/newsfirstlive-kannada/media/post_attachments/wp-content/uploads/2024/06/darshan38.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್, ಪವಿತ್ರಾ ಹಾಗೂ ಗ್ಯಾಂಗ್ ಹೊರ ಬರಲು ಚಡಪಡಿಸುತ್ತಿದ್ದಾರೆ. ಆದ್ರೆ ಇವರ ಈ ಕನಸು ಸದ್ಯಕ್ಕೆ ಮರೀಚಿಕೆಯಾಗಿಯೇ ಇರಲಿದೆ.
ದರ್ಶನ್ ಗ್ಯಾಂಗ್‌ಗೆ ಮತ್ತೆ 14 ದಿನ ಪರಪ್ಪನ ಜೈಲೇ ಗತಿ
ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಮಹತ್ವದ ಆದೇಶ
ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್, ಗೆಳತಿ ಪವಿತ್ರಾ ಹಾಗೂ ಇತರೆ 15 ಜನ ಪಟಾಲಂಗೆ ಸಂಕಷ್ಟ ಮುಂದುವರೆದಿದೆ. ಇಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಬೆಂಗಳೂರು ಮತ್ತು ತುಮಕೂರು ಜೈಲಿನಿಂದ ಆರೋಪಿಗಳನ್ನ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ:ದರ್ಶನ್ ಬೆನ್ನಿಗೆ ನಿಂತ ಸುಮಲತಾ ಅಂಬರೀಷ್.. ಕೊನೆಗೂ ಮೊದಲ ಮಗನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ರು!
ಎ1 ಆರೋಪಿ ಪವಿತ್ರಾ ಗೌಡ ಪ್ರತ್ಯೇಕವಾಗಿ ಕೋರ್ಟ್ಗೆ ಹಾಜರಾಗಿದ್ದರು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್ ಜುಲೈ 18ರವರೆಗೆ ಅಂದರೆ ಇನ್ನು 14 ದಿನಗಳ ಕಾಲ ದರ್ಶನ್ ಌಂಡ್ ಗ್ಯಾಂಗ್ನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್ಪಿಪಿ ಪ್ರಸನ್ನ ಕುಮಾರ್ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಹಿನ್ನೆಲೆ ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ಕೋರ್ಟ್ ಬಂಧನ ವಿಸ್ತರಿಸಿ ಆದೇಶಿಸಿದೆ. ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲು ಪ್ರಮುಖವಾಗಿ 10 ಕಾರಣಗಳಿವೆ.
ದರ್ಶನ್ ಸಂಕಟಕ್ಕೆ 10 ಕಾರಣಗಳು
1. ಆರೋಪಿಗಳು ಗಂಭೀರ ಕೇಸ್ನಲ್ಲಿ ಭಾಗಿ, ಕಾನೂನಿನ ಮೇಲೆ ಗೌರವವಿಲ್ಲ
2. ಸಾಕ್ಷ್ಯ ನಾಶ ಮತ್ತು ನಾಶಕ್ಕೆ ಪ್ರಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ
3. ತಾಂತ್ರಿಕ, ವೈಜ್ಞಾನಿಕ ಸಾಕ್ಷಿಗಳ ಪರಿಶೀಲನೆ ವರದಿ ಸಂಗ್ರಹಿಸಿ ಹೆಚ್ಚಿನ ತನಿಖೆ
4. ಆರೋಪಿಗಳ ಸಂಪೂರ್ಣ ಪಾತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯಬೇಕು
5. ಈವರೆಗೆ ₹83,65,500 ವಶ, ಹಣ ನೀಡಿದವರ ಹಾಗೂ ಮೂಲದ ವಿಚಾರಣೆ
6. ಸಾಕ್ಷಿದಾರರಿಂದ ಆರೋಪಿಗಳ ಗುರುತಿನ ವಿಚಾರಣೆ ದಂಡಾಧಿಕಾರಿಗಳಿಂದ ನಡೆಸಬೇಕು
7. ಕೃತ್ಯಕ್ಕೆ ಉಪಯೋಗಿಸಿದ್ದ ವಾಹನ ಪರಿಶೀಲಿಸಿ, ಮಾಲೀಕರ ಹೇಳಿಕೆ ಪಡೆಯಬೇಕು
8. ಆರೋಪಿಗಳ ಮೊಬೈಲ್ ರಿಟ್ರೀವ್, ಎಫ್ಎಸ್ಎಲ್ನಿಂದ ವರದಿ ಪಡೆಯಬೇಕಿದೆ
9. ಆರೋಪಿಗಳು ಕೃತ್ಯದ ವೇಳೆ, ಮೊದಲು, ನಂತರ ಸಂಪರ್ಕಿಸಿದವರ ವಿಚಾರಣೆ
10. ಕೆಲವರು ಬೇರೆಯವರ ಸಿಮ್ ಬಳಕೆ, ಮೂಲ ಮಾಲೀಕರ ಹೇಳಿಕೆ ಪಡೆಯಬೇಕು
ಇದನ್ನೂ ಓದಿ: ನಟ, ನಟಿಯರು ಆರೋಪಿಗಾಗಿ ಜೈಲಿಗೆ ಹೋಗ್ತಿದ್ದಾರೆ.. ನಾವು ಎಲ್ಲಿಗೆ ಹೋಗ್ಬೇಕು? ರೇಣುಕಾಸ್ವಾಮಿ ತಾಯಿ ಕಣ್ಣೀರು
ಆರೋಪಿಗಳು ಪ್ರಬಲರಾಗಿರುವುದರಿಂದ ಬಿಡುಗಡೆ ಮಾಡಿದ್ರೆ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇದೆ. ಹೀಗಾಗಿ ಬಿಡುಗಡೆ ಮಾಡದಂತೆ ವಕೀಲರು ಮನವಿ ಮಾಡಿದ ಹಿನ್ನೆಲೆ ಬಂಧನ ವಿಸ್ತರಣೆ ಮಾಡಲಾಗಿದೆ. ಒಟ್ಟಾರೆ ಜಾಮೀನು ಯಾವಾಗ ಸಿಗುತ್ತೋ ಅಂತ ದರ್ಶನ್ ಎದುರು ನೋಡ್ತಿದ್ದಾರೆ. ಆದರೆ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದು ಗಂಭೀರ ಪ್ರಕರಣ ಆದ್ದರಿಂದ ಜಾಮೀನು ಸಿಗುವುದು ಸದ್ಯಕ್ಕೆ ಕಷ್ಟ ಕಷ್ಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ