/newsfirstlive-kannada/media/post_attachments/wp-content/uploads/2024/05/MYS_SPA.jpg)
ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ಮಾಡಿ ಐವರು ಯುವತಿಯರನ್ನು ರಕ್ಷಣೆ ಮಾಡಿ, 5 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯ ವಿಜಯನಗರದ ರಾಯಲ್ ಇಷಾ ಸ್ಪಾ ಮೇಲೆ ಪೊಲೀಸರ ರೇಡ್ ಮಾಡಿದ್ದಾರೆ.
ವಿಜಯನಗರದ ರಾಯಲ್ ಇಷಾ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಒಡನಾಡಿ ಸಂಸ್ಥೆಗೆ ನಾಗರಿಕರು ದೂರು ನೀಡಿದ್ದರು. ಹೀಗಾಗಿ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪೊಲೀಸರ ಜೊತೆಗೆ ಕಾರ್ಯಾಚರಣೆಯಲ್ಲಿ ಒಡನಾಡಿ ಸಂಸ್ಥೆ ಕೂಡ ಕೈಜೋಡಿಸಿತ್ತು. ಸದ್ಯ ದಾಳಿ ವೇಳೆ ಪೊಲೀಸರು ಐವರು ಯುವತಿಯರನ್ನು ರಕ್ಷಣೆ ಮಾಡಿ, 5 ಜನರನ್ನು ಬಂಧನ ಮಾಡಲಾಗಿದೆ. ಇದರಲ್ಲಿ ಇಬ್ಬರು ಟ್ರಾಫಿಕರ್ಸ್, ಇಬ್ಬರು ಗಿರಾಕಿಗಳು ಹಾಗೂ ಒಬ್ಬ ಪಿಂಪ್​ನನ್ನ ವಶಕ್ಕೆ ಪಡೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us