newsfirstkannada.com

ಹೊಸ ಸಂಸತ್ತಿನಲ್ಲಿ ಮೊದಲ ಭಾಷಣ ಮಾಡಿದ ರಾಷ್ಟ್ರಪತಿ; ರಾಮ ಮಂದಿರ ನಿರ್ಮಾಣವನ್ನು ಹಾಡಿ ಹೊಗಳಿದ ದ್ರೌಪದಿ ಮುರ್ಮು

Share :

Published January 31, 2024 at 1:30pm

  ಇಂದಿನಿಂದ ಬಜೆಟ್​ ಅಧಿವೇಶನ ಆರಂಭ

  ಸಾರೋಟಿನಲ್ಲಿ ನೂತನ ಸಂಸತ್ ಭವನಕ್ಕೆ ಆಗಮಿಸಿ ರಾಷ್ಟ್ರಪತಿ

  ಜಂಟಿ ಸದನವನ್ನ ಉದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು

ದೆಹಲಿ: ಇಂದಿನಿಂದ ಬಜೆಟ್​ ಅಧಿವೇಶನ ಆರಂಭವಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾರೋಟಿನಲ್ಲಿ ನೂತನ ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಈ ವೇಳೆ ರಾಷ್ಟ್ರಪತಿಯನ್ನ ಎರಡು ಸದನದ ಸ್ಪೀಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದಿಯ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದಾರೆ.

ಇನ್ನು ಜಂಟಿ ಸದನವನ್ನ ಉದ್ದೇಶಿಸಿ ನೂತನ ಪಾರ್ಲಿಮೇಂಟ್​​ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ. ಈ  ವೇಳೆ ಮಹಿಳಾ ಮೀಸಲಾತಿ ಕಾನೂನು ಜಾರಿಗೆ ತಂದ ಸಂಸದರನ್ನು ಅವರು ಅಭಿನಂದಿಸಿದರು. ಏಷ್ಯನ್​ ಕ್ರೀಡಾಕೂಟದಲ್ಲಿ ಅತ್ಯಧಿಕ ಪದಕಗಳು, ಚಂದ್ರಯಾನ-3 ಯಶಸ್ಸು ಮತ್ತು ರಾಮಮಂದಿರದ ನಿರ್ಮಾಣದ ಕನಸು ನನಸಾಗಿರೋದನ್ನ ಪ್ರಸ್ತಾಪಿಸಿದರು.

ರಾಮ ಮಂದಿರದ ಬಗ್ಗೆ ದ್ರೌಪದಿ ಮುರ್ಮು ಮಾತನಾಡಿದಾಗ, ನೆರೆದಿದ್ದ ಸಂಸದರು ಮೇಜು ಬಡಿದು ಅಭಿನಂದಿಸಿದರು. ರಾಮಮಂದಿರಕ್ಕೆ ಶತಮಾನಗಳಿಂದಲೂ ಆಶಯವಿದ್ದು, ಅದು ಈ ವರ್ಷ ಈಡೇರಿದೆ. ಗುಲಾಮಗಿರಿಯ ಯುಗದಲ್ಲಿ ಮಾಡಿದ ಕಾನೂನು ಈಗ ಇತಿಹಾಸದ ಭಾಗವಾಗಿದೆ. ತ್ರಿವಳಿ ತಲಾಖ್​ ಎಂಬ ಅನಿಷ್ಟ ಪದ್ದತಿಯನ್ನು ಸರ್ಕಾರ ಕಟ್ಟುನಿಟ್ಟಿನ ಕಾನೂನು ನಿಬಂಧನೆ ಮಾಡಿದೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಸಂಸತ್ತಿನಲ್ಲಿ ಮೊದಲ ಭಾಷಣ ಮಾಡಿದ ರಾಷ್ಟ್ರಪತಿ; ರಾಮ ಮಂದಿರ ನಿರ್ಮಾಣವನ್ನು ಹಾಡಿ ಹೊಗಳಿದ ದ್ರೌಪದಿ ಮುರ್ಮು

https://newsfirstlive.com/wp-content/uploads/2024/01/Droupadhi-murmu.jpg

Load More