ಡಿವೋರ್ಸ್ ವದಂತಿಗೆ ತೆರೆ ಎಳೆದ ಬರಾಕ್ ಒಬಾಮಾ ದಂಪತಿ.. ನಗುತ್ತ ಮಾಜಿ ಅಧ್ಯಕ್ಷರು ಹೇಳಿದ್ದೇನು?

author-image
Ganesh
Updated On
ಡಿವೋರ್ಸ್ ವದಂತಿಗೆ ತೆರೆ ಎಳೆದ ಬರಾಕ್ ಒಬಾಮಾ ದಂಪತಿ.. ನಗುತ್ತ ಮಾಜಿ ಅಧ್ಯಕ್ಷರು ಹೇಳಿದ್ದೇನು?
Advertisment
  • ಇಬ್ಬರು ಇತ್ತೀಚೆಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ವದಂತಿ
  • ಗಂಡನ ಬಿಟ್ಟುಬಿಡುವ ಬಗ್ಗೆ ಒಂದು ಕ್ಷಣವೂ ಯೋಚಿಸಿಲ್ಲ-ಮಿಚೆಲ್
  • ‘ಮದುವೆಯಾದ ವ್ಯಕ್ತಿಯಿಂದಾಗಿ ನಾನು ಉತ್ತಮ ವ್ಯಕ್ತಿಯಾಗಿದ್ದೇನೆ’

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪತ್ನಿ ಮಿಚೆಲ್ ಒಬಾಮಾ (Barack Obama and Michelle Obama) ಇಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಾರೆ. ಇಬ್ಬರು ಇತ್ತೀಚೆಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ವದಂತಿಗಳು ಅಂತೆ ಕಂತೆಗಳು ಇದ್ದವು. ಇವುಗಳಿಗೆಲ್ಲಾ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಇಬ್ಬರೂ ತೆರೆ ಎಳೆದಿದ್ದಾರೆ.

ನಮ್ಮ ಮಧ್ಯೆ ಡಿವೋರ್ಸ್ ತೆಗೆದುಕೊಳ್ಳುವ ಯಾವುದೇ ಆಲೋಚನೆಯೇ ಬಂದಿಲ್ಲ ಎಂದು ಇಬ್ಬರು ಸ್ಪಷ್ಟವಾಗಿ ಹೇಳಿದ್ದಾರೆ. ನನ್ನ ಗಂಡನನ್ನು ಬಿಟ್ಟುಬಿಡುವ ಬಗ್ಗೆ ಒಂದು ಕ್ಷಣವೂ ಯೋಚಿಸಿಲ್ಲ ಎಂದು ಮಿಚೆಲ್ ಒಬಾಮಾ ಹೇಳಿದ್ದಾರೆ. ಕ್ರೇಗ್ ರಾಬಿನ್ಸನ್ ಜೊತೆ ನಡೆಸಿದ ಮಾತುಕತೆಯಲ್ಲಿ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಇಬ್ಬರೂ ಜೊತೆಯಾಗಿ ಭಾಗವಹಿಸಿ ಮಾತನಾಡಿದ್ದಾರೆ. ಜೊತೆಗೆ ಡಿವೋರ್ಸ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಲಾರ್ಡ್ಸ್​​​​ ಟೆಸ್ಟ್​ ಸೋಲಿನ ನಂತರ ಗಂಭೀರ್ ಏನ್ಮಾಡಿದ್ರು..? ಡ್ರೆಸ್ಸಿಂಗ್ ರೂಮ್​​ನ ವಿಡಿಯೋ ವೈರಲ್ -VIDEO

publive-image

‘‘ಅವಳು ನನ್ನನ್ನು ಹಿಂದಕ್ಕೆ ಕರೆದೊಯ್ದಳು! ಬರಾಕ್ ಒಬಾಮಾ ನಗುತ್ತಾ ಹೇಳಿದರು. ಇದು ಸ್ವಲ್ಪ ಸಮಯದವರೆಗೆ ಸ್ಪರ್ಶಿಸಿ ಹೋಗಿ " ಎಂಬ ಸ್ಥಿತಿ ಇದ್ದಂತೆ. ದಂಪತಿ ಮೊದಲ ಬಾರಿಗೆ ನಿರಂತರ ವಿಚ್ಛೇದನ ವದಂತಿಗಳ ಬಗ್ಗೆ ಮಾತನಾಡಿದ್ದರು.

"ನಾನು ನನ್ನ ಗಂಡನನ್ನು ಬಿಟ್ಟುಬಿಡುವ ಬಗ್ಗೆ ಯೋಚಿಸಿದ ಒಂದು ಕ್ಷಣವೂ ಇರಲಿಲ್ಲ. ನಾವು ನಿಜವಾಗಿಯೂ ಕೆಲವು ಕಠಿಣ ಸಮಯಗಳನ್ನು ಎದುರಿಸಿದ್ದೇವೆ. ನಾವು ಬಹಳಷ್ಟು ಮೋಜು, ತಮಾಷೆಯ ಕ್ಷಣಗಳನ್ನು, ಬಹಳಷ್ಟು ಸಾಹಸಗಳನ್ನು ಜೀವನದಲ್ಲಿ ಎದುರಿಸಿದ್ದೇವೆ. ನಾನು ಮದುವೆಯಾದ ವ್ಯಕ್ತಿಯಿಂದಾಗಿ ನಾನು ಉತ್ತಮ ವ್ಯಕ್ತಿಯಾಗಿದ್ದೇನೆ" ಎಂದು ಹೇಳುವ ಮೂಲಕ ಮಿಚೆಲ್ ಒಬಾಮಾ, ಡಿವೋರ್ಸ್ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.

ಟ್ರಂಪ್ ಅಧಿಕಾರ ಸ್ವೀಕಾರ ಮತ್ತು ಜಿಮ್ಮಿ ಕಾರ್ಟರ್ ಅವರ ಅಂತ್ಯಕ್ರಿಯೆ ಸೇರಿದಂತೆ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಿಚೆಲ್ ಒಬಾಮಾ ಭಾಗವಹಿಸದೇ ಇದ್ದಿದ್ದರಿಂದ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ನಡುವೆ ಡಿವೋರ್ಸ್ ಆಗುತ್ತಿದೆ ಎಂಬ ವದಂತಿಗಳು ಹುಟ್ಟಿಕೊಂಡಿದ್ದವು. ಇದರ ಬಗ್ಗೆ ಇದೇ ಮೊದಲ ಭಾರಿಗೆ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಇಬ್ಬರೂ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮಕ್ಕಳಿಗಾಗಿ ಗಿಫ್ಟ್​ ಬಾಕ್ಸ್​ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್

publive-image

"ನೀವಿಬ್ಬರೂ ಒಂದೇ ಕೋಣೆಯಲ್ಲಿ ಒಟ್ಟಿಗೆ ಇರುವುದು ತುಂಬಾ ಸಂತೋಷವಾಗಿದೆ" ಎಂದು ಮಿಚೆಲ್ ಅವರ ಸಹೋದರ ಮತ್ತು ಪಾಡ್‌ಕ್ಯಾಸ್ಟ್‌ನ ಸಹ-ನಿರೂಪಕ ಕ್ರೇಗ್ ರಾಬಿನ್ಸನ್ ಹೇಳಿದರು. "ನನಗೆ ತಿಳಿದಿದೆ, ಏಕೆಂದರೆ ನಾವು ಇಲ್ಲದಿರುವಾಗ, ಜನರು ನಾವು ವಿಚ್ಛೇದನ ಪಡೆದಿದ್ದೇವೆ ಎಂದು ಭಾವಿಸುತ್ತಾರೆ" ಎಂದು ಮಿಚೆಲ್ ಒಬಾಮಾ ಉತ್ತರಿಸಿದರು.

ಡೋನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗದೇ ಇದ್ದಿದ್ದಕ್ಕಾಗಿ ಮಿಚೆಲ್ ಒಬಾಮಾ ಎದುರಿಸಿದ ಟೀಕೆಗಳ ಬಗ್ಗೆಯೂ ಮಾತನಾಡಿದರು. ಡೋನಾಲ್ಡ್ ಟ್ರಂಪ್ ಅಧ್ಯಕ್ಷ ಪದಗ್ರಹಣ ತಪ್ಪಿಸುವ ನನ್ನ ನಿರ್ಧಾರ, ಜನರು ಅರಿತುಕೊಳ್ಳದಿರುವುದು ಅಥವಾ ಈ ವರ್ಷದ ಆರಂಭದಲ್ಲಿ ನನಗೆ ಸೂಕ್ತವಾದ ಆಯ್ಕೆಗಳನ್ನು ಮಾಡುವ ನನ್ನ ನಿರ್ಧಾರವು ಅಂತಹ ಅಪಹಾಸ್ಯ ಮತ್ತು ಟೀಕೆಗಳನ್ನು ಎದುರಿಸಿತು" ಎಂದು ಅವರು ಹಿಂದಿನ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ಮಿಚೆಲ್ ಒಬಾಮಾ ಹೇಳಿದ್ದರು. "ನನ್ನ ಮದುವೆ ಕುಸಿಯುತ್ತಿದೆ ಎಂದು ಅವರು ಊಹಿಸಬೇಕಾದ ಯಾವುದೇ ಕಾರಣಕ್ಕಾಗಿ ನಾನು ಇಲ್ಲ ಎಂದು ಹೇಳುತ್ತಿದ್ದೇನೆ ಎಂದರೆ ಜನರು ನಂಬಲು ಸಾಧ್ಯವಾಗಲಿಲ್ಲ." ಎಂದು ಮಿಚೆಲ್ ಒಬಾಮಾ ಹೇಳಿದ್ದರು.

ಇದನ್ನೂ ಓದಿ: ಮಕ್ಕಳಿಗಾಗಿ ಗಿಫ್ಟ್​ ಬಾಕ್ಸ್​ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್

publive-image

ನಮ್ಮ ಸಂಬಂಧವನ್ನು ಪ್ರತಿ ಕ್ಷಣವೂ ಸೋಷಿಯಲ್ ಮೀಡಿಯಾದಲ್ಲಿ ದಾಖಲಿಸಲಾಗಲ್ಲ ಎಂದು ಮಿಚೆಲ್ ಒಬಾಮಾ ಹೇಳಿದ್ದರು. ನಮ್ಮ ಜೀವನದ ಪ್ರತಿಕ್ಷಣವೂ ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲ. ನಾನು ನನ್ನ ಪತಿಯ ಜೊತೆ ಡೇಟಿಂಗ್ ಹೋಗದೇ ಇದ್ದರೆ ನಮ್ಮ ವಿವಾಹವೂ ಅಂತ್ಯವಾಯಿತು ಎಂದು ವದಂತಿ ಶುರು ಮಾಡಿಬಿಡ್ತಾರೆ ಮಿಚೆಲ್ ಒಬಾಮಾ ಹೇಳಿದ್ದರು. ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಇಬ್ಬರೂ 1992ರಲ್ಲಿ ವಿವಾಹವಾಗಿದ್ದಾರೆ. ಈ ದಂಪತಿಗೆ ಮಲಿಹಾ ಮತ್ತು ಸಾಸ್ ಎಂಬ ಇಬ್ಬರು ಹೆಣ್ಮಕ್ಕಳಿದ್ದಾರೆ.

ಇದನ್ನೂ ಓದಿ: ಥಾಯ್ಲೆಂಡ್​ಗೆ ಹಾರಿದ ದರ್ಶನ್​ಗೆ ಬೇಲ್‌ ಟೆನ್ಶನ್‌.. ಕಪಿಲ್ ಸಿಬಲ್ ವಾದದ ಮೇಲೆ ನಿಂತಿದೆ ‘ದಾಸ’ನ ಭವಿಷ್ಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment