newsfirstkannada.com

ನಾನ್​ವೆಜ್ ಪ್ರಿಯರಿಗೆ ಮತ್ತೊಂದು ಶಾಕ್.. ಚಿಕನ್ ಶವರ್ಮಾದಲ್ಲಿ ಆಘಾತಕಾರಿ ಅಂಶ ಬಯಲು; ಏನದು?

Share :

Published June 30, 2024 at 4:42pm

  ಗೋಬಿ ಮಂಚೂರಿ, ಕಬಾಬ್, ಆಯ್ತು ಈಗ ಶವರ್ಮಾಗೆ ಕಂಟಕ

  ಶೀಘ್ರದಲ್ಲೇ ಬ್ಯಾನ್​ ಆಗುತ್ತಾ ನಾನ್​ ವೆಜ್​ ಪ್ರಿಯರ ಶವರ್ಮಾ.?

  17 ಮಾದರಿಗಳಲ್ಲಿ ಶವರ್ಮಾ ಪರಿಶೀಲಿಸಿದ ಆಹಾರ ಇಲಾಖೆ

ಈಗಂತೂ ಸಾಕಷ್ಟೂ ಜನರು ಬೀದಿ ಬದಿಯ ಆಹಾರವನ್ನು ಸೇವಿಸುವುದು, ಜಂಕ್‌ಫುಡ್‌ಗಳನ್ನು ಹೆಚ್ಚಾಗಿ ತಿನ್ನುತ್ತಿದ್ದಾರೆ. ಈ ಬಗ್ಗೆ ವೈದ್ಯರು ಆರೋಗ್ಯಕ್ಕೆ ಹಾನಿಕರ ಎಂದು ಹೇಳುತ್ತಲೇ ಇರುತ್ತಾರೆ. ಆದರೂ, ಬಾಯಿಚಪಲ ತಾಳದೆ ತುಂಬಾ ಜನ ರೋಡ್‌ ಸೈಡ್‌ ತಿಂಡಿಗಳನ್ನು ಸೇವಿಸುತ್ತಾರೆ.

ಇದನ್ನೂ ಓದಿ: ಪಾನಿಪುರಿ ಪ್ರಿಯರೇ ಎಚ್ಚರ.. ಆಹಾರ ಸುರಕ್ಷತಾ ಇಲಾಖೆ ಟೆಸ್ಟ್​ನಲ್ಲಿ ಆಘಾತಕಾರಿ ಅಂಶ ಬಯಲು; ಏನದು?

ಮೊನ್ನೆ ಮೊನ್ನೆಯಷ್ಟೇ ಗೋಬಿ, ಕಬಾಬ್​ಗೆ ಹಾಕುವ ಕಲರ್​​ಗಳನ್ನ ಬ್ಯಾನ್ ಮಾಡಿದ ಬೆನ್ನಲ್ಲೇ ಚಿನಕ್​ ಶವರ್ಮಾಗೆ ಕಂಟಕ ಎದುರಾಗಿದೆ. ಹೌದು, ಈ ಹಿಂದೆ ಕೇರಳದಲ್ಲಿ ಚಿಕನ್​​ ಶವರ್ಮಾ ತಿಂದು ಸಾಕಷ್ಟು ಜನರ ಸಾವನ್ನಪ್ಪಿದ್ದರು. ಹೀಗಾಗಿ ಆಹಾರ ಸುರಕ್ಷತೆ ಇಲಾಖೆಯು ಚಿನಕ್​ ಶವರ್ಮಾದ ಗುಣಮಟ್ಟ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ತುಮಕೂರು, ಬಳ್ಳಾರಿ ಸೇರಿದಂತೆ ಹಲವೆಡೆ ಶವರ್ಮಾ ಪರೀಕ್ಷೆ ನಡೆಸಲಾಗಿದೆ. ಪರಿಶೀಲನೆ ನಡೆಸಿದ ಚಿಕನ್​​ ಶವರ್ಮಾದಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಪತ್ತೆಯಾಗಿದೆ.

ಪರಿಶೀಲನಾ ವರದಿ ಹೇಳಿದ್ದೇನು?

ಒಂದಲ್ಲಾ, ಎರಡಲ್ಲಾ ಒಟ್ಟು 17 ಮಾದರಿಗಳಲ್ಲಿ ಚಿಕನ್ ಶವರ್ಮಾವನ್ನು ಪರಿಶೀಲನೆ ನಡೆಸಿದ್ದಾರೆ. 9 ಮಾದರಿ ಸುರಕ್ಷಿತವಾಗಿದ್ದು, 8 ಮಾದರಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್ ಶವರ್ಮಾದಲ್ಲಿ ಪತ್ತೆಯಾಗಿದೆ. ಚಿಕನ್ ಶವರ್ಮಾ ತಯಾರಿಕೆಯಲ್ಲಿ ನೈಮರ್ಲ್ಯದ ಕೊರತೆ ಇದೆಯಂತೆ. ನೈರ್ಮಲ್ಯದ ಕೊರತೆ, ದೀರ್ಘಕಾಲದವರೆಗೆ ಶೇಖರಣೆ ಮಾಡಿದ್ದರಿಂದ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ ಅಸುರಕ್ಷಿತ ಅಂತ ವರದಿ ಮೂಲಕ ತಿಳಿದು ಬಂದಿದೆ. ಆಹಾರ ತಯಾರಿಕೆಯಲ್ಲಿ ಲೋಪದೋಷ ಕಂಡುಬಂದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಪ್ರಕಟಣೆ ತಿಳಿಸಿದೆ. ಹೀಗಾಗಿ ರಾಜ್ಯದಲ್ಲಿ ಶವರ್ಮಾ ಶೀಘ್ರದಲ್ಲೇ ಬ್ಯಾನ್ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನ್​ವೆಜ್ ಪ್ರಿಯರಿಗೆ ಮತ್ತೊಂದು ಶಾಕ್.. ಚಿಕನ್ ಶವರ್ಮಾದಲ್ಲಿ ಆಘಾತಕಾರಿ ಅಂಶ ಬಯಲು; ಏನದು?

https://newsfirstlive.com/wp-content/uploads/2024/06/chicken-shawarma1.jpg

Load More