newsfirstkannada.com

ಯುಗಾದಿ ಹಬ್ಬಕ್ಕೆ ಮಾಂಸದ ಚೀಟಿ.. ಸಾವಿರಾರು ಜನರಿಗೆ ಪಂಗನಾಮ ಹಾಕಿದ ಪುಟ್ಟಸ್ವಾಮಿ ಎಸ್ಕೇಪ್‌!

Share :

Published March 28, 2024 at 9:46pm

  4 ರಿಂದ 5 ಸಾವಿರ ಹಣ ಪಡೆದುಕೊಂಡಿದ್ದ ವಂಚಕ ಪುಟ್ಟಸ್ವಾಮಿ

  ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

  ವಿಚಾರ ತಿಳಿಯುತ್ತಿದ್ದಂತೆ ಚೀಟಿ ಹಾಕಿದ್ದ ಸಾವಿರಾರು ಜನ ಕಂಗಾಲು

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆ ಗುಡ್ಡೆ ಮಾಂಸಕ್ಕಾಗಿ ಚೀಟಿ ಹಾಕಿದ್ದ ಸಾವಿರಾರು ಜನ ಮೋಸ ಹೋಗಿರೋ ಘಟನೆ ಬೆಳಕಿಗೆ ಬಂದಿದೆ. ಯುಗಾದಿ ಹಬ್ಬದ ಮಾಂಸದ ಚೀಟಿ ಹಾಕಿದವರಿಗೆ ಪಂಗನಾಮ ಹಾಕಿ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಮನೆಯಿಂದ ಎಸ್ಕೇಪ್​ ಆಗಿದ್ದಾನೆ. ಈ ಘಟನೆ ಗಿರಿನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಒಂದು ವಾರ ಭೀಕರ ಬಿಸಿಲು; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

ಪುಟ್ಟಸ್ವಾಮಿ ಎಂಬಾತ ಕಳೆದ ಎರಡು ವರ್ಷಗಳಿಂದ ಯುಗಾದಿ ಚೀಟಿ ನಡೆಸುತ್ತಿದ್ದ. ಈ ಬಾರಿ ಚೀಟಿ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಪ್ರತಿಯೊಬ್ಬರ ಬಳಿ 4 ರಿಂದ 5 ಸಾವಿರ ಹಣ ಪಡೆದುಕೊಂಡಿದ್ದ. ಯುಗಾದಿ ಹಬ್ಬಕ್ಕೆ ದುಡ್ಡು ಒಂದೇ ಸರಿ ಹೊಂದಿಸೋಕೆ ಆಗಲ್ಲ ಅಂತ ಚೀಟಿ ಸಾಕಷ್ಟು ಜನರು ಚೀಟಿ ಹಾಕಿದ್ದರು. ಇನ್ನೇನು ಯುಗಾದಿ ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಮೋಸ ಮಾಡಿ ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಮೋಸ ಹೋದವರೆಲ್ಲ ಆತನ ಮನೆ ಮುಂದೆ ಜಮಾಯಿಸಿದ್ದಾರೆ. ಚೀಟಿ ಹಾಕಿದ್ದ ಜನರಿಗೆ ಈಗ ದಿಕ್ಕೇ ತೋಚದಂತೆ ಆಗಿದೆ. ಈ ಸಂಬಂಧ ಬ್ಯಾಟರರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುಗಾದಿ ಹಬ್ಬಕ್ಕೆ ಮಾಂಸದ ಚೀಟಿ.. ಸಾವಿರಾರು ಜನರಿಗೆ ಪಂಗನಾಮ ಹಾಕಿದ ಪುಟ್ಟಸ್ವಾಮಿ ಎಸ್ಕೇಪ್‌!

https://newsfirstlive.com/wp-content/uploads/2024/03/chiti.jpg

Load More