ಕಬ್ಬಿನ ಗದ್ದೆಗೆ ಹೋಗ್ತಿದ್ದ ಮಹಿಳೆಯರೇ ಟಾರ್ಗೆಟ್.. 9 ಕೊಲೆ ಮಾಡಿದ್ದ ವಿಕೃತ ಹಂತಕ; ಕಾರಣವೇನು?

author-image
Gopal Kulkarni
Updated On
ಕಬ್ಬಿನ ಗದ್ದೆಗೆ ಹೋಗ್ತಿದ್ದ ಮಹಿಳೆಯರೇ ಟಾರ್ಗೆಟ್.. 9 ಕೊಲೆ ಮಾಡಿದ್ದ ವಿಕೃತ ಹಂತಕ; ಕಾರಣವೇನು?
Advertisment
  • ಇಡೀ ರಾಜ್ಯದ ಪೊಲೀಸರಿಗೆ ತಲೆನೋವಾಗಿದ್ದ ಸರಣಿ ಹಂತಕ ಅರೆಸ್ಟ್
  • ಗದ್ದೆಯಲ್ಲಿ ಒಂಟಿಯಾಗಿ ಕೆಲಸ ಮಾಡುವ ಹೆಣ್ಣು ಮಕ್ಕಳೇ ಟಾರ್ಗೆಟ್​
  • ಹಂತಕನನ್ನು ಖಾಕಿ ಪಡೆ ಬಲೆಗೆ ಕೆಡವಿದ್ದೇ ಒಂದು ರಣರೋಚಕ ಕಥೆ

ಲಖನೌ: 9 ಮಹಿಳೆಯರನ್ನು ಹತ್ಯೆಗೈದ ಭಯಾನಕ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಕೊನೆಗೂ ಭೇದಿಸಿದ್ದಾರೆ. 14 ತಿಂಗಳಲ್ಲಿ 9 ಮಹಿಳೆಯರನ್ನು ಕೊಂದಿದ್ದ ಸರಣಿ ಹಂತಕನನ್ನು ಬಂಧಿಸಿದ್ದೇ ರಣರೋಚಕವಾಗಿದೆ. ಆತನ ಬ್ಯಾಗ್ರೌಂಡ್ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ 9 ಮಹಿಳೆಯರ ಹತ್ಯೆ.. ಕೊನೆಗೂ ಸಿಕ್ಕಿಬಿದ್ದ ಸೀರಿಯಲ್ ಕಿಲ್ಲರ್; ಹೇಗಿತ್ತು ಗೊತ್ತಾ ತಲಾಶ್​? 

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸರಣಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೊಂದು ವಿಕೃತ ಸರಣಿ ಹತ್ಯೆಯ ಪ್ರಕರಣ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶಾಹಿ-ಶೀಶ್‌ಗಢ ವ್ಯಾಪ್ತಿಯ ಎರಡು ಪೊಲೀಸ್ ಠಾಣೆಗಳಲ್ಲಿ 9 ಮಹಿಳೆಯರ ಸರಣಿ ಹತ್ಯೆ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿದ್ದವು. ಕಳೆದ 14 ತಿಂಗಳಿನಿಂದ ನಿಗೂಢ ಕೊಲೆಗಳನ್ನು ಭೇದಿಸಲಾಗದೇ ಪೊಲೀಸರು ಚಿಂತೆಗೀಡಾಗಿದ್ದರು. ಇದು ಯಾರೋ ವ್ಯಕ್ತಿ ಮಾಡ್ತಿರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದರು. ಕೊನೆಗೆ 300 ಪೊಲೀಸರನ್ನು ನಿಯೋಜಿಸಿ ಸರಣಿ ಹಂತಕ ಕುಲದೀಪ್​ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

publive-image

ಕುಲದೀಪ್​ನನ್ನು ಬಿಟ್ಟು ತವರಿಗೆ ತೆರಳಿದ್ದ ಪತ್ನಿ.. ಸೈಕ್​ ಆಗಿದ್ದ ಆರೋಪಿ

ಸರಣಿ ಹಂತಕ ಕುಲದೀಪ್​ ಕಿರುಕುಳ ತಾಳಲಾರದೇ ಆತನ ಪತ್ನಿ ತವರಿಗೆ ತೆರಳಿದ್ದಳು. ಪತ್ನಿ ಬಿಟ್ಟು ಹೋಗಿದ್ದಕ್ಕೆ ಸಿಟ್ಟಾಗಿದ್ದ ಕುಲದೀಪ್​ ಮಹಿಳೆಯರ ಮೇಲೆ ಕ್ರೌರ್ಯ ಎಸಗುತ್ತಿದ್ದ. ಕಬ್ಬಿನ ಗದ್ದೆಗೆ ಹೋಗುತ್ತಿದ್ದ ಮಹಿಳೆಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ. ಮಹಿಳೆಯರನ್ನು ಕಬ್ಬಿನಗದ್ದೆಗೆ ಎಳೆದೊಯ್ದು ಕೃತ್ಯ ಎಸಗುತ್ತಿದ್ದ. ಯಾವುದೇ ಶಸ್ತ್ರಾಸ್ತ್ರ ಬಳಸದೇ ಸೀರೆಯಿಂದಲೇ ಮಹಿಳೆಯರ ಕುತ್ತಿಗೆ ಬಿಗಿದು ಹತ್ಯೆ ಮಾಡುತ್ತಿದ್ದ. ಬಳಿಕ ಮಹಿಳೆಯರು ಧರಿಸಿದ್ದ ಆಭರಣ, ಬಟ್ಟೆ ಕದ್ದೊಯುತ್ತಿದ್ದ ಆದ್ರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ನೈಟ್ ​ಶಿಫ್ಟ್ ಡ್ಯೂಟಿಗೆ ಬಂದ ವೈದ್ಯೆ ರೇಪ್ & ಮರ್ಡರ್‌ ಕೇಸ್‌ಗೆ ಭಯಾನಕ ಟ್ವಿಸ್ಟ್‌; ಆಗಿದ್ದೇನು?

publive-image

ಕಬ್ಬಿನ ಗದ್ದೆಗೆ ಹೋಗುತ್ತಿದ್ದ ಒಂಟಿ ಮಹಿಳೆಯರೇ ಟಾರ್ಗೆಟ್

ಆರೋಪಿ ಕುಲದೀಪ್​​ನನ್ನು ಬಂಧಿಸಿರುವ ಪೊಲೀಸರು ಹತ್ಯೆ ನಡೆದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಇನ್ನು ಹಂತಕ ಮಹಿಳೆಯರ ದೇಹದ ಮೇಲೆ ಕುಳಿತು ಕುತ್ತಿಗೆಯಿಂದ ಬಿಗಿದು ಹತ್ಯೆ ಮಾಡುವ ಕೃತ್ಯ ರಿಹರ್ಸಲ್ ತೋರಿಸಿದ್ದಾನೆ. 25 ಕಿಮೀ ವ್ಯಾಪ್ತಿಯಲ್ಲಿ 45ರಿಂದ 55 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಕ್ರೌರ್ಯ ಎಸಗಿದ್ದ. ಇನ್ನು ರಾಷ್ಟ್ರೀಯ ಮಹಿಳಾ ಆಯೋಗ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಒಟ್ಟಾರೆ, ವಿಕೃತ ಮನುಷ್ಯ ಕ್ರೌರ್ಯ ಕಾನೂನು ಪ್ರಕಾರ ಕಠಿಣ ಶಿಕ್ಷೆ ನೀಡಬೇಕಿದೆ. ನೊಂದವರಿಗೆ ನ್ಯಾಯ ಕೊಡಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment