ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಬೆಳಗಾವಿ ವಿವಿಯಿಂದ ಅಚ್ಚರಿಯ ಫಲಿತಾಂಶ.. ಹೊಸ ದಾಖಲೆ..!

author-image
Veena Gangani
Updated On
ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಬೆಳಗಾವಿ  ವಿವಿಯಿಂದ ಅಚ್ಚರಿಯ ಫಲಿತಾಂಶ.. ಹೊಸ ದಾಖಲೆ..!
Advertisment
  • ಹೊಸದೊಂದು ಮೈಲುಗಲ್ಲು ನಿರ್ಮಿಸಿದ ಬೆಳಗಾವಿ ವಿಟಿಯು, ಏನದು?
  • ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದ 3 ಗಂಟೆಗಳಲ್ಲಿಯೇ ಫಲಿತಾಂಶ
  • ಪರೀಕ್ಷೆ ದಿನವೇ ಫಲಿತಾಂಶ ಪ್ರಕಟಿಸಿ ಹುಬ್ಬೇರಿಸಿದ ಬೆಳಗಾವಿ ವಿಟಿಯು

ಬೆಳಗಾವಿ: ಯಾವುದೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ನಂತರ ರಿಸಲ್ಟ್​ಗಾಗಿ ಕಾಯ್ತಾ ಇರುತ್ತಾರೆ. ಒಂದು ತಿಂಗಳು ಎರಡು ತಿಂಗಳೋ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳ ರಿಸಲ್ಟ್ ಬರೋದಕ್ಕೆ ವರ್ಷಗಳೇ ಕಾಯಬೇಕಿತ್ತು. ಆದರೆ ಇಲ್ಲೊಂದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಕೇವಲ ಮೂರು ಗಂಟೆಗಳಲ್ಲಿಯೇ ಅವರ ಫಲಿತಾಂಶವನ್ನು ಅವರಿಗೆ ವಾಟ್ಸಪ್ ಮಾಡಿಬಿಟ್ಟಿದೆ. ಇದರಿಂದ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಕೂಡ ಫುಲ್ ಖುಷ್ ಆಗಿದ್ದಾರೆ.

publive-image

ಇದನ್ನೂ ಓದಿ:ಚುನಾವಣೋತ್ತರ ಲೆಕ್ಕಾಚಾರ; ಬಿಜೆಪಿ ನೇತೃತ್ವದ ಎನ್​ಡಿಎ 400 ಸೀಟು ಗೆಲ್ಲೋದು ಗ್ಯಾರಂಟಿ!

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 25 ವರ್ಷಗಳ ಇತಿಹಾಸದಲ್ಲಿಯೇ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆ ಮಾಡಿದೆ. ಅಂತಿಮ ವರ್ಷದ ಬಿ.ಇ./ಬಿ.ಟೆಕ್./ಬಿ.ಆರ್ಕ್/ಬಿ.ಪ್ಲಾನ್ ಸೆಮಿಸ್ಟರ್ ಪರೀಕ್ಷೆ ಮುಗಿದ ದಿನವೇ ಫಲಿತಾಂಶವನ್ನು ಪ್ರಕಟಣೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮೇ 30ರಂದು ಬೆಳಗಾವಿಯ ವಿಟಿಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಪರೀಕ್ಷೆ ನಡೆದಿತ್ತು. ಬಿಇ, ಬಿಟೆಕ್,ಬಿ ಆರ್ಕ್,ಬಿ ಪ್ಲಾನ್ ಸೇರಿದಂತೆ ವಿವಿಧ ವಿಭಾಗಗಳ ಬರೊಬ್ಬರಿ 42,323 ವಿದ್ಯಾರ್ಥಿಗಳು ಪರೀಕ್ಷೆಯನ್ನ ಎದುರಿಸಿದ್ದರು.

publive-image

8 ಸೆಮಿಸ್ಟರ್​ನ ಕಡೆಯ ಎಕ್ಸಾಂ ಬರೆದು ವಿದ್ಯಾರ್ಥಿಗಳಲ್ಲೇ ಕೂಲಾಗಿಯೇ ಮನೆ ಹಾಗೂ ಹಾಸ್ಟೇಲ್​ಗಳಿಗೆ ಹೋಗಿ ರಿಲ್ಯಾಕ್ಸ್​ ಆಗುವಷ್ಟರಲ್ಲಿ ವಾಟ್ಸಪ್​ಗೆ ಅವರ ರಿಸಲ್ಟ್ ಬಂದಿದೆ. ಇದರಿಂದ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಟಿಯುದಲ್ಲಿ ಆಡಳಿತ, ಶೈಕ್ಷಣಿಕ, ಪರೀಕ್ಷೆ, ಸಂಶೋಧನಾ ವಿಭಾಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದು ಈ ಸಾಧನೆಯನ್ನು ಮಾಡಿದೆ ಎಂದು ವಿಟಿಯು ಕುಲಪತಿ ವಿದ್ಯಾಶಂಕರ್ ಎಸ್ ಸಂತಸ ಪಟ್ಟಿದ್ದಾರೆ. ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅತ್ಯಂತ ವೇಗದಲ್ಲಿ ಫಲಿತಾಂಶ ಕೊಟ್ಟಿರುವುದು ಹೆಮ್ಮಯ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment