Advertisment

ಉಕ್ಕಿ ಹರಿಯುತ್ತಿರುವ ಕಾವೇರಿ.. 71ನೇ ಬಾರಿ ಮೆಟ್ಟೂರು ಡ್ಯಾಂ ಭರ್ತಿ; ತಮಿಳುನಾಡಿಗೆ ಡಬಲ್ ಖುಷಿ!

author-image
admin
Updated On
ಭಾರೀ ಮಳೆ; ಉಕ್ಕಿ ಹರಿಯುತ್ತಿರೋ ನದಿಗಳು; ಮಲೆನಾಡು ಜನ ಓದಲೇಬೇಕಾದ ಸ್ಟೋರಿ!
Advertisment
  • ತಮಿಳುನಾಡಿನ ಮೆಟ್ಟೂರು ಡ್ಯಾಮ್‌ಗೆ ಬರೋಬ್ಬರಿ 100 ಅಡಿ ಭರ್ತಿ
  • ಕೆಆರ್‌ಎಸ್ ಜಲಾಶಯದಿಂದ 1.46 ಲಕ್ಷ ಕ್ಯೂಸೆಕ್ ನೀರು ಹೊರ ಹರಿವು
  • ಮೆಟ್ಟೂರು ಡ್ಯಾಮ್‌ನ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 93.4 ಟಿಎಂಸಿ

ಕಾವೇರಿ ತೀರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜಲಾಶಯಗಳೆಲ್ಲಾ ತುಂಬಿ ಹರಿಯುತ್ತಿವೆ. ಕೆಆರ್‌ಎಸ್ ಜಲಾಶಯದಿಂದ 1.46 ಲಕ್ಷ ಕ್ಯೂಸೆಕ್ ನೀರು ಹೊರ ಹರಿವು ಬಿಡಲಾಗಿದೆ. ಉಕ್ಕಿ ಹರಿಯುತ್ತಿರುವ ಕಾವೇರಿ ನೀರಿನಿಂದ ತಮಿಳುನಾಡಿನ ಮೆಟ್ಟೂರು ಡ್ಯಾಮ್‌ಗೆ ಬರೋಬ್ಬರಿ 100 ಅಡಿ ಭರ್ತಿಯಾಗಿದೆ. ಇದೇ ರೀತಿ ನೀರಿನ ಪ್ರಮಾಣ ಹರಿದು ಬಂದರೆ ಮೆಟ್ಟೂರು ಡ್ಯಾಮ್ ಕೂಡ ಆದಷ್ಟು ಬೇಗ ಸಂಪೂರ್ಣ ಭರ್ತಿಯಾಗುತ್ತಿದೆ.

Advertisment

ಇದನ್ನೂ ಓದಿ:ತಮಿಳುನಾಡಿಗೆ ಹರಿದ ಕಾವೇರಿ! ಜೂನ್​, ಜುಲೈನಲ್ಲಿ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ? 

ಸದ್ಯ ಮೆಟ್ಟೂರು ಡ್ಯಾಮ್‌ನಲ್ಲಿ 65 ಟಿಎಂಸಿ ನೀರು ಸಂಗ್ರಹವಾಗಿದೆ. ಮೆಟ್ಟೂರು ಡ್ಯಾಮ್‌ನ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 93.4 ಟಿಎಂಸಿ. ಒಳ ಹರಿವು 1.1 ಲಕ್ಷ ಕ್ಯೂಸೆಕ್ ನೀರು ಇದೆ. ಇದೇ ರೀತಿ ಒಂದು ಲಕ್ಷಕ್ಕೂ ಅಧಿಕ ಒಳ ಹರಿವು ಮುಂದುವರಿದರೆ ಇನ್ನು ನಾಲ್ಕೇ ದಿನದಲ್ಲಿ ಮೆಟ್ಟೂರು ಡ್ಯಾಂ ಕೂಡ ಭರ್ತಿಯಾಗಲಿದೆ. ತಮಿಳುನಾಡು ಅಧಿಕಾರಿಗಳ ಪ್ರಕಾರ ಮೆಟ್ಟೂರು ಡ್ಯಾಂ ಮುಂದಿನ ಸೋಮವಾರ ಅಥವಾ ಮಂಗಳವಾರ ಬೆಳಗ್ಗೆಗೆ ಸಂಪೂರ್ಣ ಭರ್ತಿಯಾಗಲಿದೆ ಎಂದು ತಿಳಿಸಿದ್ದಾರೆ.

publive-image

ಆದಿ ಪೆರುಕ್ಕು ಹಬ್ಬ!
ಮೆಟ್ಟೂರು ಡ್ಯಾಂ ಭರ್ತಿಯಾಗುವ ಸುದ್ದಿ ತಮಿಳುನಾಡು ರೈತರಿಗೆ ಡಬಲ್ ಖುಷಿ ತಂದಿದೆ. ಜುಲೈ 28 ರಿಂದ ತಮಿಳುನಾಡಿನಲ್ಲಿ ಆದಿ ಪೆರುಕ್ಕು ಹಬ್ಬ ಆಚರಿಸಲಾಗುತ್ತಿದೆ. 7 ದಿನಗಳ ಕಾಲ ನಡೆಯುವ ಆದಿ ಪೆರುಕ್ಕು ಹಬ್ಬಕ್ಕೂ ಮುಂಚೆಯೇ ಮೆಟ್ಟೂರು ಡ್ಯಾಂ ಭರ್ತಿಯಾಗುತ್ತಿರೋದು ಸಂತಸಕ್ಕೆ ಕಾರಣವಾಗಿದೆ. ಆದಿ ಪೆರುಕ್ಕು ಹಬ್ಬದಲ್ಲಿ ತಮಿಳಿಗರು ಕಾವೇರಿ ನದಿ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದೀಗ ಕಾವೇರಿ ನದಿ ತುಂಬಿ ಹರಿಯುತ್ತಿರೋದ್ರಿಂದ ಹಬ್ಬದ ಖುಷಿ ದುಪ್ಪಟ್ಟಾಗಿದೆ.

Advertisment

ಇದನ್ನೂ ಓದಿ: KRSನಿಂದ ಭಾರೀ ಮಟ್ಟದ ನೀರು ಬಿಡುಗಡೆ, ಕಾವೇರಿಯಿಂದ ಅಪಾಯ.. ವಿವೇಕಾನಂದ ಆಶ್ರಮ ಜಲಾವೃತ 

ಸಮುದ್ರಕ್ಕೆ ಹರಿಯಲಿದೆ ಕಾವೇರಿ!
ತಮಿಳುನಾಡಿನಲ್ಲಿ ಮೆಟ್ಟೂರು, ಭವಾನಿ ಸಾಗರ್ ಪ್ರಮುಖ ಡ್ಯಾಮ್‌ಗಳಾಗಿದೆ. ಇವುಗಳಲ್ಲೇ ಕಾವೇರಿ ನೀರು ಸಂಗ್ರಹ ಮಾಡಬೇಕು. ಮೆಟ್ಟೂರು ಡ್ಯಾಮ್ ಭರ್ತಿಯಾದ ಮೇಲೆ ಹೆಚ್ಚಿನ ನೀರು ಸಂಗ್ರಹಕ್ಕೆ ತಮಿಳುನಾಡಿನಲ್ಲಿ ಬೇರೆ ಡ್ಯಾಮ್‌ಗಳಿಲ್ಲ. ಹೀಗಾಗಿ ಹೆಚ್ಚುವರಿ ಕಾವೇರಿ ನೀರನ್ನು ಮೆಟ್ಟೂರು ಡ್ಯಾಮ್ ಭರ್ತಿಯಾದ ಬಳಿಕ ಸಮುದ್ರಕ್ಕೆ ತಮಿಳುನಾಡು ಸರ್ಕಾರ ನೀರು ಹರಿಸಲಿದೆ. ಇದೇ ರೀತಿ ಮಳೆಯ ಪ್ರಮಾಣ ಹೆಚ್ಚಾದರೆ ಕಾವೇರಿ ತೀರದಲ್ಲಿ ಪ್ರವಾಹದ ಭೀತಿಯೂ ಎದುರಾಗಿದೆ. ಈ ರೀತಿ ಹೆಚ್ಚಿನ ಮಳೆಯಾದ ವರ್ಷದಲ್ಲಿ ಹೆಚ್ಚುವರಿ ನೀರು ಸಂಗ್ರಹಕ್ಕೆ ಮೇಕೆದಾಟು ಡ್ಯಾಮ್ ನಿರ್ಮಾಣ ಅಗತ್ಯ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಆದರೆ ಇದಕ್ಕೆ ತಮಿಳುನಾಡು ಸರ್ಕಾರ ಒಪ್ಪದೆ ಮೇಕೆದಾಟು ಡ್ಯಾಮ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment