ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ವಿರುದ್ಧವೇ ಭಾರೀ ಕುತಂತ್ರ.. ಮಾಟಮಂತ್ರದ ಮಸಲತ್ತು; ಅಸಲಿಗೆ ಆಗಿದ್ದೇನು?

author-image
admin
Updated On
ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ವಿರುದ್ಧವೇ ಭಾರೀ ಕುತಂತ್ರ.. ಮಾಟಮಂತ್ರದ ಮಸಲತ್ತು; ಅಸಲಿಗೆ ಆಗಿದ್ದೇನು?
Advertisment
  • ಅಗ್ನಿ ಪರೀಕ್ಷೆ ಎದುರಿಸಿದ್ದ ಮಾಲ್ಡೀವ್ಸ್ ಅಧ್ಯಕ್ಷರಿಗೆ ತಲೆನೋವಾದ ಸಚಿವೆ
  • ಮಾಲ್ಡೀವ್ಸ್‌ ಅಧ್ಯಕ್ಷ ಮೊಯಿಝು ವಿರುದ್ಧವೇ ಮಾಟ ಮಂತ್ರ ಪ್ರಯೋಗ
  • ವಾಮಾಚಾರ ಮಾಡಿ ಸಿಕ್ಕಿಬಿದ್ದವರಿಗೆ ಇಸ್ಲಾಂ ಕಾನೂನಿನಲ್ಲಿ ಕಠಿಣ ಶಿಕ್ಷೆ!

ಮಾಲ್ಡೀವ್ಸ್ ದೇಶದ ಕುತಂತ್ರ ರಾಜಕಾರಣ ಮತ್ತೊಮ್ಮೆ ಸುದ್ದಿಯಾಗಿದೆ. ಈ ಬಾರಿ ಮಾಲ್ಡೀವ್ಸ್ ನಾಯಕರು ಹೊರಗಿನವರ ವಿರುದ್ಧ ಮಸಲತ್ತು ಮಾಡಿ ಸಿಕ್ಕಿಬಿದ್ದಿಲ್ಲ. ತಮ್ಮದೇ ದೇಶದ ರಾಷ್ಟ್ರಾಧ್ಯಕ್ಷರ ವಿರುದ್ಧ ತಮ್ಮದೇ ಕ್ಯಾಬಿನೆಟ್‌ ಸದಸ್ಯೆಯೊಬ್ಬರು ಮಾಡಿರೋ ಮಾಟ ಮಂತ್ರ ಜಗತ್ತಿನಾದ್ಯಂತ ಚರ್ಚೆಯಾಗುವಂತೆ ಮಾಡಿದೆ. ಈ ವಿಚಾರ ತಿಳಿದ ಮಾಲ್ಡೀವ್ಸ್‌ ಜನರೇ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಭಾರತೀಯ ಪ್ರವಾಸಿಗರಿಲ್ಲದೆ ನಷ್ಟದ ದಾರಿಯಲ್ಲಿ ಮಾಲ್ಡೀವ್ಸ್​! ಕಳೆದ ವರ್ಷಕ್ಕೂ ಈ ವರ್ಷಕ್ಕೂ ವ್ಯತ್ಯಾಸ ಎಷ್ಟಿದೆ ಗೊತ್ತಾ?

ಇತ್ತೀಚೆಗೆ ಮಾಲ್ಡೀವ್ಸ್ ಸರ್ಕಾರ, ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಬಹಳ ದಿನಗಳ ಕಾಲ ಬಾಯ್ಕಟ್‌ನ ಅಗ್ನಿ ಪರೀಕ್ಷೆ ಎದುರಿಸಿದ ಮಾಲ್ಡೀವ್ಸ್ ಸರ್ಕಾರ ಈಗ ತಾನೇ ಚೇತರಿಸಿಕೊಳ್ಳುವ ಹಂತಕ್ಕೆ ಬಂದಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಭಾರತದ ಜೊತೆ ಸ್ನೇಹದ ಹಸ್ತವನ್ನು ಚಾಚಿದೆ.

publive-image

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝು ಎಲ್ಲವೂ ಸರಿ ಆಯ್ತು ಅಂದುಕೊಳ್ಳುವಷ್ಟರಲ್ಲೇ ಶತ್ರು ಬಗಲ್ ಮೇ ಹೈ ಅನ್ನೋ ಹಾಗೆ ಬೆಚ್ಚಿ ಬಿದ್ದಿದ್ದಾರೆ. ಮಾಲ್ಡೀವ್ಸ್‌ನ ರಾಜ್ಯ ಪರಿಸರ ಸಚಿವೆ ಫಾತಿಮತ್ ಶಮ್ನಾಜ್ ಅಲಿ ಸಲೀಂ ಅವರು ಅಧ್ಯಕ್ಷರ ವಿರುದ್ಧವೇ ವಾಮಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ.

ಮಾಟ ಮಂತ್ರ ಮಾಡಿಸಿದ ಸಚಿವೆ!
ಇದು ನಂಬಲು ಸ್ವಲ್ಪ ಕಷ್ಟವಾದ್ರೂ ನಡೆದಿರೋ ಸತ್ಯ. ಮಾಲ್ಡೀವ್ಸ್ ಸಚಿವೆ ಫಾತಿಮತ್ ಶಮ್ನಾಜ್ ಅವರು ಅಧ್ಯಕ್ಷ ಮೊಯಿಝು ವಿರುದ್ಧವೇ (black magic) ಅಂದ್ರೆ ಮಾಟ ಮಂತ್ರ ಮಾಡಿಸಿದ್ದಾರೆ. ವಾಮಾಚಾರ ಮಾಡಿದ ಆರೋಪದಲ್ಲಿ ಮಾಲ್ಡೀವ್ಸ್ ಪೊಲೀಸರು ಸಚಿವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ.

publive-image

ವಾಮಾಚಾರ ಮಾಡಿಸಲು ಕಾರಣವೇನು?
ಸಚಿವೆ ಫಾತಿಮತ್ ಶಮ್ನಾಜ್ ಮಾಜಿ ಗಂಡ ಅದಂ ರಮೀಜ್ ಅವರು ಸಹ ಮಾಲ್ಡೀವ್ಸ್ ಅಧ್ಯಕ್ಷ ಮೊಯಿಝು ಅವರ ಕೆಲಸ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೇ ತಿಂಗಳ ಹಿಂದೆ ಮೊಯಿಝು ಅವರನ್ನು ಅಮಾನತು ಮಾಡಿದ್ದರು. ಇದರ ಜೊತೆಗೆ ಫಾತಮಿತ್ ಅವರಿಗೆ ಮಾಟ ಮಂತ್ರದಲ್ಲಿ ಅಪಾರ ನಂಬಿಕೆ ಇತ್ತು. ವಾಮಾಚಾರ ಮಾಡಿಸಿದರೆ ತನಗೆ ಸದ್ಯ ಇರುವ ಕ್ಯಾಬಿನೆಟ್‌ ಖಾತೆಯ ಬದಲು ಇನ್ನೂ ಅತ್ಯುನ್ನತವಾದ ಖಾತೆಯೇ ಸಿಗುತ್ತದೆ ಅನ್ನೋ ನಂಬಿಕೆ ಇತ್ತು. ಈ ಎಲ್ಲಾ ಕಾರಣದಿಂದ ಮಾಲ್ಡೀವ್ಸ್ ಅಧ್ಯಕ್ಷರ ವಿರುದ್ಧವೇ ವಾಮಾಚಾರ ನಡೆಸಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಕ್ಷಮಿಸಿ..!! ಭಾರತೀಯರು ನಮ್ಮನ್ನು ಕ್ಷಮಿಸಬೇಕು -ಕೈಮುಗಿದ ಮಾಲ್ಡೀವ್ಸ್​ ಮಾಜಿ ಅಧ್ಯಕ್ಷ 

6 ತಿಂಗಳವರೆಗೂ ಜೈಲು ಶಿಕ್ಷೆ! 
ಅಂದ ಹಾಗೆ ಮಾಲ್ಡೀವ್ಸ್‌ನಲ್ಲಿ ವಾಮಾಚಾರ ಮಾಡುವುದು ಸರ್ವೇ ಸಾಮಾನ್ಯ. ಮಾಲ್ಡೀವ್ಸ್‌ನ ಬಹಳಷ್ಟು ಕಡೆ ವಾಮಾಚಾರ ಮಾಡುವುದು ವ್ಯಾಪಕವಾಗಿದೆ. ಆದರೆ ಈ ಮಾಟಮಂತ್ರದಲ್ಲಿ ಸಿಕ್ಕಿಬಿದ್ದರೆ ಇಸ್ಲಾಮಿಕ್ ಕಾನೂನಿನ ಪ್ರಕಾರ 6 ತಿಂಗಳವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment