/newsfirstlive-kannada/media/post_attachments/wp-content/uploads/2025/05/Siddaramaiah-Sindhoora.jpg)
ಬೆಂಗಳೂರು: ಉಗ್ರರ 9 ನೆಲೆ ಮೇಲೆ ಭಾರತೀಯ ಸೇನೆ ಯಶಸ್ವಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಸೊಕ್ಕು ಮುರಿದಿದೆ. ಉಗ್ರರ ವಿರುದ್ಧ ಭಾರತ ನಡೆಸಿದ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿದ್ದಾರೆ. ಇಂದು ಆಪರೇಷನ್ ಸಿಂಧೂರ ಅನ್ನೋ ಈ ಹೆಸರು ಸಖತ್ ಸದ್ದು ಮಾಡಿದೆ.
ಆಪರೇಷನ್ ಸಿಂಧೂರ ಇಡೀ ವಿಶ್ವದಾದ್ಯಂತ ಸದ್ದು ಮಾಡುತ್ತಿರುವಾಗಲೇ ಸಿಎಂ ಸಿದ್ದರಾಮಯ್ಯ ಹಣೆಯ ಮೇಲೆ ಸಿಂಧೂರ ಇಟ್ಟುಕೊಂಡು ಸುದ್ದಿಗೋಷ್ಟಿ ನಡೆಸಿದ್ದು ಕೂಡ ಚರ್ಚೆಗೆ ಗುರಿಯಾಗಿದೆ.
ಇದನ್ನೂ ಓದಿ: ಇದು ಗಾಂಧಿ, ಬಸವಣ್ಣನ ಕಾಲ ಅಲ್ಲ – ಸಿಂಧೂರ ಇಟ್ಕೊಂಡು ಭಾರತದ ಬಗ್ಗೆ ಸಿಎಂ ಏನಂದ್ರು..?
ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರ ಸಿಂಧೂರದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಟೀಕಿಸುತ್ತಿದ್ದಾರೆ.
ಅಸಲಿಗೆ ಸುದ್ದಿಗೋಷ್ಠಿಯಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ಹಣೆಯ ಸಿಂಧೂರದ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಇವತ್ತು ಪಟಾಲಮ್ಮ ದೇವಿಯ ದರ್ಶನಕ್ಕೆ ಹೋಗಿದ್ದೆ. ದೇವಿಯ ದರ್ಶನದ ಬಳಿಕ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಸಲಿಗೆ ಆಗಿದ್ದೇನು?
ಸಿಎಂ ಸಿದ್ದರಾಮಯ್ಯ ಇವತ್ತು ಬೆಳಗ್ಗೆ ಜಯನಗರದ 3ನೇ ಬ್ಲಾಕ್‌ನಲ್ಲಿರುವ ಪಟಾಲಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಪಟಾಲಮ್ಮ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯರಿಗೆ ಅರ್ಚಕರು ಹಣೆಯ ಮೇಲೆ ಸಿಂಧೂರ ಇಟ್ಟರು. ಈ ವೇಳೆ ಸಿಎಂಗೆ ಸಚಿವ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ನಾಯಕರಾದ ಎಚ್.ಎಂ ರೇವಣ್ಣ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದರು.
ಇದನ್ನೂ ಓದಿ: ಪತರಗುಟ್ಟಿದ ಪಾಕಿಸ್ತಾನ.. ಆಪರೇಷನ್ ಸಿಂಧೂರ ಸಕ್ಸಸ್ ಸೀಕ್ರೆಟ್ಸ್ ಏನು?
ಜಯನಗರದಲ್ಲಿ ಪಟಾಲಮ್ಮ ದೇವಿ ರಥೋತ್ಸವವನ್ನು ಅದ್ಧೂರಿಯಾಗಿ ಮಾಡಲಾಗುತ್ತೆ. ಪಟಾಲಮ್ಮ ದೇವಿ ರಥೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ತೆರಳಿದ್ದರು. ಅಲ್ಲಿ ಪಟಾಲಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ನೇರವಾಗಿ ಸುದ್ದಿಗೋಷ್ಟಿಗೆ ಬಂದಿದ್ದರು.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಣೆಯಲ್ಲಿ ಕುಂಕುಮ ಇಟ್ಟ ವಿಚಾರವೂ ಚರ್ಚೆಯಾಗಿದೆ. ಇಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂಭ್ರಮಾಚರಣೆ ಮಧ್ಯೆಯೇ ಸಿಎಂ ಸಿಂಧೂರದ ಸಮೇತವಾಗಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ