newsfirstkannada.com

ಜಮೀನು ವ್ಯಾಜ್ಯ.. ಅಡಿಕೆ ಗಿಡಗಳಿಗೆ ವಿಷಕಾರಿ ದ್ರಾವಣ ತುಂಬಿ ಹಾಳು ಮಾಡಿದ ಕಿಡಿಗೇಡಿಗಳು

Share :

Published February 1, 2024 at 8:22am

  ಅರ್ಧ ಎಕರೆ ಜಮೀನಿನಲ್ಲಿದ್ದ ಅಡಿಕೆ ಗಿಡಗಳಿಗೆ ಹಾನಿ

  ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿದ ಕಿಡಿಗೇಡಿಗಳು

  ಪರಿಚಯಸ್ಥರೇ ರಾಸಯನಿಕ ವಿಷ ತುಂಬಿಸಿ ವಿಕೃತಿ ಮೆರೆದಿರುವ ಶಂಕೆ

ಹಾವೇರಿ: ಅಡಿಕೆ ಗಿಡಗಳಿಗೆ ರಂಧ್ರ ಕೊರೆದು ವಿಷಕಾರಿ ದ್ರಾವಣ ತುಂಬಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಚಿಕ್ಕೌಂಶಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಯುವ ರೈತ ರಾಜೇಶ್ ಪಾಟೀಲ್​ಗೆ ಸೇರಿದ ಸುಮಾರು ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದ 130 ಅಡಿಕೆ ಗಿಡಗಳನ್ನ ಕಿಡಿಗೇಡಿಗಳು ಹಾಳು ಮಾಡಿದ್ದಾರೆ.

ಜಮೀನು ವ್ಯಾಜ್ಯದ ಹಿನ್ನೆಲೆ ಪರಿಚಯಸ್ಥರೇ ಅಡಿಕೆಗಿಡಗಳನ್ನು ಹಾಳು ಮಾಡಿರುವ ಶಂಕೆ ವ್ಯಕ್ತವಾಗಿದೆ. ರೈತ ರಾಜೇಶ್ ಪಾಟೀಲ್ ಮೂರು ದಿನ ತಿರುಪತಿ ಪ್ರವಾಸದಲ್ಲಿದ್ರು. ಹೀಗಾಗಿ, ಊರಲ್ಲಿ ರೈತ ರಾಜೇಶ್ ಇಲ್ಲ ಎಂಬುದು ಗೊತ್ತಾಗ್ತಿದ್ದಂತೆ ಕಿಡಿಗೇಡಿಗಳು ಅಡಿಕೆ ಗಿಡಗಳಿಗೆ ರಾತ್ರೋರಾತ್ರಿ ಹೋಲ್ ಮಾಡಿ ರಾಸಾಯನಿಕ ವಿಷ ತುಂಬಿಸಿ ವಿಕೃತಿ ಮೆರೆದಿದ್ದಾರೆ.

ಇನ್ನು, ರೈತ ರಾಜೇಶ್ ಪಾಟೀಲ್, ಹಾನಗಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಮೀನು ವ್ಯಾಜ್ಯ.. ಅಡಿಕೆ ಗಿಡಗಳಿಗೆ ವಿಷಕಾರಿ ದ್ರಾವಣ ತುಂಬಿ ಹಾಳು ಮಾಡಿದ ಕಿಡಿಗೇಡಿಗಳು

https://newsfirstlive.com/wp-content/uploads/2024/02/haveri-1.jpg

Load More