/newsfirstlive-kannada/media/post_attachments/wp-content/uploads/2025/01/KINNAR-AKHAD-5.jpg)
ಮಹಾಕುಂಭಮೇಳ.. ಲಕ್ಷಾಂತರ ಸಾಧು ಸಂತರ ಸಮಾಗಮದಲ್ಲಿ ಪ್ರಮುಖ 13 ಅಖಾಡಗಳ ಸಂತರು ಸೇರುತ್ತಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಅಮೃತ ಸ್ನಾನ ಮಾಡುತ್ತಾರೆ.. ಈ ಮಧ್ಯೆ ಆ ಒಂದು ಅಖಾಡದ ಸಾಧ್ವಿ ಪಡೆ ನಿಜಕ್ಕೂ ಅಚ್ಚರಿಗೊಳಿಸುತ್ತೆ. ಯಾಕಂದ್ರೆ, ಆ ಸಾಧ್ವಿಗಳಿಗೆ ಅಘೋರಿ ಪೂಜೆ. ಶೃಂಗಾರ ಆರತಿ. ಬಂಗಾರವೇ ಭಕ್ತಿ ಆಗಿದೆ. ಏಳುಕೊಳ್ಳದ ಜೀವಗಂಗೆ ಯಲ್ಲಮ್ಮ ತಾಯಿ ದರ್ಬಾರ್ ನಡೆಯುತ್ತೆ. ಮಹಾಕುಂಭಮೇಳದಲ್ಲೂ ಕನ್ನಡದ ಝೇಂಕಾರ ಮೊಳಗಿಸ್ತಾರೆ. ಸಾಕ್ಷಾತ್ ತ್ರಿಮೂರ್ತಿ, ತ್ರಿವೇಣಿಯರ ಸಂಗಮದ ಮಹಾರೂಪವೇ ಆಗಿರೋ ಆ ಶಕ್ತಿ ಅದೊಂದು ನಾಣ್ಯದ ಮೂಲಕ ಬೆರಗು ಮೂಡಿಸುತ್ತದೆ.. ಅಷ್ಟಕ್ಕೂ ಇದೇನಿದು ಕಿನ್ನರ ನಾಣ್ಯ ರಹಸ್ಯ ಅಂತೀರಾ? ಈ ಲೇಖನದಲ್ಲಿದೆ ಸಂಪೂರ್ಣ ವಿವರ
ಕಡು ಕತ್ತಲ ಮಧ್ಯರಾತ್ರಿ. ಯಾರ ಕಣ್ಣು ಬೀಳುವಂತಿಲ್ಲ.. ಜಗತ್ತೇ ಗಾಢ ನಿದ್ರೆಗೆ ಬಿದ್ಮೇಲೆ. ನಿಗೂಢ ಸಂಸ್ಕಾರ ನಡೆಯುತ್ತೆ. ನರಿ ಹೂಳಿಡಬೇಕು. ಗೂಬೆ ಗೂಗುಡಬೇಕು. ಅಂಥಾ ನಿಶಾಚರ ಹೊತ್ತಲ್ಲೇ ಬೆಚ್ಚಿಬೀಳಿಸ್ತಾರೆ. ನಮ್ಮೊಂದಿಗೇ ಇರ್ತಾರೆ. ನಮ್ಮಂತೆ ಇರೋದಿಲ್ಲ.. ಸಾಕ್ಷಾತ್ ಶಿವ ಶಕ್ತಿಯ ರೂಪವೇ ಆಗಿರ್ತಾರೆ. ಅಷ್ಟಕ್ಕೂ ಯಾರಿವರು? ಹೀಕೇಗೆ ಮಾಡ್ತಾರೆ? ಅಷ್ಟಕ್ಕೂ ಇವರ್ಯಾರು ಅಂತೀರಾ? ಇವರ ಬಗ್ಗೆ ಗೊತ್ತಾಗ್ಬೇಕು ಅಂದ್ರೆ ಮಹಾಕುಂಭಮೇಳಕ್ಕೆ ಹೋಗಬೇಕು.
ತಮಿಳುನಾಡಿನ ಆ ಒಬ್ಬ ಅಘೋರಿ ಪಕ್ಕ ಆ ತಾಯಿ ಕೂತಿದ್ಳು!
ಮಹಾ ಕುಂಭಮೇಳದಿಂದ ನ್ಯೂಸ್ ಫಸ್ಟ್ ಅಸಲಿ ಗ್ರೌಂಡ್ ರಿಪೋರ್ಟ್ ನೀಡುತ್ತಿದೆ. ನೀವೆಂದೂ ಕೇಳಿರದ ರೋಚಕ ಕಥೆಗಳನ್ನ ಹೇಳುತ್ತಿದೆ. ನಮ್ಮ ವಿಶೇಷ ಪ್ರತಿನಿಧಿ ಚಂದ್ರಮೋಹನ್ ರಕ್ತಹೆಪ್ಪುಗಟ್ಟಿಸುವ ಚಳಿಯನ್ನೂ ಲೆಕ್ಕಿಸದೇ ಕಾರ್ಗತ್ತಲ ರಾತ್ರಿಯಲ್ಲಿ ಅದೊಂದು ನಿಗೂಢ ತಾಣಕ್ಕೆ ಹೋಗಿದ್ದರು. ಅಲ್ಲಿಗೆ ಹೋಗ್ತಿದ್ದಂತೆ ಬೆಚ್ಚಿಬೀಳಿಸೋ ಪೂಜೆಯೊಂದು ನಡೀತಿತ್ತು. ಅಚ್ಚರಿಯ ಸಂಗತಿ ಏನಂದ್ರೆ ಹಿಂದಿ ಹಾರ್ಟ್ಲ್ಯಾಂಡ್ ಅನಿಸಿಕೊಂಡಿರೋ ದೇವ ಪ್ರಯಾಗದಲ್ಲಿ ಓರ್ವ ತಮಿಳು ಅಘೋರಿ ಘೋರ ಪೂಜೆ ಮಾಡ್ತಿದ್ರು. ಮಣಿಕಂಠನ್ ಅನ್ನೋ ಇದೇ ಅಘೋರಿ ನಟ್ಟನಡುರಾತ್ರಿಯಲ್ಲಿ ಆ ದೇವಿಯ ಪುಟ್ಟ ಪ್ರತಿಮೆ ಇಟ್ಟು ಹೋಮ ಮಾಡುತ್ತಿದ್ದರು. ಅಷ್ಟಕ್ಕೂ ಆ ಪುಟ್ಟ ಪ್ರತಿಮೆ ಯಾರದ್ದು ಗೊತ್ತಾ? ಅವಳೇ ಸರ್ವ ಯಂತ್ರಾತ್ಮಿಕೆ ಸರ್ವ ಮಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ಮುದ್ರಾತ್ಮಿಕೆ ಸರ್ವ ಶಕ್ತ್ಯಾತ್ಮಿಕೆ ಸರ್ವ ವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೆ ಆದ ಅಘೋರ ಕಾಳಿ.
ಕತ್ತಲ ರಾತ್ರಿಯಲ್ಲೇ ಘೋರ ದೇವತೆಗೆ ಪೂಜೆ ನಡೆಯುತ್ತೆ. ಕತ್ತಲಿನ ಪ್ರತಿರೂಪವೇ ಆಗಿರೋ ಆ ಅಘೋರ ಕಾಳಿಗೆ ಇದೇ ಕಿನ್ನರ ಅಖಾಡದಲ್ಲಿ ಪೂಜೆ ನಡೀತಿತ್ತು. ತಮಿಳುನಾಡಿನ ಮಣಿಕಂಠನ್ ಅನ್ನೋ ಅಘೋರಿ ನೇತೃತ್ವದಲ್ಲಿ ಅಘೋರ ಕಾಳಿ ಪೂಜೆ ಮಾಡ್ತಿದ್ರು.. ಆ ಸಂದರ್ಭ ನ್ಯೂಸ್ ಫಸ್ಟ್ ಕ್ಯಾಮರಾ ಅತ್ಯಂತ ಭೀಕರ ಅನಿಸೋ ಅಘೋರ ಪೂಜೆಯ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿತ್ತು.
ಸುತ್ತಲೂ ಕತ್ತಲು. ಆ ಕತ್ತಲನ್ನೇ ಸೀಳಿ ಹಾಕೋ ಡಮರುಗ ನಾದ. ಮೈ ತುಂಬಾ ಭಸ್ಮ ಧರಿಸಿದ್ದ ಮಣಿಕಂಠನ್ ಅಘೋರಿ.. ಘೋರ ದೇವಿ ಕಾಳಿಯನ್ನು ಸ್ತುತ್ತಿಸುತ್ತಿದ್ರು.. ಕಿನ್ನರ ಅಖಾಡದ ಮಹಾಮಂಡಳೇಶ್ವರ್ ಆಗಿರೋ ಸಾಧ್ವಿ ಪವಿತ್ರಾ ಮಹರಾಜ್ ಇದ್ರು.. ಅದೆಲ್ಲಿಂದ ತಂದ್ರೋ.. ಅಘೋರ ಪೂಜೆ ಮಾಡ್ತಿದ್ದ ಮಣಿಕಂಠನ್ ಕೊರಳಿಗೆ ನರ ಮನುಷ್ಯರ ಬುರುಡೆಗಳ ಹಾರವನ್ನು ಹಾಕಿದ್ರು.. ಹೊಸದಾಗಿ ಕಿನ್ನರ ಅಖಾಡಕ್ಕೆ ಸೇರೋ ಸಾಧು, ಸಾಧ್ವಿಗಳಿಗೆ ಇದೇ ವೇಳೆ ದೀಕ್ಷೆಯನ್ನು ನೀಡಿದ್ರು.. ಅಘೋರ ಕಾಳಿ ಪೂಜೆಗಿಂತ್ಲೂ ಹೆಚ್ಚು ಬೆಚ್ಚಿಬೀಳಿಸಿದ್ದು ಅಘೋರ ಕಾಳಿಯ ಆ ಪುಟ್ಟ ಪ್ರತಿಮೆ.. ಮಹಾಕುಂಭಮೇಳ ಶುರುವಾಗಿ 5 ದಿನಗಳೇ ಉರುಳಿವೆ.. ಆದರೇ ಇದುವರೆಗೂ ಇಂಥಾ ಸಾಹಸದ ಅಘೋರ ಕಾಳಿ ಪೂಜೆಯನ್ನು ಅತಿದೊಡ್ಡ ಅಖಾಡಗಳೂ ಮಾಡೋಕೆ ಸಾಧ್ಯವಾಗ್ಲಿಲ್ಲ.. ಆದರೇ. ಕಿನ್ನರ ಅಖಾಡ ಅಘೋರ ಕಾಳಿ ಪೂಜೆಯನ್ನು ಮಾಡಿ ಸೈ ಅನಿಸಿಕೊಂಡಿದೆ.. ಅಷ್ಟಕ್ಕೂ ಇದ್ಯಾವುದು ನಡುರಾತ್ರಿಯಲ್ಲಿ ಜಗತ್ತನ್ನೇ ಎಚ್ಚರಿಸೋ ಅಖಾಡ ಅಂತೀರಾ? ಇದುವೇ ಕಿನ್ನರ ಅಖಾಡ..
ತೃತೀಯ ಲಿಂಗಿಗಳ ಆಧ್ಯಾತ್ಮದ ಐಡೆಂಟಿಟಿ ಈ ‘ಕಿನ್ನರ’ ಅಖಾಡ!
ಕುಂಭಮೇಳದಲ್ಲಿ 2016ರವರೆಗೂ ಸಾಧು ಹಾಗೂ ಸಾಧ್ವಿಗಳು ಭಾಗಿ ಆಗ್ತಿದ್ರು.. ತೃತೀಯ ಲಿಂಗಗಳ ಪರವಾಗಿ ಧ್ವನಿ ಎತ್ತುತ್ತಿದ್ದ ಲಕ್ಷ್ಮಿ ನಾರಾಯಣ್ ತ್ರಿಪಾಠಿ 2018ರಲ್ಲಿ ಕಿನ್ನರ ಅಖಾಡವನ್ನ ಸ್ಥಾಪನೆ ಮಾಡ್ತಾರೆ. ಪುರಾಣದಲ್ಲಿ, ಮಹಾಭಾರತದಲ್ಲಿ ಈ ಕಿನ್ನರರ, ಕಿಂಪುರುಷರ ಉಲ್ಲೇಖ ಇದೆ.. ಇವರು ದೇವಾನುದೇವತೆಗಳನ್ನ ಹಾಡು ನೃತ್ಯಗಳ ಮೂಲಕ ಸಂತೋಷಪಡಿಸ್ತಿದ್ರಂತೆ.. ಇಂಥಾ ಗಂಧರ್ವರದ್ದೂ ಒಂದು ಅಖಾಡ ಬೇಕೇ ಬೇಕು ಅಂತ ಲಕ್ಷ್ಮಿ ನಾರಾಯಣ್ ತ್ರಿಪಾಠಿ ಈ ತೃತೀಯ ಲಿಂಗಿಗಳ ಅಖಾಡ ರೂಪಿಸಿದ್ರು.. ಇಲ್ಲೂ ಸಹ ದೀಕ್ಷೆ ನೀಡ್ತಾರೆ.. ಇಲ್ಲೂ ಸಹ ಮಹಂತ.. ಮಹಾಮಂಡಳೇಶ್ವರರು ಇರ್ತಾರೆ.. ಅರ್ಧನಾರೀಶ್ವರರ ಪ್ರತಿರೂಪವೇ ಆಗಿರೋ ಈ ಸಮುದಾಯವೂ ಸಹ ಆಧ್ಯಾತ್ಮದ ರಾಜಧಾನಿಯಲ್ಲಿ ಸ್ಥಾನ ಮಾನ ಮನ್ನಣೆ ಗಳಿಸಿಕೊಂಡಿದೆ. ತೃತೀಯ ಲಿಂಗಗಳ ವಿಚಾರಕ್ಕೆ ಜನ ಮೂದಲಿಸುತ್ತಿದ್ರು.. ಆದ್ರೀಗ, ಬಹುಪಾಲು ಬದಲಾವಣೆ ಆಗಿದೆ ಅಂತಾರೆ ಕಿನ್ನರ ಅಖಾಡದ ಸಾಧ್ವಿಯಾಗಿರುವ ಇಂದೂ.
ತುಂಬಾ ಒಳ್ಳೆಯ ರೀತಿಯಲ್ಲೇ ಸ್ವೀಕರಿಸಿದ್ದಾರೆ. ಹಾಗೆಯೇ ಹೆಚ್ಚಿನ ಪ್ರೀತಿ ನೀಡಿದ್ದಾರೆ. ಇದೀಗ ಸಾಕಷ್ಟು ಜನಕ್ಕೂ ಕಿನ್ನರ ಅಖಾಡದ ಬಗ್ಗೆ ತಿಳಿದಿದೆ. ನೋಡಿ ಎಷ್ಟೊಂದು ಮಂದಿ ಬಂದಿದ್ದಾರೆ. ಕಿನ್ನರ ಅಖಾಡದ ಬಗ್ಗೆ ಜಾಗೃತಿ ಮೂಡಿದೆ. ಕಿನ್ನರರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ತುಂಬಾ ಖುಷಿ ಅನಿಸುತ್ತಿದೆ. ಕಿನ್ನರ ಅಖಾಡಕ್ಕೆ ಜನ ಬರುತ್ತಿದ್ದಾರೆ ಎನ್ನುತ್ತಾರೆ ಕಿನ್ನಡ ಅಖಾಡದ ಸಾಧ್ವಿ, ಇಂದೂ
'ಕಿನ್ನರ ಅಖಾಡದ ಸಾಧ್ವಿಗಳು ನಿಜಕ್ಕೂ ಅಚ್ಚರಿ ಅನಿಸೋದಕ್ಕೆ ಮತ್ತೊಂದು ಕಾರಣವೂ ಇದೆ.. ಅದುವೇ ಇವರು ತಮ್ಮನ್ನ ತಾವು ಸಾಕ್ಷಾತ್ ಅರ್ಧನಾರೀಶ್ವರನ ಪ್ರತಿರೂಪ ಅಂತ ಹೇಳಿಕೊಳ್ಳುತ್ತಾರೆ..
ಕಿನ್ನರ ಪಾರ್ವತಿಯ ರೂಪ. ಅರ್ಧನಾರೀಶ್ವರಿಯ ರೂಪ. ವಿಶೇಷವಾಗಿ ನಮ್ಮ ಮೇಲೆ ಅರ್ಧನಾರೀಶ್ವರಿ ದೇವಿಯ ಆಶೀರ್ವಾದ ಇರುತ್ತದೆ. ಅರ್ಧನಾರೀಶ್ವರ ಭೋಲೋನಾಥ ಹಾಗೂ ಪಾರ್ವತಿ ಇಬ್ಬರ ಕೃಪಾಶೀರ್ವಾದ ಕಿನ್ನರ ರೂಪದಲ್ಲಿ ನಮ್ಮ ಮೇಲೆ ಇರುತ್ತದೆ ಎನ್ನುತ್ತಾರೆ ಇಂದೂ
ಕಿನ್ನರ ಅಖಾಡದ ಸಾಧ್ವಿಯರಿಗೆ ಶೃಂಗಾರ ಪೂಜೆ.. ಬಂಗಾರ ಭಕ್ತಿ!
ಮಹಾಕುಂಭಮೇಳದಲ್ಲಿ ಇದೇ ಕಿನ್ನರ ಅಖಾಡದ ಜನ ಸಾಲುಗಟ್ಟಿ ನಿಲ್ಲುತ್ತಾರೆ. ಯಾಕಂದ್ರೆ, ಬುಧ ಗ್ರಹದ ದೋಷ ಇರೋ ಮಂದಿ ನೇರವಾಗಿ ಬಂದು ನಿಲ್ಲೋದು ಇದೇ ಕಿನ್ನರರ ಮುಂದೆ. ಯಾಕಂದ್ರೆ, ಬುಧ ಗ್ರಹ ದೋಷ ಇರೋರು ಈ ಕಿನ್ನರರ ಆಶೀರ್ವಾದ ಪಡೆದರೇ ಎಲ್ಲವೂ ಶುಭವಾಗುತ್ತದೆ ಅನ್ನೋ ನಂಬಿಕೆ ಇದೆ. ಅಷ್ಟೇ ಅಲ್ಲ, ಅಘೋರ ನಾಗಾ ಸಾಧುಗಳಿಗೆ ಭಂ ಭಂ ಬೋಲೇನಾಥ ಹಾಗೂ ಭಂಗಿ ಸಿಕ್ಬಿಟ್ರೆ ಅದುವೇ ಕೈಲಾಸ. ಆದರೇ, ಕಿನ್ನರ ಅಖಾಡದ ಸಾಧ್ವಿಯರಿಗೆ ಶೃಂಗಾರವೇ ಪೂಜೆ. ಬಂಗಾರವೇ ಭಕ್ತಿ ಆಗಿದೆ.
ಕಿನ್ನರರಿಗೆ ಶೃಂಗಾರ ಅತ್ಯಂತ ಪ್ರಿಯವಾದದ್ದು. ಯಾಕಂದ್ರೆ, ದೇವಾನುದೇವತೆಗಳು ಸಿಂಗರಿಸಿಕೊಂಡು ಅಂದವಾಗಿ ಕಾಣ್ತಾರೆ. ಕಿನ್ನರರು ಸಹ ದೇವರ ಮತ್ತೊಂದು ರೂಪವೇ ಆಗಿದ್ದಾರೆ. ಹಾಗಾಗಿಯೇ, ಕಿನ್ನರರಿಗೆ ಶೃಂಗಾರ ಬಲು ಅಚ್ಚುಮೆಚ್ಚು. ವಿವಾಹಿತ ಸ್ತ್ರೀಗೆ ತೊಂದರೆ ಆದ್ರೆ, ಬುಧ ಗ್ರಹದಿಂದ ತೊಂದರೆ ಆದ್ರೆ, ಅಂಥವರು ಕಿನ್ನರರಿಗೆ ಶೃಂಗಾರದ ವಸ್ತುಗಳು, ವಸ್ತ್ರಗಳು ದಾನ ಮಾಡಿದ್ರೆ ಬುಧ ಗ್ರಹದ ತೊಂದರೆ ನಿವಾರಣೆ ಆಗುತ್ತದೆ. ಇದೇ ಕಾರಣಕ್ಕೇ ಕಿನ್ನರರು ಹೆಚ್ಚು ಶೃಂಗಾರ ಬಯಸುತ್ತಾರೆ ಎನ್ನುತ್ತಾರೆ ಸಾಧ್ವಿ ಇಂದೂ
ಇದೇ, ಕಾರಣಕ್ಕೇ ನೋಡಿ, .ಬಹುಪಾಲು ಮಂಗಳಮುಖಿಯರು ಹೆಸರಿಗೆ ತಕ್ಕಂತೆಯೇ ಮಂಗಳಕರವಾದ ಮುಖವನ್ನು ತೋರುತ್ತಾ ಎಲ್ಲರನ್ನೂ ಆಶೀರ್ವದಿಸಲು ಬರುತ್ತಾರೆ. ಶೃಂಗಾರಗೊಳ್ಳುವುದು ಕಿನ್ನರ ಅಖಾಡದ ಸಾಧ್ವಿಗಳ ಬಹುದೊಡ್ಡ ಪೂಜೆ ಅಂದ್ರೂ ತಪ್ಪಾಗೋದಿಲ್ಲ. ಕಿನ್ನರರಿಗೆ ಸಹ ಶೃಂಗಾರ ಬಲು ಇಷ್ಟ. ಸಿಂಗಾರದ ವಸ್ತುಗಳನ್ನು ದಾನ ಮಾಡಿದ್ರೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಶೃಂಗಾರ ಎನ್ನುವುದು ಬರೀ ದೇಹಕ್ಕಷ್ಟೇ ಅಲ್ಲ.. ಮನಸ್ಸಿಗೂ ಮುಖ್ಯ ಅನ್ನೋದನ್ನ ಕಿನ್ನರ ಸಾಧ್ವಿಗಳು ಒಪ್ಪುತ್ತಾರೆ.. ಇದಕ್ಕಿಂತ್ಲೂ ರಣರೋಚಕ ಅನಿಸೋದು ಇವರು ನೀಡುವ ಅದೊಂದು ನಾಣ್ಯ.
ಬಹುಪಾಲು ಮಂದಿ ಮಹಾಕುಂಭಮೇಳದಲ್ಲಿ ಕಿನ್ನರ ಅಖಾಡಕ್ಕೆ ಬರೋದೇ ಒಂದು ರೂಪಾಯಿ ನಾಣ್ಯಕ್ಕಾಗಿ.. ಕಿನ್ನರ ಸಾಧ್ವಿಗಳ ಕೈಯಿಂದ ಮಂತ್ರಿಸಿಕೊಂಡು ಪಡೆಯೋ ಅದೊಂದೇ ಒಂದು ರೂಪಾಯಿ ನಾಣ್ಯ ಸಾಕ್ಷಾತ್ ಮಹಾಲಕ್ಷ್ಮಿಯ ಪ್ರತಿರೂಪವೆಂದೇ ಹೇಳಲಾಗುತ್ತದೆ. ಹಾಗಾಗಿಯೇ ಕಿನ್ನರ ಅಖಾಡದ ಮಧ್ಯೆ ಅದೊಂದೇ ಒಂದು ನಾಣ್ಯಕ್ಕಾಗಿ ಜನ ಸಾಲುಗಟ್ಟಿ ನಿಂತಿರ್ತಾರೆ. ಅಷ್ಟಕ್ಕೂ ನಾಣ್ಯಕ್ಕೂ ಈ ಕಿನ್ನರರಿಗೂ ಸಂಬಂಧ ಏನು? ಪೌರಾಣಿಕ ಹಿನ್ನೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಿ.
ಇದನ್ನೂ ಓದಿ:ರಷ್ಯಾದಿಂದ ಮಹಾಕುಂಭಮೇಳಕ್ಕೆ ಬಂದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬಾ; ಇವರ ಲೈಫ್ ಜರ್ನಿಯೇ ರೋಚಕ!
ಕಿನ್ನರ ಅಖಾಡದ ಸಾಧ್ವಿಗಳು ನಿಜಕ್ಕೂ ಮಹಾಕುಂಭಮೇಳದ ಬಹುದೊಡ್ಡ ಆಕರ್ಷಣೆ ಅನಿಸಿಕೊಂಡಿದ್ದಾರೆ.. ಇನ್ನುಳಿದ 12 ಅಖಾಡದ ಸಾಧು ಸಂತ ಸಾಧ್ವಿಯರಿಗೆ ಸಿಗುವ ಎಲ್ಲಾ ಗೌರವ ಮನ್ನಣೆ ಕೂಡ ಇವರಿಗೆ ಸಿಗುತ್ತದೆ.. ಆದರೇ, ಇವರು ನೀಡುವ ಅದೊಂದೇ ಒಂದು ರೂಪಾಯಿ ಕುಬೇರರನ್ನಾಗಿ ಮಾಡೋದೇಗೆ ಅನ್ನೋದೇ ಬಹುಮುಖ್ಯ ಸಂಗತಿ.. ಅದಕ್ಕಿಂತ್ಲೂ ಮಿಗಿಲಾಗಿ ಕಿನ್ನರ ನೀಡುವ ನಾಣ್ಯದ ರಹಸ್ಯ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ