newsfirstkannada.com

ಜಸ್ಟ್ 15 ಸೆಕೆಂಡ್‌.. ಎರಾಬಿರ್ರಿ ಬಂದು ಸಿಕ್ಕ, ಸಿಕ್ಕವರಿಗೆ ಗುದ್ದಿದ ಲಾರಿ; ಭೀಕರ ಅಪಘಾತದ ದೃಶ್ಯ ಸೆರೆ

Share :

Published June 1, 2024 at 12:12pm

  ಚಾಲಕನ ನಿಯಂತ್ರಣ ತಪ್ಪಿದ ಅನಾಹುತದಲ್ಲಿ 6 ವಾಹನ ಜಖಂ

  ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯ

  ವಾಹನಗಳಿಗೆ ಗುದ್ದಿ ಕೊನೆಗೆ ಮರಕ್ಕೆ ಡಿಕ್ಕಿ ಹೊಡೆದು ನಿಂತ ಲಾರಿ

ಹೈದರಾಬಾದ್: ವೇಗವಾಗಿ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಗುದ್ದಿದ ಭೀಕರ ಅಪಘಾತ ತೆಲಂಗಾಣದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿ ಬರುತ್ತಿದ್ದ ಲಾರಿ ಇದ್ದಕ್ಕಿದ್ದಂತೆ ಜಿಗ್‌ಜಾಗ್‌ ಶೈಲಿಯಲ್ಲಿ ನುಗ್ಗಿದೆ. ಅಂದ್ರೆ ಎಡಭಾಗದಲ್ಲಿದ್ದ ಲಾರಿ ಡಿವೈಡರ್‌ಗೆ ಗುದ್ದಿ ಬಲಬದಿಯ ರಸ್ತೆಯಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಕೊನೆಗೆ ಮರಕ್ಕೆ ಡಿಕ್ಕಿ ಹೊಡೆದು ಲಾರಿ ನಿಂತಿದೆ.

ಲಾರಿ ಚಾಲಕನ ನಿಯಂತ್ರಣ ತಪ್ಪಿದ ಈ ಅನಾಹುತದಲ್ಲಿ 6 ವಾಹನಗಳು ಜಖಂಗೊಂಡಿವೆ. ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ‘ರಾತ್ರಿಯಾದ್ರೆ ಸಾಕು ವಿಡಿಯೋ ಕಾಲ್..’ ಪೋಲಿ ಆಟ ಆರೋಪ ಹೊತ್ತ ಸರ್ಕಾರಿ ವೈದ್ಯನಿಗೆ ಶಾಕ್ 

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಬಾದ್‌ನಲ್ಲಿ ಈ ದುರಂತ ಸಂಭವಿಸಿದೆ. ಲಾರಿ ಚಾಲಕ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಬರುವ 6 ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಕೊನೆಗೆ ಮರಕ್ಕೆ ಡಿಕ್ಕಿಯಾದ ಮೇಲೆ ಲಾರಿ ನಿಂತಿದೆ. ಈ ಘಟನೆ ನೋಡಿ ಗಾಬರಿಯಾದ ಸ್ಥಳೀಯರು ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಗೊಂಡಿರುವ ಮತ್ತಿಬ್ಬರ ಸ್ಥಿತಿ ಕೂಡ ಚಿಂತಾಜನಕವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್ 15 ಸೆಕೆಂಡ್‌.. ಎರಾಬಿರ್ರಿ ಬಂದು ಸಿಕ್ಕ, ಸಿಕ್ಕವರಿಗೆ ಗುದ್ದಿದ ಲಾರಿ; ಭೀಕರ ಅಪಘಾತದ ದೃಶ್ಯ ಸೆರೆ

https://newsfirstlive.com/wp-content/uploads/2024/06/Lorry-Accident-CCTV.jpg

Load More