newsfirstkannada.com

ಬೆಂಗಳೂರಲ್ಲಿ 19ನೇ ಮಹಡಿ ಮೇಲಿಂದ ಹಾರಿದ ವ್ಯಕ್ತಿಯ ಗುರುತು ಪತ್ತೆ.. ಅಸಲಿಗೆ ಆಗಿದ್ದೇನು?

Share :

Published April 8, 2024 at 4:19pm

  ನಗರದ ರೇಸ್‌ ಕೋರ್ಸ್ ರಸ್ತೆಯ ರಿನೈಸಾನ್ಸ್ ಹೋಟೆಲ್‌ನಲ್ಲಿ ದುರಂತ

  ಈ ಹಿಂದೆಯೂ ಸಹ‌ ಸಾಕಷ್ಟು ಬಾರಿ ಇದೇ ಹೋಟೆಲ್‌ಗೆ ಭೇಟಿ ನೀಡಿದ್ದ

  ಬ್ಯುಸಿನೆಸ್ ಉದ್ದೇಶದಿಂದ ಹೋಟೆಲ್‌ಗೆ ಬಂದು ಚೆಕ್ ಇನ್ ಮಾಡಿದ್ದ

ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್‌ನ 19ನೇ ಫ್ಲೋರ್‌ನಿಂದ ಜಿಗಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಗರದ ರೇಸ್‌ ಕೋರ್ಸ್ ರಸ್ತೆಯ ರಿನೈಸಾನ್ಸ್ ಹೋಟೆಲ್‌ನಲ್ಲಿ ಈ ದುರಂತ ನಡೆದಿದೆ.

ಹೋಟೆಲ್ ಮೇಲಿಂದ ಹಾರಿ ಪ್ರಾಣ ಬಿಟ್ಟ ವ್ಯಕ್ತಿಯನ್ನು ತಮಿಳುನಾಡು ಮೂಲದ ಶರಣ್ (28) ಎಂದು ಗುರುತಿಸಲಾಗಿದೆ. ಶರಣ್‌, ಈ ಹಿಂದೆಯೂ ಸಹ‌ ಸಾಕಷ್ಟು ಬಾರಿ ಇದೇ ಹೋಟೆಲ್‌ಗೆ ಭೇಟಿ ನೀಡಿದ್ದ.

ಕಳೆದ ಶನಿವಾರ ಕೂಡ ಶರಣ್ ಅವರು ಬ್ಯುಸಿನೆಸ್ ಉದ್ದೇಶದಿಂದ ಹೋಟೆಲ್‌ಗೆ ಬಂದು ಚೆಕ್ ಇನ್ ಮಾಡಿದ್ದ. ಇಂದು ಮಧ್ಯಾಹ್ನ 2:15ರ ಸುಮಾರಿಗೆ ಶರಣ್‌ 19ನೇ ಫ್ಲೋರ್‌ನಿಂದ ಕೆಳಗೆ ಹಾರಿದ್ದಾನೆ.

ಇದನ್ನೂ ಓದಿ: 19ನೇ ಮಹಡಿ ಮೇಲಿಂದ ಜಿಗಿದ ವ್ಯಕ್ತಿ.. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ದುರಂತ

ಹೋಟೆಲ್ ಮೇಲಿಂದ ಜಿಗಿಯುವುದಕ್ಕೂ ಮುಂಚೆ ಶರಣ್‌, ಸುಮಾರು 20 ನಿಮಿಷಗಳಿಂದಲೂ ಬಾಲ್ಕನಿಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಈತನನ್ನು ನೋಡಿದ ಜನರು ತಕ್ಷಣವೇ ಹೋಟೆಲ್‌ನ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದರು. 19ನೇ ಮಹಡಿಯ ಬಾಲ್ಕನಿಗೆ ಭದ್ರತಾ ಸಿಬ್ಬಂದಿ ತೆರಳುವಷ್ಟರಲ್ಲಿ ಶರಣ್‌ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣಾ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ 19ನೇ ಮಹಡಿ ಮೇಲಿಂದ ಹಾರಿದ ವ್ಯಕ್ತಿಯ ಗುರುತು ಪತ್ತೆ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/Bangalore-Man-Death.jpg

Load More