3 ರಾಜಧಾನಿಗಳನ್ನು ಹೊಂದಿದ ಭಾರತದ ಏಕೈಕ ರಾಜ್ಯ ಯಾವುದು? ಕರ್ನಾಟಕದ ಪಕ್ಕದಲ್ಲಿಯೇ ಇದೆ!

author-image
Gopal Kulkarni
Updated On
3 ರಾಜಧಾನಿಗಳನ್ನು ಹೊಂದಿದ ಭಾರತದ ಏಕೈಕ ರಾಜ್ಯ ಯಾವುದು? ಕರ್ನಾಟಕದ ಪಕ್ಕದಲ್ಲಿಯೇ ಇದೆ!
Advertisment
  • ಮೂರು ರಾಜಧಾನಿಗಳನ್ನು ಹೊಂದಿದ ಭಾರತದ ಏಕೈಕ ರಾಜ್ಯ ಯಾವುದು?
  • ಕರ್ನಾಟಕದ ನೆರೆಯ ರಾಜ್ಯಕ್ಕೆ ಇವೆ ಒಟ್ಟು ಮೂರು ರಾಜಧಾನಿಗಳು ಗೊತ್ತಾ?
  • ಈ ರಾಜ್ಯ ಮೂರು ರಾಜಧಾನಿಗಳನ್ನು ಹೊಂದಲು ಅಸಲಿ ಕಾರಣವೇನು?

ಭಾರತವನ್ನು ವೈವಿದ್ಯಮಯವಾದ ಸಂಸ್ಕೃತಿ ಹಾಗೂ ಧರ್ಮಗಳನ್ನು ಒಳಗೊಂಡ ನೆಲವೆಂದು ಜಗತ್ತು ಗುರುತಿಸುತ್ತದೆ. ನಮ್ಮ ದೇಶದಲ್ಲಿ ಒಟ್ಟು 28 ರಾಜ್ಯಗಳಿವೆ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿವೆ. ಈ ಎಲ್ಲವನ್ನೂ ಒಳಗೊಂಡ ಭಾರತ ವಿಭಿನ್ನ ಸಂಸ್ಕೃತಿ ಪರಂಪರೆ ಹಾಗೂ ಕಲೆಗಳ ತವರಾಗಿ ನಿಂತಿದೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಾದೇಶಿಕ ಮೌಲ್ಯವನ್ನು ಹೊಂದಿದೆ. ವಿಶಿಷ್ಟತೆ ಹಾಗೂ ಸ್ಥಳೀಯತೆಯಿಂದಲೇ ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತವೆ. ಆದರೆ ಈ ಒಂದು ರಾಜ್ಯ ಮಾತ್ರ ಈ ಎಲ್ಲಾ ಆಡಳಿತಗಳ ವ್ಯವಸ್ಥೆಗಳ ಆಚೆ ನಿಂತುಕೊಂಡಿದೆ. ಆ ರಾಜ್ಯ ಆಂಧ್ರಪ್ರದೇಶ.

ಇದನ್ನೂ ಓದಿ:ತಡರಾತ್ರಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ಗೆ ಎದೆ ನೋವು.. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಒಂದು ವಿಷಯದಲ್ಲಿ ಮಾತ್ರ ಈ ಒಂದು ರಾಜ್ಯ ಉಳಿದ ರಾಜ್ಯಗಳಿಗಿಂತ ಭಾರತದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಮೂರು ರಾಜಧಾನಿಗಳನ್ನು ಹೊಂದಿದ ಭಾರತದ ಏಕೈಕ ರಾಜ್ಯವಾಗಿ ಆಂಧ್ರಪ್ರದೇಶ ಗುರುತಿಸಲಾಗುತ್ತದೆ. ಈ ರಾಜ್ಯಕ್ಕೆ ವಿಶಾಖಪಟ್ಟಣಂ, ಅಮರಾವತಿ ಹಾಗೂ ಕರ್ನೂಲ್ ಎಂಬ ಮೂರು ರಾಜಧಾನಿಗಳು ಇವೆ

ಆಂಧ್ರಪ್ರದೇಶವೇಕೆ 3 ರಾಜಧಾನಿಗಳನ್ನು ಹೊಂದಿದೆ.
ಅಖಂಡ ಆಂಧ್ರಪ್ರದೇಶ 2014ರಲ್ಲಿ ಎರಡು ರಾಜ್ಯಗಳಾಗಿ ಭಾಗವಾಯಿತು. ಒಂದು ತೆಲಂಗಾಣವಾಗಿ ಹೆಸರು ಪಡೆದುಕೊಂಡರೆ ಮತ್ತೊಂದು ಆಂಧ್ರಪ್ರದೇಶವೆಂಬ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿಕೊಂಡಿತು. ಈ ಸಮಯದಲ್ಲಿ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2014ರ ಪ್ರಕಾರ ಅಮರಾವತಿಯನ್ನು ಗ್ರ್ಯಾಂಡ್ ಕ್ಯಾಪಿಟಲ್ ಎಂದು ಗುರುತಿಸಲಾಯ್ತು. ಅಮರಾವತಿ ಆಂಧ್ರಪ್ರದೇಶದ ಶಾಸಕಾಂಗ ರಾಜಧಾನಿಯಾಗಿ ಉಳಿದುಕೊಂಡರೆ ಕಾರ್ಯನಿರ್ವಾಹಕ ರಾಜಧಾನಿಯಾಗಿ ವಿಶಾಖಪಟ್ಟಣಂ ಗುರುತಿಸಿಕೊಂಡಿತು. ಮತ್ತೊಂದು ನಗರಿ ಕರ್ನೂಲ್ ಜಿಲ್ಲೆ ಆಂಧ್ರಪ್ರದೇಶದ ನ್ಯಾಯಾಂಗ ರಾಜಧಾನಿಯಾಗಿ ಪರಿಚಯಗೊಂಡಿತು.

ಇದನ್ನೂ ಓದಿ:ಭಾರತದಲ್ಲೇ ಇದೆ ಬೇಬಿ ತಾಜ್​ ಮಹಲ್​.. ಇದನ್ನು ನಿರ್ಮಿಸಿದ್ದು ಯಾರು? ಇದರ ಇತಿಹಾಸ ನಿಮಗೆ ಗೊತ್ತಾ?

publive-image

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ನೇಮಕ ಮಾಡಲು ಕಾರಣವೇನೆಂದರೆ ರಾಜ್ಯದ ಅಭಿವೃದ್ಧಿಯ ವೇಗ ಹೆಚ್ಚಿಸಲು ಹಾಗೂ ಅಧಿಕಾರದ ಕೇಂದ್ರೀಕರಣ ಮಾಡಲು ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ರಾಜ್ಯವು ಒಟ್ಟು ಮೂರು ರಾಜಧಾನಿಗಳನ್ನು ಹೊಂದುವುದಾಗಿ ಘೋಷಿಸಿಕೊಂಡಿತು.

publive-image

ಅಂದ್ರೆ ಈ ರಾಜ್ಯದ ಇತಿಹಾಸ, ಪರಂಪರೆ, ನೈಸರ್ಗಿಕ ಚೆಲುವಿನ ಒಟ್ಟಾರೆಯ ಕೂಡಿಕೊಳ್ಳುವಿಕೆಯ ಒಂದು ಭಾಗವಾಗುವ ಉದ್ದೇಶದಿಂದ ಈ ಒಂದು ನಿರ್ಧಾರವನ್ನು ಕೈಗೊಳ್ಳಲಾಯಿತು. ಆಂಧ್ರಪ್ರದೇಶದಲ್ಲಿ ಪ್ರಾಚೀನ ಕಾಲದ ದೇಗುಲಗಳಿವೆ, ಅದ್ಭುತ ಕಡಲ ತೀರಗಳಿವೆ. ಸೊಂಪಾದ ಕಣಿವೆಗಳಿವೆ. ಒಂದು ವೇಳೆ ನೀವು ಆಂಧ್ರಪ್ರದೇಶ ಸೌಂದರ್ಯವನ್ನು ಸವಿಯಲೇ ಬೇಕಾಗಿದ್ದರೆ ಈ ಮೂರು ರಾಜಧಾನಿಗಳ ಕೆಲವು ಪ್ರದೇಶಗಳಿಗೆ ಭೇಟಿ ನೀಡುವ ಅನಿವಾರ್ಯತೆ ಬರುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ ಜೊತೆಗೆ ರಾಜಧಾನಿಗಳಿಂದ ಬರುವ ಆದಾಯಗಳು ಕೂಡ ಹೆಚ್ಚಾಗುತ್ತದೆ.. ಅದು ಮಾತ್ರವಲ್ಲ ಹೊಸ ಹೊಸ ಉದ್ಯಮಗಳು ಹಾಗೂ ಐಟಿ ಬಿಟಿ ಕಂಪನಿಗಳನ್ನು ಸೆಳೆಯಲು ಕೂಡ ಈ ಒಂದು ವ್ಯವಸ್ಥೆಯನ್ನು ರೂಪಿಸಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment