/newsfirstlive-kannada/media/post_attachments/wp-content/uploads/2024/08/Lineman.jpg)
ಬಾಗಲಕೋಟೆ: ವಿದ್ಯುತ್ ಲೈನ್ ಸರಿಪಡಿಸುವ ವೇಳೆ ಅವಘಡ ಸಂಭವಿಸಿ ಲೈನ್ ಮೆನ್ ಕಂಬದಲ್ಲಿಯೇ ನೇತಾಡಿದ ಭಯಾನಕ ಘಟನೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮದಲಮಟ್ಟಿ ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಹಿರೇಮಠ (30) ವಿದ್ಯುತ್ ಪ್ರವಹಿಸಿದ ಕಾರಣ ಕಂಬದಲ್ಲಿಯೇ ಬಾಕಿಯಾಗಿದ್ದಾನೆ.
ಕಂಬದಲ್ಲಿ ಪ್ರವೀಣ್ ನರಳಾಟವನ್ನು ಕಂಡ ಗ್ರಾಮಸ್ಥರು ತಕ್ಷಣ ಹೆಸ್ಕಾಂ ಕಚೇರಿ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಲೈನ್ ಮೆನ್ ಜೀವ ಉಳಿದಿದೆ.
ಇದನ್ನೂ ಓದಿ: 10 ವರ್ಷವಿದ್ದಾಗ ಅಪ್ಪನಿಗೆ ಹೃದಯಾಘಾತ, ಅದೇ ನೋವಲ್ಲಿ ಅಮ್ಮ ಸಾವು.. ಕಂಚುಗೆದ್ದ ಅಮನ್ ಕತೆಯೇ ರೋಚಕ
ಕರೆಂಟ್​ ಸ್ಥಗಿತಗೊಳಿಸಿದ ಬಳಿಕ ತಕ್ಷಣವೇ ಕಂಬದ ಮೇಲಿಂದ ಲೈನ್ ಮೆನ್ ಪ್ರವೀಣ್ ನನ್ನು ಗ್ರಾಮಸ್ಥರು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಗ್ರಾಮಸ್ಥರ ಕರೆಯಿಂದಾಗಿ ಪ್ರವೀಣ್ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಶೂಟಿಂಗ್​ ವೇಳೆ ಖ್ಯಾತ ನಟನ ತಲೆಗೆ ಗಾಯ.. ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರತಂಡ
ಸುರಕ್ಷಿತವಾಗಿ ಕೆಳಗಿಳಿಸಿದ ನಂತರ ಪ್ರವೀಣ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಪ್ರವೀಣ್​ನನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ