ಕಸದ ಬಿಟ್ಟಿಯಲ್ಲಿ ಸಿಕ್ಕ ಬ್ಯಾಗ್ ಓಪನ್ ಮಾಡಿದಾಗ ಕಾದಿತ್ತು ಶಾಕ್
ಸಿಕ್ಕ ಸಿಕ್ಕಲ್ಲಿ ಕಸವನ್ನು ಆಯುತ್ತಿದ್ದ ಲಿಯೊನಾರ್ಡೊ ಉರ್ಬಾನೊ
ರಸದಲ್ಲಿ ಸಿಕ್ಕ ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡ್ತಾನೆ ಈತ
ಈ ದುಬಾರಿ ದುನಿಯಾದಲ್ಲಿ ಯಾವುದಕ್ಕೆ ಬೆಲೆ ಇಲ್ಲ ಹೇಳಿ. ಕುಡಿಯುವ ನೀರಿನಿಂದ ಹಿಡಿದು ಎಲ್ಲ ವಸ್ತುಗಳಿಗೆ ತನ್ನದೇಯಾದ ಬೆಲೆಯನ್ನು ನಿಗದಿ ಪಡಿಸಿರುತ್ತಾರೆ. ಅದರಲ್ಲೂ ಹೀಗೆ ಬೇಡ ಅಂತ ಎಸೆದಿರೋ ವಸ್ತುಗಳೇ ಒಂದಲ್ಲಾ ಒಂದು ಕೆಲಸಕ್ಕೆ ಬರುತ್ತದೆ. ಕಸದಿಂದ ರಸ ಎನ್ನುವ ಮಾತು ಜನಜನಿತ. ಇದು ಮನೆಯ ಅಲಂಕಾರಕ್ಕೂ ಅನ್ವಯವಾಗುತ್ತದೆ. ಬೇಡವೆಂದು ಬಿಸಾಡಿ ಬಿಡುವ ವಸ್ತುಗಳಿಗಳಿಂದಲಲೇ ಅದೇಷ್ಟೋ ಜನ ಹೊಸ ರೂಪ ಕೊಟ್ಟಿದ್ದಾರೆ. ಹೀಗೆ ನಮಗೆ ಯೂಸ್ ಇಲ್ಲದ ವಸ್ತುಗಳು ಮಿಸ್ ಆದ್ರೇ, ಅಥವಾ ಗೊತ್ತಿದ್ದೋ, ಗೊತ್ತಿಲ್ಲದೇನೋ ಕಸದ ಬುಟ್ಟಿಗೆ ಹಾಕಿಬಿಟ್ಟರೇ ತನ್ನದು ಎಂಬುವುದು ಬೇರೊಬ್ಬರ ಪಾಲಾಗಬಹುದು.
ಇದನ್ನೂ ಓದಿ: ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!
ಹೀಗೆ ವ್ಯಕ್ತಿಯೊಬ್ಬ ತನ್ನದಲ್ಲದ ವಸ್ತುವೊಂದನ್ನು ಕಸದ ಬುಟ್ಟಿಗೆ ಹಾಕಿಬಿಟ್ಟಿದ್ದಾನೆ. ಆದರೆ ಅವನಿಗೆ ಗೊತ್ತಿಲ್ಲದೇ ಎಸದ ಬ್ಯಾಗ್ನಲ್ಲಿದ್ದ ಲಕ್ಷ ಲಕ್ಷ ಹಣ ಮತ್ತೊಬ್ಬ ವ್ಯಕ್ತಿಯ ಪಾಲಾಗಿದೆ. ಅದೇ ಹಣದಿಂದ ಆ ವ್ಯಕ್ತಿ ಲಕ್ಷಾಧಿಪತಿ ಆಗಿಬಿಟ್ಟಿದ್ದಾನೆ. ಹೌದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ 30 ವರ್ಷದ ಯುವಕನೊಬ್ಬ ಯೂಸ್ ಇಲ್ಲದಿರೋ ಬ್ಯಾಗ್ವೊಂದನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ. ಹೀಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ಕಸ ಎತ್ತುವ ವ್ಯಕ್ತಿಗೆ ಆ ಬ್ಯಾಗ್ ಸಿಕ್ಕಿದೆ. ಮೊದಲು ಚೆನ್ನಾಗಿದೆ ಅಂತ ತನ್ನ ಗಾಡಿಯಲ್ಲಿ ಇಟ್ಟುಕೊಂಡಿದ್ದಾನೆ. ಬಳಿಕ ಮನೆಗೆ ಹೋಗಿ ಆ ಬ್ಯಾಗ್ ತೆಗೆದು ನೋಡಿದಾಗ ಶಾಕ್ ಆಗಿದ್ದಾನೆ. ಯಾರೋ ಕಸದ ಬುಟ್ಟಿಗೆ ಎಸೆದ ಬ್ಯಾಗ್ನಲ್ಲಿ ಅರ್ಧ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಆತನಿಗೆ ಸಿಕ್ಕಿದೆ. ಇದನ್ನು ಕಂಡು ಲಿಯೊನಾರ್ಡೊ ಉರ್ಬಾನೊ ಫುಲ್ ಖುಷ್ ಆಗಿದ್ದಾನೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರೋ ಲಿಯೊನಾರ್ಡೊ ಉರ್ಬಾನೊ ಎಂಬಾತ ಕಸದ ಎತ್ತುವ ವ್ಯಕ್ತಿ. ಕಳೆದ ವರ್ಷ ಕಸ ಎತ್ತು ಕೆಲಸ ಮಾಡುತ್ತಿದ್ದ. ಆ ಕಸದಲ್ಲಿ ಸಿಗುವ ಅತ್ಯಮೂಲ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದ. ಹೀಗೆ ಕಸದ ಬುಟ್ಟಿಯಲ್ಲಿ ಸಿಕ್ಕ ಬ್ಯಾನ್ನಲ್ಲಿ ನಮ್ಮ ಭಾರತದ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ 56,50,919 (ಐವತ್ತಾರು ಲಕ್ಷದ ಐವತ್ತು ಸಾವಿರದ ಒಂಬೈನೂರ ಹತ್ತೊಂಬತ್ತು) ರೂಪಾಯಿ ನನಗೆ ಸಿಕ್ತು ಅಂತ ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲ, ಕಸದ ರಾಶಿಯಲ್ಲಿ ಚೀಲಗಳು, ಕಾಫಿ ಮೆಶಿನ್ಸ್, ಚಿನ್ನದ ಆಭರಣಗಳು ಮತ್ತು ಹಣ ಸೇರಿದಂತೆ ಬೇರೆ ಬೇರೆ ರೀತಿಯ ವಸ್ತುಗಳು ಸಿಕ್ಕಿತ್ತಂತೆ. ಈ ವ್ಯಕ್ತಿ, ಪ್ರತಿದಿನದಂತೆ ಬೆಳಿಗ್ಗೆ ಟಿಫನ್ ಮಾಡಿದ ಮೇಲೆ, ತನ್ನ ಬೈಸಿಕಲ್ ಅಥವಾ ಕಾರಿನಲ್ಲಿ ಸಿಡ್ನಿಯ ಬೀದಿ ಬೀದಿಗಳಲ್ಲಿ ಕಸದ ರಾಶಿಯನ್ನೇ ಹುಡುಕುತ್ತಾ ಇರ್ತಾನೆ. ಅದರಂತೆ ಕಳೆದ ವರ್ಷ, ಐವತ್ತಾರು ಲಕ್ಷಕ್ಕೂ ಹೆಚ್ಚಿನ ಹಣದ ಜೊತೆಗೆ ಫ್ರಿಡ್ಜ್, ವಾರ್ಡ್ರೋಬ್ ಮತ್ತು ಮಂಚಗಳಂತಹ ದೊಡ್ಡ ವಸ್ತುಗಳು ಸಿಕ್ಕಿದೆ ಅಂತ ಲಿಯೊನಾರ್ಡೊ ಉರ್ಬಾನೊ ಹೇಳಿದ್ದಾನೆ.
ಆಸ್ಟ್ರೇಲಿಯಾದ ಜನರು ಸಾಮಾನ್ಯವಾಗಿ ಫರ್ನೀಚರ್ಸ್, ಫ್ರಿಡ್ಜ್, ವಾಷಿಂಗ್ ಮಿಷನ್, ಕಂಪ್ಯೂಟರ್ಗಳು, ಡೈಸನ್ ವ್ಯಾಕ್ಯೂಮ್ ಕ್ಲೀನರ್ಗಳು ಮತ್ತು ಟೆಲಿವಿಷನ್ ಸೆಟ್ಸ್ ಸೇರಿದಂತೆ ಹಲವೂ ದೊಡ್ಡ ದೊಡ್ಡ ವಸ್ತುಗಳನ್ನ ಯೂಸ್ ಇಲ್ಲ ಅಂತ ರೋಡ್ ಸೈಡ್ನಲ್ಲೇ ಬಿಸಾಕುತ್ತಾರೆ. ಕೆಲವು ಶ್ರೀಮಂತ ಫ್ಯಾಮಿಲಿ ಅವರು ಕೆಲವೊಂದು ವಸ್ತುಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೂ ಹೊಸದನ್ನು ಪರ್ಚೇಸ್ ಮಾಡೋಕೆ ಹಳೆಯದಾಯ್ತು ಅಂತ ಕಸಕ್ಕೆ ಎಸೆಯುತ್ತಾರೆ. ಅಂಥವುಗಳನ್ನ ಈ ಕಸ ಎತ್ತುವ ವ್ಯಕ್ತಿ ಹುಡುಕಿ, ಅದನ್ನ ಮನೆಗೆ ತಂದು ಕ್ಲೀನ್ ಮಾಡಿ, ಎಷ್ಟು ಸಾಧ್ಯವಾಗತ್ತೋ ಅಷ್ಟೂ ಸರಿ ಮಾಡ್ತಾನೆ. ಅದರಲ್ಲಿ ಈ ವ್ಯಕ್ತಿಗೆ ಏನ್ ಯೂಸ್ ಆಗುತ್ತೋ ಅದನ್ನ ಇಟ್ಟುಕೊಂಡು, ಬೇಡದೇ ಇರುವ ವಸ್ತುಗಳನ್ನ ಫೇಸ್ ಬುಕ್ ಹಾಗೂ ಮಾರ್ಕೆಟಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಮಾರಾಟ ಮಾಡಿಬಿಡ್ತಾನೆ. ಅಷ್ಟೇ ಅಲ್ಲ್ಲ.. ಕೆಲವೊಮ್ಮೆ ಕಸದಲ್ಲಿ ಸಿಕ್ಕಿದ ಬಟ್ಟೆಗಳು ಮತ್ತು ಬ್ಯಾಗ್ಗಳ ಜೇಬಿನಲ್ಲಿ ಜನರು ಬೈ ಮಿಸ್ಸಾಗಿ ಇಟ್ಟ ಹಣವೂ ಈ ವ್ಯಕ್ತಿಯ ಪಾಲಾಗಿದೆಯಂತೆ. ಇತ್ತೀಚೆಗೆ ಸಣ್ಣ ಬ್ಯಾಗ್ ಅನ್ನ ಸೇಲ್ ಮಾಡಿದಾಗ 200 ಡಾಲರ್ ಸಿಕ್ಕಿದೆ. ಜೊತೆಗೆ ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡೋ ಸ್ನೇಹಿತರ ಜೊತೆ ಮಾತನಾಡಿಕೊಂಡು ಸೇಲ್ ಮಾಡ್ತಾನೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ಅಲ್ಲವೇ ಅಲ್ಲ.. ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಹೆಚ್ಚು ಷೇರು ಹೊಂದಿರೋದು ಯಾರು ಗೊತ್ತೇ..?
ಕಳೆದ ವರ್ಷ ಲಿಯೊನಾರ್ಡೊ ಉರ್ಬಾನೊಗೆ ಕಸದಲ್ಲಿ 50ಕ್ಕೂ ಹೆಚ್ಚು ಟೆಲಿವಿಷನ್ ಸೆಟ್ಗಳು, 30 ಫ್ರಿಡ್ಜ್ಗಳು, 20ಕ್ಕೂ ಹೆಚ್ಚು ವಾಷಿಂಗ್ ಮಷಿನ್ಗಳು, 50ಕ್ಕೂ ಹೆಚ್ಚು ಕಂಪ್ಯೂಟರ್, ಲ್ಯಾಪ್ಟಾಪ್ಸ್, 15 ಮಂಚಗಳು, 150ಕ್ಕೂ ಹೆಚ್ಚು ಮಡಿಕೆಗಳು, 100ಕ್ಕೂ ಹೆಚ್ಚು ದೀಪಗಳು, ಅಲಂಕಾರಿಕ ವರ್ಣಚಿತ್ರಗಳು ಮತ್ತು 849 ಡಾಲರ್ ಮೌಲ್ಯದ ಹಣ ಸಿಕ್ಕಿದೆ ಅಂತ ಹೇಳಿದ್ದಾರೆ. ಈ ಸಿಡ್ನಿಯ ಕಸ ಎತ್ತೋ ವ್ಯಕ್ತಿ, ಲಿಯೊನಾರ್ಡೊ ಉರ್ಬಾನೊ ಅವನನ್ನ ದಿ ಟ್ರ್ಯಾಶ್ ಲಾಯರ್ ಎಂದು ಕರೆದುಕೊಂಡಿದ್ದಾರೆ. ಯಾಕಂದ್ರೇ, ಮುಂದೆ ಬದುಕೋಕೆ ಕಸದ ಅವಶ್ಯಕತೆ ಇದೆ ಎಂದು ಕೇಳಿದವರ ಜೊತೆ ವಾದ ಮಾಡ್ತಾರಂತೆ. ಅದಕ್ಕೇ ಹೇಳೋದು, ಯಾವ ವಸ್ತುನೇ ಆಗಿರಲಿ ಅಥವಾ ಯಾವ ವ್ಯಕ್ತಿಯೇ ಆಗಿರಲಿ ಜೋಪಾನವಾಗಿ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ತಾನು ಕಷ್ಟ ಪಟ್ಟು ಸಂಪಾದಿಸಿದ ಹಣ ಅಥವಾ ಪ್ರೀತಿ ಬೇರೆಯವರ ಪಾಲಾಗಿ ಬಿಡುತ್ತೆ
ವಿಶೇಷ ವರದಿ: ನವೀನ್ ಕುಮಾರ್ ಬಾಗೇಪಲ್ಲಿ, ನ್ಯೂಸ್ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ