/newsfirstlive-kannada/media/post_attachments/wp-content/uploads/2025/03/LAST-COUNTRY.jpg)
ವಿಶ್ವದಲ್ಲಿ ಶೇಕಡಾ 71 ರಷ್ಟು ನೀರು ಇದ್ದು ಉಳಿದ ಶೇಕಡಾ 29ರಷ್ಟು ಭೂಮಿಯಿದೆ. ಶೇಕಡಾ 79ರಷ್ಟು ನೀರಿನ ಪ್ರಮಾಣದಲ್ಲಿ ಸಮುದ್ರ, ಮಹಸಾಗರಗಳ ಪಾಲೇ ಶೇಕಡಾ 85 ರಷ್ಟಿದೆ. ಉಳಿದದ್ದೆಲ್ಲಾ ಹಲವು ದೇಶಗಳೊಂದಿಗೆ ವಿಭಜಿತಗೊಂಡ ಭೂಮಿ ಈ ವಿಶ್ವದಲ್ಲಿದೆ. ಆದ್ರೆ ಭೂಮಿಯ ಕೊಟ್ಟ ಕೊನೆಯ ದೇಶ ಯಾವುದು? ಭೂಮಿಯ ಅಂಚಿಗೆ ಇರುವ ಅದರಾಚೆ ಭೂಮಿಯೇ ಮುಗಿದು ಹೋಗುವ ದೇಶ ಯಾವುದು ಅಂತ ಗೊತ್ತಾ?
ನಾರ್ವೆ ದೇಶವನ್ನು ಭೂಮಿಯ ಕೊನೆಯ ದೇಶ ಎಂದು ಕರೆಯಲಾಗುತ್ತದೆ ಹಾಗೂ ಈ ದೇಶದಾಚೆ ಭೂಮಿಯೇ ಇಲ್ಲ ಎಂದು ಹೇಳಲಾಗುತ್ತದೆ. ನಾರ್ವೆ ಉತ್ತರ ದ್ರುವದಲ್ಲಿ ನೆಲೆಸಿರುವಂತಹ ರಾಷ್ಟ್ರ. ಇದನ್ನು ವಿಶ್ವದ ಕೊನೆಯ ರಸ್ತೆ ಎಂದು ಕೂಡ ಕರೆಯಲಾಗುತ್ತದೆ.
ಇದನ್ನೂ ಓದಿ: ಜಗತ್ತಿನ ಈ 7 ಜಾಗಗಳ ಮೇಲೆ ಹಾರುವುದಿಲ್ಲ ವಿಮಾನ.. ಲಿಸ್ಟ್ನಲ್ಲಿ ಭಾರತವೂ ಇದೆ! ಕಾರಣವೇನು?
ಇನ್ನು ಈ ದೇಶದಲ್ಲಿ 6 ತಿಂಗಳು ಹಗಲು ಮತ್ತು ಆರು ತಿಂಗಳು ರಾತ್ರಿಗಳಿರುತ್ತದೆ. ಇನ್ನು ಉತ್ತರ ನಾರ್ವಿಜಿಯನ್ನಲ್ಲಿ ಸೂರ್ಯ ಕೇವಲ 40 ನಿಮಿಷಗಳ ಕಾಲಕ್ಕೆ ಅಸ್ತಂತನಾಗಿ ನಲವತ್ತು ನಿಮಿಷಗಳ ಬಳಿಕ ಮತ್ತೆ ಹಗಲಾಗುತ್ತದೆ. ಹೀಗಾಗಿಯೇ ಈ ಭೂಮಿಯನ್ನು ಮಧ್ಯರಾತ್ರಿ ನೆಲ ಎಂದು ಕರೆಯಲಾಗುತ್ತದೆ. ಇನ್ನು ಈಗಾಗಲೇ ಹೇಳಿದಂತೆ ನಾರ್ವೆಯಲ್ಲಿರುವ ಒಂದು ರಸ್ತೆಯನ್ನ ವಿಶ್ವದ ಕೊನೆಯ ರಸ್ತೆ ಎಂದು ಕರೆಯಲಾಗುತ್ತದೆ. ಇದಾದ ಬಳಿಕ ಮುಂದೆ ನಮಗೆ ರಸ್ತೆಯೇ ಕಾಣ ಸಿಗುಗುವುದಿಲ್ಲ. ಅಂದ್ರೆ ಭೂಮಿ ಇಲ್ಲಿಗೆ ಅಂತ್ಯವಾಯ್ತು. ಇದರಾಚೆ ಭೂಮಿಯಿಲ್ಲವೆಂದೇ ಅರ್ಥ.
ಆದರೆ ವಿಜ್ಞಾನಿಗಳು, ಭೂಶಾಸ್ತ್ರಜ್ಞರು ಹೇಳವ ಪ್ರಕಾರ ಭೂಮಿಗೆ ಆದಿ ಅಂತ್ಯ ಎಂಬುದೇ ಇಲ್ಲ. ಇದು ಇಲ್ಲಿಂದ ಆರಂಭವಾಗಿ ಇಲ್ಲಿಗೆ ಮುಗಿಯುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸ್ಟೀಡಿ ಸ್ಟೇಟ್ ಥೀಯರಿ ಪ್ರಕಾರ ಹಾಗೂ ಹಿಂದೂ ಮತ್ತು ಬೌದ್ಧಗ್ರಂಥಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಈ ಭೂಮಿಗೆ ಆದಿ ಮತ್ತು ಅಂತ್ಯ ಎರಡು ಇಲ್ಲ ಎಂದು ಹೇಳಲಾಗುತ್ತದೆ. ಅಂದ್ರೆ ಇದು ಭೌತಿಕವಾಗಿ. ಇದು ಎಂದು ಹುಟ್ಟಿತು ಮತ್ತು ಎಂದು ಸಾಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ ಎಂದು ಪುರಾಣಗ್ರಂಥಗಳು ಹೇಳಿದ್ದರೆ. ಭೂಮಿಯ ಅಳತೆಯನ್ನು ಕೈಗೊಂಡಲ್ಲಿಯೂ ಕೂಡ ಅದಕ್ಕೆ ಇದೇ ಅಂತ್ಯ ಇಲ್ಲಿಂದಲೇ ಆರಂಭ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದ್ರೆ ಒಂದು ಅಂದಾಜಿನ ಪ್ರಕಾರ ನಾರ್ವೆ ವಿಶ್ವದ ಕೊನೆಯ ದೇಶ ಇದರಾಚೆ ಭೂಮಿಯಿಲ್ಲ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ