/newsfirstlive-kannada/media/post_attachments/wp-content/uploads/2025/03/MICROPHONE.jpg)
ಇವತ್ತು ಎಲ್ಲರ ಬಳಿಯೂ ಫೋನ್ ಇದೆ! ಈ ಫೋನ್ ತಯಾರಕರು ಎರಡು ಮೈಕ್ರೊಫೋನ್‌ಗಳನ್ನು ಇಟ್ಟಿರ್ತಾರೆ. ಇದು ಯಾಕೆ ಗೊತ್ತಾ?
ಮೈಕ್ರೊಫೋನ್‌ಗಳು ಎಲ್ಲೆಲ್ಲಿ ಇರುತ್ತೆ..?
ಒಂದು ಮೈಕ್ರೊಫೋನ್ ಫೋನಿನ ಕೆಳಭಾಗದಲ್ಲಿ ಮತ್ತು ಇನ್ನೊಂದು ಮೇಲ್ಭಾಗದಲ್ಲಿ ಇರುತ್ತದೆ. ಅಂದರೆ ನೀವು ಮಾತನಾಡುವಾಗ ಒಂದು ಮೈಕ್ ನಿಮ್ಮ ಬಾಯಿ ಬಳಿಯಿದ್ದರೆ, ಇನ್ನೊಂದು ಕಿವಿಯ ಬಳಿ ಇರುತ್ತದೆ. ಫೋನಿನ ಕೆಳಭಾಗದಲ್ಲಿರುವ ಮೈಕ್ ಅನ್ನು ಮೇನ್ ಮೈಕ್ರೊಫೋನ್ (main microphone) ಎಂದು ಕರೆಯಲಾಗುತ್ತದೆ. ಮೇಲ್ಭಾಗದಲ್ಲಿರುವ ಮೈಕ್ ಅನ್ನು ದ್ವಿತೀಯ ಮೈಕ್ರೊಫೋನ್ (secondary microphone) ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಹೊಸ ಜೆರ್ಸಿ ಬಿಡುಗಡೆ ಮಾಡಿದ RCB; ಅಭಿಮಾನಿಗಳು ಎಲ್ಲಿ ಖರೀದಿ ಮಾಡಬಹುದು..?
2 ಮೈಕ್ರೋಫೋನ್‌ಗಳ ಕಾರ್ಯ ಏನು?
ಮೈಕ್ರೊಫೋನ್‌ನ ಮೂಲ ಕಾರ್ಯವೆಂದರೆ ಮುಂದೆ ಇರುವ ವ್ಯಕ್ತಿಗೆ ನಿಮ್ಮ ಧ್ವನಿ ಕೇಳುವಂತೆ ಮಾಡುವುದು. ಎರಡನೇ ಮೈಕ್, ನಿಮ್ಮ ಸುತ್ತಲಿನ ಶಬ್ದದ ವಿರುದ್ಧ ಧ್ವನಿ ತರಂಗವನ್ನು ಉತ್ಪಾದಿಸುತ್ತದೆ. ಅಂದರೆ, ನಿಮಗೆ ಕರೆ ಬಂದಾಗ ಫೋನ್ ಸುತ್ತಲಿನ ಶಬ್ದವನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ. ಮುಖ್ಯ ಮೈಕ್ರೊಫೋನ್ ಪ್ರಾಥಮಿಕ ಆಡಿಯೊ ಇನ್‌ಪುಟ್ ಸಾಧನವಾಗಿದ್ದರೆ, ಸಹಾಯಕ ಮೈಕ್ರೊಫೋನ್ ಹೆಚ್ಚುವರಿ ಆಡಿಯೊ ಇನ್‌ಪುಟ್ ನೀಡುತ್ತದೆ.
ಒಂದೇ ಮೈಕ್ ಸಾಕಾಗಲ್ವಾ?
ಎಲ್ಲದಕ್ಕೂ ಒಂದು ಕಾರಣವಿದೆ. ಕರೆಗಳ ಬಂದಾಗ ಕಳಪೆ ಗುಣಮಟ್ಟದ ಅನುಭವ ತಪ್ಪಿಸಲು ಫೋನ್ ತಯಾರಕರು 2 ಮೈಕ್ರೊಫೋನ್‌ಗಳ ವ್ಯವಸ್ಥೆ ಮಾಡಿರ್ತಾರೆ. ಎರಡನೇ ಮೈಕ್ರೋ ಫೋನ್, ನಿಮ್ಮ ಸುತ್ತಲಿನ ಶಬ್ದವು ‘ನಿಮ್ಮ ಕರೆ ಅನುಭವ’ವನ್ನು ಹಾಳು ಮಾಡದಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: KL ರಾಹುಲ್ ಐಪಿಎಲ್ನ ಆರಂಭಿಕ ಪಂದ್ಯಗಳನ್ನ ಆಡೋದು ಡೌಟ್.. ಕಾರಣ ಏನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ