/newsfirstlive-kannada/media/post_attachments/wp-content/uploads/2025/06/Parle-G-Biscuit.jpg)
ನವದೆಹಲಿ: ಪಾರ್ಲೆ-G ಬಿಸ್ಕೆಟ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಬಾಲ್ಯದ ನೆನಪು, ಕಡಿಮೆ ವೆಚ್ಚದ ಈ ಬಿಸ್ಕತ್ತು ಟೀ ಬ್ರೇಕ್‌ನಲ್ಲಿ ಸಿಕ್ರೆ ಅದೆಷ್ಟೋ ಮಂದಿಗೆ ಈಗಲೂ ಆನಂದ. ಭಾರತದಲ್ಲಿ ಮಧ್ಯಮ ವರ್ಗದ ಮನೆಗಳಲ್ಲಿ ಜನಪ್ರಿಯವಾಗಿರುವ ಪಾರ್ಲೆ-G ಮತ್ತೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ.
ಭಾರತದಲ್ಲಿ ಪಾರ್ಲೆ-G ಬಿಸ್ಕೆಟ್ ಅತ್ಯಂತ ಕಡಿಮೆ ದರದಲ್ಲಿ ಸಿಗುವುದರಿಂದಲೇ ಮನೆ, ಮನೆಗೂ ತಲುಪಿದೆ. ಆದರೆ ಇದೇ 5 ರೂಪಾಯಿಯ ಬಿಸ್ಕೆಟ್ ಬೆಲೆ ಈಗ ಗಾಜಾದಲ್ಲಿ ಗಗನಕ್ಕೇರಿದೆ. ಯುದ್ಧಪೀಡಿತ ಗಾಜಾ ನಗರದಲ್ಲಿ ಈಗ ಇರುವ ಪಾರ್ಲೆ-G ಬಿಸ್ಕೆಟ್ ಪ್ಯಾಕ್‌ನ ಬೆಲೆ ಎಷ್ಟು ಅಂತ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ಹಲವು ವರ್ಷಗಳ ಯುದ್ಧ ಹಾಗೂ ಇಸ್ರೇಲ್ ದಾಳಿಗೆ ತುತ್ತಾಗಿರುವ ಗಾಜಾಪಟ್ಟಿಯಲ್ಲಿ ಆಹಾರದ ಕೊರತೆ ಎದುರಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಗಾಜಾ ಜನತೆ 5 ರೂಪಾಯಿಯ ಪಾರ್ಲೆ-G ಬಿಸ್ಕೆಟ್‌ಗೆ 500 ಪಟ್ಟು ಅಧಿಕ ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪಾರ್ಲೆ-G ಬಿಸ್ಕೆಟ್‌ನ ಪೋಸ್ಟ್‌ಗಳು ವೈರಲ್ ಆಗಿದೆ. ಮುಂಬೈನಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಪಾರ್ಲೆ-ಜಿ ಬಿಸ್ಕೆಟ್‌ಗಳನ್ನು ಗಾಜಾಗೆ ರಫ್ತು ಮಾಡಲಾಗುತ್ತಿದೆ. ಗಾಜಾದಲ್ಲಿ ಸದ್ಯ ಪಾರ್ಲೆ-G ಬಿಸ್ಕೆಟ್‌ನ ಬೆಲೆ 24 ಯುರೋಗಳಿಗೆ ದಾಖಲಾಗಿದೆ. 24 ಯುರೋಗಳು ಅಂದ್ರೆ ರೂಪಾಯಿ ಮೌಲ್ಯದಲ್ಲಿ 2,342 ರೂಪಾಯಿಗಳು.
ಇದನ್ನೂ ಓದಿ: ‘ಸರಿಗಮಪ ಸೀಸನ್ 21’.. ಬೀದರ್ನ ಶಿವಾನಿಗೆ ಒಲಿದ ವಿನ್ನರ್ ಪಟ್ಟ; ರನ್ನರ್ ಯಾರು..?
ಗಾಜಾದ ಮಗುವೊಂದು ತಂದೆ ತಂದುಕೊಟ್ಟ ಪಾರ್ಲೆ-G ಬಿಸ್ಕೆಟ್ ಅನ್ನು ಚಪ್ಪರಿಸಿ ತಿನ್ನುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾರ್ಲೆ-G ಅನ್ನು ಈ ಮಗು ಬಹಳ ಪ್ರೀತಿಯಿಂದ ತಿನ್ನುತ್ತಿರುವ ದೃಶ್ಯ ನೆಟ್ಟಿಗರ ಮನಮಿಡಿಯುವಂತೆ ಮಾಡಿದೆ.
After a long wait, I finally got Ravif her favorite biscuits today. Even though the price jumped from €1.5 to over €24, I just couldn’t deny Rafif her favorite treat. pic.twitter.com/O1dbfWHVTF
— Mohammed jawad 🇵🇸 (@Mo7ammed_jawad6)
After a long wait, I finally got Ravif her favorite biscuits today. Even though the price jumped from €1.5 to over €24, I just couldn’t deny Rafif her favorite treat. pic.twitter.com/O1dbfWHVTF
— Mohammed jawad 🇵🇸 (@Mo7ammed_jawad6) June 1, 2025
">June 1, 2025
ಯುದ್ಧಪೀಡಿತ ಗಾಜಾದಲ್ಲಿ ಈಗ 1 ಕೆ.ಜಿ ಸಕ್ಕರೆಯ ಬೆಲೆ Rs.4,914, 1 ಲೀಟರ್ ಅಡುಗೆ ಎಣ್ಣೆ Rs. 4,177, 1 ಕೆಜಿ ಆಲೂಗಡ್ಡೆ Rs 1,965, 1 ಕೆಜಿ ಈರುಳ್ಳಿ ಬೆಲೆ Rs 4,423, 1 ಕಾಫಿ ಕಪ್ ಬೆಲೆ Rs 1,800 ರೂಪಾಯಿ ತಲುಪಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ