/newsfirstlive-kannada/media/post_attachments/wp-content/uploads/2025/04/FREE-MEALS-3.jpg)
ಭಾರತದಲ್ಲಿ ಪ್ರತಿಯೊಬ್ಬರು ಬದುಕಿನಲ್ಲಿ ಕನಿಷ್ಠ ಒಂದು ಬಾರಿಯಾದರೂ ರೈಲು ಪ್ರಯಾಣ ಮಾಡಿರುತ್ತಾರೆ. ಅದರ ಅನುಭವ ಗೊತ್ತು. ಸುದೀರ್ಘ ಪ್ರಯಾಣವಾಗಿದ್ದರೆ ರೈಲು ಟಿಕೆಟ್ ಜೊತೆಗೆ ಬೆಳಗಿನ ತಿಂಡಿ, ಟೀ, ಕಾಫಿ ಮತ್ತು ಭೋಜನವನ್ನು ಕೂಡ ದುಡ್ಡು ಕೊಟ್ಟು ಖರೀದಿ ಮಾಡಿ ಸೇವಿಸಬೇಕು. ಮುಂಜಾನೆ ರೈಲಿನಲ್ಲಿ ಬರುವ ಇಡ್ಲಿವಡೆ, ಮಸಾಲಾ ದೋಸಾ, ಪಲಾವ್ ಈ ರೀತಿಯ ಉಪಹಾರಗಳನ್ನು ದುಡ್ಡು ಕೊಟ್ಟು ತಿನ್ನಬೇಕು. ಇಷ್ಟೇ ಏಕೆ ರೈಲಿನಲ್ಲಿ ನೀರಿನ ಬಾಟಲ್ನ್ನು ಕೂಡ ದುಡ್ಡು ಕೊಟ್ಟು ಖರೀದಿ ಮಾಡಬೇಕು. ಇನ್ನೂ ವಂದೇ ಭಾರತ್ ರೈಲಿನದ್ದು ಮತ್ತೊಂದು ವಿಶೇಷ. ಕುಳಿತುಕೊಂಡಲ್ಲಿಯೇ ನಮಗೆ ಬೇಕಾದ ಆಹಾರ, ತಿಂಡಿ ಪಾನೀಯಗಳನ್ನು ಆರ್ಡರ್ ಮಾಡಬಹುದು. ಆದ್ರೆ ನಿಮಗೆ ಗೊತ್ತಾ ಭಾರತದಲ್ಲಿ ಒಂದು ರೈಲು ಇದೆ. ಈ ರೈಲಿನಲ್ಲಿ ಸಂಚಾರ ಮಾಡುವ ಯಾವ ಪ್ರಯಾಣಿಕರು ಕೂಡ ಊಟ ತಿಂಡಿಗೆ ದುಡ್ಡು ಕೊಡುವುದಿಲ್ಲ. ಇಲ್ಲಿ ಊಟ ತಿಂಡಿ ಸಂಪೂರ್ಣವಾಗಿ ಫ್ರೀಯಾಗಿ ಸಿಗುತ್ತದೆ.
ಈ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನೇಕ ಸೌಲಭ್ಯಗಳಿವೆ. ನಾವು ಈಗಾಗಲೇ ಹೇಳಿದಂತೆ ರೈಲು ಪ್ರಯಾಣ ಮಾಡುವವರು ಕುಳಿತಲ್ಲಿಯೇ ಊಟೋಪಚಾರದ ಸೌಲಭ್ಯ ಪಡೆಯಲು ಆನ್ಲೈನ್ನಲ್ಲಿ ಆರ್ಡರ್ ಮಾಡಬೇಕು. ಇಲ್ಲವೇ ರೈಲಿನಲ್ಲಿ ಕಂಟೇನರ್ ಬಾಕ್ಸ್ನಲ್ಲಿ ಹಾಕಿಕೊಂಡು ಬರುವ ತಿಂಡಿಯನ್ನು ತಿನ್ನಬೇಕು. ಆದ್ರೆ ಈ ಟ್ರೈನ್ ದೇಶದ ಎಲ್ಲಾ ಟ್ರೈನ್ಗಳಿಗಿಂತ ಭಿನ್ನ. ಇಲ್ಲಿ ಫ್ರೀಯಾಗಿ ಹೊಟ್ಟೆತುಂಬಾ ಊಟ ಸಿಗುತ್ತದೆ.
ಈ ರೈಲಿನ ಹೆಸರು ಅಮೃತಸರ - ನಾಂದೇಡ್ ಸಚ್‌ಖಂಡ್ ಎಕ್ಸ್‌ಪ್ರೆಸ್ ಎಂದು. ಇದು ಕಳೆದ 29 ವರ್ಷಗಳಿಂದ ತನ್ನ ಪ್ರಯಾಣಿಕರಿಗೆ ಉಚಿತ ಊಟವನ್ನು ನೀಡುತ್ತಿದೆ. ಒಂದು ವೇಳೆ ನೀವು ಈ ಟ್ರೈನ್ನಲ್ಲಿ ಪ್ರಯಾಣ ಮಾಡುವವರಾದರೆ. ನೀವು ಮನೆಯಿಂದ ಊಟವನ್ನು ಕಟ್ಟಿಕೊಂಡು ಹೋಗುವ ಅವಶ್ಯಕತೆಯೇ ಬೀಳುವುದಿಲ್ಲ. ಈ ಟ್ರೇನ್ನಲ್ಲಿ ಪೆಂಟ್ರಿಯಿದೆ. ಆದರೆ ಅಲ್ಲಿ ಆಹಾರವನ್ನು ತಯಾರಾಗುವುದಿಲ್ಲ. ಈ ರೈಲು ಸುಮಾರು 2081 ಕಿಲೋ ಮೀಟರ್ ಪ್ರಯಾಣವನ್ನು ಕೈಗೊಳ್ಳುತ್ತದೆ. ಅದರಲ್ಲಿ ಒಟ್ಟು 39 ಸ್ಟೇಷನ್ಗಳು ಬರುತ್ತವೆ. ಈ 39 ನಿಲ್ದಾಣಗಳ ಪೈಕಿ 6 ನಿಲ್ದಾಣಗಳಲ್ಲಿ ಲಂಗರ್ ಹಾಕಲಾಗಿರುತ್ತದೆ. ಈ ಎಕ್ಸ್‌ಪ್ರೆಸ್ ರೈಲು ಈ ನಿಲ್ದಾಣಳಲ್ಲ ಕೆಲವು ಗಂಟೆಗಳ ಕಾಲ ನಿಲ್ಲುತ್ತದೆ. ಹೀಗಾಗಿ ಜನರು ಲಂಗರ್ಗಳಿಗೆ ಹೋಗಿ ಆರಾಮವಾಗಿ ಊಟವನ್ನು ಮಾಡಿಕೊಂಡು ಬರಬಹುದು.
ಈ ಆರು ನಿಲ್ದಾಣಗಳ ಪೈಕಿ ಹೊಸ ದೆಹಲಿ ರೈಲ್ವೆ ನಿಲ್ದಾಣ ಮತ್ತು ಡಾಬರ್ ರೈಲ್ವೆ ನಿಲ್ದಾಣಗಳು ಕೂಡ ಸೇರಿವೆ. ಇಲ್ಲಿ ಎರಡು ಕಡೆ ಸಚ್‌ಖಂಡ್ ಎಕ್ಸ್‌ಪ್ರೆಸ್ ಯಾತ್ರಿಕರಿಗಾಗಿಯೇ ಲಂಗರ್ ಹಾಕಲಾಗಿರುತ್ತದೆ. ಈ ಟ್ರೇನ್ನಲ್ಲಿ ಯಾತ್ರೆ ಮಾಡುವ ಎಲ್ಲಾ ಪ್ರಯಾಣಿಕರು ತಮ್ಮ ಪಾತ್ರೆ ಇಲ್ಲವೇ ತಟ್ಟೆಯನ್ನು ತೆಗೆದುಕೊಂಡು ಹೋಗಿ ಊಟವನ್ನು ಪಡೆದುಕೊಂಡು ಬರಬಹುದು ಅದು ಕೂಡ ಉಚಿತವಾಗಿ ಮತ್ತು ಹೊಟ್ಟೆ ತುಂಬಾ ಸಿಗುವ ಊಟ.
ನಿತ್ಯವೂ ಬದಲಾಗುತ್ತದೆ ಊಟದ ಮೆನು
ಇನ್ನು ರೈಲ್ವೆ ಇಲಾಖೆ ಮಾಡಿರುವ ವರದಿಯ ಪ್ರಕಾರ ಈ ಲಂಗರ್ನಲ್ಲಿ ನಿತ್ಯವೂ ಮೆನು ಬದಲಾಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಉತ್ತರ ಭಾರತದ ವಿಶೇಷ ಆಹಾರಗಳಾದ ಖಡಿ ಚಾವಲ್, ಚೋಲೇ ಚಾವಲ್, ದಾಲ್ ಕಿಚಡಿ, ಆಲೂ ಗೋಬಿ ಪಲ್ಯ, ಸಾಗಾ ಭಾಜಿ, ಹೀಗೆ ಸೀಸನ್ ಅನುಗುಣವಾಗಿ ಮೆನುಗಳು ಬದಲಾಗುತ್ತಲೆ ಇರುತ್ತವೆ. ಇನ್ನು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕಳೆದ 29 ವರ್ಷಗಳಲ್ಲಿ ಒಂದೇ ಒಂದು ದಿನ ಈ ಲಂಗರ್ನಲ್ಲಿ ಊಟ ಸಿಗಲಿಲ್ಲವೆಂದು ಪ್ರಯಾಣಿಕರು ವಾಪಸ್ ಬಂದ ಉದಾಹರಣೆಯೇ ಇಲ್ಲವಂತೆ. ನಿತ್ಯ ಕನಿಷ್ಠವೆಂದರೂ 2 ಸಾವಿರ ಜನರು ಇಲ್ಲಿ ಭೋಜವನ್ನು ಉಚಿತವಾಗಿ ಹೊಟ್ಟೆ ತುಂಬಾ ಮಾಡುತ್ತಾರೆ. ಇದೆಲ್ಲದರ ಖರ್ಚು ವೆಚ್ಚಗಳನ್ನು ಗುರುದ್ವಾರದಿಂದ ಬರುವ ಸಹಾಯಧನದಿಂದ ಮಾಡಲಾಗುತ್ತದೆ ಎಂದು ಹೇಳಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ