/newsfirstlive-kannada/media/post_attachments/wp-content/uploads/2024/12/LAXMI-VILAS-PALACE.jpg)
ಅದ್ದೂರಿ ಬಂಗಲೆಗಳು, ದುಬಾರಿ ಮನೆಗಳು ಅಂದ ತಕ್ಷಣ ನಮ್ಮ ತಲೆಯಲ್ಲಿ ಬರುವ ಚಿತ್ರಗಳು ಮುಖೇಶ್ ಅಂಬಾನಿಯ ಅಂಟಿಲಿಯಾ, ಶಾರುಖ್​ ಖಾನ್​ ನಿವಾಸ ಮನ್ನತ್ ಹೀಗೆ ಹಲವು ಶ್ರೀಮಂತರ ಮನೆಗಳು ಬರುತ್ತವೆ. ಅದರಲ್ಲೂ ದೇಶದ ಅತ್ಯಂತ ದುಬಾರಿ ಮನೆ ಅಂದ್ರೆ ಅದು ಮುಖೇಶ್ ಅಂಬಾನಿ ನಿವಾಸ ಅಂಟಿಲಿಯಾ ಅಂತಲೇ ನಮಗೆ ಮೊದಲು ತಲೆಗೆ ಬರೋದು. ಆದ್ರೆ ಈ ವಿಶ್ವದ ಅತ್ಯಂತ ದುಬಾರಿ ಹಾಗೂ ದೊಡ್ಡ ಮನೆ ಅಂದ್ರೆ ಅದು ಗುಜರಾತ್​ನ ವಡೋದರಾದಲ್ಲಿ ಇದೆ. ಲಕ್ಷ್ಮೀ ವಿಲಾಸ ಪ್ಯಾಲೆಸ್​ ಅಂತಲೇ ಕರೆಸಿಕೊಳ್ಳುವ ಈ ಬಂಗಲೆ, ಬರೋಡಾದ ಗಾಯಕ್​ವಾಡ ಪರಿವಾರಕ್ಕೆ ಸೇರಿದ್ದು. ಸ್ಥಳೀಯರಿಂದ ಅಪಾರ ಗೌರವ ಸ್ವೀಕರಿಸುವ ಈ ಕುಟುಂಬದ ಬಂಗಲೆಯೇ ವಿಶ್ವದ ಅತಿದೊಡ್ಡ ಖಾಸಗಿ ನಿವಾಸ ಎಂದು ಗುರುತಿಸಿಕೊಂಡಿದೆ.
/newsfirstlive-kannada/media/post_attachments/wp-content/uploads/2024/12/LAXMI-VILAS-PALACE-1.jpg)
ಈ ಒಂದು ಪ್ಯಾಲೆಸ್​ ಇಂಗ್ಲೆಂಡ್​ನಲ್ಲಿರುವ ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್​ಗಿಂತ ನಾಲ್ಕುಪಟ್ಟು ದೊಡ್ಡದಿದೆ ಎಂದು ಹೇಳಲಾಗುತ್ತದೆ. ಸದ್ಯ ಈ ರಾಯಲ್ ಫ್ಯಾಮಿಲಿಯ ಮನೆಯನ್ನು ಹೆಚ್​ಆರ್​ಹೆಚ್​ ಸಮರ್ಜೀತ್ ಗಾಯಕ್ವಾಡ್​ ಅವರು ತಮ್ಮ ಪತ್ನಿ ರಾಧಿಕಾರಾಜೆ ಗಾಯಕ್ವಾಡ್ ಅವರೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ:18 ತಿಂಗಳಲ್ಲಿ 11 ಜೀವ ತೆಗೆದ ನೀಚ; ಕೆಲಸ ಮುಗಿಸಿದ ನಂತರ ಬೆನ್ನ ಮೇಲೆ ಏನು ಬರೆದು ಹೋಗುತ್ತಿದ್ದ?
ಇತಿಹಾಸದ ಪುಟಗಳು ಈ ಭವ್ಯ ಅರಮನೆಯ ಬಗ್ಗೆ ಹಲವು ಪುಟಗಳನ್ನು ತೆರೆದಿಡುತ್ತದೆ. ಮೂರನೇ ಸಯಾಜಿರಾವ್ ಗಾಯ್ಕವಾಡ್ ಮಹರಾಜರು ಬರೋಡದಾದಲ್ಲಿ ರಾಜ್ಯವಾಳುತ್ತಿರುವಾಗ ಈ ಒಂದು ಭವ್ಯ ಲಕ್ಷ್ಮೀ ವಿಲಾಸ ಪ್ಯಾಲೇಸ್​ನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಲಕ್ಷ್ಮೀ ನಿವಾಸ ಪ್ಯಾಲೇಸ್​ನ್ನ ವಿಶ್ವದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಬಂಗಲೆ ಎಂದು ಗುರುತಿಸಲಾಗುತ್ತದೆ.
/newsfirstlive-kannada/media/post_attachments/wp-content/uploads/2024/12/LAXMI-VILAS-PALACE-2.jpg)
ಹೌಸಿಂಗ್ ಡಾಟ್​ಕಾಮ್ ಹೇಳುವ ಪ್ರಕಾರ ಈ ಭವ್ಯ ಬಂಗಲೆ 3 ಕೋಟಿ, 4 ಲಕ್ಷ 91 ಸಾವಿರ ಸ್ಕ್ವೇರ್​ಫೀಟ್​ ವಿಸ್ತಾರದಲ್ಲಿ ಹಬ್ಬಿಕೊಂಡಿದೆ ಎಂದು ಹೇಳಿದೆ. ಬಕ್ಕಿಂಗ್ ಹ್ಯಾಮ್​ ಪ್ಯಾಲೇಸ್ ಇರೋದು 8 ಲಕ್ಷ 28 ಸಾವಿರ,828 ಸ್ಕ್ವೇರ್​ಫೀಟ್​ನಲ್ಲಿ ವಿಸ್ತಾರದ ಜಾಗದಲ್ಲಿ ನಿರ್ಮಾಣಗೊಂಡಿದೆ. ಜಗತ್ತಿನ ದುಬಾರಿ ಬಂಗಲೆ ಎಂದು ಕರೆಸಿಕೊಳ್ಳುವ ಮುಖೇಶ್ ಅಂಬಾನಿಯವರ ಮನೆಯ ಬೆಲೆ 15 ಸಾವಿರ ಕೋಟಿ ರೂಪಾಯಿ, ಅದು ನಿರ್ಮಾಣವಾಗಿದ್ದು ಕೇವಲ 48,780 ಸ್ಕ್ವೇರ್​ ಫೀಟ್​ ಜಾಗದಲ್ಲಿ.
ಇದನ್ನೂ ಓದಿ:ಸಂಚಲನ ಸೃಷ್ಟಿಸಿದ ಶಮಿ-ಸಾನಿಯಾ AI ಫೋಟೋ; ನಕಲಿ ಚಿತ್ರ ಪತ್ತೆ ಮಾಡೋದು ಹೇಗೆ..?
ಈ ಲಕ್ಷ್ಮೀ ವಿಲಾಸ ಪ್ಯಾಲೇಸ್​ನಲ್ಲಿ ಒಟ್ಟು 170 ರೂಮ್​ಗಲಿವೆ. ಒಂದು ಗಾಲ್ಫ್​​ ಕೋರ್ಸ್​ ಇದೆ. ಈ ಬಂಗಲೆಯನ್ನು 1890ರಲ್ಲಿ ನಿರ್ಮಾಣ ಮಾಡಲಾಗಿದ್ದು ಅಂದಿನ ಕಾಲದಲ್ಲಿಯೇ ಇದರ ನಿರ್ಮಾಣಕ್ಕೆ ಖರ್ಚಾಗಿದ್ದ ಮೊತ್ತ ಸುಮಾರು 1 ಲಕ್ಷ 80 ಸಾವಿರ ಗಿಬಿಪಿ ಅಂದ್ರೆ ಗ್ರೇಟ್​ ಬ್ರಿಟಿಶ್ ಪೌಂಡ್​ಗಳು. ಈ ಲಕ್ಷ್ಮೀ ವಿಲಾಸ ಪ್ಯಾಲೆಸ್​ನ್ನು ಇಡೀ ವಡೋದರಾದ ಭವ್ಯತೆಯ ಗುರುತು ಎಂದೇ ಎಲ್ಲರೂ ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us