/newsfirstlive-kannada/media/post_attachments/wp-content/uploads/2024/03/sadhu-1.jpg)
ಇಬ್ಬರು ವ್ಯಕ್ತಿಗಳು ಸಾಧು ಸಂತರೊಬ್ಬರಿಗೆ ಹಿಂಬದಿಯಿಂದ ಬಂದು ಹಲ್ಲೆ ನಡೆಸಿದ ಘಟನೆ ಅಲಿಗಢದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಾಹಿತಿ ಪ್ರಕಾರ, ಮಜೋಲಾ ಗ್ರಾಮದ ಗರ್ಬೀಸ್ ಮತ್ತು ರಾಜೇಶ್ ಮದ್ಯದ ಅಮಲಿನಲ್ಲಿ ಸಾಧುವಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪೆಟ್ರೋಲ್ ಪಂಪ್ನಲ್ಲಿ ನಿಂತುಕೊಂಡಿದ್ದ ಸಾಧು ಗಜರಾಜ್ ಸಿಂಗ್ ಮೇಲೆ ಹಿಂಬದಿಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ನೆಲಕ್ಕೆ ಬಿದ್ದ ಸಾಧುವಿನ ಮೇಲೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾರೆ.
ಪೆಟ್ರೋಲ್ ಪಂಪ್ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಘಟನೆಯ ಬಳಿ ಸಾಧು ಪೊಲೀಸರ ಬಳಿ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಹಲ್ಲೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
रामराज्य में साधू संतों के ऊपर हमला ?
उत्तर प्रदेश - अलीगढ़ में एक साधू के साथ मारपीट की, उसके बाद पैर पकड़कर दूर तक घसीटा, वीडियो वायरल। pic.twitter.com/TafdxtBqGU
— Rohit Tripathi journalist (@rohitt_tripathi)
रामराज्य में साधू संतों के ऊपर हमला 😢
उत्तर प्रदेश - अलीगढ़ में एक साधू के साथ मारपीट की, उसके बाद पैर पकड़कर दूर तक घसीटा, वीडियो वायरल। pic.twitter.com/TafdxtBqGU— Rohit Tripathi journalist (@rohitt_tripathi) March 30, 2024
">March 30, 2024
ಇದನ್ನೂ ಓದಿ: Video: ಕೈ ಮೇಲೆ RCB ಪ್ಲೇಯರ್ಸ್ ಹೆಸರು ಟ್ಯಾಟೂ ಹಾಕಿಸಿಕೊಂಡ ಅಪ್ಪಟ ಅಭಿಮಾನಿ!
ಗಜರಾಜ್ ಸಿಂಗ್ ಹಲವಾರು ದಿನಗಳಿಂದ ಗಂಗಿರಿ ಚೌಕ್ ಬಳಿ ಜೀವನೋಪಾಯಕ್ಕೆ ಭಿಕ್ಷೆ ಬೇಡಿ ವಾಸಿಸುತ್ತಿದ್ದರು. ಆದರೆ ಮಾರ್ಚ್ 29ರಂದು ಪೆಟ್ರೋಲ್ ಪಂಪ್ ಬಳಿ ನಿಂತಿದ್ದ ವೇಳೆ ಅವರ ಮೇಲೆ ಮದ್ಯದ ಅಮಲಿನಲ್ಲಿ ಬಂದ ರಾಜೇಶ್ ಮತ್ತು ಗಬೀಸ್ ಹಲ್ಲೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ