2 ವರ್ಷ ಸಾವು-ಬದುಕಿನ ಹೋರಾಟದಲ್ಲಿ ಸೋತಳು.. ಅಪರ್ಣಾ ಸಾವಿಗೆ ಕಾರಣ ಬಿಚ್ಚಿಟ್ಟ ಗಂಡ; ಹೇಳಿದ್ದೇನು?

author-image
admin
Updated On
ವೈದ್ಯರ ಗಡುವು ಮೀರಿದ್ರೂ ಹೆದರದ ಛಲಗಾತಿ.. ಒಂದೂವರೆ ವರ್ಷ ಅಪರ್ಣಾ ಎದುರಿಸಿದ್ದು ಅಂತಿಂಥ ನೋವಲ್ಲ!
Advertisment
  • ಅಪ್ಪಟ ಕನ್ನಡ ಭಾಷಾ ಪ್ರೇಮಿ ಕಳೆದುಕೊಂಡ ಕರುನಾಡು ಕಂಬನಿ
  • ಆಘಾತದಲ್ಲಿರುವ ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ
  • ಎಲ್ಲರ ಪ್ರೀತಿ, ಸಹಕಾರ ಒಡನಿರಲಿ ಎಂದು ಮನವಿ ಮಾಡಿಕೊಂಡರು

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರು ನಿಧನರಾಗಿದ್ದಾರೆ. ಅಪರ್ಣಾ ಅವರ ಸಾವಿನ ಸುದ್ದಿ ಕೇಳಿ ಕೋಟಿ, ಕೋಟಿ ಕನ್ನಡಿಗರು ದಿಗ್ಭ್ರಾಂತರಾಗಿದ್ದಾರೆ. ಅಪ್ಪಟ ಕನ್ನಡ ಭಾಷಾ ಪ್ರೇಮಿಯನ್ನು ಕಳೆದುಕೊಂಡ ಇಡೀ ಕರುನಾಡು ಕಂಬನಿ ಮಿಡಿದಿದೆ.

publive-image

ಅಪರ್ಣಾ ಅವರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ ಮೇಲೆ ಆಘಾತದ ಬಗ್ಗೆ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ಅವರು ಇಹಲೋಕದ ವ್ಯಾಪಾರವನ್ನ ತ್ಯಜಿಸಿ ಸ್ವರ್ಗಸ್ತಳಾಗಿದ್ದಾಳೆ. ಕಳೆದ 2 ವರ್ಷಗಳಿಂದ ನಾನು ಮತ್ತು ಅವಳು ಅವಳ 4ನೇ ಹಂತದಲ್ಲಿದ್ದ ಶ್ವಾಸಕೋಶದ ಕ್ಯಾನ್ಸರ್ ಅನ್ನು ಸೆಣಸುತ್ತಾ ಇದ್ವಿ. ಈ ಹೋರಾಟದಲ್ಲಿ ನಾವಿಬ್ಬರು ಸೋತಿದ್ದೇವೆ. ಅತ್ಯಂತ ವಿಷಾಧದಿಂದ ಈ ಮಾತನ್ನ ನಿಮ್ಮಗಳ ಮುಂದೆ ಇಡುತ್ತಿದ್ದೇನೆ. ಅಪರ್ಣಾಳಿಗೆ ಬರುವ ಅಕ್ಟೋಬರ್‌ಗೆ 58 ವರ್ಷ ತುಂಬುತ್ತಿತ್ತು. ಎಲ್ಲರ ಪ್ರೀತಿ, ಸಹಕಾರ ಒಡನಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೊನೆ ಆಸೆ ಈಡೇರುವ ಮುನ್ನವೇ ಕಣ್ಮುಚ್ಚಿದ ನಟಿ ಅಪರ್ಣಾ.. ಆಕೆಗಿದ್ದ ದೊಡ್ಡ ಕನಸೇನು? 

ಅಪರ್ಣಾ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನಾಲ್ಕನೇ ಹಂತದಲ್ಲಿದ್ದ ಅಪರ್ಣಾ ಅವರ ಶ್ವಾಸಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಮೂರು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ಅವರು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ರಾತ್ರಿ 9:45ಕ್ಕೆ ನಿಧನಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment