ಭಗುಡಿ ಸ್ಪರ್ಶ ಮಾಡುವ ರೀತಿಯಲ್ಲೇ ಇಲ್ಲಿಯೂ ಗರ್ಭಗುಡಿಯನ್ನ ನಿರ್ಮಾಣ ಮಾಡಲಾಗಿದೆ. ಪ್ರತಿ ರಾಮನವಮಿ ದಿನದಂದು 51 ಇಂಚಿನ ರಾಮಲಲ್ಲಾ ಮೂರ್ತಿಯ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶ ಮಾಡಲಿವೆ. ಆ ಚಮತ್ಕಾರಿ ಕ್ಷಣವನ್ನ ಕಣ್ತುಂಬಿಕೊಳ್ಳೋಕೆ ಭಕ್ತ ಸಾಗರವೇ ಧಾವಿಸೋದು ನಿಶ್ಚಿತ.

ಹಳೆಯ ವಿಗ್ರಹಗಳನ್ನು ಎಲ್ಲಿ ಇರಿಸಲಾಗುತ್ತೆ?

ರಾಮಮಂದಿರದ ಗರ್ಭಗುಡಿಯಲ್ಲಿ ಹೊಸ ರಾಮಲಲ್ಲಾ ಮೂರ್ತಿಯ ಜೊತೆಗೆ ಹಳೆಯ ರಾಮಲಲ್ಲಾ ವಿಗ್ರಹವನ್ನೂ ಸಹ ಸ್ಥಾಪಿಸಲಾಗುತ್ತಂತೆ. ಹೊಸ ಮೂರ್ತಿಗೆ ‘ಅಚಲ ಮೂರ್ತಿ’, ಹಳೆಯ ಮೂರ್ತಿಗೆ ‘ಉತ್ಸವಮೂರ್ತಿ’ ಅಂತಾ ಹೆಸರಿಡಲಾಗುತ್ತಂತೆ.
ಶ್ರೀರಾಮನಿಗೆ ಸಂಬಂಧಿಸಿದ ಎಲ್ಲಾ ಉತ್ಸವಗಳಲ್ಲಿ ಉತ್ಸವಮೂರ್ತಿಯನ್ನು ಮಾತ್ರ ಮೆರವಣಿಗೆಯಲ್ಲಿ ಇರಿಸಲಾಗುತ್ತೆ. ಅಚಲ ಮೂರ್ತಿ ಗರ್ಭಗುಡಿಯಲ್ಲಿ ಭಕ್ತರ ದರ್ಶನಕ್ಕೆ ಮೀಸಲಿಡಲಾಗುತ್ತೆ. ರಾಮಲಲ್ಲಾ ಪ್ರತಿಮೆಯಲ್ಲಿ ವೈಜ್ಞಾನಿಕ ರಹಸ್ಯ ಕೂಡ ಸೇರಿಕೊಂಡಿದೆ. ರಾಮಮಂದಿರಕ್ಕಾಗಿ ಉಪಕರಣವೊಂದನ್ನು ಸಿದ್ಧಪಡಿಸಲಾಗುತ್ತಿದೆಯಂತೆ. ಈ ಉಪಕರಣವನ್ನು ದೇವಾಲಯದ ಶಿಖರದಲ್ಲಿ ಅಳವಡಿಸಲಾಗುತ್ತಂತೆ. ರಾಮನವಮಿಯಂದು ಸೂರ್ಯನ ಕಿರಣಗಳು ನೇರವಾಗಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬೀಳುತ್ತೆ ಅಂತಲೇ ಹೇಳಲಾಗಿದೆ.

ರಾಜಸ್ಥಾನದ ಭರತ್‌ಪುರದಿಂದ ಸುಮಾರು ಐದು ಲಕ್ಷ ಘನ ಅಡಿಗಳಷ್ಟು ಗುಲಾಬಿ ಬಣ್ಣದ ಮರಳುಗಲ್ಲುಗಳನ್ನು ದೇವಾಲಯದ ರಚನೆಯನ್ನು ನಿರ್ಮಿಸಲು ಬಳಸಲಾಗಿದೆ. ದೇವಾಲಯದ ಗರ್ಭಗುಡಿಯು ಶುದ್ಧ ಬಿಳಿ ಮಕ್ರಾನ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ಇನ್ನು, ರಾಮಮಂದಿರ ನಾಗರ ಶೈಲಿಯಲ್ಲಿ ನಿರ್ಮಾಣವಾಗುತ್ತಿದೆ. ಉತ್ತರ ಭಾರತದಲ್ಲಿ ಇದೇ ಶೈಲಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ. ಮುಖ್ಯವಾಗಿ ನಾಗರ, ದ್ರಾವಿಡ ಮತ್ತು ಬೇಸರ್ ಹೀಗೆ ಮೂರು ವಿಧದ ಶೈಲಿಗಳಲ್ಲಿ ದೇಗುಲ ಕಟ್ಟಲಾಗಿದೆ. ‘ನಗರ’ ಅನ್ನೋ ಪದವು ನಗರದಿಂದ ಬಂದಿದೆ. ಇದನ್ನ ಮೊದಲು ನಗರದಲ್ಲಿ ನಿರ್ಮಿಸಿದ ಕಾರಣ, ಇದಕ್ಕೆ ನಾಗರ ಶೈಲಿ ಅಂತಾ ಕರೆಯಲಾಗುತ್ತಂತೆ. ಇನ್ನು, ಇದು ಹಿಮಾಲಯದಿಂದ ವಿಂಧ್ಯ ಪರ್ವತಗಳವರೆಗಿನ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ರಚನಾತ್ಮಕ ದೇವಾಲಯದ ವಾಸ್ತುಶಿಲ್ಪದ ಶೈಲಿಯಾಗಿದೆ. 8ನೇ ಮತ್ತು 13ನೇ ಶತಮಾನದ ನಡುವೆ ಉತ್ತರ ಭಾರತದಲ್ಲಿದ್ದ ಆಡಳಿತ ರಾಜವಂಶಗಳು ಈ ಶೈಲಿಯಲ್ಲಿ ಹೆಚ್ಚಿನ ದೇಗುಲಗಳನ್ನು ನಿರ್ಮಾಣ ಮಾಡಿದ್ದವು.

ಪ್ರಾಣಪ್ರತಿಷ್ಠಾಪನೆ ದಿನ ಗರ್ಭಗುಡಿಗೆ ಐವರಿಗೆ ಮಾತ್ರ ಪ್ರವೇಶ!

2024ರ ಜನವರಿ 22 ರಂದು ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾನೆ ಕಾರ್ಯಕ್ರಮ ನಡೆಯಲಿದೆ. ಪ್ರತಿಷ್ಠಾಪನಾ ಕಾರ್ಯಕ್ರಮದಂದು ದೇಗುಲದ ಗರ್ಭಗುಡಿಗೆ ಕೇವಲ 5 ಜನರಿಗೆ ಮಾತ್ರ ಪ್ರವೇಶವಿದೆ. ಗರ್ಭಗುಡಿ ಒಳಗೆ ಪ್ರಧಾನಿ ನರೇಂದ್ರ ಮೋದಿ ಸಹಿತ ಐವರಷ್ಟೇ ಒಳಗೆ ಪ್ರವೇಶಿಸಬಹುದಾಗಿದೆ. ಪ್ರಧಾನಿ ಜೊತೆಗೆ ಯುಪಿ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಮಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ಅವರು ಮಾತ್ರ ಉಪಸ್ಥಿತರಿರುತ್ತಾರೆ ಎಂಬ ಮಾಹಿತಿಗಳಿವೆ. ಅಂದು ಪೂಜಾ ಕಾರ್ಯಕ್ರಮಕ್ಕೆ ಅರ್ಚಕರ ಮೂರು ತಂಡಗಳನ್ನು ರಚಿಸಲಾಗಿದೆ.

ಮೊದಲ ತಂಡದ ನೇತೃತ್ವವನ್ನು ಸ್ವಾಮಿ ಗೋವಿಂದ್ ದೇವ್ ಗಿರಿ ವಹಿಸಲಿದ್ದಾರೆ. ಕಂಚಿ ಕಾಮಕೋಟಿ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ನೇತೃತ್ವದಲ್ಲಿ ಎರಡನೇ ಅರ್ಚಕರ ತಂಡ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದೆ. ಇನ್ನು ಮೂರನೇ ತಂಡದಲ್ಲಿ ಕಾಶಿಯ 21 ಮಂದಿ ವಿದ್ವಾಂಸರು ಭಾಗವಹಿಸುತ್ತಾರೆ. ರಾಮಲಾಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಸಮಯದಲ್ಲಿ ಗರ್ಭಗುಡಿಯ ಪರದೆಯು ಮುಚ್ಚಲಾಗುತ್ತೆ. ರಾಮನ ವಿಗ್ರಹಕ್ಕೆ ಕಟ್ಟಿದ ಪಟ್ಟಿಯನ್ನು ತೆಗೆದ ನಂತರ ವಿಗ್ರಹಕ್ಕೆ ಕನ್ನಡಿ ತೋರಿಸಲಾಗುತ್ತೆ. ಇದರಿಂದ ಶ್ರೀರಾಮನು ಮೊದಲು ತನ್ನ ಮುಖವನ್ನು ತಾನೇ ನೋಡುತ್ತಾನೆ ಎಂಬ ನಂಬಿಕೆ ಇದ್ದು, ನಂತರ ಭಕ್ತರಿಗೆ ಶ್ರೀರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ. ಅದನ್ನ ಕಣ್ತುಂಬಿಕೊಳ್ಳೋಕೆ ಲಕ್ಷಾಂತರ ಭಕ್ತರು ತುದಿಗಾಲಲ್ಲಿ ಕಾಯ್ತಿದ್ದಾರೆ. ದಶಕಗಳಿಂದ ಕೋಟಿ ಕೋಟಿ ಭಾರತೀಯರು ಕಂಡಿದ್ದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಗತ್ತಿನ ಅತಿದೊಡ್ಡ ಗರ್ಭಗುಡಿ ಇದು; ಪ್ರಾಣಪ್ರತಿಷ್ಠಾಪನೆಗೆ ಈ ಐವರಿಗೆ ಮಾತ್ರ ಪ್ರವೇಶ

https://newsfirstlive.com/wp-content/uploads/2024/01/shri-rama-26.jpg

Load More