/newsfirstlive-kannada/media/post_attachments/wp-content/uploads/2025/05/Operation-Sindhoor.jpg)
ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸಕ್ಕೆ ಭಾರತೀಯ ಸೇನೆ ತೆಗೆದುಕೊಂಡಿದ್ದು ಕೇವಲ 23 ನಿಮಿಷ. ಜಸ್ಟ್ 23 ನಿಮಿಷಗಳಲ್ಲೇ ಆಪರೇಷನ್ ಸಿಂಧೂರಕ್ಕೆ ಉಗ್ರರ 9 ನೆಲೆ ನಾಮಾವಶೇಷವಾಗಿವೆ.
ಭಾರತೀಯ ಸೇನೆ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನ ಟಾರ್ಗೆಟ್ ಮಾಡಿ ಹೊಡೆದುರುಳಿಸಿದೆ. ಎಲ್ಲಾ 9 ಕಡೆಗಳಲ್ಲೂ ಏಕಕಾಲಕ್ಕೆ ಭಾರತೀಯ ಸೇನೆಯ ಮಿಸೈಲ್ ದಾಳಿ ಮಾಡಿದ್ದು, ನೂರಾರು ಉಗ್ರರ ಸಂಹಾರ ಮಾಡಲಾಗಿದೆ.
ಆಪರೇಷನ್ ಸಿಂಧೂರದ ಯಶಸ್ವಿ ಕಾರ್ಯಾಚರಣೆ ಬಳಿಕ ಇಬ್ಬರು ಮಹಿಳಾ ಸೇನಾ ಅಧಿಕಾರಿಗಳು ಹಾಗೂ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕರ್ನಲ್ ಸೋಫಿಯಾ ಖುರೇಷಿ ಅವರು ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆ 9 ಉಗ್ರ ನೆಲೆಗಳನ್ನ ಯಶಸ್ವಿಯಾಗಿ ಹೊಡೆದು ಉರುಳಿಸಲಾಗಿದೆ. ಕಳೆದ 3 ದಶಕಗಳಿಂದ ಉಗ್ರವಾದ ಬೆಳೆಯುತ್ತಲೇ ಇದೆ. ಪಾಕಿಸ್ತಾನ, ಪಿಒಕೆ ಎರಡರಲ್ಲೂ ಇದು ಹರಡಿಕೊಂಡಿದೆ. ಯಾವುದೇ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡಿಲ್ಲ. ಯಾವುದೇ ನಾಗರಿಕರಿಗೂ ಹಾನಿಯಾಗಿಲ್ಲ ಎಂದು ತಿಳಿಸಿದರು.
ಭಾರತದ ಟಾರ್ಗೆಟ್ ಏನಾಗಿತ್ತು?
ಭಾರತೀಯ ಸೇನೆ ಪ್ರಮುಖವಾಗಿ ಪಿಓಕೆಯಲ್ಲಿದ್ದ 21 ಉಗ್ರರ ಕ್ಯಾಂಪ್‌ಗಳನ್ನ ಟಾರ್ಗೆಟ್ ಮಾಡಿತ್ತು. ಕಳೆದ 30 ವರ್ಷಗಳಿಂದ ಈ ಕ್ಯಾಂಪ್‌ಗಳಲ್ಲೇ ಉಗ್ರರ ನೇಮಕಾತಿ, ಭಯೋತ್ಪಾದಕರಿಗೆ ಟ್ರೈನಿಂಗ್ ಕೊಡಲಾಗುತ್ತಾ ಇತ್ತು. ಉಗ್ರರ ಟ್ರೈನಿಂಗ್ ಸೆಂಟರ್ಗಳೇ ಸೇನೆಯ ಟಾರ್ಗೆಟ್ ಆಗಿತ್ತು.
ಭಾರತೀಯ ಸೇನೆ ನಾಗರಿಕರು ಹಾಗೂ ಸೇನಾ ಸೆಂಟರ್ಗಳನ್ನ ಟಾರ್ಗೆಟ್ ಮಾಡಿಲ್ಲ. ಇಂಟೆಲಿಜೆನ್ಸ್ ಆಧಾರದ ಮೇಲೆ ದಾಳಿ ಮಾಡುವ ಜಾಗಗಳನ್ನ ಆಯ್ಕೆ ಮಾಡಲಾಗಿದೆ. ನಾಗರಿಕರು, ಸೇನೆಗೆ ತೊಂದರೆಯಾಗದಂತೆ ಉಗ್ರರ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದೆ.
ಆಪರೇಷನ್ ಸಿಂಧೂರ ಸಕ್ಸಸ್ ಸೀಕ್ರೆಟ್ಸ್!
ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಬಹಳ ಗೌಪ್ಯವಾಗಿ ಮಾಡಿ ಮುಗಿಸಿದೆ. 2025ರ ಆಪರೇಷನ್ ಸಿಂಧೂರಗೂ 2019ರ ಬಾಲಾಕೋಟ್ ದಾಳಿಗೂ ಬಹಳಷ್ಟು ವ್ಯತ್ಯಾಸಗಳಿವೆ.
ಅಂದಿಗೂ-ಇಂದಿಗೂ ವ್ಯತ್ಯಾಸ ಏನು?
2019ರ ಪುಲ್ವಾಮಾ ದಾಳಿಯ ನಂತರ ಭಾರತ 12 ಮಿರಾಜ್ -2000 ಫೈಟರ್ ಜೆಟ್‌ಗಳೊಂದಿಗೆ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿತ್ತು.
ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ ಅಟ್ಯಾಕ್ ಮಾಡಲಾಗಿದೆ. ಈ ಬಾರಿ ಏಕಕಾಲಕ್ಕೆ 9 ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರೋದು ವಿಶೇಷವಾಗಿದೆ.
ಇದನ್ನೂ ಓದಿ: ಆ 9 ಸ್ಥಳಗಳೇ ಯಾಕೆ ಟಾರ್ಗೆಟ್..? ರಕ್ತ ಕಣ್ಣೀರಿನ ಚರಿತ್ರೆಗಳ ಸೃಷ್ಟಿಯ ಮೂಲವೇ ಇಲ್ಲಿ..
ಬಾಲಾಕೋಟ್‌ನಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ವಾಯುಪಡೆ ಮಾತ್ರ ವೈಮಾನಿಕ ದಾಳಿ ನಡೆಸಿತ್ತು. ಆದರೆ ಆಪರೇಷನ್ ಸಿಂಧೂರದಲ್ಲಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯು ಜಂಟಿಯಾಗಿ ಕ್ಷಿಪಣಿ ದಾಳಿ ನಡೆಸಿದೆ.
ಬಾಲಾಕೋಟ್ ವೈಮಾನಿಕ ದಾಳಿ ರಾತ್ರಿ 3 ಗಂಟೆಗೆ ನಡೆಯಿತು. ಆದರೆ ಆಪರೇಷನ್ ಸಿಂಧೂರವನ್ನು ರಾತ್ರಿ 1:44ಕ್ಕೆ ನಡೆಸಲಾಗಿದೆ.
ಬಾಲಾಕೋಟ್ ದಾಳಿಯ ಬಗ್ಗೆ ಪಾಕಿಸ್ತಾನ ಅಂದಾಜಿಸಿ ಮರುದಾಳಿ ಮಾಡಿತ್ತು. ಆದರೆ ಆಪರೇಷನ್ ಸಿಂಧೂರ ಸಂಪೂರ್ಣವಾಗಿ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಪ್ರತಿಕ್ರಿಯಿಸಲು ಅವಕಾಶ ಸಿಗಲಿಲ್ಲ. ಭಾರತದ ದಾಳಿಗೆ ಪತರಗುಟ್ಟಿರುವ ಪಾಕಿಸ್ತಾನ ಸುಧಾರಿಸಿಕೊಳ್ಳಲು ಬಹಳಷ್ಟು ಸಮಯ ಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ