MBA ಓದೋರಿಗೆ ಆಘಾತಕಾರಿ ಸುದ್ದಿ.. ಹಠಾತ್ ಬೇಡಿಕೆ ಕಳೆದುಕೊಂಡಿದ್ದೇಕೆ ಈ ಕೋರ್ಸ್​..?

author-image
Ganesh
Updated On
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ನಡೆಸಬೇಕು.. ಉದ್ಯೋಗಾಕಾಂಕ್ಷಿಗಳು ಏನೇನು ಮಾಡಬೇಕು?
Advertisment
  • MBA ಪದವೀಧರರ ನಿರುದ್ಯೋಗ ಯಾವ ಪ್ರಮಾಣದಲ್ಲಿದೆ?
  • ಭಾರತ ಮಾತ್ರವಲ್ಲ, ವಿದೇಶದಲ್ಲಿ ಓದಿದರೂ ಕೆಲಸ ಸಿಗ್ತಿಲ್ಲ
  • ವಿದೇಶದಲ್ಲಿ MBA ಕೋರ್ಸ್​ ಕನಸು ಹೊಂದಿರೋರು ಓದಲೇಬೇಕು

ಒಂದು ಕಾಲದಲ್ಲಿ ಎಂಬಿಎ ಕ್ವಾಲಿಫಿಕೇಶನ್ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್​ ಇತ್ತು. ಫ್ರೆಶ್ ಗ್ರಾಜುಯೇಟ್ಸ್​​ ಮಾತ್ರವಲ್ಲ ಅನುಭವಿ ವೃತ್ತಿಪರರು ಈ ಪೋಸ್ಟ್‌ ಗ್ರಾಜುಯೇಟ್ ಡಿಪ್ಲೊಮ ಇನ್ ಮ್ಯಾನೇಜ್ಮೆಂಟ್‌ ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಿದ್ದ ಕಾರಣ ಡಿಮ್ಯಾಂಡ್​​ ಹೆಚ್ಚಾಗಿತ್ತು.

ಯಾವುದೇ ಪದವಿ ಓದಿದ್ರೂ ಅಭ್ಯರ್ಥಿಗಳು ಎಂಬಿಎ ಕೋರ್ಸ್‌ ತೆಗೆದುಕೊಳ್ಳಬಹುದು. ಎಂಬಿಎ ಕೋರ್ಸ್‌ ಎರಡು ವರ್ಷಗಳದ್ದಾಗಿದ್ದು, ಇದರಲ್ಲಿ ಹಲವು ಸ್ಪೆಷಿಯಲೈಸೇಷನ್‌ ಆಯ್ಕೆಗಳಿವೆ. ಆಫರ್‌ ಮಾಡಲು ಟಾಪ್‌ ರೇಟೆಡ್ ಅಕಾಡೆಮಿಕ್ ಸಂಸ್ಥೆಗಳು ಭಾರತದಲ್ಲಿವೆ. ಹೀಗಾಗಿ ವಿದ್ಯಾರ್ಥಿಗಳು ಇಲ್ಲಿ MBA (ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್), MBM (ಮಾಸ್ಟರ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್), MMS (ಮಾಸ್ಟರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್), PGDM (ಪೋಸ್ಟ್‌ಗ್ರಾಜುಯೇಟ್ ಡಿಪ್ಲೊಮ ಇನ್‌ ಮ್ಯಾನೇಜ್ಮೆಂಟ್) ಹೀಗೆ ಹಲವು ಮ್ಯಾನೇಜ್ಮೆಂಟ್ ಸಂಬಂಧಿತ ಕೋರ್ಸ್​ಗಳನ್ನು ಕಲಿಯುತ್ತಾರೆ. ಅದರಲ್ಲೂ ಇನ್ನೂ ಕೆಲವರು ವಿದೇಶದಲ್ಲಿ ಎಂಬಿಎ ಮಾಡಲು ಹೋಗುತ್ತಾರೆ. ಅಷ್ಟರಮಟ್ಟಿಗೆ ಎಂಬಿಎಗೆ ಕ್ರೇಜ್​ ಇದೆ.

ಇದನ್ನೂ ಓದಿ: ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಬಿಗ್​ ಶಾಕ್​.. ಇಂಟರ್ವ್ಯೂಗೂ ಎಂಟ್ರಿ ಕೊಟ್ಟ AI ತಂತ್ರಜ್ಞಾನ

ಹಾರ್ವರ್ಡ್​ ಯೂನಿವರ್ಸಿಟಿ ಕತೆಯೇ ಹೀಗಿದೆ..

ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್​ ಯೂನಿವರ್ಸಿಟಿ. 2025ರ ಕ್ಯೂಎಸ್ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಹಾರ್ವರ್ಡ್​ ಯೂನಿವರ್ಸಿಟಿ ನಾಲ್ಕನೇ ಸ್ಥಾನದಲ್ಲಿದೆ. 100ಕ್ಕೂ ಹೆಚ್ಚು ದೇಶಗಳಿಂದ ವಿದ್ಯಾರ್ಥಿಗಳು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದಲು ಹೋಗುತ್ತಾರೆ. ಹಾರ್ವರ್ಡ್ ವಿವಿಯಲ್ಲಿ ಪ್ರತಿ ವರ್ಷ 7 ಸಾವಿರಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಡ್ಮಿಷನ್​​ ಪಡೆಯುತ್ತಾರೆ. ಇದು ಅದರ ವಿದ್ಯಾರ್ಥಿ ಸಮೂಹದ ಕಾಲು ಭಾಗಕ್ಕಿಂತ ಹೆಚ್ಚು. ಇವರಲ್ಲಿ ಹೆಚ್ಚಿನವರು 100ಕ್ಕೂ ಹೆಚ್ಚು ದೇಶಗಳಿಂದ ಬಂದಿರುವ ಪದವಿ ವಿದ್ಯಾರ್ಥಿಗಳಾಗಿದ್ದಾರೆ.

ಹಾರ್ವರ್ಡ್‌ನ ಅಧಿಕೃತ ದಾಖಲೆಗಳ ಪ್ರಕಾರ ಪ್ರತಿ ವರ್ಷ ಸುಮಾರು 1000 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಾರೆ. ಈ ವರ್ಷ ಕೂಡ 788 ಭಾರತೀಯ ವಿದ್ಯಾರ್ಥಿಗಳು ಹಾರ್ವರ್ಡ್‌ನಲ್ಲಿ ಪ್ರವೇಶ ಪಡೆದಿದ್ದಾರೆ. ಅದರಲ್ಲೂ ಎಂಬಿಎ ಓದಲು ಹೆಚ್ಚು ವಿದ್ಯಾರ್ಥಿಗಳು ಈ ಯೂನಿವರ್ಸಿಟಿ ಕಡೆ ಮುಖ ಮಾಡುತ್ತಾರೆ. ಇವರಿಗೆ ಶಾಕಿಂಗ್​ ನ್ಯೂಸ್​ ಒಂದಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದಿದ ಶೇ.23ರಷ್ಟು ಎಂಬಿಎ ಪದವೀಧರರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಅನ್ನೋ ಆತಂಕಕಾರಿ ವಿಷಯವನ್ನು ವಾಲ್​ ಸ್ಟ್ರೀಟ್​ ಜರ್ನಲ್ಸ್​​ ವರದಿ ಬಿಚ್ಚಿಟ್ಟಿದೆ.

ಎಂಬಿಎಗೆ ಯಾಕಷ್ಟು ಕಡಿಮೆ ಡಿಮ್ಯಾಂಡ್​ ಅಂತಾ ನೋಡೋದಾದ್ರೆ..!

1991ರಲ್ಲಿ ಆರ್ಥಿಕ ಉದಾರೀಕರಣಕ್ಕೆ ಚಾಲನೆ ಸಿಕ್ಕಿದ ನಂತರ ಖಾಸಗಿ ವಲಯದಲ್ಲಿ ಮಹತ್ವದ ಬದಲಾವಣೆಗಳು ಉಂಟಾದವು. ಎಂಬಿಎ ಪದವೀಧರರಿಗೆ ಬೇಡಿಕೆ ಹೆಚ್ಚತೊಡಗಿತು. ಸಾಂಪ್ರದಾಯಿಕ ಹಾಗೂ ಕೌಟುಂಬಿಕ ಒಡೆತನದ ಬಿಸಿನೆಸ್‌ಗಳು ಹೊಸ ವಿಧಾನದ ಬಿಸಿನೆಸ್‌ ಮಾದರಿಗಳನ್ನು ಅಳವಡಿಸಿಕೊಳ್ಳತೊಡಗಿದವು. ಆಗ ಎಂಬಿಎ ಪದವೀಧರರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಉದ್ಯಮ ಆರಂಭಿಸುವ ಆಸೆ ನಿಮಗಿದ್ಯಾ..? ಹಾಗಾದ್ರೆ ಬ್ಯುಸಿನೆಸ್ ಮಾಡೋ ವಿಧಾನ ತಿಳಿದುಕೊಳ್ಳಿ..!

ಜೀವನದಲ್ಲಿ ಯಶಸ್ಸಿಗೆ ಎಂಬಿಎ ಅನಿವಾರ್ಯ ಎನ್ನುವಷ್ಟರಮಟ್ಟಿಗೆ ಕ್ರೇಜ್‌ ಉಂಟಾಗಿತ್ತು. ಬಿ ಅಥವಾ ಸಿ ಗ್ರೇಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿ ಎಂಬಿಎ ಪದವಿ ಗಳಿಸಿದವರೂ ಉದ್ಯೋಗಕ್ಕೆ ಕಷ್ಟಪಡಬೇಕಾಗಿರಲಿಲ್ಲ. ಆದರೆ ಅದಾಗಿ ಎರಡು ದಶಕಗಳ ನಂತರ ಈಗ ಎಂಬಿಎ ಪದವಿ ತನ್ನ ಬೇಡಿಕೆ ಕಳೆದುಕೊಂಡಿದೆ. ಕೋವಿಡ್​ ಬಳಿಕ ಅಂತೂ ಎಂಬಿಎ ತನ್ನ ವರ್ಚಸ್ಸು ಉಳಿಸಿಕೊಂಡಿಲ್ಲ.

ಕಳೆದ 4 ವರ್ಷಗಳಿಂದ 2022ರಿಂದ ಈಚೆಗೆ ಎಂಬಿಎ ಪದವೀಧರರಲ್ಲಿ ಅರ್ಧಕ್ಕೂ ಹೆಚ್ಚು ಮಂದಿಗೆ ಕ್ಯಾಂಪಸ್‌ ಸಂದರ್ಶನಗಳಲ್ಲಿ ಕೆಲಸ ಸಿಕ್ಕಿಲ್ಲ. ವಾಲ್​ ಸ್ಟ್ರೀಟ್​ ಜರ್ನಲ್ಸ್ ರಿಪೋರ್ಟ್​ ಅಂಕಿ ಅಂಶಗಳು ಈ ವಿಷಯ ತಿಳಿಸಿದೆ. ಹಾರ್ವರ್ಡ್ ವಿವಿಯಲ್ಲಿ ಓದಿದ ಅಭ್ಯರ್ಥಿಗಳಿಗೆ ಮಿನಿಮಮ್​ ವಾರ್ಷಿಕ ಪ್ಯಾಕೇಜ್​​ ಒಂದು ಕೋಟಿ ಇತ್ತು. ಈಗ ಅಲ್ಲೂ ಓದಿದವ್ರಿಗೂ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ ಸಿಕ್ಕಿಲ್ಲ ಅನ್ನೋದು ಎಂಬಿಎ ವಲಯದಲ್ಲಿನ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಿದೆ.

ದೇಶದಲ್ಲಿ 5 ಸಾವಿರ ಇನ್‌ಸ್ಟಿಟ್ಯೂಟ್‌

ದೇಶದಲ್ಲಿ ಸುಮಾರು 5,000 ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ಗಳಿದ್ದು, ಈ ವರ್ಷ ಸುಮಾರು 2 ಲಕ್ಷ ಮಂದಿ ಎಂಬಿಎ ಉತ್ತೀರ್ಣರಾಗಿದ್ದಾರೆ. ಆತಂಕದ ಸಂಗತಿ ಏನೆಂದರೆ ಇವರಿಗೆ ಉದ್ಯೋಗ ನಿರಾಕರಣೆಗೆ ಕಾರ್ಪೊರೇಟ್‌ ವಲಯ ನೀಡುವ ಕಾರಣ ಎಂಬಿಎ ಪಠ್ಯಕ್ರಮಗಳು ಅತ್ಯಂತ ಹಳೆಯದಾಗಿರುವುದು. ಇದೇ ಕಾರಣವನ್ನೂ ಹಾರ್ವರ್ಡ್ ವಿವಿಯಲ್ಲಿ ಓದಿದವರಿಗೂ ನೀಡಲಾಗಿದೆ. ಹಾಗಾಗಿ ಈ ವರ್ಷದಿಂದ ಹಾರ್ವರ್ಡ್ ವಿವಿಯಲ್ಲಿ ಎಐ ಕಲಿಯೋದು ಪಠ್ಯಕ್ರಮದ ಭಾಗವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ 90,000 ವಿದ್ಯಾರ್ಥಿಗಳು ಫೇಲ್ ಎಂದ ತಮಿಳುನಾಡು ಸಚಿವ.. ಅನುತ್ತಿರ್ಣಕ್ಕೆ ಅಸಲಿ ಕಾರಣ ಏನು..?

AI ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಆಯ್ಕೆಯಾಗಿದೆ. ಕಂಪನಿಗಳಿಗೆ ಇದು ವೇಗ, ಶ್ರದ್ಧಾ ಮತ್ತು ವೆಚ್ಚಕಡಿತ ಎಂಬ ಮೂರೂ ಲಾಭಗಳನ್ನು ಒದಗಿಸುತ್ತಿದೆ. ಸಣ್ಣ ಕಂಪನಿಗಳು ಕೂಡ ಇತ್ತೀಚೆಗೆ ಯಾವುದೇ ಕಾರಣವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ.

ಎಲ್ಲಾ ಐಟಿ ಕಂಪನಿಗಳು ಎಐನಲ್ಲಿ ಹೆಚ್ಚು ಹೂಡಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ. ಕೃತಕ ಬುದ್ದಿಮತ್ತೆ ಬಳಕೆ ಜಾಸ್ತಿ ಮಾಡಲು ಎಲ್ಲಾ ವಿಭಾಗದ ಕೆಲಸಗಾರರ ಉದ್ಯೋಗ ಕಡಿತ ಮಾಡುತ್ತಿವೆ. ಇವು ಎಂಬಿಎ ಪದವೀಧರರ ಮೇಲೂ ಕೆಟ್ಟ ಪರಿಣಾಮ ಬಿದ್ದಿವೆ. ಎಐನಿಂದ ಇರೋ ಕೆಲಸಗಾರರನ್ನೇ ಮನೆಗೆ ಕಳಿಸುತ್ತಿರೋ ಹೊತ್ತಲ್ಲೇ ಫ್ರೆಶ್​ ಎಂಬಿಎ ಪದವೀಧರರಿಗೆ ಎಲ್ಲಿ ಉದ್ಯೋಗ ಸಿಗುತ್ತೆ? ಅನ್ನೋದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ತನಗೆ ಉಳಿಯಲು ಸರಿಯಾದ ಮನೆಯೇ ಇಲ್ಲ.. ಆದರೂ ಅಂಗನವಾಡಿಗಾಗಿ ಜಾಗ ದಾನ ಮಾಡಿದ ಅಜ್ಜಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment