ಸಾವಿಗೆ ಸವಾಲು ಹಾಕಿದ್ದ ಗಟ್ಟಿಗಿತ್ತಿ.. ಕೊನೆಯ 1 ಗಂಟೆಯೇ ಸುನಿತಾ ವಿಲಿಯಮ್ಸ್​ಗೆ​ ಅತಿ ದೊಡ್ಡ ಚಾಲೆಂಜ್​!

author-image
Veena Gangani
Updated On
ಸಾವಿಗೆ ಸವಾಲು ಹಾಕಿದ್ದ ಗಟ್ಟಿಗಿತ್ತಿ.. ಕೊನೆಯ 1 ಗಂಟೆಯೇ ಸುನಿತಾ ವಿಲಿಯಮ್ಸ್​ಗೆ​ ಅತಿ ದೊಡ್ಡ ಚಾಲೆಂಜ್​!
Advertisment
  • ಬಾಹ್ಯಾಕಾಶದಿಂದ ಭೂಮಿಗೆ ಬರೋ ರೋಚಕ ಪ್ರಯಾಣ ಹೇಗಿರುತ್ತೆ?
  • ಸುನಿತಾ ವಿಲಿಯಮ್ಸ್​ ಬಾಹ್ಯಕಾಶದಿಂದ ವಾಪಸ್ಸಾಗಲು ತಡವಾಗಿದ್ದೇಕೆ?
  • ಆಕಾಶದಲ್ಲೇ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಕೊನೆಗೂ ಬರುತ್ತಿದ್ದಾರೆ ಧರೆಗೆ

ಒಂದಲ್ಲ.. ಎರಡಲ್ಲ.. ಅದು ಬರೋಬ್ಬರಿ 9 ತಿಂಗಳ ಹೋರಾಟ. ಹೋರಾಟ ಅಂದ್ರೆ ಬರೀ ಹೋರಾಟ ಅಲ್ಲ. ಅಕ್ಷರಶಃ ಸಾವಿಗೆ ಸವಾಲೊಡ್ಡಿ ನಿಂತವಳ ಕಥೆ. ನಿಜ ಹೇಳ್ಬೇಕು ಅಂದ್ರೆ ಅವರಿಬ್ಬರೂ ಬೇರೆಯದ್ದೇ ಲೋಕದಲ್ಲಿದ್ರು. ಬದುಕೋದಕ್ಕೇ ಅಸಾಧ್ಯ ಅನಿಸುವಂತಹ ಜಾಗದಲ್ಲಿದ್ರು. ಈಗ ಅವರಿಬ್ಬರ ಸಾಧನೆಗೆ ಅದರಲ್ಲೂ ಆಕೆಯ ಸಾಧನೆ ಕಂಡು ಬಾಹ್ಯಾಕಾಶವೇ ಬೆರಗಾಗಿದ್ರೂ ಅಚ್ಚರಿಯಿಲ್ಲ. ಆಕಾಶದಲ್ಲೇ ಸಿಲುಕಿದ್ದ ಸುನಿತಾ ವಿಲಿಯಮ್ಸ್​ ಕೊನೆಗೂ ಧರೆಗಿಳೀತಿದ್ದಾರೆ. ಬಾಹ್ಯಾಕಾಶದಿಂದ ಭೂಮಿಗೆ ಆ 17 ಗಂಟೆಗಳ ರೋಚಕ ಪ್ರಯಾಣ ಹೇಗಿರುತ್ತೆ ಗೊತ್ತಾ?

ಇದನ್ನೂ ಓದಿ:ರೆಬೆಲ್​ ಸ್ಟಾರ್​ ಮೊಮ್ಮಗ ಅಂದ್ರೆ ಸುಮ್ನೆನಾ? ಫ್ಯಾನ್ಸ್ ಮನಗೆದ್ದ ಅವಿವಾ ಬಿದ್ದಪ್ಪ; ಟಾಪ್ 10 ಫೋಟೋ ಇಲ್ಲಿವೆ!

publive-image

ನಮ್ಮಲ್ಲಿ ಹಲವರಿದ್ದಾರೆ. ಹುಟ್ಟಿದ ಊರು ಬಿಟ್ಟು ಬೇರೆ ಊರಿಗೆ ಹೋಗಿ ಜಸ್ಟ್​ ನಾಲ್ಕು ದಿನ ಇದ್ದು ಬರೋದಕ್ಕೇ ಒದ್ದಾಡಿಬಿಡ್ತಾರೆ. ತುಂಬಾ ಜನರು ಅಬ್ಬಬ್ಬಾ, ಅಂದ್ರೆ ಒಂದು ವಾರ. ಒಂದು ತಿಂಗಳ ಕಾಲ, ತಮ್ಮ ಮನೆ, ಮಠ ಬಿಟ್ಟು ಹೋಗಿ ಇರಬಹುದು. ಅದಾದ ಮೇಲೆ ಬದುಕು ಕಷ್ಟ ಅನಿಸಿಬಿಡುತ್ತೆ. ಇದೇ ಕಾರಣಕ್ಕೆ ಎಷ್ಟೋ ಜನ ವಿದೇಶಗಳಲ್ಲಿ ಒಳ್ಳೆ ಕೆಲಸ ಸಿಕ್ರೂ ತಾಯ್ನಾಡು ಬಿಟ್ಟು ಹೋಗೋದಿಲ್ಲ. ಅಂಥದ್ರಲ್ಲಿ ಭೂಮಿಯನ್ನೇ ಬಿಟ್ಟು, ಜನರ ಸುಳಿವೇ ಇಲ್ಲದ ಬೇರೆಯದ್ದೇ ಲೋಕದಲ್ಲಿ 9 ತಿಂಗಳ ಕಾಲ ಇದ್ದು ವಾಪಸ್​ ಭೂಮಿಗೆ ಬರೋದು ಅಂದ್ರೆ ಏನ್​ ಹುಡುಗಾಟನಾ? ನಿಜವಾಗ್ಲೂ ನಂಬೋದಕ್ಕಾಗುತ್ತಾ? ಪವಾಡ ಅನಿಸೋದಿಲ್ವಾ? ಪವಾಡ ಇರ್ಲಿ ಇದು ನಿಜಕ್ಕೂ ಅದ್ಭುತ. ಅಂತಹ ಅದ್ಭುತವನ್ನ ಸೃಷ್ಟಿಮಾಡಿರೋರು ಬೇರಾರೂ ಅಲ್ಲ ಜಗತ್ತು ಕಂಡ ಇಬ್ಬರು ಶಕ್ತಿಶಾಲಿ ಗಗನಯಾತ್ರಿಗಳು. ಸಾವಿಗೇ ಸೆಡ್ಡು ಹೊಡೆದು ನಿಂತ ಗಟ್ಟಿಗರು. ಒಬ್ಬರು ಭಾರತೀಯ ಮೂಲದ ಅಮೆರಿಕಾ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಹಾಗೂ ಅಮೆರಿಕಾದ ಮತ್ತೊಬ್ಬ ಗಗನಯಾತ್ರಿ ಬುಚ್​ ವಿಲ್ಮೋರ್​.

publive-image

ಸಾವಿಗೇ ಸವಾಲು ಹಾಕಿದ್ದ ಗಟ್ಟಿಗಿತ್ತಿ..9 ತಿಂಗಳ ಬಳಿಕ ಭೂಮಿಗೆ!

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್​ ಹಾಗೂ ಬುಚ್​ ವಿಲ್ಮೋರ್ ಭೂಮಿಗೆ ಬರೋದು ಬಿಡಿ. ​ಜೀವಂತವಾಗಿ ಉಳಿಯೋದು ಕಷ್ಟ ಅನ್ನೋ ಅದೆಷ್ಟೋ ವರದಿಗಳು ಬಂದ್ವು. ಭೂಮಿಯಿಂದ ಬರೋಬ್ಬರಿ 400 ಕಿಲೋಮೀಟರ್​ಗಳಷ್ಟು ಎತ್ತರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇವರಿಬ್ಬರೂ ಹೋಗಿದ್ದು ಜಸ್ಟ್​ ಒಂದು ವಾರದ ಕೆಲಸಕ್ಕಾಗಿ. ಆದ್ರೆ ಅವರಿದ್ದ ಸ್ಟಾರ್​ಲೈನರ್​​ ಕ್ಯಾಪ್ಸುಲ್​ನಲ್ಲಾದ ಒಂದೇ ಒಂದು ತಾಂತ್ರಿಕ ದೋಷ ಹತ್ತಿರ ಹತ್ತಿರ 9 ತಿಂಗಳುಗಳ ಕಾಲ ಇಬ್ಬರೂ ಆಗಸದಲ್ಲೇ ಸಿಲುಕುವಂತೆ ಮಾಡಿಬಿಡ್ತು. ಸಾಕಷ್ಟು ಬಾರಿ ಪ್ರಯತ್ನ ಮಾಡಿದ್ರೂ ಕೂಡ ಒಂದಲ್ಲ ಒಂದು ಸಮಸ್ಯೆ ಎದುರಾಗ್ತಾನೆ ಇತ್ತು. ಆದ್ರೀಗ, ಕೋಟ್ಯಾನುಕೋಟಿ ಜನರ ಪ್ರಾರ್ಥನೆ ಫಲಿಸಿದೆ.

publive-image

"13 ಜನರಷ್ಟೇ ಇರಬಹುದು"

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಒಂದು ಫುಟ್​ಬಾಲ್​ ಸ್ಟೇಡಿಯಂನಷ್ಟು ಅಷ್ಟೇ ದೊಡ್ಡದಾಗಿರುತ್ತೆ. ಅಂತಹ ಐಎಸ್​ಎಸ್​ನಲ್ಲಿ ಒಮ್ಮೆಗೆ 13 ಜನರಷ್ಟೇ ವಾಸ ಮಾಡಬಹುದು. ತಿಂಗಳುಗಳ ಕಾಲ ಊಟ, ತಿಂಡಿ, ನಿದ್ರೆ, ಅಧ್ಯಯನ ಎಲ್ಲವನ್ನೂ ಮಾಡಬಹುದು. ಇನ್ನು, ಪ್ರತಿ ತಿಂಗಳಿಗೊಮ್ಮೆ ಅಲ್ಲಿರುವ ಗಗನಯಾತ್ರಿಗಳ ಬದಲಾವಣೆಯಾಗುತ್ತಿರುತ್ತದೆ. ಇಂತಹ ಬಾಹ್ಯಾಕಾಶ ನಿಲ್ದಾಣಕ್ಕೆ ಅಧ್ಯಯನಕ್ಕೆ ಅಂತಾ ಮೊನ್ನೆ ಮೊನ್ನೆಯಷ್ಟೇ ಸ್ಪೇಸ್​ ಎಕ್ಸ್​ನ ಕ್ಯ್ರೂ10 ಮಿಷನ್​ ಲಾಂಚ್​ ಮಾಡಿದೆ. ಆ ಮಿಷನ್​ನಲ್ಲಿ 4 ಜನ ಗಗನಯಾತ್ರಿಗಳಿದ್ದರು. ಮೊನ್ನೆಯಷ್ಟೇ ಬಾಹ್ಯಾಕಾಶ ನಿಲ್ದಾಣದಲ್ಲಿ ಸ್ಪೇಸ್​ಎಕ್ಸ್​​ನ ಕ್ರ್ಯೂ 10 ಸೇಫಾಗಿ ಲ್ಯಾಂಡ್​ ಆಯ್ತು. ಇವ್ರು ಹೋಗಿದ್ದಂತೆ, ಅಲ್ಲೇ ಸಿಲುಕಿಕೊಂಡಿದ್ದ ಗಟ್ಟಿಗಿತ್ತಿ ಸುನಿತಾ ವಿಲಿಯಮ್ಸ್​ ಸಂತೋಷಕ್ಕೆ ಪಾರವೇ ಇರಲಿಲ್ಲ.

publive-image

ಬಾಹ್ಯಾಕಾಶ ಅಧ್ಯಯನ ಅನ್ನೋದು ಗಗನಯಾತ್ರಿಗಳಿಗೆ ಒಂದು ರೀತಿ ಶಿಫ್ಟ್​ವೈಸ್​ ಕೆಲಸ ಇದ್ದಂತೆ. ಪ್ರತಿ 6 ತಿಂಗಳಿಗೊಮ್ಮೆ ಇಲ್ಲಿರುವ ಗಗನಯಾತ್ರಿಗಳನ್ನ ಅಲ್ಲಿಗೆ ಕಳುಹಿಸಲಾಗುತ್ತೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವವರನ್ನ ರಿಲೀವ್​ ಮಾಡಿ ಭೂಮಿಗೆ ವಾಪಸ್​ ಕಳುಹಿಸಲಾಗುತ್ತೆ. ಇಲ್ಲಿ ನಿಮಗೆ ಸುನಿತಾ ವಿಲಿಯಮ್ಸ್​ ಹಾಗೂ ಬುಚ್ ವಿಲ್ಮೋರ್​​ ಅಷ್ಟೇ ಕಾಣ್ತಿರಬಹುದು. ಆದ್ರೆ, ಇದೇ ಬಾಹ್ಯಾಕಾಶ ನಿಲ್ದಾಣದಲ್ಲಿ ಇವರಿಬ್ಬರಿಗೂ ಮೊದಲೇ ಹೋಗಿ ಸ್ಪೇಸ್​ ಸ್ಟೇಷನ್​ನಲ್ಲೇ ಸಂಶೋಧನೆ ನಡೆಸ್ತಿರೋ ಇನ್ನೂ ಕೆಲವರಿದ್ದಾರೆ. ಸೆಪ್ಟೆಂಬರ್​​ ತಿಂಗಳ ಕೊನೆಯಲ್ಲಿ ಕ್ರ್ಯೂ9 ಅನ್ನೋ ಸ್ಪೇಸ್​ಕ್ರ್ಯಾಫ್ಟ್​ ಕೂಡ ಅಧ್ಯಯನಕ್ಕೆ ತೆರಳಿ ಅಲ್ಲೇ ಇತ್ತು. ಆ ಕ್ರ್ಯೂ9ನಲ್ಲಿದ್ದ ಇಬ್ಬರು ಗಗನಯಾತ್ರಿಗಳ ಜೊತೆಗೆ ಸುನೀತಾ ಹಾಗೂ ಬುಚ್​ ವಿಲ್ಮೋರ್​ ವಾಪಸಾಗ್ತಿದ್ದಾರೆ. ಕ್ರ್ಯೂ 10 ಸ್ಪೇಸ್​ಕ್ರಾಫ್ಟ್​ನಲ್ಲಿ ಹೋಗಿರುವವರು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದು ತಮ್ಮ ಅಧ್ಯಯನ ಶುರುಮಾಡ್ತಾರೆ. ಸುನೀತಾ ಬುಚ್​ ವಿಲ್ಮೋರ್ 9 ತಿಂಗಳುಗಳ ಬಳಿಕ ವಾಪಸ್​ ಆಗ್ತಿರೋದು ನಿಜಕ್ಕೂ ರೋಚಕ ಕ್ಷಣ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ 2024 ಜೂನ್ 14ರಂದೇ ಸುನೀತಾ ಹಾಗೂ ವಿಲ್ಮೋರ್​ ಭೂಮಿಗೆ ವಾಪಸ್ ಆಗಬೇಕಿತ್ತು. ಆದ್ರೆ, ಸುನೀತಾರ ಸ್ಪೇಸ್​​ಕ್ರಾಫ್ಟ್​ನಲ್ಲಾದ ತೊಂದರೆಯಿಂದ ಅದು ಸಾಧ್ಯವಾಗಿಲ್ಲ.

publive-image

ಹೇಗಿತ್ತು ಕೊನೆ ಹಂತದ ತಯಾರಿ? ಏನೆಲ್ಲ ಸವಾಲುಗಳು?

ಬಾಹ್ಯಾಕಾಶ ಅನ್ನೋದಿದ್ಯಲ್ಲ ಇದು ನಿಜಕ್ಕೂ ವಿಸ್ಮಯಗಳ ಗೂಡು. ಯಾಕಂದ್ರೆ, ಬಾಹ್ಯಕಾಶದಿಂದ ಭೂಮಿಗೆ ಮರಳೋದು ಅಂದ್ರೆ ದೊಡ್ಡ ಚಾಲೆಂಜ್. ಒಂದು ಚೂರು ಹೆಚ್ಚು ಕಮ್ಮಿಯಾದ್ರೂ ಪ್ರಾಣವೇ ಹೋಗಿಬಿಡುವ ಸಾಧ್ಯತೆ ದಟ್ಟವಾಗಿರುತ್ತೆ. ಅದೇ ರೀತಿ, ಬಾಹ್ಯಕಾಶದಿಂದ ಸುನೀತಾರನ್ನ ಕರೆತರೋದನ್ನ ಮೂರು ಹಂತದ ಭರ್ಜರಿ ತಯಾರಿಗಳನ್ನ ಮಾಡಲಾಗಿದೆ. ಅದರಲ್ಲಿ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಗ್ರೌಂಡ್ ಪ್ರಿಪೇರಷನ್. ಅಂದ್ರೆ, ಸುನೀತಾ ಭೂಮಿಗೆ ಬಂದ ಮೇಲೆ ಹೇಗೆ ಅವರನ್ನ ರಿಸೀವ್ ಮಾಡ್ಬೇಕು? ಟೈಮಿಂಗ್​. ವಾತವರಣ ಎಲ್ಲವೂ ಮುಖ್ಯವಾಗಿರುತ್ತೆ. ಎರಡನೇ ವಿಚಾರ,​ ಸ್ಪೇಸ್ ಸ್ಟೇಷನ್​​ನಲ್ಲಿ ಹೊರಡುವ ಮುಂಚೆ ಮಾಡ್ಬೇಕಾದ ತಯಾರಿ.

ಹೌದು,​​ ಈಗಾಗಲೇ ಕ್ರ್ಯೂ 9 ಭೂಮಿಯತ್ತ ಬರ್ತಿದೆ. ಆದ್ರೆ, ಕರೆಕ್ಟ್​ ಆಗಿ ಕ್ಯಾಪ್ಸುಲ್​ ಸಮುದ್ರದಲ್ಲಿ ಸ್ಪ್ಲ್ಯಾಶ್​​ಡೌನ್​ ಆಗ್ಬೇಕು ಅಂದ್ರೆ ಅಲ್ಲೂ ಕೂಡ 7 ವಿಚಾರಗಳು ತುಂಬಾನೇ ಇಂಪಾರ್ಟೆಂಟ್​. ಗಲ್ಫ್​ ಆಫ್​ ಮೆಕ್ಸಿಕೋ ಮತ್ತು ಅಟ್ಲಾಂಟಿಕ್ ಮೆಕ್ಸಿಕೋ ಈ ಎರಡರಲ್ಲಿ 35 ಕಿಲೋಮೀಟರ್​ ಅಂತರದಲ್ಲಿರೋ 7 ಕೇಂದ್ರಗಳಲ್ಲಿ ಒಂದು ಪಾಯಿಂಟ್​​ನಲ್ಲಿ ಕ್ಯಾಪ್ಸುಲ್​​ ಸ್ಪ್ಲ್ಯಾಶ್​ಡೌನ್​ ಆಗುತ್ತೆ. ಆದ್ರೆ ಅದು ಸುಲಭದ ಕೆಲಸವಲ್ಲ. ಇನ್ನೇನು ಬಾಹ್ಯಾಕಾಶದಿಂದ ಬರುವ ಕ್ಯಾಪ್ಸುಲ್​ ಸಮುದ್ರಕ್ಕೆ ಸ್ಪರ್ಶ ಆಗುತ್ತೆ ಅನ್ನೋವಾಗ ಇಷ್ಟೆಲ್ಲಾ ತಯಾರಿಗಳನ್ನ ಮಾಡ್ಬೇಕು. ಕೊನೆಯ ಆರು ಗಂಟೆಯಲ್ಲಿ ಎರಡು ಪಾಯಿಂಟ್​ಗಳನ್ನ ಫಿಕ್ಸ್ ಮಾಡಿ ಇದಾದ ಮೇಲೆ ಕೊನೆಗೆ ಅವೆರಡರಲ್ಲಿ ಯಾವುದು ಬೆಸ್ಟ್​ ಅನ್ಸುತ್ತೋ, ಅದನ್ನ ಸೆಲೆಕ್ಟ್​ ಮಾಡಿ ಕ್ಯಾಪ್ಸುಲ್​ ಪಾದಸ್ಪರ್ಶ ಮಾಡುತ್ತೆ. ಈಗಾಗಲೇ ಎರಡು ಪಾಯಿಂಟ್​ಗಳು ಫಿಕ್ಸ್ ಆಗಿದೆ. ಇದಾದ ಮೇಲೆ ಅನ್​ಡಾಕಿಂಗ್​ ಪ್ರೊಸೆಸ್ ಶುರುವಾಗಿ ಗಗನಯಾತ್ರಿಗಳನ್ನ ಹೊತ್ತ ಕ್ಯಾಪ್ಸುಲ್​ ಭೂಮಿಯತ್ತ ಬರ್ತಿದೆ.

ಸಮುದ್ರ ಪಾದಸ್ಪರ್ಶಕ್ಕಿಂತ ಮುಂಚೆ ಏನೆಲ್ಲ ತಯಾರಿ ಇರುತ್ತೆ?

ಸ್ಲ್ಯಾಶ್​ ಡೌನ್​ ಅಥವಾ ಸಮುದ್ರ ಪಾದಸ್ಪರ್ಶ ಮಾಡೋದಕ್ಕಿಂತ ಮೊದಲು ಎರಡು ಶಿಪ್​ಗಳನ್ನ ರೆಡಿ ಇಟ್ಟಿರಲಾಗುತ್ತೆ. ಏನಿಲ್ಲ.. ಡಾಕ್ಟರ್ಸ್​​ ಸೈಂಟಿಂಸ್ಟ್​ ಸೇರಿ 500ಕ್ಕೂ ಹೆಚ್ಚು ಜನ ಎಸ್ಕಾರ್ಟ್​​ಗಳು ಸಿದ್ಧತೆ ಮಾಡಿಕೊಂಡಿರ್ತಾರೆ. ಗಗನಯಾತ್ರಿಗಳನ್ನ ಹೊತ್ತೊಯ್ಯೋದಕ್ಕೆ ಸಿದ್ಧವಿರೋ ಶಿಪ್​ಗಳ ರೆಡಾರ್​ ಸೇರಿ ಸುಮಾರು ನಾಲ್ಕು ಹಂತದ ಬ್ಯಾಕಪ್​​ಗಳನ್ನ ಇಟ್ಟಿರಲಾಗುತ್ತೆ. ಇದಷ್ಟೇ ಅಲ್ಲದೇ ಸಮುದ್ರದ ಮೇಲೆ ಹೆಲಿಕಾಫ್ಟರ್​ ಕೂಡ ಹಾರಾಡ್ತಿರುತ್ತೆ. ಯಾಕಂದ್ರೆ, ಗಗನಯಾತ್ರಿಗಳ ಆರೋಗ್ಯದ ಸ್ಥಿತಿ ನೋಡಿ ಕೂಡಲೇ ಏರ್​ಲಿಫ್ಟ್​ ಮಾಡೋಕೆ ಈ ತಯಾರಿಗಳನ್ನ ಮಾಡಿಕೊಂಡಿರಲಾಗುತ್ತೆ.

publive-image

17 ಗಂಟೆಗಳ ಪ್ರಯಾಣ! ಆ 1 ಗಂಟೆಯೇ ದೊಡ್ಡ ಚಾಲೆಂಜ್​!

ಬಾಹ್ಯಕಾಶದಿಂದ ಭೂಮಿಗೆ ಈ 17 ಗಂಟೆಗಳ ಪ್ರಯಾಣದಲ್ಲಿ ಕೊನೆಯ 1 ಗಂಟೆಯೇ ನಿಜಕ್ಕೂ ಸವಾಲು. ಈ ಒಂದು ಗಂಟೆಯಲ್ಲಿ ಕೊನೆಯ 15 ನಿಮಿಷ ಸಾವು ಬದುಕಿನ ಹೋರಾಟವೇ ಸರಿ. ಯಾಕಂದ್ರೆ ಈ 15 ನಿಮಿಷದಲ್ಲಿ ಕ್ಯಾಪ್ಸುಲ್​​ ಸಮುದ್ರಕ್ಕೆ ಸ್ಮ್ಯಾಶ್​​​ಡೌನ್ ಆಗ್ಬೇಕು. ಒಂದು ವೇಳೆ 15 ನಿಮಿಷದಲ್ಲಿ ಒಂದು ನಿಮಿಷವೂ ಹೆಚ್ಚು ಕಮ್ಮಿಯಾದ್ರೆ ಕಂಟಕ ಕಟ್ಟಿಟ್ಟ ಬುತ್ತಿಯೇ ಸರಿ. ಕೊನೆಯ 56 ನಿಮಿಷ. ಇದೇ 56 ನಿಮಿಷದಲ್ಲಿ ಡ್ಯ್ರಾಗನ್ ಕ್ಯಾಪ್ಸುಲ್​​ ಭೂಮಿಯ ವಾತಾವರಣಕ್ಕೆ ಎಂಟ್ರಿಯಾಗ್ಬೇಕು. ಈ ಟೈಮ್​ನಲ್ಲಿ ವಾತಾವರಣ ಕೂಡ ಕ್ಯಾಪ್ಸುಲ್​ಗೆ ಸಹಕಾರಿಯಾಗಿರಬೇಕು. 28 ಸಾವಿರ ಕಿಲೋ ಮೀಟರ್ ವೇಗದಲ್ಲಿರೋ ಕ್ಯಾಪ್ಸುಲ್​ ವೇಗವನ್ನ ಫೈನ್​ ಬ್ರೇಕಿಂಗ್ ಅನ್ನುವುದರ ಮೂಲಕ ಜಸ್ಟ್ 6 ಸಾವಿರ ಕಿಲೋ ಮೀಟರ್​ಗೆ ಇಳಿಸಬೇಕು. ಈ 17 ಗಂಟೆಯ ಪ್ರಯಾಣದಲ್ಲಿ ಅತ್ಯಂತ ಚಾಲೆಂಜಿಂಗ್​ ಕೆಲಸ ಅಂದ್ರೆ ಇದೇ ನೋಡಿ. ಬೆಚ್ಚಿ ಬೀಳಿಸೋ ವಿಚಾರ ಏನಂದ್ರೆ, ಕ್ಯಾಪ್ಸುಲ್​ ಭೂಮಿಗೆ ಎಂಟ್ರಿಯಾಗುವ ಹೊತ್ತಲ್ಲಿ ತಾಪಮಾನ 2 ಸಾವಿರದಿಂದ 3 ಸಾವಿರ ಡಿಗ್ರಿ ಇರುತ್ತೆ. ಈ ಟೈಮ್​​ನಲ್ಲಿ ಮಾಡ್ಯುಲ್​ ಸುಟ್ಟು ಭಸ್ಮವಾಗುವ ಸಾಧ್ಯತೆಗಳೇ ದಟ್ಟವಾಗಿರುತ್ತೆ. ಹೀಗಾಗಿ, ಕ್ಯಾಪ್ಸುಲ್​ಗೆ ಹೀಟ್​ ಶೀಲ್ಡ್​ ಅಂದ್ರೆ ರಕ್ಷಣಾ ಕವಚಗಳನ್ನ ಆ್ಯಕ್ಟೀವ್ ಮಾಡ್ತಾರೆ. ಇದಾದ ಮೇಲೆ ಕೊನೆಯ 15 ನಿಮಿಷದಲ್ಲಿ ಸ್ಪೀಡ್​​ನ್ನ ಕಂಟ್ರೋಲ್ ಮಾಡಿ ಇನ್ನೇನು ಸಮುದ್ರಕ್ಕೆ ಇಳಿಯೋದಕ್ಕೆ ನಾಲ್ಕು ನಿಮಿಷ ಇರೋವಾಗ ಪ್ಯಾರಚೂಟ್​ಗಳನ್ನ ಓಪನ್ ಮಾಡಲಾಗುತ್ತೆ. ಈ ಟೈಮ್​ನಲ್ಲಿ ಕ್ಯಾಪ್ಸುಲ್​ 560 ಕಿಲೋಮೀಟರ್​​ ವೇಗದಲ್ಲಿರುತ್ತೆ. ಕೊನೆಗೆ ಗಂಟೆಗೆ ಆರು ಕೀಲೋಮೀಟರ್​ ವೇಗದಲ್ಲಿ ಬಂದು ಕ್ಯಾಪ್ಸುಲ್​ ಸಮುದ್ರದಲ್ಲಿ ಸ್ಪ್ಲ್ಯಾಶ್​​ ಡೌನ್ ಮಾಡ್ಲಾಗುತ್ತೆ.

ಡ್ರ್ಯಾಗನ್ ಕ್ಯಾಪ್ಸುಲ್ ಸಮುದ್ರಕ್ಕೆ ಇಳೀತಾ ಇದ್ದಂತೆ ಮುಂಚೆಯೇ ರೆಡಿಯಿದ್ದ ನೌಕಾಪಡೆ ಕ್ಯಾಪ್ಸುಲ್​ನ್ನ ಶಿಪ್​ಗೆ ತಗೊಂಡು ಬಂದು ಕ್ಯಾಪ್ಸುಲ್​ನ ಬಾಗಿಲನ್ನ ಓಪನ್​ ಮಾಡಿ ಗಗನಯಾತ್ರಿಗಳನ್ನ ಹೊರಗೆ ಕರ್ಕೊಂಡು ಬರ್ತಾರೆ. ಇದಿಷ್ಷು ಅಂತರಿಕ್ಷದಿಂದ ಭೂಮಿಗೆ ಬಂದಿಳಿಯುವಾಗ ಎದುರಾಗುವ ಸವಾಲುಗಳಾದ್ರೆ, ಭೂಮಿಗೆ ಬಂದು ಇಳಿದ್ಮೇಲೂ ಸುನೀತಾ ವಿಲಿಯಮ್ಸ್​​ಗೆ ಹತ್ತಾರು ಚಾಲೆಂಜ್​ಗಳು ಎದುರಾಗುತ್ತವೆ. ಆ ಸಮಸ್ಯೆಗಳ ಬಗ್ಗೆ ಕೇಳಿದ್ರೆ ನೀವು ಬೆಚ್ಚಿ ಬೀಳೊದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment