/newsfirstlive-kannada/media/post_attachments/wp-content/uploads/2025/06/RCB-36.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಸದ್ಯ ಇದಕ್ಕೆ ಸ್ಪಷ್ಟನೆ ನೀಡಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಯಾವುದೇ ಕಾರಣಕ್ಕೂ ಆರ್ಸಿಬಿಯನ್ನು ಮಾರಾಟ ಮಾಡಲ್ಲ ಎಂದು ಹೇಳಿದೆ.
ಭಾರೀ ಮೊತ್ತದಲ್ಲಿ ಆರ್ಸಿಬಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು. ಈ ಕುರಿತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆರ್ಸಿಬಿಯನ್ನು ಪೂರ್ಣವೇ ಆಗಿರಲಿ ಅಥವಾ ಭಾಗಶಃ ಆಗಿರಲಿ ಮಾರಾಟ ಮಾಡಲ್ಲ. ಆರ್ಸಿಬಿಯ ಓನರ್ ಆಗಿರುವ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಬ್ರಿಟನ್ ಮೂಲದ ಡಿಯಾಜಿಯೋದ ಅಂಗಸಂಸ್ಥೆ ಆಗಿದೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ ಕೇವಲ ಮೂರೇ 3 ಸಿನಿಮಾದ ಕಲೆಕ್ಷನ್ 3,500 ಕೋಟಿ ರೂಪಾಯಿ!
ಡಿಯಾಜಿಯೋ ಸಂಸ್ಥೆಯು ಆರ್ಸಿಬಿಗೆ 2 ಬಿಲಿಯನ್ ಡಾಲರ್ (17,000 ಕೋಟಿ ರೂ) ಮೊತ್ತದ ವ್ಯಾಲ್ಯುಯೇಶನ್ ನಿರೀಕೆ ಇದೆ. 2008ರ ಐಪಿಎಲ್ನ ಆರಂಭದಲ್ಲಿ ಆರ್ಸಿಬಿ ಸೇರಿ 8 ಟೀಮ್ಗಳು ಅಖಾಡಕ್ಕೆ ಇಳಿದಿದ್ದವು. ಆಗ ಉದ್ಯಮಿ ವಿಜಯ್ ಮಲ್ಯ ಮಾಲೀಕತ್ವದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಕಂಪನಿ ಇತ್ತು. ಬಳಿಕ ಯುನೈಟೆಡ್ ಸ್ಪಿರಿಟ್ಸ್ ಅನ್ನು ಬ್ರಿಟನ್ ಮೂಲದ ಡಿಯಾಜಿಯೋ ಖರೀದಿಸಿತು.
ಆರಂಭದಿಂದಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಆರ್ಸಿಬಿ ಫೈನಲ್ಗೆ ಹೋಗಿದ್ದರೂ ಯಾವುದೇ ಟ್ರೋಫಿಯನ್ನು ಗೆದ್ದಿರಲಿಲ್ಲ. ಆದರೆ ಲಾಯಲ್ ಫ್ಯಾನ್ಸ್ ಮಾತ್ರ ಯಾವುದೇ ಹಂತದಲ್ಲಿಯೂ ಆರ್ಸಿಬಿಯ ಕೈ ಬಿಟ್ಟಿರಲಿಲ್ಲ. ಸತತ ಹೋರಾಟ ಹಾಗೂ ಕಠಿಣ ಅಭ್ಯಾಸದಿಂದ ಈ ಬಾರಿ ಅಂದರೆ 2025ರ ಐಪಿಎಲ್ ಸೀಸನ್- 18ರಲ್ಲಿ ಟ್ರೋಫಿಗೆ ಮೊದಲ ಬಾರಿಗೆ ಮುತ್ತಿಕ್ಕಿದೆ. ಇಡೀ ಅಭಿಮಾನಿ ಬಳಗವೇ ಸಂತಸದಲ್ಲಿ ತೇಲಿತ್ತು. ಇದರ ಬೆನ್ನಲ್ಲೇ ಆರ್ಸಿಬಿ ಮಾರಾಟ ಆಗುತ್ತದೆ ಎನ್ನಲಾಗಿತ್ತು. ಆದರೆ ಈಗ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾರಾಟ ಮಾಡಲ್ಲ ಎಂದು ಸ್ಪಷ್ಟನೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ