newsfirstkannada.com

ಡಿ.ವಿ ಸದಾನಂದಗೌಡರಿಗೆ ಕಾಂಗ್ರೆಸ್‌ ಆಫರ್‌ ಕೊಟ್ಟ ಬೆನ್ನಲ್ಲೇ RSS ಅಲರ್ಟ್‌.. ಸಂಧಾನ ಏನಾಯ್ತು?

Share :

Published March 20, 2024 at 6:22pm

Update March 21, 2024 at 6:08am

    ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಸದಾನಂದ ಗೌಡ ಮುನಿಸು

    ಡಿವಿಎಸ್‌ ಜೊತೆ ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ್ ಚರ್ಚೆ

    ಪಕ್ಷ ತ್ಯಜಿಸುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದ RSS

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಘೋಷಿಸಿರೋ ಬಿಜೆಪಿ ಪಕ್ಷಕ್ಕೆ ಸಾಲು, ಸಾಲು ಸವಾಲು ಎದುರಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಉತ್ತರ ಹೀಗೆ ಹಲವು ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದರು. ಇಂದು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸುವುದಾಗಿ ತಿಳಿಸಿದ್ದರು.

ಡಿ.ವಿ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೇರುವ ಆಫರ್ ಅನ್ನು ನೀಡಲಾಗಿತ್ತು. ಡಿವಿಎಸ್‌ ಅವರನ್ನು ಕಾಂಗ್ರೆಸ್ ಸಂಪರ್ಕ ಮಾಡಿದ್ದ ಸುದ್ದಿಯನ್ನು ನ್ಯೂಸ್ ಫಸ್ಟ್ ಚಾನೆಲ್ ಮೊದಲು ಪ್ರಸಾರ ಮಾಡಿತ್ತು. ಇದೀಗ ಡಿ.ವಿ ಸದಾನಂದಗೌಡರಿಗೆ ಅಸಮಾಧಾನದ ಬಗ್ಗೆ ಬಿಜೆಪಿ ಉನ್ನತ ಮೂಲಗಳಿಂದ ಮಹತ್ವದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ನ್ಯೂಸ್ ಫಸ್ಟ್ ಸುದ್ದಿ ಸತ್ಯ.. ಕಾಂಗ್ರೆಸ್​ ನಾಯಕರ ಆಫರ್‌ ನಿಜ ಎಂದ ಸಂಸದ ಡಿ.ವಿ ಸದಾನಂದ ಗೌಡ

ಡಿ.ವಿ ಸದಾನಂದಗೌಡರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ ಮೇಲೆ RSS ನಾಯಕರು ಅಲರ್ಟ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವ ಆಫರ್ ಬೆನ್ನಲ್ಲೇ RSS ನಾಯಕರು ಮಧ್ಯಸ್ಥಿಕೆ ವಹಿಸಿದ್ದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಆರ್‌ಎಸ್‌ಎಸ್ ಪ್ರಮುಖರಲ್ಲಿ ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ್ ಅವರು ಡಿ.ವಿ ಸದಾನಂದಗೌಡರ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗ್ತಿದೆ ಅಂತ ಹೇಳೋದಿಲ್ಲ. ನಿಮ್ಮ ಪ್ರಕರಣದಲ್ಲಿ ನಿಮ್ಮ ಹಿತವನ್ನ ಕಾಪಾಡಲು ಬದ್ಧರಿದ್ದೇವೆ. ಪಕ್ಷ ತ್ಯಜಿಸುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಬಿಜೆಪಿಯಲ್ಲಿ ಇವತ್ತಿನ ವಾತಾವರಣ ಸರಿ ಹೋಗಬೇಕಿದೆ. ಹಿರಿಯ ನಾಯಕರನ್ನ ಕಡೆಗಣನೆ ಮಾಡೋದು ಸರಿಯಲ್ಲ ಎಂದು ಆರ್‌ಎಸ್‌ಎಸ್‌ ನಾಯಕರು ಹೇಳಿದ್ದಾರೆ. RSS ನಾಯಕರು ಮಧ್ಯಸ್ಥಿಕೆಗೆ ಡಿ.ವಿ ಸದಾನಂದಗೌಡರು ಮಣಿದಿದ್ದು, ಕಾಂಗ್ರೆಸ್ ಪಕ್ಷ ಸೇರುವ ಆಫರ್‌ ಅನ್ನು ತಿರಸ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿ.ವಿ ಸದಾನಂದಗೌಡರಿಗೆ ಕಾಂಗ್ರೆಸ್‌ ಆಫರ್‌ ಕೊಟ್ಟ ಬೆನ್ನಲ್ಲೇ RSS ಅಲರ್ಟ್‌.. ಸಂಧಾನ ಏನಾಯ್ತು?

https://newsfirstlive.com/wp-content/uploads/2023/11/DV-SADANAND.jpg

Load More