/newsfirstlive-kannada/media/post_attachments/wp-content/uploads/2024/08/TB-Dam-Gate-Success-6.jpg)
ಕೊಪ್ಪಳ/ವಿಜಯನಗರ: ಇದನ್ನು ಮನತುಂಬಿ ಸಕ್ಸಸ್, ಗ್ರೇಟ್ ಸಕ್ಸಸ್ ಅನ್ನಲೇಬೇಕು. ತುಂಗಭದ್ರಾ ಜಲಾಶಯದ 19ನೇ ಗೇಟ್​ ಕಟ್ ಆಗಿ ಆತಂಕ ಮೂಡಿಸಿತ್ತು. ಕೊಚ್ಚಿ ಹೋಗುತ್ತಿದ್ದ ಡ್ಯಾಂ ನೀರು ಸತತ ಒಂದು ಒಂದು ವಾರಗಳಿಂದ ಟಿಬಿ ಡ್ಯಾಂ ಅಧಿಕಾರಿಗಳ ನಿದ್ದೆ ಕಸಿದಿತ್ತು. ಪೋಲಾಗುತ್ತಿದ್ದ ತುಂಗಭದ್ರೆಯ ನೀರಿನ್ನ ತಡೆಯೋದೆ ದೊಡ್ಡ ಸವಾಲಾಗಿತ್ತು. ಕೊನೆಗೂ ಸ್ಟಾಪ್​ ಲಾಗ್​ ಗೇಟ್​ ಅವಡಿಕೆ ಕಾರ್ಯ ಯಶಸ್ವಿಯಾಗಿದೆ. ಡ್ಯಾಮ್​ ತಜ್ಞ ಕನ್ನಯ್ಯ ನಾಯ್ಡು ಪ್ಲಾನ್ ಸಕ್ಸಸ್ ಆಗಿದ್ದು, ಸದ್ಯ ಟಿಬಿ ಡ್ಯಾಂ ಹೊರ ಹರಿವಿಗೆ ಬ್ರೇಕ್​ ಬಿದ್ದಿದೆ.
ಇದನ್ನೂ ಓದಿ: ಗ್ರೇಟ್ ಸಕ್ಸಸ್.. ತುಂಗಭದ್ರಾ ಡ್ಯಾಂನ 19ನೇ ಗೇಟ್ ಕ್ಲೋಸ್; ಜೀವಜಲ ಉಳಿಸೋ ಸಾಹಸಕ್ಕೆ ಅತಿ ದೊಡ್ಡ ಯಶಸ್ಸು!
ಡ್ಯಾಮ್​ ತಜ್ಞ ಕನ್ಹಯ್ಯ ನಾಯ್ಡು ಪ್ಲಾನ್ ಸಕ್ಸಸ್
ತಾತ್ಕಾಲಿಕ ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿ
ಸತತ ಮೂರು ದಿನ .. 34 ಗಂಟೆ.. ಸ್ಟಾಪ್​ ಲಾಗ್​ ಗೇಟ್​ ಅವಳವಡಿಕೆ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಡ್ಯಾಂ​ ತಜ್ಞ ಕನ್ನಯ್ಯ ನಾಯ್ಡು ಪ್ಲಾನ್ ಸಕ್ಸಸ್ ಆಗಿದ್ದು, ತಾತ್ಕಾಲಿಕವಾಗಿ 5 ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.
/newsfirstlive-kannada/media/post_attachments/wp-content/uploads/2024/08/Kannayya.jpg)
ಮುರಿದ 19ನೇ ಗೇಟ್​ಗೆ ಸ್ಟಾಪ್​ ಲಾಗ್​ಗೇಟ್​ ಅಳವಡಿಕೆ
ಹೊರ ಹರಿವು ಬಂದ್ ಮಾಡಿದ ಟಿಬಿ ಡ್ಯಾಂ ಅಧಿಕಾರಿಗಳು
ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ 19ನೇ ಗೇಟ್​ಗೆ ಅಂತೂ ಹರಸಾಹಸಪಟ್ಟು ಸ್ಟಾಪ್​ ಲಾಗ್​ ಗೇಟ್​ ಅವಳವಡಿಕೆ ಮಾಡಲಾಗಿದೆ. ಇದ್ರಿಂದಾಗಿ ಹೊರ ಹರಿವು ಸಂಪೂರ್ಣ ಬಂದ್​ ಮಾಡಲಾಗಿದೆ.
ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?
ಮೊದಲ ಸ್ಟಾಪ್ ಗೇಟ್ ಅಳವಡಿಕೆಯಾದ ಬಳಿಕ 33 ಗೇಟ್‌ಗಳಲ್ಲಿ 25 ಗೇಟ್‌ಗಳಿಂದ ನೀರು ಹರಿಸಲಾಗಿತ್ತು. ನಿನ್ನೆ ಎಂಟು ಗೇಟ್‌ಗಳನ್ನು ಕ್ಲೋಸ್ ಮಾಡಲಾಗಿತ್ತು. ಇಂದು ಎರಡನೇ ಸ್ಟಾಪ್ ಲಾಗ್ ಅಳವಡಿಸಿದ ನಂತರ ಮತ್ತೆ 4 ಗೇಟ್ ಕ್ಲೋಸ್ ಮಾಡಲಾಗಿದೆ. ಮೂರನೇ ಗೇಟ್ ಅಳವಡಿಕೆ ಹಿನ್ನೆಲೆ ಮತ್ತೆ 8 ಗೇಟ್ ಕ್ಲೋಸ್ ಮಾಡಲಾಗಿದೆ. ಅಂತಿಮವಾಗಿ ಎಲ್ಲಾ ಗೇಟ್‌ಗಳನ್ನೂ ಬಂದ್ ಮಾಡಿ ಹೊರಹರಿವು ನಿಲ್ಲಿಸಲಾಗಿದ್ದು, ಜಲಾಶಯ ಬರಿದಾಗುವ ಆತಂಕ ತಪ್ಪಿದೆ.
/newsfirstlive-kannada/media/post_attachments/wp-content/uploads/2024/08/TB-Dam-Gate-Success-5.jpg)
ಡ್ಯಾಮ್​ ತಜ್ಞ ಕನ್ಹಯ್ಯ ನೇತೃತ್ವದಲ್ಲಿ 80ಕ್ಕೂ ಅಧಿಕ ಎಂಜಿನಿಯರ್​ಗಳ ತಂಡ ಗೇಟ್​ ಅಳವಡಿಕೆ ಕಾರ್ಯವನ್ನ ಯಶಸ್ವಿಗೊಳಿಸಿದ್ದಾರೆ. 26 ನಿಮಿಷಗಳಲ್ಲಿ ಮೂರನೇ ಸ್ಟಾಪ್ ಲಾಗ್ ಅಳವಡಿಸಲಾಗಿದೆ. 4 ಹಾಗೂ 5ನೇ ಸ್ಟಾಪ್ ಲಾಗ್ ಅಳವಡಿಕೆ ಕೂಡ ಯಶಸ್ವಿಯಾಗಿದೆ. ದುರಸ್ಥಿ ಹಿನ್ನೆಲೆ, ಅಪಾರ ಪ್ರಮಾಣದ ನೀರನ್ನ ಹರಿಬಿಡಲಾಗಿತ್ತು. ಸದ್ಯ ಸ್ಟಾಪ್ ಲಾಗ್ ಅಳವಡಿಕೆಯಿಂದ ಹಂತ ಹಂತವಾಗಿ ನದಿಗೆ ಹರಿಸುವ ನೀರಿನ ಪ್ರಮಾಣವನ್ನ ಕಡಿಮೆ ಮಾಡಲಾಗಿದೆ.
ಇಂದು ಸಂಜೆ 5:53ಕ್ಕೆ 5ನೇ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಆರಂಭವಾಗಿತ್ತು. ಬರೋಬ್ಬರಿ 35 ನಿಮಿಷಗಳಲ್ಲಿ ಅಂದ್ರೆ ಸಂಜೆ 6:28ಕ್ಕೆ ಸರಿಯಾಗಿ ಕೊನೆಯ 5ನೇ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಗದೆ. 5 ಸ್ಟಾಪ್ ಲಾಗ್ ಅಳವಡಿಸಿದ ಕನ್ನಯ್ಯ ನಾಯ್ಡು ತಂಡ ಯಶಸ್ವಿಯಾಗಿದೆ. ಕೊಟ್ಟ ಮಾತಿನಂತೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರು ಸ್ಟಾಪ್ ಲಾಗ್ ಅಳವಡಿಕೆ ಪೂರೈಸಿದ್ದಾರೆ.
ಒಂದು ಸ್ಟಾಪ್ ಲಾಗ್ ಎಲಿಮೆಂಟ್ 13 ಟನ್ ತೂಕ ಹೊಂದಿವೆ. ಒಟ್ಟು ಐದು ಎಲಿಮೆಂಟ್ ಗೇಟ್‌ಗಳನ್ನು ಹರಿಯುವ ನೀರಿನಲ್ಲಿ ಇಳಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಕನ್ನಯ್ಯ ನಾಯ್ಡು ಅವರ ಈ ಕಾರ್ಯಕ್ಕೆ ಕೋಟ್ಯಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡ್ಯಾಂ ತಜ್ಞ ಕನ್ನಯ್ಯ ಅವರು ಕಲ್ಯಾಣ ಕರ್ನಾಟಕಕ್ಕೆ ಭಗೀರಥನಾಗಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?
ಸತತ ಮೂರು ದಿನಗಳ ಭಗೀರಥ ಪ್ರಯತ್ನಕ್ಕೆ ಕೊನೆಗೂ ಫಲಸಿಕ್ಕಿದೆ. ಪೋಲಾಗಿ ಹರಿದು ಹೋಗ್ತಿದ್ದ ತುಂಗಭದ್ರೆಯನ್ನ ಕೊನೆಗೂ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ತುಂಗಭದ್ರೆಯನ್ನ ಅವಲಂಭಿಸಿರೋ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/08/TB-Dam-Gate-Success-3.jpg)
ಮತ್ತೆ ಭರ್ತಿಯಾಗುತ್ತಾ ಡ್ಯಾಂ?
ತುಂಗಭದ್ರಾ ಡ್ಯಾಂ ರಾಜ್ಯದಲ್ಲಿ ಬರೋಬ್ಬರಿ 105 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಅತಿ ದೊಡ್ಡ ಜಲಾಶಯ. ಕಳೆದ 6 ದಿನಗಳಿಂದ ವ್ಯರ್ಥವಾಗಿ ಅಪಾರ ನೀರಿನ ಪ್ರಮಾಣ ಹರಿದು ಹೋಗಿದೆ. 19ನೇ ಗೇಟ್ ಕಟ್ ಆಗಿದ್ದರಿಂದ ಪೋಲಾದ ನೀರು 40 ರಿಂದ 45 ಟಿಎಂಸಿ ನೀರು ಖಾಲಿ ಆಗಿದೆ ಎನ್ನಲಾಗಿದೆ. ಇದೀಗ ಹರಸಾಹಸ ಪಟ್ಟು 33 ಗೇಟ್‌ಗಳಲ್ಲಿ 19 ಗೇಟ್ ಹೊರತುಪಡಿಸಿ ಎಲ್ಲಾ ಗೇಟ್ ಕ್ಲೋಸ್ ಮಾಡಲಾಗಿದೆ.
ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ
19ನೇ ಗೇಟ್‌ಗೆ ಅಳವಡಿಸಿರುವ ಸ್ಟಾಪ್ ಲಾಗ್ ಎಲಿಮೆಂಟ್ 22 TMC ನೀರು ತಡೆಯವ ಸಾಮಾರ್ಥ್ಯ ಹೊಂದಿದೆ. ಸದ್ಯ ಜಲಾಶಯಕ್ಕೆ 44 ಸಾವಿರ ಕ್ಯುಸೆಕ್ಸ್ ಒಳಹರಿವು ಹರಿದು ಬರುತ್ತಿದೆ. ಸುಮಾರು 40 ಟಿಎಂಸಿ ನೀರು ಮರಳಿ ಜಲಾಶಯಕ್ಕೆ ಹರಿದು ಬಂದ್ರೆ ಮತ್ತೆ ಡ್ಯಾಂ ತುಂಬುವ ನಿರೀಕ್ಷೆ ಇದೆ.
ಈ ಬಾರಿ ಜುಲೈ ತಿಂಗಳಲ್ಲೇ ಸುರಿದ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿತ್ತು. ಇದೀಗ 105ರಲ್ಲಿ 40 ಟಿಎಂಸಿ ನೀರು ಪೋಲಾಗಿರುವ ಸಾಧ್ಯತೆ ಇದೆ. ಮತ್ತೆ ಡ್ಯಾಂ ಭರ್ತಿಯಾಗಬೇಕಾದ್ರೆ ಕನಿಷ್ಠ ಒಂದು ತಿಂಗಳು ತುಂಗಭದ್ರೆ ತೀರದಲ್ಲಿ ಭರ್ಜರಿ ಮಳೆಯಾಗಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us