/newsfirstlive-kannada/media/post_attachments/wp-content/uploads/2025/07/B-SAROJA-DEVI-13.jpg)
ಕನ್ನಡ ಸಿನಿಮಾ ರಂಗದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ (woman superstar) ಬಿ.ಸರೋಜಾ ದೇವಿ ಇನ್ನು, ನೆನಪು ಮಾತ್ರ. ಇಂದು ಬೆಳಗ್ಗೆ ಅನಾರೋಗ್ಯದಿಂದ ಅವರು ಇಹಲೋಕ ತ್ಯಜಿಸಿದ್ದಾರೆ. ಸರೋಜಾ ದೇವಿ ಇಬ್ಬರು ಮಕ್ಕಳು ಹಾಗೂ ಅಕ್ಕನ ಮೊಮ್ಮಕ್ಕಳನ್ನು ಅಗಲಿದ್ದಾರೆ. ವಿಶೇಷ ಅಂದ್ರೆ ಇವರು ಅಕ್ಕನ ಮೊಮ್ಮಕ್ಕಳನ್ನ ದತ್ತು ಪಡೆದುಕೊಂಡಿದ್ದರು. ಸರೋಜಾ ದೇವಿ ಪತಿ ಶ್ರೀಹರ್ಷ 1986ರಲ್ಲಿ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ಚಂದನವನದಲ್ಲಿ ‘ಅಭಿನಯ ಸರಸ್ವತಿ’, ಕಾಲಿವುಡ್ನಲ್ಲಿ ‘ಕನ್ನಡದ ಗಿಳಿ’.. ಚತುರ್ಭಾಷಾ ತಾರೆ ಬಿ ಸರೋಜಾದೇವಿ..!
ಬಿ.ಸರೋಜಾ ದೇವಿಯ ವೈವಾಹಿಕ ಜೀವನ
ಬಿ. ಸರೋಜಾದೇವಿ 1967 ಮಾರ್ಚ್ 1ರಂದು ಶ್ರೀಹರ್ಷ ಎಂಬುವವರನ್ನ ವಿವಾಹವಾದರು. ಆ ವೇಳೆ ಸರೋಜಾ ದೇವಿ ಹಣಕಾಸಿನಲ್ಲಿ ಮತ್ತು ಆದಾಯ ತೆರಿಗೆ ತೊಂದರೆಯಾಗಿತ್ತು. ಆ ಸಮಯದಲ್ಲಿ ಪತಿ ಶ್ರೀಹರ್ಷ ಸರೋಜಾ ದೇವಿಗೆ ಸಹಾಯ ಮಾಡಿದ್ರು. ಸರೋಜಾದೇವಿಯ ಹಣಕಾಸು ವ್ಯವಹಾರವನ್ನ ಶ್ರೀಹರ್ಷ ಅವರೇ ನೋಡಿಕೊಂಡಿದ್ದರು. ಎಂಜಿನಿಯರ್ ಆಗಿದ್ದ ಶ್ರೀ ಹರ್ಷ ಅವರು ಭಾರತ್ ಎಲೆಕ್ಟ್ರಾನಿಕ್ಸ್ನಲ್ಲಿ ಕೆಲಸ ಮಾಡ್ತಿದ್ದರು. ಇವರು 1986ರಲ್ಲಿ ಪತಿ ಶ್ರೀಹರ್ಷ ಇಹಲೋಕ ತ್ಯಜಿಸಿದರು.
ಇದನ್ನೂ ಓದಿ: ಬದುಕಿನ ಕೊನೆಯವರೆಗೂ ಅಮ್ಮನಿಗೆ ಕೊಟ್ಟಿದ್ದ ಆ ಮಾತನ್ನ ಉಳಿಸಿಕೊಂಡಿದ್ದರು ಬಿ.ಸರೋಜಾ ದೇವಿ
ಪತಿ ಎಂಜಿನಿಯರ್
ಪತಿ ನಿಧನಕ್ಕೂ ಮುನ್ನ ಅಂದರೆ 1985ರಲ್ಲಿ ಕನ್ನಡದ ಚಿತ್ರ ಲೇಡಿಸ್ ಹಾಸ್ಟೆಲ್ಗೆ ಸಹಿ ಹಾಕಿದ್ದರು. ಆದರೆ, ಅವರ ಪತಿ ಅನಾರೋಗ್ಯಕ್ಕೆ ಒಳಗಾದರು. ಇದರಿಂದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟರು. 1986ರಲ್ಲಿ ಪತಿ ನಿಧನ ಹೊಂದಿದ ನಂತರ ಅವರಿಗೆ ದುಃಖದಿಂದ ಆಚೆ ಬರಲು ತುಂಬಾ ವರ್ಷಗಳು ಬೇಕಾದವು. ಒಂದು ವರ್ಷಗಳ ಕಾಲ ಕ್ಯಾಮೆರಾವನ್ನೇ ಎದುರಿಸಿರಲಿಲ್ಲ.
ಪತಿ ಹಾಗೂ ಕುಟುಂಬಸ್ಥರು ಅತಿಯಾಗಿ ಹೆಚ್ಚಿಕೊಂಡಿದ್ದ ಸರೋಜಾ ದೇವಿ, ಯಾರನ್ನೂ ಭೇಟಿ ಆಗಲಿಲ್ಲ. ಒಂದು ವರ್ಷಗಳ ಕಾಲ ಅವರು ಕ್ಯಾಮೆರಾ ಎದುರಿಸಲು ಸಾಧ್ಯವಾಗಿರಲಿಲ್ಲ. ಆದರೆ ಕೆಲವು ಸಿನಿಮಾಗಳಿಗೆ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ಅನಿವಾರ್ಯವಾಗಿ 1987ರಲ್ಲಿ ಚಿತ್ರೀಕರಣಕ್ಕೆ ಮರಳಿದ್ದರು.
ಇದನ್ನೂ ಓದಿ: ಬಿ.ಸರೋಜಾದೇವಿ, SM ಕೃಷ್ಣ ನಡುವೆ ಮದುವೆ ಪ್ರಸ್ತಾಪ.. ಆದರೆ ಸಂಬಂಧವಾಗಿ ಬದಲಾಗಲಿಲ್ಲ; ಯಾಕೆ ಗೊತ್ತಾ?
ಆದರೆ ಹೊಸ ಸಿನಿಮಾಗಳಿಗೆ ಅವರು ಸಹಿ ಮಾಡಲಿಲ್ಲ. ಬದಲಾಗಿ ಹಿಂದೆ ಸೈನ್ ಮಾಡಿದ್ದ ಸಿನಿಮಾಗಳನ್ನು ಮಾತ್ರ ಪೂರ್ಣಗೊಳಿಸಿಕೊಟ್ಟರು. ಅವುಗಳಲ್ಲಿ 1987-1990 ಅವಧಿಯಲ್ಲಿ ಬಿಡುಗಡೆಯಾದವು. ಅವುಗಳಲ್ಲಿ ಥೈಮಲ್ ಆನೈ, ಧರ್ಮ ದೇವನ್ ಸೇರಿವೆ. ನಂತರ ಸುಮಾರು ಐದು ವರ್ಷಗಳ ಕಾಲ ಚಿತ್ರರಂಗದಿಂದ ವಿರಾಮ ತೆಗೆದುಕೊಂಡಿದ್ದರು. ಕೊನೆಗೆ ಅವರ ಅಭಿಮಾನಿಗಳು, ನಿರ್ಮಾಪಕರು ಹಾಗೂ ಕೆಲವು ನಿರ್ದೇಶಕರ ಒತ್ತಾರ ಮೇರೆಗೆ ಮತ್ತೆ ಚಿತ್ರರಂಗಕ್ಕೆ ವಾಪಸ್ ಆದರು. 2019ರಲ್ಲಿ ತೆರೆ ಕಂಡ ನಟ ಸಾರ್ವಭೌಮ ಕೊನೆಯ ಸಿನಿಮವಾಗಿದೆ.
ಸರೋಜಾ ದೇವಿಗೆ ಭುವನೇಶ್ವರಿ, ಇಂದಿರಾ ಎಂಬ ಇಬ್ಬರು ಹೆಣ್ಮಕ್ಕಳಿದ್ದರು. ಗೌತಮ್ ರಾಮಚಂದ್ರನ್ ಎಂಬ ಮಗನಿದ್ದಾನೆ. ಮಗಳು ಭುವನೇಶ್ವರಿ ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿದರು. ಮಗಳ ನೆನಪಿಗಾಗಿ ಸರೋಜಾ ದೇವಿ ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ಭುವನೇಶ್ವರಿ ಪ್ರಶಸ್ತಿ ನೀಡುತ್ತ ಬಂದಿದ್ದರು.
ಇದನ್ನೂ ಓದಿ: ಬಿ.ಸರೋಜಾದೇವಿ, SM ಕೃಷ್ಣ ನಡುವೆ ಮದುವೆ ಪ್ರಸ್ತಾಪ.. ಆದರೆ ಸಂಬಂಧವಾಗಿ ಬದಲಾಗಲಿಲ್ಲ; ಯಾಕೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ