newsfirstkannada.com

ಅಪ್ರಾಪ್ತರಿಬ್ಬರ ಪ್ರೇಮ ಪ್ರಕರಣ ಆತ್ಮಹತ್ಯೆಯಲ್ಲಿ ಅಂತ್ಯ.. ರಾಜೀಸಂಧಾನ ಹೆಸರಿನಲ್ಲಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ

Share :

Published March 19, 2024 at 7:38am

Update March 19, 2024 at 7:55am

    ಪ್ರೀತಿಸಿ ಕೇರಳಕ್ಕೆ ಪರಾರಿಯಾಗಿದ್ದ ಅಪ್ರಾಪ್ತರು

    ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಎಂದ ಹುಡುಗಿ ಮನೆಯವ್ರು

    ಮಗನ ಸಾವಿಗೆ ನ್ಯಾಯ ಸಿಗಲು ಹೋರಾಡುತ್ತಿರುವ ತಂದೆ-ತಾಯಿ

ಆ ಹುಡುಗನ ಮುಖದ ಮೇಲೆ ಇನ್ನೂ ಸರಿಯಾಗಿ ಮೀಸೆ ಚಿಗುರಿರಲಿಲ್ಲಾ. ಅದರೂ ಪ್ರೀತಿ, ಪ್ರೇಮಾ, ಪ್ರಣಯ ಎಂದು ಕಾಲೇಜಿಗೆ ಚಕ್ಕರ್ ಹಾಕಿ ಹುಡುಗಿ ಹಿಂದೆ ಸುತ್ತಾಡುತ್ತಿದ್ದ. ಇಷ್ಟೇ ಮಾಡಿ ಸುಮ್ಮನ್ನೇ ಇದ್ದಿದ್ದರೆ ಜೀವಂತವಾಗಿ ಇರುತ್ತಿದ್ದನೇನೋ ಗೊತ್ತಿಲ್ಲಾ. ಆದರೆ ಪ್ರೀತಿಸಿದ ಹುಡುಗಿ ಜೊತೆ ಮನೆ ಬಿಟ್ಟು ಕೆರಳಕ್ಕೆ ಪರಾರಿಯಾಗಿದ್ದ. ಒಂಬತ್ತು ತಿಂಗಳು ಹೊತ್ತು ಹೊತ್ತವರನ್ನು ಬಿಟ್ಟು ಹುಡುಗಿ ಹಿಂದೆ ಹೋದವನು ಹೆಣವಾಗಿ ಹೋಗಿದ್ದಾನೆ.

ಮನ ನೊಂದ ಹುಡುಗ ಆತ್ಮಹತ್ಯೆಗೆ ಶರಣು

ಒಂದಡೆ ಬಾಳಿ ಬದಕಬೇಕಾಗಿದ್ದ ಕರಳು ಬಳ್ಳಿಯನ್ನು ಕಳೆದುಕೊಂಡು ಬಿಕ್ಕಿ, ಬಿಕ್ಕಿ ಅಳುತ್ತಿರುವ ಹೆತ್ತವರು. ಇನ್ನೊಂದಡೆ ತಂಡೋಪ ತಂಡವಾಗಿ ಬಂದು ಹೆಣವಾಗಿ ಮಲಗಿರುವ ಹುಡುಗನ ಕಂಡು ಮರಮರ ಮರಗುತ್ತಿರುವ ಗ್ರಾಮಸ್ಥರು ಈ ಎಲ್ಲ ದೃಶ್ಯಾವಳಿಗಳಿಗೆ ಸಾಕ್ಷಿಯಾಗಿದ್ದು ಹಾವೇರಿ ಜಿಲ್ಲೆ ಸವಣೂರು ಠಾಣಾ ವ್ಯಾಪ್ತಿಯ ಗ್ರಾಮೊಂದು. ಅಪ್ರಾಪ್ತ ಬಾಲಕ ನೋರ್ವ ಅಪ್ರಾಪ್ತ ಬಾಲಕಿ ಜೊತೆ ಪ್ರೀತಿ ಮಾಡಿ ಕೇರಳಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಲು ಮುಂದಾಗಿರುತ್ತಾನೆ, ಆಗ ಹುಡುಗಿ ಮನೆಯವರು ಹುಡುಗನ ಮನೆಯವರಿಗೆ ನಿಮ್ಮ ಮಗ ನಮ್ಮ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆ ಕರೆದು ತಂದು ನಮಗೆ ಒಪ್ಪಿಸಿ ಇಲ್ಲವಾದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಹೇಳಿರುತ್ತಾರೆ. ಆಗ ಹೆತ್ತವರು ಮಗನ್ನನ್ನು ಹುಡುಕಿ ಬುದ್ದಿ ಹೇಳಿ ಅವರ ಮಗಳನ್ನು ಅವರ ಮನೆಗೆ ಕಳಿಸಿರುತ್ತಾರೆ. ಇಷ್ಟಕ್ಕೆ ಸುಮ್ಮನಾಗಿದ್ರೆ ಈ ಪ್ರಕರಣ ಸುಖಾಂತ್ಯ ಕಾಣುತ್ತಿತ್ತು. ಆದರೆ ದ್ವೇಷ ಮತ್ತು ಹಣದಾಸೆಯಿಂದ ಪ್ರಕರಣ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಆತ್ಮಹತ್ಯೆಗೆ ಪ್ರಮುಖ ಕಾರಣ ವಕೀಲರು ಮತ್ತು ಪೊಲೀಸರು ಹಾಗೂ ಗ್ರಾಮದ ಮುಖಂಡರು ರಾಜೀಪಂಚಾಯಿತಿ ಹೆಸರಲ್ಲಿ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿರುವಿದೇ ಕಾರಣ ರಂದು ಹುಡುಗನ ಕಡೆಯವರು ಆರೋಪ ಮಾಡುತ್ತಿದ್ದಾರೆ.

ಈ ಘಟನೆ ನಡೆದು ನಾಲ್ಕು ದಿನ ಗತಿಸಿದರು ಆರೋಪಿಗಳನ್ನು ಬಂಧಿಸದ ಹಿನ್ನಲೆ ಇಂದು ಕುಟುಂಬಸ್ಥರು ತಮ್ಮ ಮಗನ ಸಾವಿಗೆ ನ್ಯಾಯ ಸಿಗುವಂತೆ ಮಾಡಲು ಒತ್ತಾಯಿಸಿದ್ದಾರೆ. ಫೋಕ್ಸೋ ಕೇಸ್ ಮಾಡುವುದಾಗಿ ಹೆದರಿಸಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡುವ ಕಿರಾತಕರಿಗೆ ಶಿಕ್ಷೆ ಕೊಡಿಸಿ ಎಂದು ಒತ್ತಾಯಿಸಿದ್ದಾರೆ. ಈ ನೊಂದ ಕುಟುಂಬಕ್ಕೆ ಹಾವೇರಿ ಕೆಲ ಸಂಘಟನೆಗಳು ಕೈ ಜೋಡಿಸಿವೆ ಬೇಗನೆ ಆರೋಪಿಗಳನ್ನು ಬಂಧಿಸದೆ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಮಾಡಬಾರದ ವಯಸ್ಸಿನಲ್ಲಿ ಆಡಬಾರದ ಆಟವನ್ನು ಆಡಿದರೆ, ಆಗಬಾರದ್ದೇ ಆಗುತ್ತೆ ಎನ್ನಲು ಈ ಪ್ರಕರಣ ಸಾಕ್ಷಿ. ಈ ಸ್ಟೋರಿ ನೋಡಿಯಾದರು ಕಾಲೇಜು ವಿದ್ಯಾರ್ಥಿಗಳು ಸರಿ ದಾರಿಯಲ್ಲಿ ನಡೆಯಲಿ ಎನ್ನುವುದು ನಮ್ಮ ಆಶ್ರಯ. ಜೊತೆಗೆ ಹೆಣ್ಣುಮಕ್ಕಳುಗೆ ರಕ್ಷಣೆಗೆ ಇದ್ದ ಕಾಯ್ದೆಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವ ದುರುಳರಿಗೆ ಶಿಕ್ಷೆಯಾಗಲೇ ಬೇಕು ಎನ್ನುವುದು ಜನರ ಒತ್ತಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ರಾಪ್ತರಿಬ್ಬರ ಪ್ರೇಮ ಪ್ರಕರಣ ಆತ್ಮಹತ್ಯೆಯಲ್ಲಿ ಅಂತ್ಯ.. ರಾಜೀಸಂಧಾನ ಹೆಸರಿನಲ್ಲಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ

https://newsfirstlive.com/wp-content/uploads/2024/03/Prashanta.jpg

Load More