/newsfirstlive-kannada/media/post_attachments/wp-content/uploads/2025/04/Dragon-Movie.jpg)
ಬೆಂಗಳೂರು: ತಮಿಳು ಭಾಷೆಯ ಡ್ರ್ಯಾಗನ್ ಸಿನಿಮಾ ನೋಡಿದವರಿಗೆ ಈ ಸೀನ್ ಚೆನ್ನಾಗಿ ಗೊತ್ತಿರುತ್ತೆ. ಅದು ರೀಲ್ ಆದ್ರೆ ರಿಯಲ್ ಆಗಿ ಬೆಂಗಳೂರಿನ ಇನ್ಫೋಸಿಸ್‌ನಲ್ಲಿ ಡ್ರ್ಯಾಗನ್ ಸಿನಿಮಾ ನೋಡಿ ಕೆಲಸ ಗಿಟ್ಟಿಸಿಕೊಂಡಿದ್ದ ಯುವಕ ಸಿಕ್ಕಿ ಬಿದ್ದಿದ್ದಾನೆ. ಡ್ರ್ಯಾಗನ್ ಸಿನಿಮಾ ಮನರಂಜನೆಗೆ ಮಾಡಿದ್ರೆ ರಿಯಲ್ ಆಗಿ ಫೇಕ್ ಮಾಡಲು ಹೋದ ಯುವಕ ಫಜೀತಿಗೆ ಸಿಲುಕಿದ್ದಾನೆ.
ಡ್ರ್ಯಾಗನ್ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್ ಹಲವು ಕಾಲೇಜುಗಳ ಪರೀಕ್ಷೆಯಲ್ಲಿ ಫೇಲ್ ಆಗಿರುತ್ತಾನೆ. ಟೆಕ್ನಿಕಲ್ ಆಗಿ ಅರ್ಹತೆ ಇಲ್ಲದ ಕಾರಣ ಯಾವುದೇ ಕೆಲಸವೂ ಸಿಕ್ಕಿರುವುದಿಲ್ಲ. ಹೀಗಾಗಿ ತನ್ನ ಪ್ರಾಣ ಸ್ನೇಹಿತನಿಗೆ ಹೈ-ಟೆಕ್ ಕೆಲಸದ ಇಂಟರ್‌ವ್ಯೂ ಅಟೆಂಟ್ ಮಾಡಲು ಕೇಳಿ ಕೊಳ್ಳುತ್ತಾನೆ. ಅದರಂತೆ ಆನ್‌ಲೈನ್ ಇಂಟರ್‌ವ್ಯೂನಲ್ಲಿ ಸ್ನೇಹಿತ ಪಾಸ್ ಪಾಡಿದ ಕೆಲಸಕ್ಕೆ ಹೀರೋ ಸೆಲೆಕ್ಟ್ ಆಗುತ್ತಾನೆ.
ಡ್ರ್ಯಾಗನ್ ಸಿನಿಮಾವನ್ನೇ ಅನುಕರಿಸಿದ ತೆಲಂಗಾಣದ ರಾಪಾ ಸಾಯಿ ಪ್ರಶಾಂತ್ ಎಂಬ ಟೆಕ್ಕಿ ಬೆಂಗಳೂರು ಇನ್ಫೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆದರೆ ರಿಯಲ್ ಲೈಫ್‌ನಲ್ಲಿ ಅದು ಸಕ್ಸಸ್ ಆಗಬೇಕಲ್ಲ. ಕೆಲಸಕ್ಕೆ ಸೇರಿದ ಕೆಲವು ದಿನಗಳಲ್ಲಿ ಯುವಕನ ಮೇಲೆ ಅನುಮಾನ ಬಂದಿದೆ.
ಇದನ್ನೂ ಓದಿ: ಹುಡುಕಿ, ಹುಡುಕಿ ಹೊಡೆಯುತ್ತೇವೆ.. ಇಂಗ್ಲೀಷ್‌ನಲ್ಲಿ ಎಚ್ಚರಿಕೆ ಸಂದೇಶ ಕೊಟ್ಟ ಪ್ರಧಾನಿ ಮೋದಿ; ಏನಿದರ ಗುಟ್ಟು?
ಕೆಲಸ ಹುಡುಕಿ, ಹುಡುಕಿ ಹತಾಶನಾದ ಈ 20 ವರ್ಷದ ಯುವಕ ಡ್ರ್ಯಾಗನ್ ಸಿನಿಮಾ ಸ್ಟೋರಿಯನ್ನೇ ರಿಯಲ್ ಲೈಫ್‌ಗೆ ಅಳವಡಿಸಿದ್ದಾನೆ. ವರ್ಚುವಲ್ ಸಂದರ್ಶನದಲ್ಲಿ ತನ್ನ ಸ್ನೇಹಿತ ಸಹಾಯದಿಂದ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾನೆ. ಆದರೆ ಮೋಸ ಎಷ್ಟು ದಿನ ರಿಯಲ್ ಲೈಫ್‌ನಲ್ಲಿ ನಡೆಯಲು ಸಾಧ್ಯ.
ಕೆಲಸಕ್ಕೆ ಸೇರಿಕೊಂಡ 2 ವಾರದಲ್ಲಿ ಇನ್ಫೋಸಿಸ್‌ನವರಿಗೆ ಈತನ ಮೇಲೆ ಅನುಮಾನ ಬಂದಿದೆ. ಈತನ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿದಾಗ ಸಿನಿಮಾ ಸ್ಟೋರಿ ಬಯಲಾಗಿದೆ. ಕೊನೆಗೆ ಕೆಲಸ ಕಳೆದುಕೊಂಡ ಯುವಕ ಸಂದರ್ಶನದಲ್ಲಿ ಮೋಸ ಮಾಡಿದ ತಪ್ಪಿಗೆ ಕಾನೂನು ಕ್ರಮವನ್ನು ಎದುರಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ